ಪುಟ್ಟಕ್ಕನ ಮಕ್ಕಳು (Puttakkana Makkalu), ಜೀ ಕನ್ನಡದ (Zee Kannada) ಹೆಸರಾಂತ ಧಾರಾವಾಹಿ (Serial). ಸೋಮವಾರದಿಂದ ಶುಕ್ರವಾರದವರೆಗೆ ಪ್ರತಿದಿನ ಸಂಜೆ 7.30ಕ್ಕೆ ಪ್ರಸಾರವಾಗುತ್ತದೆ. ಪುಟ್ಟಕ್ಕನ ಮಕ್ಕಳು ಧಾರಾವಾಹಿಯಲ್ಲಿ ಪುಟ್ಟಕ್ಕನ ಪಾತ್ರದಲ್ಲಿ ಉಮಾಶ್ರೀ ಅಮೋಘವಾಗಿ ಅಭಿನಯಿಸುತ್ತಿದ್ದಾರೆ. ಪುಟ್ಟಕ್ಕನನ್ನು ಬಿಟ್ಟು ಆಕೆಯ ಗಂಡ ಗೋಪಾಲ ಅದೇ ಊರಿನಲ್ಲಿ ರಾಜಿ ಎಂಬಾಕೆಯನ್ನು ಎರಡನೇ ಮದುವೆಯಾಗಿದ್ದಾನೆ. ಇನ್ನು ಪುಟ್ಟಕ್ಕನಿಗೆ ಮೂವರು ಹೆಣ್ಣು ಮಕ್ಕಳು. ಗಂಡ ಬಿಟ್ಟು ಹೋಗಿದ್ದರೂ, ಮೂವರನ್ನು ಚೆನ್ನಾಗಿ ಸಾಕಿದ್ದಾಳೆ. ಮೆಸ್ ಒಂದನ್ನು ನಡೆಸುತ್ತಿದ್ದು, ಅದರಿಂದ ಜೀವನ ಸಾಗಿಸುತ್ತಿದ್ದಾಳೆ. ಮೊದಲನೇ ಮಗಳು ಸಹನಾ ಮದುವೆ ನಿಶ್ಚಯ ಆಗಿದೆ. ಆ ಮದುವೆ ಅಪ್ಪ ಗೋಪಾಲ ಬರಬೇಕು ಅಂದ್ರೆ ಪುಟ್ಟಕ್ಕ ಆಸ್ತಿಯನ್ನು (Property) ರಾಜಿ ಹೆಸರಿಗೆ ಬರೆಯಬೇಕಿದೆ.
ಸಹನಾ ಮದುವೆ ಸಂಭ್ರಮ
ಪುಟ್ಟಕ್ಕನ ಮೊದಲನೇ ಮಗಳು ಸಹನಾ ತುಂಬಾ ಸಾಧು. ಓದಿಲ್ಲ, ಅಮ್ಮ ಹೇಳಿದ ಹಾಗೇ ಕೇಳೋ ಹುಡುಗಿ. ಜೀವನದಲ್ಲಿ ಇಷ್ಟ ಪಟ್ಟಿರೋದು ಮುರಳಿ ಮೇಷ್ಟ್ರನ್ನು ಮಾತ್ರ. ಅದಕ್ಕೆ ಪುಟ್ಟಕ್ಕ ತನ್ನ ಮಗಳನ್ನು ಕಷ್ಟ ಆದ್ರೂ ಮುರಳಿ ಸರ್ ಜೊತೆ ಮಾಡಿಸಬೇಕು ಎಂದುಕೊಂಡಿದ್ದಾಳೆ. ಎಲ್ಲರೂ ಒಪ್ಪಿ ಮದುವೆ ಸಹ ಆಗುತ್ತಿದೆ.
ಮದುವೆಗೆ ಗೋಪಾಲ ಬರಬೇಕು
ಸಹನಾ ಮದುವೆಗೆ ಅವರ ಅಪ್ಪ ಗೋಪಾಲ ಬರಬೇಕು ಎಂದು ಮುರಳಿ ಅಮ್ಮ ಕಂಡಿಶನ್ ಹಾಕಿದ್ದಾರೆ. ಅದಕ್ಕೆ ಪುಟ್ಟಕ್ಕನ್ನು ಒಪ್ಪಿಕೊಂಡಿದ್ದಳು. ಗೋಪಾಲನಿಗೂ ಬರೋಕೆ ಇಷ್ಟ. ಆದ್ರೆ ರಾಜಿ ಬಿಡ್ತಾ ಇಲ್ಲ. ಗೋಪಾಲ ಬರಲಿಲ್ಲ ಅಂದ್ರೆ ಈ ಮದುವೆ ಸಾಧ್ಯ ಇಲ್ಲ ಎಂದು ಮುರಳಿ ಅಮ್ಮ ಹೇಳಿದ್ದಾರೆ. ಅದಕ್ಕೆ ಪುಟ್ಟಕ್ಕ ಚಿಂತೆಯಲ್ಲಿದ್ದಾಳೆ.
ಆಸ್ತಿ ಪತ್ರ ತಂದ ರಾಜಿ
ರಾಜಿ, ಆಸ್ತಿ ಪತ್ರ ತಂದು ಸೈನ್ ಮಾಡು ಎನ್ನುತ್ತಿದ್ದಾಳೆ. ನಿನ್ನ ಮಗಳ ಮದುವೆ ನಡೆಯುವುದು ಬೇಡ್ವಾ?, ನಿನಗೆ ನಿನ್ನ ಮಗಳ ಜೀವನ ಮುಖ್ಯನಾ? ಆಸ್ತಿ ಮುಖ್ಯನಾ?, ನೀನು ಈ ಪತ್ರಕ್ಕೆ ಹೆಬ್ಬೆಟ್ಟು ಒತ್ತಿದ ತಕ್ಷಣ ನನ್ನ ಗಂಡ ಬರ್ತಾನೆ ಎಂದು ರಾಜಿ ಹೇಳ್ತಾಳೆ.
ಆಸ್ತಿಯೇ ಮುಖ್ಯ ಅಂದ್ರೆ ಅದನ್ನೇ ಇಟ್ಟುಕೊಂಡು ಸಾಯಿ. ನಿನ್ನ ಮಗಳ ಜೀವನ ನಾಶವಾಗಲಿ ಎಂದು ರಾಜಿ ಹೇಳ್ತಾಳೆ. ಅದನ್ನು ಕೇಳಿಸಿಕೊಂಡು ಪುಟ್ಟಕ್ಕ ಕಣ್ಣೀರು ಹಾಕ್ತಾ ಇದ್ದಾಳೆ.
ಇರುವುದೊಂದೇ ಮನೆ
ಪುಟ್ಟಕ್ಕನಿಗೆ ಆಸ್ತಿ ಅಂತ ಇರುವುದು ಮನೆ ಒಂದೇ. ಅದರ ಮೇಲೂ ರಾಜಿ ಕಣ್ಣು ಬಿದ್ದಿದೆ. ಅದನ್ನು ಹೇಗಾದ್ರೂ ಬಿಡಿಸಿಕೊಳ್ಳಬೇಕು ಎಂದು ಸಮಯ ಕಾಯ್ತಾ ಇದಳು. ಸಹನಾ ಮದುವೆ ಸಮಯವನ್ನು ದುರುಪಯೋಗ ಮಾಡಿಕೊಳ್ತಿದ್ದಾಳೆ. ನಿನ್ನ ಮಗಳ ಮದುವೆಗೆ ಗೋಪಾಲ ಬರಬೇಕು ಎಂದ್ರೆ ಈ ಆಸ್ತಿ ಪತ್ರಕ್ಕೆ ಸೈನ್ ಹಾಕಲೇಬೇಕು ಎಂದು ಪಟ್ಟು ಹಿಡಿದಿದ್ದಾಳೆ. ಪುಟ್ಟಕ್ಕನಿಗೂ ಏನೂ ತೋಚುತ್ತಿಲ್ಲ.
ಮಗಳಿಗಾಗಿ ಆಸ್ತಿ ಬಿಡ್ತಾಳಾ?
ಪುಟ್ಟಕ್ಕನ ಮುಂದೆ ಇರೋದೇ 2 ಆಯ್ಕೆಗಳು. ಒಂದು ಆಸ್ತಿಯನ್ನು ಬರೆದುಕೊಟ್ಟು ಮಗಳ ಮದುವೆ ಮಾಡಬೇಕು. ಇಲ್ಲ ಆಸ್ತಿ ಬೇಕು ಅಂದ್ರೆ ಮಗಳ ಮದುವೆ ನಿಲ್ಲಿಸಬೇಕು. ಸದ್ಯ ಪುಟ್ಟಕ್ಕನಿಗೆ ಮಗಳು ಸಹನಾ ಮದುವೆಯೇ ಹೆಚ್ಚು. ಈಗ ಏನ್ ಮಾಡ್ತಾಳೆ? ಸೈನ್ ಮಾಡಿ ಸಹನಾ ಮದುವೆ ಮಾಡ್ತಾಳಾ ನೋಡಬೇಕು. ಇರೋ ಮನೆ ಬಿಟ್ಟು ಎಲ್ಲಿ ಹೋಗ್ತಾರೋ ಗೊತ್ತಿಲ್ಲ.
ಇದನ್ನೂ ಓದಿ: Tripura Sundari: 'ತ್ರಿಪುರ ಸುಂದರಿ' ದಿವ್ಯಾ ಸುರೇಶ್ ಸೀರಿಯಲ್‍ಗಾಗಿ ತಯಾರಿ ನಡೆಸಿದ್ದು ಹೇಗೆ?
ಸಹನಾ ಮದುವೆ ಸಂಭ್ರಮದಲ್ಲಿ ಆಘಾತ, ಕೈ ಬಿಟ್ಟು ಹೋಗುತ್ತಿರುವ ಆಸ್ತಿ? ಮುಂದೇನಾಗುತ್ತೆ ಅಂತ ನೋಡೋಕೆ ಪುಟ್ಟಕ್ಕನ ಮಕ್ಕಳು ಧಾರಾವಾಹಿ ನೋಡಬೇಕು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ