ಜೀ ಕನ್ನಡದಲ್ಲಿ (Zee Kannada) ಪ್ರಸಾರವಾಗ್ತಿರುವ ಧಾರಾವಾಹಿಗಳಲ್ಲಿ (Serials) ಪುಟ್ಟಕ್ಕನ ಮಕ್ಕಳು (Puttakkana Makkalu) ಧಾರಾವಾಹಿ ಜನರಿಗೆ ಹೆಚ್ಚು ಇಷ್ಟ ಆಗಿದೆ. ಸೋಮವಾರದಿಂದ ಶುಕ್ರವಾರದವರೆಗೆ ಪ್ರತಿದಿನ ಸಂಜೆ 7.30ಕ್ಕೆ ಪ್ರಸಾರವಾಗುತ್ತದೆ.ಪುಟ್ಟಕ್ಕನ ಮಕ್ಕಳು ಧಾರಾವಾಹಿಯಲ್ಲಿ ಪುಟ್ಟಕ್ಕನ ಪಾತ್ರದಲ್ಲಿ ಉಮಾಶ್ರೀ ಅಮೋಘವಾಗಿ ಅಭಿನಯಿಸುತ್ತಿದ್ದಾರೆ. ಪುಟ್ಟಕ್ಕನಿಗೆ ಮೂವರು ಹೆಣ್ಣು ಮಕ್ಕಳು. ಗಂಡ ಬಿಟ್ಟು ಹೋಗಿದ್ದರೂ, ಮೂವರನ್ನು ಚೆನ್ನಾಗಿ ಸಾಕಿದ್ದಾಳೆ. ಮೆಸ್ ಒಂದನ್ನು ನಡೆಸುತ್ತಿದ್ದು, ಅದರಿಂದ ಜೀವನ ಸಾಗಿಸುತ್ತಿದ್ದಾಳೆ. ಮೊದಲನೇ ಮಗಳು ಸಹನಾ ಓದದೇ ತನ್ನ ತಾಯಿಗೆ ಹೋಟೆಲ್ ಕೆಲಸದಲ್ಲಿ ಸಹಾಯ ಮಾಡುತ್ತಿದ್ದಾಳೆ. ಈಗ ಸಹನಾ ಮದುವೆ (Marriage) ಸೆಟ್ ಆಗಿದೆ. ಆ ಸಂಭ್ರಮದಲ್ಲಿ ಪುಟ್ಟಕ್ಕನ ಕುಟುಂಬ ಇದೆ. ಮದುವೆ ಮಾಡಲು ಪುಟ್ಟಕ್ಕನಿಗೆ ಹಣದ (Money) ಬೇಕಾಗಿದೆ.
ಮನೆ ಪತ್ರ ಇಟ್ಟು ಸಾಲ ಕೇಳುತ್ತಿರುವ ಪುಟ್ಟಕ್ಕ
ಸಹನಾ ಮುರಳಿ ಮೇಷ್ಟ್ರನ್ನು ಪ್ರೀತಿಸಿ ಮದುವೆ ಆಗುತ್ತಿದ್ದಾಳೆ. ಮುರಳಿ ಮನೆಯವರಿಗೆ ಈ ಮದುವೆ ಮೊದಲು ಇಷ್ಟ ಇರಲಿಲ್ಲ. ಈಗ ಒಪ್ಪಿದ್ದಾರೆ. ಆದರೆ ಮದುವೆ ಮಾಡಲು ಹೆಚ್ಚು ಹಣ ಕೇಳ್ತಾ ಇದ್ದಾರೆ. ಅದನ್ನು ಪುಟ್ಟಕ್ಕನಿಗೆ ಜೋಡಿಸಲು ಆಗುತ್ತಿಲ್ಲ. ಅದಕ್ಕೆ ಮನೆ ಪತ್ರ ಇಟ್ಟು ಸಾಲ ಪಡೆಯಲು ಮುಂದಾಗಿದ್ದಾಳೆ. ಆದ್ರೆ ಎಲ್ಲೂ ಸಾಲ ಸಿಗುತ್ತಿಲ್ಲ.
ಪುಟ್ಟಕ್ಕನಿಗೆ ಸಹಾಯ ಮಾಡಿದ ಬಂಗಾರಮ್ಮ
ಪುಟ್ಟಕ್ಕನನ್ನು ಮನೆಗೆ ಕರೆದು ಬಂಗಾರಮ್ಮ ದುಡ್ಡು ಕೊಟ್ಟಿದ್ದಾಳೆ. ಆದ್ರೆ ಪುಟ್ಟಕ್ಕ ಅದು ಬೇಡ ಎಂದಿದ್ದಾಳೆ. ಈ ದುಡ್ಡಿನಿಂದ ನಿಮ್ಮ ಸಂಬಂಧ ಕಳೆದುಕೊಳ್ಳಲು ಇಷ್ಟ ಎಂದು ಕಣ್ಣೀರು ಹಾಕಿದ್ದಾಳೆ. ಅದಕ್ಕೆ ಬಂಗಾರಮ್ಮ ಸಹ ನನ್ನನ್ನು ಇಷ್ಟೊಂದು ಯಾರೂ ಪ್ರೀತಿ ಮಾಡಿರಲಿಲ್ಲ. ಈ ರೀತಿ ನನಗೆ ಯಾರೂ ಹೇಳಿರಲಿಲ್ಲ. ತುಂಬಾ ಧನ್ಯವಾದ ಎಂದು ಕಣ್ಣೀರು ಹಾಕಿದ್ದಾಳೆ
ಸಹನಾ ಲಗ್ನ ಪತ್ರಿಕೆ ಹೇಗಿದೆ?
ಸಹನಾ ಲಗ್ನ ಪತ್ರಿಕೆ ಈ ರೀತಿ ಇದೆ. ಶುಭವಿವಾಹ, ಕುಲದೇವತಾ ಪ್ರಸನ್ನ. ಶ್ರೀ ಬೀರೇಶ್ವರ ಸ್ವಾಮಿ ಪ್ರಸನ್ನ, ಶ್ರೀ ಮಾರಮ್ಮ ದೇವಿ ಕೃಪೆ, ಶ್ರೀ ಮುತ್ತುರಾಯ ಪ್ರಸನ್ನ, ಶ್ರೀ ದೇವಿರಮ್ಮ ಕೃಪೆ ಎಂದು ಪತ್ರಿಕೆ ಮೇಲಾಭಾಗದಲ್ಲಿ ಇದೆ.
ನಂತರ ಸಹನಾ ಹೆಸರು ಇದೆ. ಸಹನಾ ಮೊದಲ ಹೆಸರು ಮುದ್ದವ್ವ. ಚಿ|| ಸೌ|| ಸಹನಾ (ಮುದ್ದವ್ವ), (ಶ್ರೀಮತಿ ಪುಟ್ಟಕ್ಕ ಮತ್ತು ಶ್ರೀ ಗೋಪಾಲಕೃಷ್ಣ ಅವರ ಜೇಷ್ಠ ಪುತ್ರಿ, ದೇವಿಪುರ), ಚಿ|| ರಾ|| ಮುರಳಿ ಕೃಷ್ಣ (ಎಂಎಸ್‍ಸಿ, ಪಿಎಚ್‍ಡಿ), (ಶ್ರೀಮತಿ ಕೌಸಲ್ಯ, ಶ್ರೀ ವೇಣುಗೋಪಲ ಇವರ ಜೇಷ್ಠ ಪುತ್ರ, ಚಾಮರಾಜಪೇಟೆ, ಬೆಂಗಳೂರು.)
ಇವರ ವಿವಾಹ ಮಹೋತ್ಸವವನ್ನು ದೇವಿಪುರದ ವಧುವಿನ ಸ್ವಗೃಹದಲ್ಲಿ ನೆರವೇರಿಸಲು ಕುಟುಂಬದ ಗುರು ಹಿರಿಯರು ನಿಶ್ಚಿಯಿಸಿರುವುದರಿಂದ, ತಾವುಗಳು ಕುಟುಂಬ ಸಮೇತರಾಗಿ ಈ ಶುಭ ಮುಹೂರ್ತಕ್ಕೆ ಆಗಮಿಸಿ, ವಧು ವರರನ್ನು ಆಶೀರ್ವದಿಸಿ ನಮ್ಮ ಮನ ಸಂತೋಷ ಪಡಿಸಬೇಕು ಎಂದು ಕೋರುತ್ತೇವೆ.
ಈ ರೀತಿ ಇದೆ ಪುಟ್ಟಕ್ಕನ ಮಗಳ ಮದುವೆ ಆಹ್ವಾನ ಪತ್ರಿಕೆ. ಅಲ್ಲದೇ ಕೊನೆಯಲ್ಲಿ ತಮ್ಮ ಸುಖಾಗಮನ ಬಯಸುವವರು ಪುಟ್ಟಕ್ಕನ ಮಕ್ಕಳು, ದೇವಿಪುರದ ಸಮಸ್ತ ಗ್ರಾಮಸ್ತರು, ಮತ್ತು ಜೀ ಕುಟುಂಬ ಸದಸ್ಯರು ಎಂದು ಇದೆ.
ಇದನ್ನೂ ಓದಿ: Ramachari: ಒಂಟಿ ಕಾಲಲ್ಲಿ ನಿಂತ ರಾಮಾಚಾರಿಗೆ ರೌಡಿಗಳ ಏಟು, ಕೈ ಮುಗಿದು ಬೇಡಿದ್ರೂ ಬಿಡದ ಮಾನ್ಯತಾ!
ಹೆಣ್ಣು ಮಕ್ಕಳನ್ನು ಬೆಳಸಿ, ಕನ್ಯಾದಾನ ಮಾಡಿ, ಮದುವೆ ಮಾಡಿ ಕಳಿಸಲು ಪುಣ್ಯ ಮಾಡಿರಬೇಕು. ನೀವು ನನ್ನ ಮಗಳ ಮದುವೆ ಸಂಭ್ರಮದಲ್ಲಿ ಭಾಗಿ ಆಗಿ ಎಂದು ಪುಟ್ಟಕ್ಕ ಕರೆಯುತ್ತಿದ್ದಾಳೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ