Puttakkan Makkalu: ಖೋ ಖೋ ಆಟದ ಬಾಲ್ಯದ ನೆನಪು ನೆನೆದ ಪುಟ್ಟಕ್ಕ, ತನ್ನ ತಾಯಿ ಕೋಚ್ ಆಗೋದು ಬೇಡ ಎಂದ ಸುಮಾ!

ಖೋ ಖೋ ನೆನಪು ಬಿಚ್ಚಿಟ್ಟ ಪುಟ್ಟಕ್ಕ. ತನ್ನ ಮಗಳು ಕೇಳಿದ ಪ್ರಶ್ನೆಗಳಿಗೆ ಪುಟ್ಟಕ್ಕ ಉತ್ತರಿಸುತ್ತಿದ್ದಾಳೆ. ಅಲ್ಲದೇ ತನಗೆ ಹೇಗೆ ಖೋ ಖೋ ಮೇಲೆ ಆಸಕ್ತಿ ಬಂತು ಎಂದು ಹೇಳುತ್ತಿದ್ದಾಳೆ. ಖೋ ಖೋ ಅನ್ನೋದು ನನಗೆ ಬರೀ ಆಟ ಆಗಿರಲಿಲ್ಲ. ಅದೊಂದು ಹಠ. ನಾನು ಹುಟ್ಟಿ ಬೆಳೆದಿದ್ದು, ಒಂದು ಸಣ್ಣ ಹಳ್ಳಿಯಲ್ಲಿ. ನೀರು ತರಬೇಕು ಅಂದ್ರೂ 7, 8 ಮೈಲಿ ನಡೆಯಬೇಕಿತ್ತು.

ಪುಟ್ಟಕ್ಕನ ಮಕ್ಕಳು

ಪುಟ್ಟಕ್ಕನ ಮಕ್ಕಳು

 • Share this:
  ಪುಟ್ಟಕ್ಕನ ಮಕ್ಕಳು (Puttakkan Makkalu), ಜೀ ಕನ್ನಡದ (Zee Kannada) ಹೆಸರಾಂತ ಧಾರಾವಾಹಿ (Serial). ಸೋಮವಾರದಿಂದ ಶುಕ್ರವಾರದವರೆಗೆ  ಪ್ರತಿದಿನ ಸಂಜೆ 7.30ಕ್ಕೆ ಪ್ರಸಾರವಾಗುತ್ತದೆ. ಪುಟ್ಟಕ್ಕನ ಮಕ್ಕಳು ಧಾರಾವಾಹಿಯಲ್ಲಿ ಪುಟ್ಟಕ್ಕನ ಪಾತ್ರದಲ್ಲಿ ಉಮಾಶ್ರೀ ಅಮೋಘವಾಗಿ ಅಭಿನಯಿಸುತ್ತಿದ್ದಾರೆ. ಉಮಾಶ್ರೀ ಗಂಡ ಆಕೆಯನ್ನು ಬಿಟ್ಟು ಅದೇ ಊರಿನಲ್ಲಿ ರಾಜಿ ಎಂಬಾಕೆಯನ್ನು ಎರಡನೇ ಮದುವೆಯಾಗಿದ್ದಾನೆ. ಇನ್ನು ಉಮಾಶ್ರೀಗೆ ಮೂವರು ಹೆಣ್ಣು ಮಕ್ಕಳು. ಗಂಡ ಬಿಟ್ಟು ಹೋಗಿದ್ದರೂ, ಮೂವರನ್ನು ಚೆನ್ನಾಗಿ ಸಾಕಿದ್ದಾಳೆ. ಮೆಸ್ ಒಂದನ್ನು ನಡೆಸುತ್ತಿದ್ದು, ಅದರಿಂದ ಜೀವನ ಸಾಗಿಸುತ್ತಿದ್ದಾಳೆ. ಮೊದಲನೇ ಮಗಳು ಸಹನಾ (Sahana) ಓದದೇ ತನ್ನ ತಾಯಿಗೆ ಹೋಟೆಲ್ (Hotel) ಕೆಲಸದಲ್ಲಿ ಸಹಾಯ ಮಾಡುತ್ತಿದ್ದಾಳೆ. ಎರಡನೇ ಮಗಳು ಸ್ನೇಹ ಓದಿನಲ್ಲೂ ಜೋರು. ಮಾತಿನಲ್ಲೂ ಜೋರು. ಮೂರನೇ ಮಗಳು ಸುಮಾ ಓದಿನ ಜೊತೆ ಆಟಗಳಲ್ಲೂ ಮುಂದು.

  ಮೂರನೇ ಮಗಳು ಸುಮಾ ತಂಡಕ್ಕೆ ಖೋ ಖೋ ಕೋಚ್ ಇಲ್ಲ
  ಸುಮಾ ಮತ್ತು ಆಕೆಯ ತಂಡ ಖೋ ಖೋ ಆಟವನ್ನು ಚೆನ್ನಾಗಿ ಆಡುತ್ತಾರೆ. ಆದರೆ ಅವರ ಕಾಲೇಜಿನಲ್ಲಿ ಇವರಿಗೆ ಸರಿಯಾಗಿ ತರಬೇತಿ ಸಿಗುತ್ತಿಲ್ಲ. ಸರಿಯಾದ ಕೋಚ್ ಇಲ್ಲದ ಕಾರಣ, ಪಂದ್ಯಗಳನ್ನು ಸೋಲುತ್ತಿದ್ದಾರೆ. ಈ ಬಗ್ಗೆ ಪುಟ್ಟಕ್ಕನೇ ಕಾಲೇಜಿಗೆ ಹೋಗಿ ಅವರ ಪಿ.ಟಿ ಮಾಸ್ಟರ್ ಬಳಿ ಮಾತನಾಡುತ್ತಾರೆ. ಆದ್ರೆ ಅವರು ನಾನು ತರಬೇತಿ ಕೊಡಲ್ಲ ಎಂದು ಹೇಳುತ್ತಾರೆ. ಅಲ್ಲದೇ ಅವರ ಕಾಲೇಜಿನ ಪ್ರಿನ್ಸಿಪಾಲ್, ವಿದ್ಯಾರ್ಥಿಗಳು ಆಟ ಆಡಲು ತೊಂದರೆ ಇಲ್ಲ. ಆದ್ರೆ ಕೋಚ್ ಅನ್ನು ಅವರೇ ಹುಡುಕಿಕೊಳ್ಳಬೇಕು ಎನ್ನುತ್ತಾರೆ.

  ಮಗಳಿಗಾಗಿ ಕೋಚ್ ಆದ ಪುಟ್ಟಕ್ಕ
  ಮಗಳು ಸುಮಾ ಮತ್ತು ಆಕೆಯ ತಂಡಕ್ಕಾಗಿ ಪುಟ್ಟಕ್ಕ ಕೋಚ್ ಆಗಿದ್ದಾಳೆ. ತನ್ನ ಗದ್ದೆಯನ್ನೇ ಆಟದ ಮೈದಾನವಾಗಿ ಬದಲಾಯಿಸಿದಿದ್ದಾಳೆ. ಮಕ್ಕಳಿಗೆಲ್ಲಾ 10 ರೌಂಡ್ ಓಡಲು ಹೇಳಿದ್ದಾಳೆ. ಆದ್ರೂ ಕೋಚ್ ಯಾರು ಎಂದು ಹೇಳಿಲ್ಲ. ಆಟಗಾರರೆಲ್ಲಾ ಕೋಚ್ ಯಾರು ಎಂದು ಕಾಯುತ್ತಿದ್ದಾರೆ. ಆದ್ರೆ ಯಾವ ಕೋಚ್ ಸಹ ಬಂದಿಲ್ಲ. ಪುಟ್ಟಕ್ಕನೇ ಆಟದ ಮೈದಾನಕ್ಕೆ ನಮಸ್ಕಾರ ಮಾಡಿ ಬಂದಿದ್ದಾಳೆ. ಅಂದ್ರೆ ಪುಟ್ಟಕ್ಕನೇ ಖೋ ಖೋ ಹೇಳಿ ಕೊಡುವ ಕೋಚ್. ಆದ್ರೆ ಮಗಳು ತನ್ನ ಅವ್ವನನ್ನು ಕೋಚ್ ಎಂದು ಒಪ್ಪಿಕೊಳ್ಳುತ್ತಿಲ್ಲ. ನಿನಗೆ ಆಟದ ಬಗ್ಗೆ ಏನು ಗೊತ್ತು ಎಂದು ಪ್ರಶ್ನೆ ಮಾಡುತ್ತಿದ್ದಾಳೆ.

  ಇದನ್ನೂ ಓದಿ: Mayamruga: ಮತ್ತೆ ಬರುತ್ತಿದೆ ಮಾಯಾಮೃಗ ಧಾರಾವಾಹಿ, ಕಾಲಕ್ಕೆ ತಕ್ಕಂತೆ ಕಥೆ ಬದಲಿಸಲಿದ್ದಾರಾ ಟಿ.ಎನ್ ಸೀತಾರಾಂ?

  ಖೋ ಖೋ ನೆನಪು ಬಿಚ್ಚಿಟ್ಟ ಪುಟ್ಟಕ್ಕ
  ತನ್ನ ಮಗಳು ಕೇಳಿದ ಪ್ರಶ್ನೆಗಳಿಗೆ ಪುಟ್ಟಕ್ಕ ಉತ್ತರಿಸುತ್ತಿದ್ದಾಳೆ. ಅಲ್ಲದೇ ತನಗೆ ಹೇಗೆ ಖೋ ಖೋ ಮೇಲೆ ಆಸಕ್ತಿ ಬಂತು ಎಂದು ಹೇಳುತ್ತಿದ್ದಾಳೆ. ಖೋ ಖೋ ಅನ್ನೋದು ನನಗೆ ಬರೀ ಆಟ ಆಗಿರಲಿಲ್ಲ. ಅದೊಂದು ಹಠ. ನಾನು ಹುಟ್ಟಿ ಬೆಳೆದಿದ್ದು, ಒಂದು ಸಣ್ಣ ಹಳ್ಳಿಯಲ್ಲಿ. ನೀರು ತರಬೇಕು ಅಂದ್ರೂ 7, 8 ಮೈಲಿ ನಡೆಯಬೇಕಿತ್ತು.

  ಸಣ್ಣವಳಿದ್ದಾಗಲೇ ನನ್ನ ಅಪ್ಪಯ್ಯನನ್ನು ಕಳೆದುಕೊಂಡು ಬಿಟ್ಟೆ. ನನಗೆ ಎಲ್ಲಾ ನಮ್ಮ ಅವ್ವನೇ. ನನ್ನ ಅಣ್ಣ ಪಟ್ಟಣದಲ್ಲಿ ಕೆಲಸ ಮಾಡುತ್ತಿದ್ದ. ನಮ್ಮವ್ವನಿಗೆ ನಡೆಯೋಕೆ ಆಗ್ತಾ ಇರಲಿಲ್ಲ. ಅದೇನೋ ಸುಸ್ತು ಸುಸ್ತು ಎನ್ನೋಳು. ಮೈಯಲ್ಲಿ ಏನೋ ಕೊರತೆ. ಅದಕ್ಕೆ ನಾನೇ ನೀರು ತರ್ತಿದ್ದೆ.

  Zee Kannada serial, Puttakkana Makkalu serial today episode, Puttakkana Makkalu serial cast, Big twist in episode, Puttakka tell the Kho Kho story, ಪುಟ್ಟಕ್ಕನ ಮಕ್ಕಳು ಧಾರಾವಾಹಿ, ಜೀ ಕನ್ನಡ ಧಾರಾವಾಹಿಗಳು, Kannada news, Karnataka news,
  ಪುಟ್ಟಕ್ಕನ ಮಕ್ಕಳು


  ಓಟ ನನ್ನ ಜೀವನದ ಭಾಗ ಆಯ್ತು
  ದಿನದಲ್ಲಿ ಐದು, ಆರು ಬಾರಿ ನೀರು ತರಬೇಕಿತ್ತು. ನೀರು ತರೋಕೆ ನಾನು ಓಡ್ತಿದ್ದೆ. ಟೈಂ ಉಳಿಸೋಕೆ ಓಡುವೆ, ಓಡುವೆ. ಆ ರೀತಿ ಓಡಲು ಶುರು ಮಾಡಿದವಳು ನಾನು. ಓಟ ನನ್ನ ಜೀವನದ ಭಾಗ ಆಯ್ತು. ಅಲ್ಲಿಂದ ಶುರುವಾಯ್ತು ನನ್ನ ಓಟದ ಹುಚ್ಚು. ಹೆಣ್ಣು ಮಕ್ಕಳಿಗೆ ನಮ್ಮ ಊರಲ್ಲಿ ವಿದ್ಯಾಭ್ಯಾಸನೇ ಇಲ್ಲ. ಅವರೆಲ್ಲ ಮನೆಯಲ್ಲಿ ಮನೆ ಕೆಲಸ ಮಾಡಿ ಜೀವನ ಕಳೆಯುತ್ತಿದ್ದರು.

  ಆಗ ಒಂದು ದಿನ ಸರ್ಕಾರದವರು ಹಳ್ಳಿ ಹಳ್ಳಿಯಲ್ಲಿ ಖೋ ಖೋ ಪಂದ್ಯ ಆಡಿಸ್ತಾರೆ ಅಂತ ಕೇಳಿ ಪಟ್ಟೆ. ಆಟದ ಬಗ್ಗೆ ನನಗೆ ಏನೂ ಗೊತ್ತಿರಲಿಲ್ಲ. ಇದು ಓಡೋ ಆಟ ಅಂತ ಗೊತ್ತಿತ್ತು. ಗೆದ್ದವರಿಗೆ ಸರ್ಕಾರ 1 ಸಾವಿರ ರೂಪಾಯಿ, ಪದಕ ಕೊಡ್ತಾರೆ ಅಂತ ಗೊತ್ತಾಯ್ತು. ನಾನೇ ಒಂದು ಪಂದ್ಯ ಕಟ್ಟಿದೆ. ಗೊತ್ತಿರೋರ ಬಳಿ ಕೇಳಿ ಕೇಳಿ ತಿಳಿದುಕೊಂಡೆ ಎಂದು ಹೇಳಿದ್ದಾಳೆ.

  ಇದನ್ನೂ ಓದಿ: Ramachari: ಪೊಲೀಸ್ ಠಾಣೆಯಲ್ಲಿ ರಾಮಾಚಾರಿ ತಂದೆಗೆ ಅವಮಾನ!, ಸಂಕಷ್ಟದಲ್ಲಿ ಚಾರಿ ಕುಟುಂಬ

  ಪುಟ್ಟಕ್ಕನ ಪೂರ್ತಿ ಕಥೆ ಕೇಳಬೇಕು ಅನ್ನಿಸುತ್ತಿದೆಯಾ? ಹಾಗಾದ್ರೆ ನೀವು ತಪ್ಪದೇ ಪುಟ್ಟಕ್ಕನ ಮಕ್ಕಳು ಸೀರಿಯಲ್ ನೋಡಿ.
  Published by:Savitha Savitha
  First published: