Puttakkana Makkalu: ಪುಟ್ಟಕ್ಕನ ಮನೆಯಲ್ಲಿ ವರಮಹಾಲಕ್ಷ್ಮಿ ಸಂಭ್ರಮ, ಹಬ್ಬಕ್ಕೆ ರಾಜಿಗಿದಿಯಾ ಆಹ್ವಾನ?

ಪುಟ್ಟಕ್ಕನ ಮಕ್ಕಳು ಧಾರಾವಾಹಿಯಲ್ಲಿ ವರಮಹಾಲಕ್ಷ್ಮಿ ಹಬ್ಬ ಆಚರಣೆಗೆ ತಯಾರಿ ನಡೆಸುತ್ತಿದ್ದಾರೆ. ಮನೆಯವರೆಲ್ಲಾ ಮಡಿಯಾಗಿ ದೇವರ ಪೂಜೆಗೆ ಸಿದ್ಧತೆ ಮಾಡಿಕೊಳ್ಳತ್ತಿದ್ದಾರೆ. ಪುರೋಹಿತರ ಮಾತಿನಿಂದ ಚಿಂತೆಗೆ ಒಳಗಾಗಿರೋ ಪುಟ್ಟಕ್ಕ, ಹಬ್ಬಕ್ಕೆ ರಾಜಿಯನ್ನು ಕರೆದು ಸಮಾಧಾನ ಮಾಡುವ ಪ್ಲ್ಯಾನ್‍ನಲ್ಲಿ ಇದ್ದಾಳೆ. ಆದ್ರೆ ಅದಕ್ಕೆ ಪುಟ್ಟಕ್ಕನ ಮಕ್ಕಳು ಒಪ್ತಾರೋ, ಇಲ್ಲವೋ ಗೊತ್ತಿಲ್ಲ.

 ಪುಟ್ಟಕ್ಕನ ಮಕ್ಕಳು

ಪುಟ್ಟಕ್ಕನ ಮಕ್ಕಳು

  • Share this:
ಪುಟ್ಟಕ್ಕನ ಮಕ್ಕಳು (Puttakkan Makkalu), ಜೀ ಕನ್ನಡದ (Zee Kannada) ಹೆಸರಾಂತ ಧಾರಾವಾಹಿ (Serial). ಸೋಮವಾರದಿಂದ ಶುಕ್ರವಾರದವರೆಗೆ ಪ್ರತಿದಿನ ಸಂಜೆ 7.30ಕ್ಕೆ ಪ್ರಸಾರವಾಗುತ್ತದೆ. ಪುಟ್ಟಕ್ಕಳ ಮಕ್ಕಳು ಧಾರಾವಾಹಿಯಲ್ಲಿ ಪುಟ್ಟಕ್ಕನ ಪಾತ್ರದಲ್ಲಿ ಉಮಾಶ್ರೀ ಅಮೋಘವಾಗಿ ಅಭಿನಯಿಸುತ್ತಿದ್ದಾರೆ. ಉಮಾಶ್ರೀ ಗಂಡ ಆಕೆಯನ್ನು ಬಿಟ್ಟು ಅದೇ ಊರಿನಲ್ಲಿ ರಾಜಿ ಎಂಬಾಕೆಯನ್ನು ಎರಡನೇ ಮದುವೆಯಾಗಿದ್ದಾನೆ. ಇನ್ನು ಉಮಾಶ್ರೀಗೆ ಮೂವರು ಹೆಣ್ಣು ಮಕ್ಕಳು. ಗಂಡ ಬಿಟ್ಟು ಹೋಗಿದ್ದರೂ, ಮೂವರನ್ನು ಚೆನ್ನಾಗಿ ಸಾಕಿದ್ದಾಳೆ. ಮೆಸ್ ಒಂದನ್ನು ನಡೆಸುತ್ತಿದ್ದು, ಅದರಿಂದ ಜೀವನ ಸಾಗಿಸುತ್ತಿದ್ದಾಳೆ. ಮೊದಲನೇ ಮಗಳು ಸಹನಾ . ಓದದೇ, ತನ್ನ ತಾಯಿಗೆ ಹೋಟೆಲ್ (Hotel) ಕೆಲಸದಲ್ಲಿ ಸಹಾಯ ಮಾಡುತ್ತಿದ್ದಾಳೆ. ಎರಡನೇ ಮಗಳು ಸ್ನೇಹ (Sneha) ಓದಿನಲ್ಲೂ ಜೋರು. ಮಾತಿನಲ್ಲೂ ಜೋರು. ಮೂರನೇ ಮಗಳು ಸುಮಾ ಓದಿನ ಜೊತೆ ಆಟಗಳಲ್ಲೂ ಮುಂದು.

ಪುಟ್ಟಕ್ಕನ ಮನೆಯಲ್ಲಿ ವರಮಹಾಲಕ್ಷ್ಮಿ ಸಂಭ್ರಮ
ಪುಟ್ಟಕ್ಕನ ಮಕ್ಕಳು ಧಾರಾವಾಹಿಯಲ್ಲಿ ವರಮಹಾಲಕ್ಷ್ಮಿ ಹಬ್ಬ ಆಚರಣೆಗೆ ತಯಾರಿ ನಡೆಸುತ್ತಿದ್ದಾರೆ. ಮನೆಯವರೆಲ್ಲಾ ಮಡಿಯಾಗಿ ದೇವರ ಪೂಜೆಗೆ ಸಿದ್ಧತೆ ಮಾಡಿಕೊಳ್ಳತ್ತಿದ್ದಾರೆ. ನೈವೇದ್ಯಕ್ಕೆ ರವೆ ಹುಂಡೆಯನ್ನು ಕಟ್ಟುತ್ತಿದ್ದು. ಎಲ್ಲರೂ ಖುಷಿಯಾಗಿದ್ದಾರೆ. ಆದ್ರೆ ಪುಟ್ಟಕ್ಕನ ಮನಸ್ಸಿನಲ್ಲಿ ಬೇರೆ ಏನೂ, ಓಡ್ತಾ ಇದೆ. ಏನೋ ಗಾಢವಾಗಿ ಯೋಚನೆ ಮಾಡುತ್ತಿದ್ದಾಳೆ.

ಪುಟ್ಟಕ್ಕನ ಇರೋ ಒಂದು ಮನೆ ಮೇಲೆ ರಾಜಿ ಕಣ್ಣು
ಪುಟ್ಟಕ್ಕನ ಆಸ್ತಿಯಂತ ಇರೋದ ಮನೆ ಒಂದೇ. ಅದನ್ನು ಮೆಸ್ ನೋಡಿಕೊಂಡು ಜೀವನ ಸಾಗಿಸುತ್ತಿದ್ದಾರೆ. ಆದ್ರೆ ಆ ಮನೆ ಮೇಲೆ ರಾಜಿ ಕಣ್ಣ ಬಿದ್ದಿದೆ. ಅದೇ ಪುಟ್ಟಕ್ಕನ ಗಂಡ ಗೋಪಾಲನ ಎರಡನೇ ಹೆಂಡತಿ ರಾಜಿ. ಹೇಗಾದರೂ ಮನೆ ಪಡೆದುಕೊಳ್ಳಬೇಕೆಂದು, ಪುರೋಹಿತರೊಬ್ಬರಿಗೆ ದುಡ್ಡು ಕೊಟ್ಟು ಇಲ್ಲ ಸಲ್ಲದ್ದನ್ನು ಹೇಳಿಸುತ್ತಿದ್ದಾಳೆ. ಮೆಸ್‍ಗೆ ಊಟ ಮಾಡಲು ಬಂದು ಪುರೋಹಿತ, ಪುಟ್ಟಕ್ಕನಿಗೆ ನೀನು ಯಾರೊಂದಿಗಾದ್ರೂ ಜಗಳ ಮಾಡಿಕೊಂಡಿದ್ರೆ ರಾಜಿ ಮಾಡಿಕೊಳ್ಳಿ. ಇಲ್ಲ ನಿಮ್ಮ ಮಗಳ ಮದುವೆಗೆ ತೊಂದರೆ ಎಂದಿದ್ದಾರೆ.

ಇದನ್ನೂ ಓದಿ: Hitler Kalyana: ಎಜೆಯಿಂದ ಜೀವ ಉಳಿಸಿಕೊಳ್ಳಲು ಪರದಾಡುತ್ತಿದ್ದ ಲೀಲಾಗೆ ಅಪ್ಪನ ಫೋನ್ ಕಾಲ್ ಉರುಳಾಯ್ತೆ?

ಹಬ್ಬಕ್ಕೆ ರಾಜಿಯನ್ನು ಕರೀತಾಳಾ ಪುಟ್ಟಕ್ಕ?
ಪುರೋಹಿತರ ಮಾತಿನಿಂದ ಚಿಂತೆಗೆ ಒಳಗಾಗಿರೋ ಪುಟ್ಟಕ್ಕ, ಹಬ್ಬಕ್ಕೆ ರಾಜಿಯನ್ನು ಕರೆದು ಸಮಾಧಾನ ಮಾಡುವ ಪ್ಲ್ಯಾನ್‍ನಲ್ಲಿ ಇದ್ದಾಳೆ. ಆದ್ರೆ ಅದಕ್ಕೆ ಪುಟ್ಟಕ್ಕನ ಮಕ್ಕಳು ಒಪ್ತಾರೋ, ಇಲ್ಲವೋ ಗೊತ್ತಿಲ್ಲ. ಅದರಲ್ಲೂ ಪುಟ್ಟಕ್ಕನ ಎರಡನೇ ಮಗಳು ಸ್ನೇಹಾಗೆ ರಾಜಿಯ ಮುಖ ಕಂಡರೆ ಆಗಲ್ಲ.

ಸಂಭ್ರಮದಿಂದ ನಡೆಯುತ್ತಾ ಹಬ್ಬ?
ಊರಿನ ಹೆಣ್ಣು ಮಕ್ಕಳನ್ನು ಕುಂಕುಮಕ್ಕೆ ಕರೆಯಬೇಕು ಎಂದು ಪುಟ್ಟಕ್ಕ ಅಂದು ಕೊಂಡಿದ್ದಾರೆ. ಬೇರೆ ಎಲ್ಲರೂ ಬಂದರೆ ಹಬ್ಬ ಚೆನ್ನಾಗಿಯೇ ಆಗುತ್ತೆ. ಆದ್ರೆ ಒಂದು ವೇಳೆ ಪುಟ್ಟಕ್ಕ ಕರೆದು, ರಾಜಿ ಬಂದ್ರೆ ಹಬ್ಬದ ಖುಷಿಗೆ ಕೊಳ್ಳಿ ಇಡುತ್ತಾಳೆ. ಆಕೆ ತನ್ನ ಕೊಂಕು ಮಾಡತಿನಿಂದಲೇ ಸಂಭ್ರಮವನೆಲ್ಲಾ ಹಾಳು ಮಾಡುತ್ತಾಳೆ.

ಇದನ್ನೂ ಓದಿ: Olavina Nildana: ತಾರಿಣಿಯ ರೇಗಿಸಿದವರಿಗೆ ಸರಿಯಾಗಿ ಮಾಂಜಾ ನೀಡಿದ ಸಿದ್ಧಾಂತ್! ಮನದಲ್ಲಿ ಕುಚ್ ಕುಚ್

ಹಬ್ಬಕ್ಕೆ ಮೇಷ್ಟ್ರು ಬರುತ್ತಾರಾ?
ಇನ್ನು ಪಟ್ಟುಕ್ಕ ತನ್ನ ದೊಡ್ಡ ಮಗಳು ಸಹನಾಗೆ ಮದುವೆ ಮಾಡಬೇಕು ಎಂಬ ತಯಾರಿಯಲ್ಲಿ ಇದ್ದಾಳೆ. ಅದಕ್ಕೆ ಗಂಡು ಸಹ ನೋಡುತ್ತಿದ್ದಾರೆ. ಈ ರಾಜಿ ಕಿತಾಪತಿಯಿಂದ ಮದುವೆ ಮುರಿದು ಬೀಳುತ್ತಿವೆ. ಈ ನಡುವೆ ಸಹಾನ ಲೆಕ್ಚರ್ ಒಬ್ಬರನ್ನು ಪ್ರೀತಿಸುತ್ತಿದ್ದಾಳೆ. ಕಳೆದ ಎರಡು ದಿನಗಳ ಹಿಂದೆಯಷ್ಟೇ ಮೇಷ್ಟ್ರು ತನ್ನ ಪ್ರೀತಿಯನ್ನು ಸಹನಾ ಬಳಿ ಹೇಳಿಕೊಂಡಿದ್ದಾರೆ. ಸಹನಾ ಸಹ ಒಪ್ಪಿದ್ದಾಳೆ. ಈ ವಿಷಯ ತನ್ನ ತಂಗಿ ಸುಮಾಗೆ ಗೊತ್ತು.. ಯಾಕಂದ್ರೆ ಸುಮಾ ಅದೇ ಕಾಲೇಜಿನಲ್ಲಿ ಓದುತ್ತಿದ್ದಾಳೆ. ಹಬ್ಬಕ್ಕೆ ರಜೆ ಇರುವ ಕಾರಣಕ್ಕೆ ಮೇಷ್ಟು ಸಹ ಹಬ್ಬಕ್ಕೆ ಬರಬಹುದು.

ಇವತ್ತು ಏನಾಗುತ್ತೆ? ರಾಜಿಯನ್ನು ಪುಟ್ಟಕ್ಕ ಹಬ್ಬಕ್ಕೆ ಕರೆಯುತ್ತಾಳಾ? ಅಥವಾ ಕರೆಯಲ್ವಾ? ಮನೆಯಲ್ಲಿ ಸಂಭ್ರಮದಿಂದ ಹಬ್ಬ ನಡೆಯುತ್ತಾ? ಎಲ್ಲವನ್ನು ನೋಡಲು ಇವತ್ತಿನ ಸಂಚಿಕೆ ನೋಡಬೇಕು.
Published by:Savitha Savitha
First published: