ಪುಟ್ಟಕ್ಕನ ಮಕ್ಕಳು (Puttakkana Makkalu), ಜೀ ಕನ್ನಡದ (Zee Kannada) ಹೆಸರಾಂತ ಧಾರಾವಾಹಿ (Serial). ಸೋಮವಾರದಿಂದ ಶುಕ್ರವಾರದವರೆಗೆ ಪ್ರತಿದಿನ ಸಂಜೆ 7.30ಕ್ಕೆ ಪ್ರಸಾರವಾಗುತ್ತದೆ. ಪುಟ್ಟಕ್ಕನ ಮಕ್ಕಳು ಧಾರಾವಾಹಿಯಲ್ಲಿ ಪುಟ್ಟಕ್ಕನ ಪಾತ್ರದಲ್ಲಿ ಉಮಾಶ್ರೀ ಅಮೋಘವಾಗಿ ಅಭಿನಯಿಸುತ್ತಿದ್ದಾರೆ. ಉಮಾಶ್ರೀ ಗಂಡ ಆಕೆಯನ್ನು ಬಿಟ್ಟು ಅದೇ ಊರಿನಲ್ಲಿ ರಾಜಿ ಎಂಬಾಕೆಯನ್ನು ಎರಡನೇ ಮದುವೆಯಾಗಿದ್ದಾನೆ. ಇನ್ನು ಉಮಾಶ್ರೀಗೆ ಮೂವರು ಹೆಣ್ಣು ಮಕ್ಕಳು. ಮೆಸ್ ಒಂದನ್ನು ನಡೆಸುತ್ತಿದ್ದು, ಅದರಿಂದ ಜೀವನ ಸಾಗಿಸುತ್ತಿದ್ದಾಳೆ. ಮೊದಲನೇ ಮಗಳು ಸಹನಾ ಓದದೇ ತನ್ನ ತಾಯಿಗೆ ಹೋಟೆಲ್ ಕೆಲಸದಲ್ಲಿ ಸಹಾಯ ಮಾಡುತ್ತಿದ್ದಾಳೆ. ಎರಡನೇ ಮಗಳು ಸ್ನೇಹಾಓದಿನಲ್ಲೂ ಜೋರು. ಮಾತಿನಲ್ಲೂ ಜೋರು. ಮೂರನೇ ಮಗಳು ಸುಮಾ ಓದಿನ ಜೊತೆ ಆಟಗಳಲ್ಲೂ ಮುಂದು. ಪುಟ್ಟಕ್ಕನ ಖೋ ಖೋ (Kho Kho) ತಂಡ ಗೆದ್ದಿದೆ (Win).
ಪುಟ್ಟಕ್ಕನ ತಂಡಕ್ಕೆ ಸವಾಲು
ಪುಟ್ಟಕ್ಕನ ಮಗಳು ಸುಮಾ ಖೋ ಖೋ ಆಟಗಾರ್ತಿ. ಆಕೆಗೆ ಶಾಲೆಯಲ್ಲಿ ಸರಿಯಾದ ಕೋಚ್ ಸಿಗದ ಕಾರಣ, ಪುಟ್ಟಕ್ಕನೇ ಕೋಚ್ ಆಗಿ ಸುಮಾ ತಂಡಕ್ಕೆ ತರಬೇತಿ ನೀಡಿದ್ದಳು. ದಿನವೂ ಮಕ್ಕಳಿಗೆ ಖೋ ಖೋ ಆಟ ಹೇಳಿ ಕೊಟ್ಟಿದ್ದಳು. ಮಕ್ಕಳು ಶ್ರದ್ಧೆಯಿಂದ ಕಲಿತಿದ್ದರು. ಅದನ್ನು ಮಕ್ಕಳು ಸಾಬೀತು ಮಾಡಿದ್ದಾರೆ.
ಸಿಟಿ ತಂಡದ ವಿರುದ್ಧ ಗೆಲುವು
ಪುಟ್ಟಕ್ಕನ ತಂಡ ಎದುರಿಸಬೇಕಿರೋದು ಸಿಟಿ ಕಾಲೇಜಿನ ತಂಡವನ್ನು. ಅವರು ಸಹ ತುಂಬಾ ಪ್ರಬಲರಾಗಿದ್ದಾರೆ. ಅವನ್ನು ಎದುರಿಸಿ ಖೋ ಖೋ ಗೆಲ್ಲಬೇಕಿತ್ತು. ಪುಟ್ಟಕ್ಕ ಸಹ ತನ್ನ ತಂಡಕ್ಕೆ ಧೈರ್ಯ ತುಂಬಿದ್ಲು. ಮಕ್ಕಳು ಚೆನ್ನಾಗಿ ಆಡಿ ಗೆಲುವನ್ನು ತಮ್ಮದಾಗಿಸಿಕೊಂಡಿದ್ದಾರೆ. ಈ ಮೂಲಕ ಪುಟ್ಟಕ್ಕನ ತಂಡಕ್ಕೆ ಜಯ ಸಿಕ್ಕಿದೆ.
ಇದನ್ನೂ ಓದಿ: Kannadathi: ಸೌಪರ್ಣಿಕಾ ಸತ್ಯ ಗೊತ್ತಾದ್ಮೇಲೆ ಭುವಿ ನಾಪತ್ತೆ, ಹರ್ಷ ಕಂಗಾಲು!
ಅಸಡ್ಡೆ ತೋರಿದವರಿಗೆ ಕಿವಿಮಾತು
ಯಾವತ್ತು, ಯಾರನ್ನು ಕಮ್ಮಿ ಲೆಕ್ಕದಲ್ಲಿ ಕಾಣಬಾರದು. ಯಾರನ್ನು ಬಟ್ಟೆ, ಬಣ್ಣ, ಅವರು ಎಲ್ಲಿಂದ ಬಂದಿದ್ದಾರೆ ಇದನ್ನೆಲ್ಲಾ ನೋಡಿ ಲೆಕ್ಕ ಹಾಕಬಾರದು. ಬಣ್ಣ ಹೆತ್ತವರು ಕೊಟ್ಟಿದ್ದು. ಬಟ್ಟೆ ಕಾಸಿಗೆ ತಕ್ಕಂತೆ ಬದಲಾಗುತ್ತಾನೇ ಇರುತ್ತೆ. ಆದ್ರೆ ಗುಣ ಸಾಯುವ ತನಕ ಇರುತ್ತೆ. ಅವಕಾಶ ಎನ್ನುವುದು ಎಲ್ಲರಿಗೂ ಸಮನಾಗಿ ಸಿಗುವುದಿಲ್ಲ ಎಂದು ಪುಟ್ಟಕ್ಕ ಹೇಳಿದ್ದಾಳೆ.
ಇಂಗ್ಲಿಷ್ ಶಾಲೆ ಕೋಚ್ಗೆ ಕ್ಲಾಸ್
ಅವಕಾಶ ಏಣಿಯಿದ್ದಂತೆ. ಅದು ಸಿಕ್ಕಾಗ ಒದೆಯುವ ಕೆಲಸ ಮಾಡಬೇಡಿ. ನಾವು ಬಡವರು ಏಣಿಯಲ್ಲೇ ಆಕಾಶ ಹತ್ತುವ ಕನಸು ಕಾಣ್ತೇವೆ. ಅದಕ್ಕೆ ಯಾರಾದ್ರೂ ಅಡ್ಡಿ ಬಂದ್ರೆ ಬಿಡಲ್ಲ. ಒಂದು ನೆನೆಪಿನಲ್ಲಿಟ ಇಟ್ಟುಕೊಳ್ಳಿ. ಆಕಾಶ ಯಾರ ಅಪ್ಪನ ಮನೆಯ ಆಸ್ತಿಯೂ ಅಲ್ಲ ಎಂದು ಇಂಗ್ಲಿಷ್ ಶಾಲೆ ಕೋಚ್ ಗೆ ಮನ ಮುಟ್ಟುವಂತೆ ಪುಟ್ಟಕ್ಕ ಹೇಳಿದ್ದಾಳೆ.
ಇದನ್ನೂ ಓದಿ: Ramachari: ತಾಯಿ-ಮಗಳಿಗೆ ಪಾಠ ಕಲಿಸಲು ರಾಮಾಚಾರಿ ನಿರ್ಧಾರ, ಪ್ರೀತಿ ಸಿಕ್ರೆ ಸಾಕು ಎಂದು ಕಾಯ್ತಿರೋ ಚಾರು!
ರಾಜಿ ಕುತಂತ್ರ ನಡೆಯಲಿಲ್ಲ
ರಾಜಿಗೆ ಅವರು ಊರಿನ ತಂಡ ಗೆಲ್ಲಬೇಕು ಎನ್ನುವುದಕ್ಕಿಂತ, ಪುಟ್ಟಕ್ಕ ಸೋಲಬೇಕು ಎನ್ನುವುದೇ ಅವಳ ಮನಸ್ಸಿನಲ್ಲಿ ಇರುತ್ತೆ. ಅದಕ್ಕೆ ಆಕೆ ಸುಮಾ ತಂಡ ಸೋಲಿಸಲು ಕುತಂತ್ರ ಮಾಡಿದ್ದಳು. ಅದಕ್ಕೆ ಸುಮಾ ತಂಡದ ಕಾಲೇಜಿನ ಕೋಚ್ ನನ್ನು ಹಿಡಿದಿದ್ದಳು. ಅವನ ಬಳಿ ಹೋಗಿ ಮಜ್ಜಿಗೆಗೆ ನಿದ್ದೆ ಮಾತ್ರೆ ಹಾಕು ಎಂದು ಹೇಳಿದ್ದಳು. ಆದ್ರೆ ರಾಜಿಯ ಕುತಂತ್ರ ನಡೆಯಲಿಲ್ಲ. ಪುಟ್ಟಕ್ಕ ಗೆದ್ದೇ ಬಿಟ್ಟಿದ್ದಾಳೆ.
ಶ್ರದ್ಧೆ ಇದ್ರೆ ಏನು ಬೇಕಾದ್ರೂ ಮಾಡಬಹುದು ಎಂದು ಪುಟ್ಟಕ್ಕ ಹೇಳಿದ್ದಾಳೆ. ಸುಮಾ ಖುಷಿಯಲ್ಲಿದ್ದಾಳೆ. ಧಾರಾವಾಹಿಯಲ್ಲಿ ಮುಂದೇನಾಗುತ್ತೆ ಅಂತ ನೀವೂ ನೋಡಿ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ