Comedy Khiladigalu-4: ನಗಿಸಲು ಮತ್ತೆ ಬರ್ತಿದ್ದಾರೆ ಕಾಮಿಡಿ ಕಿಲಾಡಿಗಳು, ಸದ್ಯದಲ್ಲೇ ಶುರುವಾಗಲಿದೆ ಸೀಸನ್ 4

ನಿಮ್ಮನ್ನು ನಗಿಸಲು ಕಾಮಿಡಿ ಕಿಲಾಡಿಗಳು ಬರ್ತಾ ಇದ್ದಾರೆ. ಹೌದು ಸೆಪ್ಟೆಂಬರ್ 10 ರಿಂದ ಪ್ರತಿ ಶನಿವಾರ, ಭಾನುವಾರ ರಾತ್ರಿ 9ಕ್ಕೆ ಕಾಮಿಡಿ ಕಿಲಾಡಿಗಳು ಸೀಸನ್ 4 ಬರಲಿದೆ. ಕಾಮಿಡಿ ಕಿಲಾಡಿಗಳು ಸೀಸನ್‍ಗಳನ್ನು ಯಶಸ್ವಿಯಾಗಿ ಪೂರೈಸಿರುವ ವಾಹಿನಿ, ಈಗ 4ನೇ ಸೀಸನ್‍ನ್ನು ತರ್ತಿದೆ. ಎಲ್ಲರು ಸ್ಕಿಟ್ ನೋಡಿ ನಗಲು ರೆಡಿಯಾಗಿ.

ಕಾಮಿಡಿ ಕಿಲಾಡಿಗಳು

ಕಾಮಿಡಿ ಕಿಲಾಡಿಗಳು

 • Share this:
  ಜೀ ಕನ್ನಡ (Zee Kannada) ವಾಹಿನಿ ಜನರಿಗೆ ಮನರಂಜನೆ (Entertainment) ನೀಡುವಲ್ಲಿ ಸದಾ ಮುಂದಿರುತ್ತೆ. ಪ್ರತಿದಿನ ಧಾರಾವಾಹಿಗಳ (Serials) ಮೂಲಕ ಜನರನ್ನು ಸೆಳೆದ್ರೆ, ವೀಕೆಂಡ್‍ನಲ್ಲಿ ವಿಭಿನ್ನವಾದ ಕಾರ್ಯಕ್ರಮ, ರಿಯಾಲಿಟಿ ಶೋಗಳ (Reality show) ಮೂಲಕ ಜನ ಟಿ.ವಿ ಮುಂದೆಯೇ ಕೂರುವಂತೆ ಮಾಡುತ್ತೆ. ಡ್ರಾಮಾ ಜೂನಿಯರ್ಸ್, ಡ್ಯಾನ್ಸ್ ಕರ್ನಾಟಕ ಡ್ಯಾನ್ಸ್, ಸರಿಗಮಪ ಅಂತಹ ಹಿಟ್ ಶೋಗಳನ್ನು ನೀಡುತ್ತಾ ಬಂದಿದೆ. ಈಗ ಮತ್ತೆ ನಿಮ್ಮನ್ನು ನಗಿಸಲು ಕಾಮಿಡಿ ಕಿಲಾಡಿಗಳು (Comedy Khiladigalu) ಬರ್ತಾ ಇದ್ದಾರೆ. ಹೌದು ಸೆಪ್ಟೆಂಬರ್ 10 (September) ರಿಂದ ಪ್ರತಿ ಶನಿವಾರ, ಭಾನುವಾರ ರಾತ್ರಿ 9ಕ್ಕೆ ಕಾಮಿಡಿ ಕಿಲಾಡಿಗಳು ಸೀಸನ್ 4 (Season 4) ಬರಲಿದೆ. 3 ಕಾಮಿಡಿ ಕಿಲಾಡಿಗಳು ಸೀಸನ್‍ಗಳನ್ನು ಯಶಸ್ವಿಯಾಗಿ ಪೂರೈಸಿರುವ ವಾಹಿನಿ, ಈಗ 4ನೇ ಸೀಸನ್‍ನ್ನು ತರ್ತಿದೆ. ಎಲ್ಲರು ಸ್ಕಿಟ್ ನೋಡಿ ನಗಲು ರೆಡಿಯಾಗಿ.

  ಗಣೇಶನ ಹಬ್ಬಕ್ಕೆ ಭರ್ಜರಿ ಉಡುಗೊರೆ
  ರಾಜ್ಯದೆಲ್ಲೆಡೆ ಗಣೇಶ ಹಬ್ಬದ ಸಂಭ್ರಮ ಮುಗಿಲು ಮುಟ್ಟಿದೆ. ಜನ ಎಲ್ಲ ಗಣೇಶನನ್ನು ಸ್ವಾಗತಿಸಿ ಖುಷಿಯಿಂದ ಇದ್ದಾರೆ. ಕಡುಬು ತಿಂದು ಹಬ್ಬವನ್ನು ಎಂಜಾಯ್ ಮಾಡಿದ್ದಾರೆ. ಜೀ ಕನ್ನಡ ವಾಹಿನಿ ಸಹ ಹಬ್ಬದ ದಿನವೇ ವೀಕ್ಷಕರಿಗೆ ಸಿಹಿ ಸುದ್ದಿಯನ್ನು ನೀಡಿದೆ. ಕಾಮಿಡಿ ಕಿಲಾಡಿಗಳು ಸೀಸನ್ 4 ಬರ್ತಿರೋ ಟೈಂ, ದಿನಾಂಕವನ್ನು ತಿಳಿಸಿದೆ. ಜನ ಟೆನ್ಶನ್ ಮರೆಯಲು ಕಾಮಿಡಿ ಕಿಲಾಡಿಗಳು ಶೋ ಉತ್ತಮವಾದ ಕಾರ್ಯಕ್ರಮವಾಗಿದೆ.

  ಕಾಮಿಡಿ ಕಿಲಾಡಿಗಳು ಪ್ರೋಮೋ ಬಿಟ್ಟ ವಾಹಿನಿ
  ಜೀ ಕನ್ನಡ ವಾಹಿನಿಯಲ್ಲಿ ಕಾಮಿಡಿ ಕಿಲಾಡಿಗಳು ಸೀಸನ್ 4 ಪ್ರೋಮೋ ಓಡ್ತಾ ಇದೆ. ಪ್ರೋಮೋದಲ್ಲಿ ಜೀಪು ಒಂದರಲ್ಲಿ ನಟ ಜಗ್ಗೇಶ್, ನಟಿ ರಕ್ಷಿತಾ ಪ್ರೇಮ್, ಯೋಗರಾಜ್ ಭಟ್ಟರು ಮತ್ತು ಮಾಸ್ಟರ್ ಆನಂದ್ ಹೋಗುತ್ತಿದ್ದಾರೆ. ಸಡನ್ ಆಗಿ ಕಾಡು ಜನರ ಗುಂಪು ಅವರನ್ನು ಅಡ್ಡ ಹಾಕಿ, ಎಲ್ಲರನ್ನು ಕಟ್ಟಿ ಹಾಕುತ್ತಾರೆ. ಅವರಿಗೆ ಇವರು ಮಾತನಾಡೋ ಭಾಷೆ ಅರ್ಥ ಆಗಲ್ಲ. ಜಗ್ಗೇಶ್ ಅದಕ್ಕೆ, ಭಟ್ರೆ ನಿಮ್ಮ ಭಾಷೆ ಅರ್ಥ ಆಗಬಹುದು ಮಾತಾಡಿ ಅಂತಾರೆ. ಅವರು ಹಾಡು ಹೇಳುತ್ತಾರೆ. ಅದಕ್ಕೆ ಆ ಮನುಷ್ಯರು ಕೋಪಗೊಳ್ಳುತ್ತಾರೆ.

  ಇದನ್ನೂ ಓದಿ: Paaru Serial: ಪಾರು ಪ್ರಾಣ ಅಪಾಯದಲ್ಲಿ, ಅತ್ತೆ ಅಖಿಲಮ್ಮನಿಗಾಗಿ ಜೀವ ಒತ್ತೆ ಇಟ್ಟ ಸೊಸೆ!

  ಕಾಮಿಡಿಗೆ ಭಾಷೆ ಯಾವ್ದು ರೀ
  ಆಗ ಜಗ್ಗೇಶ್ ಇವರಿಗೆ ಆಕ್ಷನ್ ಸರಿ ಎಂದು, ಏನೇನು ಆಕ್ಷನ್ ಮಾಡ್ತಾರೆ. ಅದಕ್ಕೆ ಜಗ್ಗೇಶ್ ಕಡೆ ಈಟಿ ಎಸೆಯುತ್ತಾರೆ. ಅದಕ್ಕೆ ರಕ್ಷಿತಾ ಇಂಗ್ಲಿಷ್‍ನಲ್ಲಿ ಮಾತನಾಡುತ್ತಾರೆ. ಬ್ರೋ ವಿ ಜಸ್ಟ್ ಟ್ರಾವಲ್ಲಿಂಗ್ ಅಂತ ಹೇಳ್ತಾರೆ. ಅದಕ್ಕೆ ಅವರ ಕ್ಯಾಮರಾ ಕಿತ್ತು ಹಾಕುತ್ತಾರೆ. ಆಗ ಆನಂದ್ ಜಗ್ಗಣ್ಣ ಬೇಗ ಏನಾದ್ರೂ ಮಾಡಿ ಅಂತಾರೆ. ಆಗ ಜಗ್ಗೇಶ್, ನಮ್ ಹತ್ರ ಒಂದು ಸ್ಕೀಮ್ ಇದೆ ಎಂದು, ಕಾಮಿಡಿ ಕಿಲಾಡಿ ಶೋಗಳನ್ನು ಹಾಕುತ್ತಾರೆ.

  ಆಗ ಎಲ್ಲ ಕಾಡು ಮನುಷ್ಯರು ಬಂದು, ಇವರ ಜೊತೆ ನಗುತ್ತಾರೆ. ಆಗ ರಕ್ಷಿತಾ, ಇವರಿಗೆ ನಮ್ಮ ಭಾಷೆ ಅರ್ಥ ಆಗುತ್ತಾ ಅಂತಾರೆ. ಅದಕ್ಕೆ ಜಗ್ಗೇಶ್, ಕಾಮಿಡಿಗೆ ಭಾಷೆ ಯಾವ್ದು ರೀ ಎಂದು ಎಲ್ಲರ ಜೊತೆ ಸೇರಿ ನಗುತ್ತಾರೆ.

  ಇದನ್ನೂ ಓದಿ: Hitler Kalyana: ಎಜೆ ಸೊಸೆಯಂದಿರಿಗೆ ಲೀಲಾ ತಾಯಿ ಕೌಸಲ್ಯ ನರಕ ದರ್ಶನ! ಎಂಥಾ ಶಿಕ್ಷೆ ಇದು

  ಸೆಪ್ಟೆಂಬರ್ 10 ರಿಂದ ಕಾಮಿಡಿ ಕಿಲಾಡಿಗಳು ಸೀಸನ್ 4
  ಪ್ರೋಮೋ ಸೂಪರ್ ಆಗಿ ಮೂಡಿ ಬಂದಿದೆ. ಅಂತೆಯೇ ಕಾರ್ಯಕ್ರಮ ಸೆಪ್ಟೆಂಬರ್ 10 ರಿಂದ ಶನಿವಾರ ಮತ್ತು ಭಾನುವಾರ ರಾತ್ರಿ 9ಕ್ಕೆ ಪ್ರಸಾರವಾಗಲಿದೆ. ಸದ್ಯ ಡ್ಯಾನ್ಸ್ ಕರ್ನಾಟಕ ಡ್ಯಾನ್ಸ್ ಶೋ ಬರ್ತಿದ್ದು, ಅದು ಮುಗಿಯುವ ಹಂತಕ್ಕೆ ಬಂದಿರೋ ಸಾಧ್ಯತೆ ಇದೆ. ಈಗಾಗಲೇ ನಿಮ್ಮನ್ನು ನಗಿಸಲು ಸ್ಪರ್ಧಿಗಳು ಕಾಯ್ತಾ ಇದ್ದಾರೆ. ಇಷ್ಟರಲ್ಲೇ ಶೋ ಶುರುವಾಗಿ ನೀವು ನಗಬಹುದು.
  Published by:Savitha Savitha
  First published: