ಪುಟ್ಟಕ್ಕನ ಮಕ್ಕಳು (Puttakkana Makkalu), ಜೀ ಕನ್ನಡದ (Zee Kannada) ಹೆಸರಾಂತ ಧಾರಾವಾಹಿ (Serial). ಸೋಮವಾರದಿಂದ ಶುಕ್ರವಾರದವರೆಗೆ ಪ್ರತಿದಿನ ಸಂಜೆ 7.30ಕ್ಕೆ ಪ್ರಸಾರವಾಗುತ್ತದೆ. ಪುಟ್ಟಕ್ಕನ ಮಕ್ಕಳು ಧಾರಾವಾಹಿಯಲ್ಲಿ ಪುಟ್ಟಕ್ಕನ ಪಾತ್ರದಲ್ಲಿ ಉಮಾಶ್ರೀ ಅಮೋಘವಾಗಿ ಅಭಿನಯಿಸುತ್ತಿದ್ದಾರೆ. ಪುಟ್ಟಕ್ಕನ ಗಂಡ ಆಕೆಯನ್ನು ಬಿಟ್ಟು ಅದೇ ಊರಿನಲ್ಲಿ ರಾಜಿ ಎಂಬಾಕೆಯನ್ನು ಎರಡನೇ ಮದುವೆಯಾಗಿದ್ದಾನೆ. ಇನ್ನು ಪುಟ್ಟಕ್ಕನಿಗೆ ಮೂವರು ಹೆಣ್ಣು ಮಕ್ಕಳು. ಗಂಡ ಬಿಟ್ಟು ಹೋಗಿದ್ದರೂ, ಮೂವರನ್ನು ಚೆನ್ನಾಗಿ ಸಾಕಿದ್ದಾಳೆ. ಮೆಸ್ ಒಂದನ್ನು ನಡೆಸುತ್ತಿದ್ದು, ಅದರಿಂದ ಜೀವನ ಸಾಗಿಸುತ್ತಿದ್ದಾಳೆ. ಮೊದಲನೇ ಮಗಳು ಸಹನಾ ಓದದೇ ತನ್ನ ತಾಯಿಗೆ ಹೋಟೆಲ್ ಕೆಲಸದಲ್ಲಿ ಸಹಾಯ ಮಾಡುತ್ತಿದ್ದಾಳೆ. ಎರಡನೇ ಮಗಳು ಸ್ನೇಹ ಓದಿನಲ್ಲೂ ಜೋರು, ಮಾತಿನಲ್ಲೂ ಜೋರು. ಮೂರನೇ ಮಗಳು ಸುಮಾ. ಆಟದಲ್ಲಿ ಜೋರು. ಇದೀಗ ಪುಟ್ಟಕ್ಕನಿಗೆ ಸಹನಾ (Sahana) ಮದುವೆ (Marriage) ಕಗ್ಗಂಟಾಗಿದೆ.
ಮುರಳಿ-ಸಹನಾ ಪ್ರೀತಿ
ಧಾರಾವಾಹಿಯಲ್ಲಿ ಮುರಳಿ ಮೇಷ್ಟ್ರು ಸಹನಾಳನ್ನು ಇಷ್ಟ ಪಡುತ್ತಿದ್ದಾರೆ. ಅಲ್ಲದೇ ಈ ವಿಷಯವನ್ನು ಸಹನಾಗೆ ಹೇಳಿದ್ದಾರೆ. ಸಹನಾಗೂ ಇಷ್ಟ ಇದೆ. ಮುರಳಿ ಮೇಷ್ಟ್ರು ಮನೆಯವರು ಹೆಣ್ಣು ಕೇಳಲು, ಸಹನಾ ಮನೆಗೆ ಬಂದು ಹೋಗಿದ್ದಾರೆ. ಅದು ನೆಪಕ್ಕೆ ಮಾತ್ರ, ಆದ್ರೆ ಮುರಳಿ ಮನೆಯವರಿಗೆ ಇಷ್ಟ ಇಲ್ಲ. ನಮ್ಮ ಜಾತಿ ಅಲ್ಲ ಮದುವೆ ಆಗಬೇಡ ಅಂತಿದ್ದಾರೆ.
ಮದುವೆ ಮಾತುಕತೆ ನಡೆಯುತ್ತಿಲ್ಲ
ಸಹನಾಳನ್ನು ಮದುವೆ ಆಗಲು ಮುರಳಿ ಮೇಷ್ಟ್ರಿಗೆ ಮಾತ್ರ ಇಷ್ಟ. ಆದ್ರೆ ಮನೆಯವರಿಗೆ ಇಷ್ಟ ಇಲ್ಲ. ಅದಕ್ಕೆ ಬಂದು ಮದುವೆ ಮಾತುಕತೆ ನಡೆಸುತ್ತಿಲ್ಲ. ಅದಕ್ಕೆ ಪುಟ್ಟಕ್ಕ ಒಮ್ಮೆ ಕೇಳಿದ್ದಾಳೆ. ಯಾವಾಗ ನಿಮ್ಮ ಮನೆಯರು ಬರುತ್ತಾರೆ ಎಂದು ಕೇಳಿದ್ದಾಳೆ. ಆದ್ರೆ ಮುರುಳಿ ಸರ್ ಒಪ್ಪಿಸುತ್ತೇನೆ ಎಂದಿದ್ದರು ಆದ್ರೆ ಒಪ್ಪಿಲ್ಲ.
ಇದನ್ನೂ ಓದಿ: Celebrities Health: 2022ರಲ್ಲಿ ತಮ್ಮ ಕಾಯಿಲೆ ಬಗ್ಗೆ ರಿವೀಲ್ ಮಾಡಿದ ಸ್ಟಾರ್ಗಳಿವರು
ಸಾಯುವ ನಾಟಕ ಆಡಿದ ಮುರುಳಿ ಅಮ್ಮ
ಮುರಳಿ ಮೇಷ್ಟ್ರ ತಾಯಿ ಸಾಯುವ ನಾಟಕ ಮಾಡಿದ್ದಾಳೆ. ನೀನು ಸಹನಾಳನ್ನು ಮರೆಯದಿದ್ರೆ, ನಾನು ಆತ್ಮಹತ್ಯೆ ಮಾಡಿಕೊಳ್ತೇನೆ ಎಂದು ಹೆದರಿಸಿದ್ದಾಳೆ. ಅದಕ್ಕೆ ಮುರಳಿ ಮೇಷ್ಟ್ರು ಬಗ್ಗದೇ, ನೀವು ಮದುವೆ ಒಪ್ಪುವವರೆಗೂ ನಿಮ್ಮ ಮನೆಗೆ ಬರಲ್ಲ ಎಂದು, ಮನೆ ಬಿಟ್ಟು ಹೋಗಿದ್ದಾರೆ.
ನಿಮ್ಮ ಒಪ್ಪಿಗೆ ಸಾಕು ಪುಟ್ಟಕ್ಕ ಎಂದ ಮುರಳಿ
ಮುರಳಿ ಸೀದಾ ಪುಟ್ಟಕ್ಕನ ಮನೆಗೆ ಬಂದು, ನೀವು ಒಬ್ಬರು ಒಪ್ಪಿಗೆ ಕೊಡಿ, ನಾನು ಸಹನಾ ಮದುವೆ ಆಗ್ತೀವಿ. ನನಗೆ ನಮ್ಮ ಮನೆಯವರ ಒಪ್ಪಿಗೆ ಬೇಡ ಅಂದಿದ್ದಾರೆ. ಆದ್ರೆ ಪುಟ್ಟಕ್ಕ ಅದಕ್ಕೆ ಒಪ್ಪಿಲ್ಲ. ಮದುವೆಗೂ ಮುಂಚೆ ಅಪ್ಪ-ಅಮ್ಮನಿಂದ ಮಗನನ್ನು ದೂರ ಮಾಡಿದ್ಲು ಅನ್ನೋ ಅಪವಾದ ನಮ್ಮ ಮಗಳ ಮೇಲೆ ಬರುತ್ತೆ. ಬೇಡ ಅಂದಿದ್ದಾಳೆ.
ದೊಡ್ಡ ಗುಣದವಳು ಸಹನಾ
ನಿಮ್ಮ ಅಪ್ಪ-ಅವ್ವನ ಮೇಲೆ ಕೋಪ ಇಲ್ಲ. ಬೇಸರ ಇದೆ. ನನ್ನ ಮಗಳ ಮೇಲೆ ನಿಮ್ಮ ಮನೆಯವರಿಗೆ ಇರುವ ಅಭಿಪ್ರಾಯ ನನಗೆ ನೋವು ತಂದಿದೆ. ಊರಿನಲ್ಲಿ ನನ್ನ ಮಗಳ ಬಗ್ಗೆ ಯಾರನ್ನು ಬೇಕಾದ್ರೂ ಕೇಳಿ, ನನ್ನ ಮಗಳ ಬಗ್ಗೆ ತಪ್ಪಾಗಿ ಮಾತನಾಡುವವರು ಒಬ್ಬರು ಸಿಗಲ್ಲ. ಅವಳು ಅಪರಂಜಿ. ನನಗಿಂತ ಗುಣದಲ್ಲಿ ದೊಡ್ಡವಳು ನನ್ನ ಮಗಳು. ನಿಮ್ಮ ಅಪ್ಪ-ಅಮ್ಮನ ಅಭಿಪ್ರಾಯ ಬದಲಾಯಿಸಿ ಎಂದು ಪುಟ್ಟಕ್ಕ ಮುರುಳಿಗೆ ಹೇಳಿದ್ದಾಳೆ.
ಇದನ್ನೂ ಓದಿ: Bigg Boss Kannada: ಹೀರೋ, ವಿಲನ್ ಎರಡೂ ಸುದೀಪ್! 300 ಕೋಟಿ ಬಜೆಟ್ನಲ್ಲಿ ಗುರೂಜಿ ಸಿನಿಮಾ!
ಮುರುಳಿಗೆ ಸಹನಾ ಬೇಕು. ಮನೆಯವರು ಒಪ್ಪುತ್ತಿಲ್ಲ. ಮನೆಯವರು ಒಪ್ಪದೇ ಪುಟ್ಟಕ್ಕ ಮಗಳನ್ನು ಕೊಡಲ್ಲ. ಮಗಳ ಮದುವೆ ಪುಟ್ಟಕ್ಕನಿಗೆ ಕಗ್ಗಂಟಾಗಿ ಹೋಗಿದೆ. ಮುಂದೇನಾಗುತ್ತೆ ಅಂತ ನೋಡೋಕೆ ಪುಟ್ಟಕ್ಕನ ಮಕ್ಕಳು ಧಾರಾವಾಹಿ ನೋಡಬೇಕು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ