Paaru: ಸಂಕಷ್ಟದಲ್ಲಿ ಸಿಲುಕಿದ ಅಖಿಲಾಂಡೇಶ್ವರಿ ಪುತ್ರ ಪ್ರೀತು, ಕಾಪಾಡಲು ಬಂದ್ರಾ ವೀರಯ್ಯ ದೇವ?

ಪಾರು ಧಾರಾವಾಹಿಯಲ್ಲಿ ವೀರಯ್ಯ ದೇವ ಪಾತ್ರವನ್ನು ಎಸ್. ನಾರಾಯಣ್ ಅವರು ಮಾಡುತ್ತಿದ್ದು, ಅದ್ಭುತವಾಗಿ ನಟಿಸುತ್ತಿದ್ದಾರೆ. ಅಲ್ಲದೇ ಜನನಿ ಅವರ ತಂದೆ ಪಾತ್ರ. ಪ್ರೀತುಗೆ ಮಾವ. ರಾಖಿ ಹಬ್ಬಕ್ಕೆ ಬೆಂಗಳೂರಿಗೆ ಬಂದಿದ್ದ ವೀರಯ್ಯ ದೇವ ದೇವಸ್ಥಾನಕ್ಕೆ ಬಂದಿದ್ದಾರೆ. ತನ್ನ ಮಾವನನ್ನು ಅಲ್ಲಿ ನೋಡಿ ಶಾಕ್ ಆಗಿದ್ದಾನೆ. ತನ್ನನ್ನು ಮೋನಿಕಾ ಜೊತೆ ನೋಡಿದ್ರೆ ಏನ್ ಕಥೆ ಎಂದು ಭಯ ಪಡುತ್ತಿದ್ದಾನೆ.

ಜನನಿ-ಪ್ರೀತು

ಜನನಿ-ಪ್ರೀತು

  • Share this:
    ಜೀ ಕನ್ನಡದಲ್ಲಿ (Zee Kannada) ಪ್ರಸಾರವಾಗುತ್ತಿರುವ ಧಾರಾವಾಹಿಗಳಲ್ಲಿ ಪಾರು (Paaru) ಸಹ ಜನಪ್ರಿಯ ಧಾರಾವಾಹಿ (Serial). ಸಂಜೆ 6.30ಕ್ಕೆ ಪ್ರಸಾರ ಆಗುತ್ತದೆ. ದಿನಕ್ಕೊಂದು ತಿರುವುಗಳೊಂದಿಗೆ ಜನರ ಮನಸ್ಸು ಗೆದ್ದಿದೆ. ಮನೆ ಕೆಲಸದವಳಾಗಿದ್ದ ಪಾರು , ಆದಿತ್ಯನ (Aditya) ಮನುಸ್ಸು ಗೆದ್ದ ಆ ಮನೆ ಸೊಸೆಯಾಗಿದ್ದಾಳೆ. ಆದ್ರೆ ಪಾರು ಸೊಸೆಯಾಗಿ ಬಂದಿದ್ದು, ಅಖಿಲಾಂಡೇಶ್ವರಿಗೆ ಇಷ್ಟ ಇಲ್ಲ. ಆದ ಕಾರಣ ಪಾರು ಮತ್ತು ಆದಿತ್ಯ ಬಳಿ ಮಾತು ಬಿಟ್ಟಿದ್ದಾಳೆ. ಈ ನಡುವೆ ಎಲ್ಲದನ್ನೂ ಬಂಡವಾಳ ಮಾಡಿಕೊಂಡ ಅಖಿಲಾ ಪರಮ ಶತ್ರುಗಳು ಮನೆ ಒಡೆಯುವ ಕೆಲಸ ಮಾಡುತ್ತಿದ್ದಾರೆ. ಅದಕ್ಕೆ ಪ್ರೀತುವನ್ನು ಬಳಸಿಕೊಂಡು, ಹುಡಗಿಯ ಜೊತೆ ಇರುವ ವಿಡಿಯೋ (Video) ಮಾಡಿಕೊಂಡು ಬ್ಲ್ಯಾಕ್ ಮೇಲ್ (Black mail) ಮಾಡುತ್ತಿದ್ದಾರೆ. ನಾವು ಹೇಳಿದಂತೆ ಕೇಳದಿದ್ದರೆ, ವಿಡಿಯೋ ಲೀಕ್ ಮಾಡುವುದಾಗಿ ಹೇಳುತ್ತಿದ್ದಾರೆ.

    ಪ್ರೀತುವನ್ನು ದೇವಸ್ಥಾನಕ್ಕೆ ಕರೆಸಿಕೊಂಡ ಮೊನಿಕಾ
    ಮೊನಿಕಾ ಪ್ರೀತುವಿನ ಸ್ನೇಹಿತೆ. ಪ್ರೀತು ಜೊತೆ ಒಳ್ಳೆಯವಳಂತೆ ನಟಿಸಿ, ಅವನಿಗೆ ಕಂಠ ಪೂರ್ತಿ ಕುಡಿಸಿ ಜೊತೆಗಿರುವಂತೆ ವಿಡಿಯೋ ಮಾಡಿಕೊಂಡಿದ್ದಾಳೆ. ಅದನ್ನು ಮಾಡಿಸಿರೋದ ಅಖಿಲಾಂಡೇಶ್ವರಿ ಶತ್ರು ಅರುಂಧತಿ. ಆ ವಿಡಿಯೋ ಮುಂದಿಟ್ಟುಕೊಂಡು ಪ್ರೀತುವನ್ನು ಆಟ ಆಡಿಸುತ್ತಿದ್ದಾರೆ. ಮನೆಯಲ್ಲಿ ಪೂಜೆ ಇರುವ ಸಂದರ್ಭದಲ್ಲಿ ಪ್ರೀತು ಅಲ್ಲಿ ಇರಬಾರದು, ಮನೆಯವರಿಗೆ ಅನುಮಾನ ಬರಬೇಕು ಎಂದು, ಮೊನಿಕಾಳ ಮೂಲಕ ಪ್ರೀತುವನ್ನು ದೇವಸ್ಥಾನಕ್ಕೆ ಕರೆಸಿದ್ದಾರೆ.

    ದೇವಸ್ಥಾನಕ್ಕೆ ಬಂದ ವೀರಯ್ಯ ದೇವ
    ಪಾರು ಧಾರಾವಾಹಿಯಲ್ಲಿ ವೀರಯ್ಯ ದೇವ ಪಾತ್ರವನ್ನು ಎಸ್. ನಾರಾಯಣ್ ಅವರು ಮಾಡುತ್ತಿದ್ದು, ಅದ್ಭುತವಾಗಿ ನಟಿಸುತ್ತಿದ್ದಾರೆ. ಅಲ್ಲದೇ ಜನನಿ ಅವರ ತಂದೆ ಪಾತ್ರ. ಪ್ರೀತುಗೆ ಮಾವ. ರಾಖಿ ಹಬ್ಬಕ್ಕೆ ಬೆಂಗಳೂರಿಗೆ ಬಂದಿದ್ದ ವೀರಯ್ಯ ದೇವ ದೇವಸ್ಥಾನಕ್ಕೆ ಬಂದಿದ್ದಾರೆ. ತನ್ನ ಮಾವನನ್ನು ಅಲ್ಲಿ ನೋಡಿ ಶಾಕ್ ಆಗಿದ್ದಾನೆ. ತನ್ನನ್ನು ಮೊನಿಕಾ ಜೊತೆ ನೋಡಿದ್ರೆ ಏನ್ ಕಥೆ ಎಂದು ಭಯ ಪಡುತ್ತಿದ್ದಾನೆ.

    Zee Kannada serial, Kannada serial, Paaru serial today episode, Paaru serial cast, Preethu in problem, ಪಾರು ಧಾರಾವಾಹಿ, ಜೀ ಕನ್ನಡ ಧಾರಾವಾಹಿಗಳು, Kannada news, Karnataka news,
    ವೀರಯ್ಯ ದೇವ


    ಮೋನಿಕಾ ಹಾಕಿದ ಕಂಡಿಷನ್ ಏನು?
    ಅಲ್ಲದೇ ಮೋನಿಕಾ ಸಹ ಒಂದು ಕಂಡಿಷನ್ ಹಾಕಿದ್ದಾಳೆ. ದೇವಸ್ಥಾನದಿಂದ ನೀನೇ ಹೋಗುವಂತಿಲ್ಲ. ನಿಮ್ಮ ಮನೆಯವರು ಯಾರಾದ್ರೂ ಬಂದು ಕರೆದುಕೊಂಡು ಹೋಗಬೇಕು. ಅಲ್ಲಿಯವರೆಗೂ ಇಲ್ಲೇ ಇರಬೇಕು ಎಂದು ಕಂಡಿಷನ್ ಹಾಕಿದ್ದಾಳೆ. ಹಾಗಾದ್ರೆ ಈಗ ದೇವಸ್ಥಾನಕ್ಕೆ ಬಂದಿರೋ ವೀರಯ್ಯ ದೇವ ಪ್ರೀತುವನ್ನು ಸಂಕಷ್ಟದಿಂದ ಪಾರು ಮಾಡ್ತಾನಾ ಕಾದು ನೋಡಬೇಕಿದೆ.

    ಇದನ್ನೂ ಓದಿ: Jote Joteyali: ರಾಜವರ್ಧನ್ ಸಾವಿನ ಹಿಂದೆ ಇರೋ ಸತ್ಯ ಬಯಲು! ಅನು ಈ ಮಾತನ್ನೆಲ್ಲಾ ನಂಬ್ತಾಳಾ?

    ಅರುಂಧತಿಯನ್ನು ಮನೆಗೆ ಕರೆದುಕೊಂಡ ಬಂದ ಆದಿತ್ಯ
    ಅಖಿಲಾಂಡೇಶ್ವರಿ ಮನೆಯಲ್ಲಿ ಸೊಸೆಯಂದಿರಾದ ಪಾರು, ಜನನಿ ಸೇರಿ ಸತ್ಯ ನಾರಾಯಣ ಪೂಜೆ ಮಾಡುತ್ತಿದ್ದಾರೆ. ಆ ಪೂಜೆಗೆ ಆದಿತ್ಯ ಅರುಂಧತಿಯನ್ನು ಕರೆದುಕೊಂಡು ಬಂದಿದ್ದಾನೆ. ಈ ಮನೆಯ ಒಗ್ಗಟ್ಟು ಒಡೆಯಲು ನೋಡಿದೆ ಅಲ್ವಾ? ನೋಡು ಈ ಮನೆಯ ಒಗ್ಗಟ್ಟನ್ನು ಎಂದು ಹೇಳುತ್ತಿದ್ದಾನೆ. ಈ ಮನೆಯ ಸೊಸೆಯಂದಿರ ಪೂಜೆ ನೋಡು ಎಂದು ಆದಿತ್ಯ, ಅರುಂಧತಿಗೆ ಹೇಳಿದ್ದಾನೆ.

    ನಿಮ್ಮ ಎರಡನೇ ಮಗ ಎಲ್ಲಿ ಎಂದು ಕೇಳಿದ ಅರುಂಧತಿ?
    ಮನೆಗೆ ಬಂದಿರುವ ಅರುಂಧತಿ ಮನೆಯವರ ಪರಿಚಯ ಮಾಡಿಸಿಕೊಡು ಎಂದು ಕೇಳುತ್ತಾಳೆ. ಆಗ ಎಲ್ಲರನ್ನೂ ಪರಿಚಯ ಮಾಡಿಸುತ್ತಾರೆ. ಹಾಗಾದ್ರೆ ನಿನ್ನ ಎರಡನೇ ಮಗ ಪ್ರೀತು ಎಲ್ಲಿ ಎಂದು ಪ್ರಶ್ನಿಸುತ್ತಾಳೆ. ಅದಕ್ಕೆ ಮನೆಯವರೆಲ್ಲಾ ಗಾಬರಿಯಾಗಿದ್ದಾರೆ. ಪ್ರೀತು ಎಲ್ಲಿ ಹೋದ ಎಂದು ಜನನಿ ಬಳಿ ಕೇಳುತ್ತಿದ್ದಾರೆ. ಜನನಿ ಏನೂ ಮಾತನಾಡದೇ ಸುಮ್ಮನೆ ನಿಂತಿದ್ದಾಳೆ.

    ಇದನ್ನೂ ಓದಿ: Ramachari: ರಾಮಾಚಾರಿಗೆ 1 ಕೋಟಿ ಆಫರ್ ಮಾಡಿದ ಚಾರು, ದುಡ್ಡಿಗಾಗಿ ಚಾರು ಹೇಳಿದ್ದನ್ನು ಮಾಡ್ತಾನಾ? 

    ಮನೆಯವರಿಗೆಲ್ಲಾ ಪ್ರೀತು ಸಂಕಷ್ಟದಲ್ಲಿ ಇರೋದು ಗೊತ್ತಾಗುತ್ತಾ? ಪ್ರೀತುವನ್ನು ಅರುಂಧತಿ ಬಲೆಯಿಂದ ಬಿಡಿಸುತ್ತಾರಾ? ಎಲ್ಲವನ್ನೂ ನೋಡಲು ಪಾರು ಸಂಚಿಕೆ ನೋಡಬೇಕು.
    Published by:Savitha Savitha
    First published: