• Home
 • »
 • News
 • »
 • entertainment
 • »
 • Puttakkana Makkalu: ಇಂಗ್ಲಿಷ್ ಶಾಲೆ ಖೋ ಖೋ ಕೋಚ್​​ಗೆ ಪುಟ್ಟಕ್ಕನ ಕನ್ನಡ ಕ್ಲಾಸ್!

Puttakkana Makkalu: ಇಂಗ್ಲಿಷ್ ಶಾಲೆ ಖೋ ಖೋ ಕೋಚ್​​ಗೆ ಪುಟ್ಟಕ್ಕನ ಕನ್ನಡ ಕ್ಲಾಸ್!

 ಪುಟ್ಟಕ್ಕನ ಕನ್ನಡ ಕ್ಲಾಸ್!

ಪುಟ್ಟಕ್ಕನ ಕನ್ನಡ ಕ್ಲಾಸ್!

ಪುಟ್ಟಕ್ಕನ ತಂಡ ಪಂದ್ಯ ಗೆಲ್ಲುತ್ತಾ? ಕೊಬ್ಬಿದ ಎದುರಾಳಿ ತಂಡಕ್ಕೆ ಆಟದ ಮೂಲಕವೇ ಉತ್ತರ ನೀಡುತ್ತಾ? ಪಂದ್ಯದ ಕುತೂಹಲ ನೋಡಲು ಪುಟ್ಟಕ್ಕನ ಮಕ್ಕಳು ಧಾರಾವಾಹಿ ನೋಡಬೇಕು.

 • News18 Kannada
 • Last Updated :
 • Karnataka, India
 • Share this:

  ಪುಟ್ಟಕ್ಕನ ಮಕ್ಕಳು  (Puttakkana Makkalu), ಜೀ ಕನ್ನಡದ (Zee Kannada) ಹೆಸರಾಂತ ಧಾರಾವಾಹಿ (Serial). ಸೋಮವಾರದಿಂದ ಶುಕ್ರವಾರದವರೆಗೆ ಪ್ರತಿದಿನ ಸಂಜೆ 7.30ಕ್ಕೆ ಪ್ರಸಾರವಾಗುತ್ತದೆ. ಪುಟ್ಟಕ್ಕನ ಮಕ್ಕಳು ಧಾರಾವಾಹಿಯಲ್ಲಿ ಪುಟ್ಟಕ್ಕನ ಪಾತ್ರದಲ್ಲಿ ಉಮಾಶ್ರೀ ಅಮೋಘವಾಗಿ ಅಭಿನಯಿಸುತ್ತಿದ್ದಾರೆ. ಉಮಾಶ್ರೀ ಗಂಡ ಆಕೆಯನ್ನು ಬಿಟ್ಟು ಅದೇ ಊರಿನಲ್ಲಿ ರಾಜಿ ಎಂಬಾಕೆಯನ್ನು ಎರಡನೇ ಮದುವೆಯಾಗಿದ್ದಾನೆ. ಇನ್ನು ಉಮಾಶ್ರೀಗೆ ಮೂವರು ಹೆಣ್ಣು ಮಕ್ಕಳು. ಗಂಡ ಬಿಟ್ಟು ಹೋಗಿದ್ದರೂ, ಮೂವರನ್ನು ಚೆನ್ನಾಗಿ ಸಾಕಿದ್ದಾಳೆ. ಮೆಸ್ ಒಂದನ್ನು ನಡೆಸುತ್ತಿದ್ದು, ಅದರಿಂದ ಜೀವನ ಸಾಗಿಸುತ್ತಿದ್ದಾಳೆ. ಮೊದಲನೇ ಮಗಳು ಸಹನಾ ಓದದೇ ತನ್ನ ತಾಯಿಗೆ ಹೋಟೆಲ್ ಕೆಲಸದಲ್ಲಿ ಸಹಾಯ ಮಾಡುತ್ತಿದ್ದಾಳೆ. ಎರಡನೇ ಮಗಳು ಸ್ನೇಹಾ ಓದಿನಲ್ಲೂ ಜೋರು. ಮಾತಿನಲ್ಲೂ ಜೋರು. ಮೂರನೇ ಮಗಳು ಸುಮಾ (Suma) ಓದಿನ ಜೊತೆ ಆಟಗಳಲ್ಲೂ ಮುಂದು.


  ಮಗಳಿಗಾಗಿ ಕೋಚ್ ಆಗಿರುವ ಪುಟ್ಟಕ್ಕ
  ಮಗಳು ಸುಮಾ ಮತ್ತು ಆಕೆಯ ತಂಡಕ್ಕಾಗಿ ಪುಟ್ಟಕ್ಕ ಕೋಚ್ ಆಗಿದ್ದಳು. ತನ್ನ ಗದ್ದೆಯನ್ನೇ ಆಟದ ಮೈದಾನವಾಗಿ ಬದಲಾಯಿಸಿದಿದ್ದಳು. ದಿನವೂ ಮಕ್ಕಳಿಗೆ ಖೋ ಖೋ ಆಟ ಹೇಳಿ ಕೊಟ್ಟಿದ್ದಾಳೆ. ಮಕ್ಕಳು ಶ್ರದ್ಧೆಯಿಂದ ಕಲಿತಿದ್ದಾರೆ. ಆ ತರಬೇತಿಯನ್ನು ಈಗ ಪ್ರದರ್ಶನ ಮಾಡೋ ಸಮಯ ಬಂದಿದೆ. ಮಕ್ಕಳು ಪಂದ್ಯ ಆಡಲು ಬಂದಿದ್ದಾರೆ.


  ಪುಟ್ಟಕ್ಕನನ್ನು ಕೆಣಕಿದ ಇಂಗ್ಲಿಷ್ ಕೋಚ್
  ಪುಟ್ಟಕ್ಕ ಕೋಚ್ ಎಂದಿದ್ದಕ್ಕೆ, ಎದುರಾಳಿ ತಂಡದ ಕೋಚ್ ಅವಮಾನ ಮಾಡಿದ್ದಾಳೆ. ಆ ಹುಡುಗಿಯರಿಗೆ ತಲೆ ಕೆಟ್ಟು ನಿನ್ನ ಕೋಚ್ ಎಂದು ಕರೆದುಕೊಂಡು ಬಂದಿದ್ದಾರೆ ತಾನೇ ಎಂದು ಕೇಳುತ್ತಾಳೆ. ಇಲ್ಲಿ ಯಾರು ಬೇಕಾದ್ರೂ ಕೋಚ್ ಆಗಬಹುದು ಎಂದ್ರೆ, ನಾವೆಲ್ಲಾ ಯಾಕ್ ಬೇಕಿತ್ತು? ನಾನು ಒಬ್ಬರಿಗೆ ತಿಂಗಳಿಗೆ 2 ಲಕ್ಷ ಫೀಸ್  ತೆಗೆದುಕೊಳ್ಳುತ್ತೇನೆ. ಅವರ ಅಪ್ಪಂದಿರು, ಸ್ಟೇಟ್, ಸೆಂಟ್ರಲ್ ಲೆವೆಲ್ ಪ್ರಭಾವ ಇರೋರು.


  ಇದನ್ನೂ ಓದಿ: Bigg Boss Kannada: ರಾಕೇಶ್ ಅಡಿಗ ಡ್ರಗ್ ಅಡಿಕ್ಟ್ ಆಗಿದ್ರಾ? ರೂಪೇಶ್ ಶೆಟ್ಟಿ ಸೂಸೈಡ್‍ಗೆ ಯತ್ನಿಸಿದ್ರಾ?


  ನಾನ್ ಒಂದು ಕಾಲ್ ಮಾಡಿದ್ರೆ, ಇವತ್ತಿನ ಮ್ಯಾಚ್ ನ ಮುಂದಕ್ಕೂ ಹಾಕಬಹುದು. ಆಟವಾಡದೇ ಕಪ್ ನ್ನು ಮನೆಗೆ ತೆಗೆದುಕೊಂಡು ಹೋಗಬಹುದು. ಆ ಪವರ್ ನನಗೆ ಇದೆ. ನಾನು ನಿಮ್ಮ ಟೀಂ ಎದುರು ನಮ್ಮ ಹುಡುಗಿಯರನ್ನು ಆಡಿಸಬೇಕಾ? ನಿಮ್ಮ ಅಂತವರು ಹಳ್ಳಿಯಲ್ಲಿ ಕುಂಟೆಬಿಲ್ಲೆ, ಕೋಲಾಟವಾಡಿ. ಖೋ ಖೋ ಅಲ್ಲ. ಮ್ಯಾಚ್ ನಿಂದ ನೀವಾಗಿ ಹೋಗಿ. ನಿಮ್ಮ ಮರ್ಯಾದೆ ಉಳಿಯುತ್ತೆ ಎಂದು ಪುಟ್ಟಕ್ಕನಿಗೆ ಹೇಳ್ತಾರೆ.


  ಪುಟ್ಟಕ್ಕನ ಕನ್ನಡ ಕ್ಲಾಸ್!


  ಕನ್ನಡದಲ್ಲೇ ಕೋಚ್ ಗೆ ಪುಟ್ಟಕ್ಕ ಕ್ಲಾಸ್
  ಯಾವತ್ತಾದ್ರೂ ಖೋ ಖೋ ಆಟ ಆಡಿದಿಯಾ ಅಂತ ಕೇಳಿದೆ ಅಲ್ವಾ ನೀನು, ನಿನ್ನ ವಯಸ್ಸು ಎಷ್ಟು ಎಂದು ಕೇಳ್ತಾಳೆ ಪುಟ್ಟಕ್ಕ. ಎರುರಾಳಿ ತಂಡದ ಕೋಚ್ 26 ಅಂತಾಳೆ. ಅದಕ್ಕೆ ಪುಟ್ಟುಕ್ಕ ನೀನು ಹುಟ್ಟುವ ಮೊದಲೇ ಪದಕ ಗೆದ್ದವಳು ನಾನು ಗೊತ್ತಾ ಎಂದು ಕೇಳ್ತಾಳೆ ಪುಟ್ಟಕ್ಕ.


  ಕನ್ನಡದಲ್ಲೇ ಕೋಚ್ ಗೆ ಪುಟ್ಟಕ್ಕ ಕ್ಲಾಸ್


  ಪುಟ್ಟಕ್ಕನೂ ಖೋ ಖೋ ಆಟಗಾರ್ತಿ
  ಚಿಕ್ಕವಳಿದ್ದಾಗ ಪುಟ್ಟಕ್ಕ ಸಹ ಖೋಖೋ ಆಟಗಾರ್ತಿ ಆಗಿರುತ್ತಾಳೆ. ತನ್ನದೇ ಊರಿನ ಜನರನ್ನು ಕರೆದುಕೊಂಡು ತಂಡ ಕಟ್ಟಿರುತ್ತಾಳೆ. ಎದುರಾಳಿ ತಂಡದವರಲ್ಲಿ ನಡುಕ ಹುಟ್ಟಿಸುತ್ತಿತ್ತು ಇವಳ ಆಟ. ಆದ್ರೆ ಬಡತನ, ಮದುವೆ ಎಲ್ಲವೂ ಪುಟ್ಟಕ್ಕನನ್ನು ಆಟದಿಂದ ದೂರ ಮಾಡಿತ್ತು. ಈಗ ಅದೇ ತರಬೇತಿಯನ್ನು ಮಗಳಿಗೆ ಹೇಳಿ ಕೊಟ್ಟಿದ್ದಾಳೆ.


  ಇದನ್ನೂ ಓದಿ: SA RI GA MA PA ವೇದಿಕೆಯಲ್ಲೇ ಅನುಶ್ರೀಗೆ ಮದುವೆ ಆಫರ್! ಅವ್ರ ಪ್ರಪೋಸಲ್‌ಗೆ ಮಾತಿನಮಲ್ಲಿ ಹೇಳಿದ್ದೇನು? 


  ಪುಟ್ಟಕ್ಕನ ತಂಡ ಪಂದ್ಯ ಗೆಲ್ಲುತ್ತಾ? ಕೊಬ್ಬಿದ ಎದುರಾಳಿ ತಂಡಕ್ಕೆ ಆಟದ ಮೂಲಕವೇ ಉತ್ತರ ನೀಡುತ್ತಾ? ಪಂದ್ಯದ ಕುತೂಹಲ ನೋಡಲು ಪುಟ್ಟಕ್ಕನ ಮಕ್ಕಳು ಧಾರಾವಾಹಿ ನೋಡಬೇಕು.

  Published by:Savitha Savitha
  First published: