ಪುಟ್ಟಕ್ಕನ ಮಕ್ಕಳು (Puttakkana Makkalu), ಜೀ ಕನ್ನಡದ (Zee Kannada) ಹೆಸರಾಂತ ಧಾರಾವಾಹಿ (Serial). ಸೋಮವಾರದಿಂದ ಶುಕ್ರವಾರದವರೆಗೆ ಪ್ರತಿದಿನ ಸಂಜೆ 7.30ಕ್ಕೆ ಪ್ರಸಾರವಾಗುತ್ತದೆ. ಪುಟ್ಟಕ್ಕನ ಮಕ್ಕಳು ಧಾರಾವಾಹಿಯಲ್ಲಿ ಪುಟ್ಟಕ್ಕನ ಪಾತ್ರದಲ್ಲಿ ಉಮಾಶ್ರೀ ಅಮೋಘವಾಗಿ ಅಭಿನಯಿಸುತ್ತಿದ್ದಾರೆ. ಪುಟ್ಟಕ್ಕನನ್ನು ಬಿಟ್ಟು ಆಕೆಯ ಗಂಡ ಗೋಪಾಲ ಅದೇ ಊರಿನಲ್ಲಿ ರಾಜಿ ಎಂಬಾಕೆಯನ್ನು ಎರಡನೇ ಮದುವೆಯಾಗಿದ್ದಾನೆ. ಇನ್ನು ಪುಟ್ಟಕ್ಕನಿಗೆ ಮೂವರು ಹೆಣ್ಣು ಮಕ್ಕಳು. ಗಂಡ ಬಿಟ್ಟು ಹೋಗಿದ್ದರೂ, ಮೂವರನ್ನು ಚೆನ್ನಾಗಿ ಸಾಕಿದ್ದಾಳೆ. ಮೆಸ್ ಒಂದನ್ನು ನಡೆಸುತ್ತಿದ್ದು, ಅದರಿಂದ ಜೀವನ ಸಾಗಿಸುತ್ತಿದ್ದಾಳೆ. ಮೊದಲನೇ ಮಗಳು ಸಹನಾ ಮದುವೆ ಅದ್ಧೂರಿಯಾಗಿ ನಡೆದಿದೆ. ಆದ್ರೆ ಮದುವೆ (Marriage) ಸಂದರ್ಭದಲ್ಲಿ ಪುಟ್ಟಕ್ಕ ಆಸ್ತಿಯನ್ನು (Property) ರಾಜಿಗೆ ಬರೆದು ಕೊಟ್ಟಿದ್ದಾಳೆ.
ಸಹನಾ ಮದುವೆ ಸಂದರ್ಭದಲ್ಲಿ ಸಂಕಟ
ಸಹನಾ ಮದುವೆಗೆ ಅವರ ಅಪ್ಪ ಗೋಪಾಲ ಬರಬೇಕು ಎಂದು ಮುರಳಿ ಅಮ್ಮ ಕಂಡಿಶನ್ ಹಾಕಿದ್ದರು. ಅದಕ್ಕೆ ಪುಟ್ಟಕ್ಕನ್ನು ಒಪ್ಪಿಕೊಂಡಿದ್ದಳು. ಗೋಪಾಲನಿಗೂ ಬರೋಕೆ ಇಷ್ಟ ಇತ್ತು. ಆದ್ರೆ ರಾಜಿ ಬಿಡ್ತಾ ಇರಲಿಲ್ಲ. ಗೋಪಾಲ ಬರಲಿಲ್ಲ ಅಂದ್ರೆ ಈ ಮದುವೆ ಸಾಧ್ಯವಿರಲಿಲ್ಲ. ಅದಕ್ಕೆ ರಾಜಿ ಇದೇ ಸಮಯವನ್ನು ಬಳಸಿಕೊಂಡು ತನ್ನ ಕುತಂತ್ರ ಬುದ್ಧಿ ತೋರಿದ್ದಾಳೆ.
ಆಸ್ತಿ ಪತ್ರಕ್ಕೆ ಸೈನ್
ಸಹನಾ ಮದುವೆ ದಿನ ರಾಜಿ, ಆಸ್ತಿ ಪತ್ರ ತಂದು ಪುಟ್ಟಕ್ಕನಿಗೆ ಸೈನ್ ಮಾಡು ಎನ್ನುತ್ತಿದ್ದಳು. ನಿನ್ನ ಮಗಳ ಮದುವೆ ನಡೆಯಬೇಕೋ, ಬೇಡ್ವಾ?, ನಿನಗೆ ನಿನ್ನ ಮಗಳ ಜೀವನ ಮುಖ್ಯನಾ? ಆಸ್ತಿ ಮುಖ್ಯನಾ?, ನೀನು ಈ ಪತ್ರಕ್ಕೆ ಹೆಬ್ಬೆಟ್ಟು ಒತ್ತಿದ ತಕ್ಷಣ ನನ್ನ ಗಂಡ ಬರ್ತಾನೆ ಎಂದು ರಾಜಿ ಹೇಳಿ ಆಸ್ತಿ ಪತ್ರಕ್ಕೆ ಸೈನ್ ಹಾಕಿಸಿಕೊಂಡಿರುತ್ತಾಳೆ.
ಪುಟ್ಟಕ್ಕನನ್ನು ಬೀದಿಗೆ ತರ್ತಾಳಂತೆ ರಾಜಿ
ರಾಜಿ ಮನೆಯಲ್ಲಿ ದೇವರ ಮುಂದೆ ಆಸ್ತಿ ಪತ್ರ ಇಟ್ಟು ಪೂಜೆ ಮಾಡುತ್ತಿದ್ದಾಳೆ. ಪೂಜೆ ನಂತರ ಗೋಪಾಲನನ್ನು ಕರೆದುಕೊಂಡು ಹೋಗಿ, ಪುಟ್ಟಕ್ಕನನ್ನು ರಾಜಿ ಮನೆ ಬಿಡಿಸುವ ಪ್ಲ್ಯಾನ್ ನಲ್ಲಿ ಇದ್ದಾಳೆ. ಪುಟ್ಟಕ್ಕನನ್ನು ಬೀದಿಗೆ ತಂದೇ ತರುತ್ತೇನೆ. ಇಷ್ಟು ದಿನ ಈ ಕೆಲಸ ಮಾಡಲು ಸಾಧ್ಯವಾಗಿರಲಿಲ್ಲ. ಆದ್ರೆ ಈಗ ಬಿಡುವ ಮಾತೇ ಇಲ್ಲ ಎನ್ನುತ್ತಿದ್ದಾಳೆ.
ಪುಟ್ಟಕ್ಕನ ಆಸ್ತಿ ಮೇಲೆ ಕಣ್ಣು
ಪುಟ್ಟಕ್ಕನಿಗೆ ಮೂವರು ಹೆಣ್ಣು ಮಕ್ಕಳಾದ ಕಾರಣ, ಗೋಪಾಲ ರಾಜಿಯನ್ನು ಮದುವೆ ಆಗಿರುತ್ತಾನೆ. ಅವರು ಬೇರೆ ಕಡೆ ಸಂಸಾರ ಮಾಡಲು ಹೋದ ಕಾರಣ, ಪುಟ್ಟಕ್ಕನಿಗೆ ಒಂದು ಮನೆಯನ್ನು ಬಿಟ್ಟು ಹೋಗಿರುತ್ತಾರೆ. ಆ ಮನೆ ಮೇಲೆ ರಾಜಿ ಕಣ್ಣು ಬಿದ್ದಿತ್ತು. ಹೇಗಾದ್ರೂ ಬಿಡಿಸಿಕೊಳ್ಳಬೇಕು ಎಂದು ಅವತ್ತಿಂದ ಕಾಯ್ತಾ ಇದ್ಲು. ಅದಕ್ಕೆ ಸಹನಾ ಸಂದರ್ಭ ಬಳಸಿಕೊಂಡು ಆಸ್ತಿ ಬರೆಸಿಕೊಂಡಿದ್ದಾಳೆ.
ಸ್ನೇಹಾ ಸುಮ್ನೆ ಇರ್ತಾಳಾ?
ಸ್ನೇಹಾಗೆ ಮೊದಲೇ ಗೋಪಾಲ ಮತ್ತು ರಾಜಿಯನ್ನು ಕಂಡ್ರೆ ಆಗಲ್ಲ. ಸುಮ್ಮನೇ ಮಾತನಾಡಿದ್ರೂ ಜಗಳಕ್ಕೆ ಹೋಗ್ತಾಳೆ. ಈಗ ಮನೆ ಬಿಟ್ಟು ಹೋಗಿ ಎಂದ್ರೆ ಸ್ನೇಹಾ ಸುಮ್ಮನಿರ್ತಾಳಾ? ಅಲ್ಲದೇ ಪುಟ್ಟಕ್ಕ ಸೈನ್ ಮಾಡಿಕೊಟ್ಟ ಕಾರಣ ಮನೆ ಬಿಟ್ಟು ಹೋಗುವ ಪರಿಸ್ಥಿತಿ ಎದುರಾಗುತ್ತಾ? ನೋಡಬೇಕು.
ಇದನ್ನೂ ಓದಿ: Actress Amulya: ಅಮೂಲ್ಯ 'ಅವಳಿ' ಮಕ್ಕಳಿಗೆ ಮೊದಲನೇ ವರ್ಷದ ಹುಟ್ಟುಹಬ್ಬದ ಸಂಭ್ರಮ, ಖುಷಿಯಲ್ಲಿ ನಟಿ!
ಸಹನಾ ಮದುವೆ ಮಾಡಿ ಬೀದಿಗೆ ಬರ್ತಾರಾ ಪುಟ್ಟಕ್ಕ? ರಾಜಿ ಕುತಂತ್ರ ಫಲಿಸುತ್ತಾ? ಮುಂದೇನಾಗುತ್ತೆ ಅಂತ ನೋಡೋಕೆ ಪುಟ್ಟಕ್ಕನ ಮಕ್ಕಳ ಧಾರಾವಾಹಿ ನೋಡಬೇಕು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ