ಪುಟ್ಟಕ್ಕನ ಮಕ್ಕಳು (Puttakkana Makkalu), ಜೀ ಕನ್ನಡದ (Zee Kannada) ಹೆಸರಾಂತ ಧಾರಾವಾಹಿ (Serial). ಸೋಮವಾರದಿಂದ ಶುಕ್ರವಾರದವರೆಗೆ ಪ್ರತಿದಿನ ಸಂಜೆ 7.30ಕ್ಕೆ ಪ್ರಸಾರವಾಗುತ್ತದೆ. ಪುಟ್ಟಕ್ಕನ ಮಕ್ಕಳು ಧಾರಾವಾಹಿಯಲ್ಲಿ ಪುಟ್ಟಕ್ಕನ ಪಾತ್ರದಲ್ಲಿ ಉಮಾಶ್ರೀ ಅಮೋಘವಾಗಿ ಅಭಿನಯಿಸುತ್ತಿದ್ದಾರೆ. ಪುಟ್ಟಕ್ಕನನ್ನು ಬಿಟ್ಟು ಆಕೆಯ ಗಂಡ ಗೋಪಾಲ ಅದೇ ಊರಿನಲ್ಲಿ ರಾಜಿ ಎಂಬಾಕೆಯನ್ನು ಎರಡನೇ ಮದುವೆಯಾಗಿದ್ದಾನೆ. ಇನ್ನು ಪುಟ್ಟಕ್ಕನಿಗೆ ಮೂವರು ಹೆಣ್ಣು ಮಕ್ಕಳು. ಗಂಡ ಬಿಟ್ಟು ಹೋಗಿದ್ದರೂ, ಮೂವರನ್ನು ಚೆನ್ನಾಗಿ ಸಾಕಿದ್ದಾಳೆ. ಮೆಸ್ ಒಂದನ್ನು ನಡೆಸುತ್ತಿದ್ದು, ಅದರಿಂದ ಜೀವನ ಸಾಗಿಸುತ್ತಿದ್ದಾಳೆ. ಮೊದಲನೇ ಮಗಳು ಸಹನಾ ಮದುವೆ ಅದ್ಧೂರಿಯಾಗಿ ನಡೆದಿದೆ. ಆದ್ರೆ ಮದುವೆ ಸಂದರ್ಭದಲ್ಲಿ ಪುಟ್ಟಕ್ಕ ಆಸ್ತಿಯನ್ನು(Property) ರಾಜಿಗೆ ಬರೆದು ಕೊಟ್ಟಿದ್ದಾಳೆ. ಅದಕ್ಕೆ ರಾಜಿ ಮನೆ (Home) ಬಿಡಿಸಿಕೊಳ್ಳಲು ಬಂದಿದ್ದಾಳೆ.
ಆಸ್ತಿ ಪತ್ರಕ್ಕೆ ಸೈನ್
ಸಹನಾ ಮದುವೆ ದಿನ ರಾಜಿ, ಆಸ್ತಿ ಪತ್ರ ತಂದು ಪುಟ್ಟಕ್ಕನಿಗೆ ಸೈನ್ ಮಾಡು ಎನ್ನುತ್ತಿದ್ದಳು. ನಿನ್ನ ಮಗಳ ಮದುವೆ ನಡೆಯಬೇಕೋ, ಬೇಡ್ವೋ? ನಿನಗೆ ನಿನ್ನ ಮಗಳ ಜೀವನ ಮುಖ್ಯನಾ? ಆಸ್ತಿ ಮುಖ್ಯನಾ? ನೀನು ಈ ಪತ್ರಕ್ಕೆ ಹೆಬ್ಬೆಟ್ಟು ಒತ್ತಿದ ತಕ್ಷಣ ನನ್ನ ಗಂಡ ಬರ್ತಾನೆ ಎಂದು ರಾಜಿ ಹೇಳಿ ಆಸ್ತಿ ಪತ್ರಕ್ಕೆ ಸೈನ್ ಹಾಕಿಸಿಕೊಂಡಿರುತ್ತಾಳೆ.
ಪುಟ್ಟಕ್ಕನ ಮನೆ ವಸ್ತುಗಳು ಬೀದಿಗೆ
ರಾಜಿ ಆಸ್ತಿ ಪತ್ರ ಮತ್ತು ಗಂಡ ಗೋಪಾಲನ ಜೊತೆ ಪುಟ್ಟಕ್ಕನ ಮನೆಗೆ ಬಂದಿದ್ದಾಳೆ. ಜೊತೆಗೆ ರೌಡಿಗಳನ್ನು ಕರೆದುಕೊಂಡು ಬಂದಿದ್ದಾಳೆ. ಆಕೆಯ ಮನೆಯ ವಸ್ತುಗಳನ್ನು ಆಚೆ ಹಾಕಿಸುತ್ತಿದ್ದಾಳೆ. ಪುಟ್ಟಕ್ಕ ಅಳುತ್ತಾ ಕೇಳುತ್ತಿದ್ದಾಳೆ. ಈ ರೀತಿ ಮಾಡಬೇಡಿ. ಮನೆ ನಿಮ್ಮ ಹೆಸರಿಗೆ ಇರಲಿ, ಆದ್ರೆ ನಮ್ಮನ್ನು ಇಲ್ಲಿ ಇರೋಕೆ ಬಿಡಿ ಎಂದು ಕೈ ಮುಗಿದು ಬೇಡಿಕೊಳ್ತಾ ಇದ್ದಾಳೆ. ಆದ್ರೆ ರಾಜಿ ಕೇಳ್ತಾ ಇಲ್ಲ.
ಸ್ನೇಹಾ ಸಿಟ್ಟು
ರಾಜಿ ಅಲ್ಲಿ ಮಾಡುತ್ತಿದ್ದ ದೌಜ್ಯನ್ಯ ನೋಡಿ ಪುಟ್ಟಕ್ಕನ 2ನೇ ಮಗಳು ಸ್ನೇಹಾ ಧಮ್ಕಿ ಹಾಕಿದ್ದಾಳೆ. ಇದನ್ನೆಲ್ಲಾ ನಿಲ್ಲಿಸಿ ಎನ್ನುತ್ತಾಳೆ. ಆಗ ರಾಜಿ ಲಾಯರ್‌ಗೆ ಫೋನ್ ಮಾಡ್ತಾಳೆ. ಪುಟ್ಟಕ್ಕ ಹೆಬ್ಬೆಟ್ಟು ಒತ್ತಿದ್ರೆ ಮುಗೀತು ತಾನೇ ಎಂದು ಹೇಳ್ತಾಳೆ. ಅದಕ್ಕೆ ಸ್ನೇಹಾ ಲಾಯರ್ ಜೊತೆ ಮಾತನಾಡ್ತಾಳೆ. ನಮ್ಮ ಅವ್ವ ಹೆಬ್ಬೆಟ್ಟು ಒತ್ತಿರಬಹುದು. ನಾವು ಮೂವರು ಹೆಣ್ಣು ಮಕ್ಕಳು ಒಪ್ಪಿದ್ದಿವಿ ಎಂದಲ್ಲ ಎಂದು ಹೇಳ್ತಾಳೆ.
ಮರು ಕೇಸ್ ಹಾಕ್ತೀವಿ
ನೀವು ಈಗ ಬಲವಂತವಾಗಿ ನಮ್ಮನ್ನು ಮನೆಯಿಂದ ಆಚೆ ಹಾಕಬಹುದು. ಆ ಮೇಲೆ ನಾವು ವಾಪಸ್ ಕೇಸ್ ಹಾಕ್ತೀವಿ. ಗೋಪಾಲ ನಮ್ಮ ಅವ್ವನಿಗೆ ಡಿವೋರ್ಸ್ ಕೊಡದೇ ಇನ್ನೊಂದು ಮದುವೆ ಆಗಿದ್ದಾನೆ. ನಮಗೆ ಬರಬೇಕಾದ ಆಸ್ತಿ ಕೊಡಿಸಿ ಎಂದು ಕೇಳುತ್ತೇವೆ. ಆಗ ಯಾರೂ ಏನೂ ಮಾಡೋಕೆ ಆಗಲ್ಲ ಎಂದು ಸ್ನೇಹಾ ಹೇಳ್ತಾಳೆ. ಈ ಕೇಸ್ ತುಂಬಾ ಗಟ್ಟಿಯಾಗಿ ನಿಲ್ಲುತ್ತೆ ಎಂದು ಹೇಳ್ತಾಳೆ.
ನಡುಗಿದ ರಾಜಿ
ರಾಜಿ ಪ್ಲ್ಯಾನ್ ಮಾಡಿ, ಪುಟ್ಟಕ್ಕನ ಇರೋ ಒಂದು ಮನೆಯನ್ನು ಬಿಡಿಸಿಕೊಳ್ಳೋಣ ಎಂದುಕೊಂಡಿದ್ಲು. ಆದ್ರೆ ಅದು ಆಗಿಲ್ಲ. ಸ್ನೇಹಾಳ ಕಾನೂನಿನ ಕ್ಲಾಸ್‍ಗೆ ಬೆಚ್ಚಿ ಬಿದ್ದಿದ್ದಾಳೆ. ಮತ್ತೆ ಈಕೆ ನಮ್ಮ ಆಸ್ತಿಯನ್ನು ಕೇಳಿ ಬಿಡ್ತಾಳೆ ಎಂದು ಭಯ ಪಟ್ಟಿದ್ದಾಳೆ. ಒಂದು ಮನೆಗೆ ಆಸೆ ಪಟ್ಟು ಆಸ್ತಿಯೆಲ್ಲಾ ಅರ್ಧ ಭಾಗ ಆಗುತ್ತೆ ಎಂದು ಆತಂಕಗೊಂಡು ಅಲ್ಲಿಂದ ಕಾಲ್ಕಿತ್ತಿದ್ದಾಳೆ.
ಇದನ್ನೂ ಓದಿ: Prathama Prasad: ದೊಡ್ಡ ವ್ಯಕ್ತಿಗಳಿಂದ ಕೊಲೆ ಬೆದರಿಕೆ ಇತ್ತಂತೆ, ಗಟ್ಟಿಗಿತ್ತಿ ಅಮ್ಮ ಎಂದ ಪ್ರಥಮಾ ಪ್ರಸಾದ್!
ಪುಟ್ಟಕ್ಕನಿಗೆ ಮಗಳು ಸ್ನೇಹಾಳಿಂದ ಮನೆ ಉಳಿದಿದೆ. ಮತ್ತೆ ರಾಜಿ ಬೇರೆ ಏನಾದ್ರೂ ಪ್ಲ್ಯಾನ್ ಮಾಡ್ತಾಳಾ? ಮುಂದೇನಾಗುತ್ತೆ ಅಂತ ನೋಡೋಕೆ ಪುಟ್ಟಕ್ಕನ ಮಕ್ಕಳು ಸೀರಿಯಲ್ ನೋಡಬೇಕು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ