Paaru Serial: ಆ್ಯಸಿಡ್ ಹಾಕಿದ್ದು ಯಾರು ಅಂತ ಕೊನೆಗೂ ಗೊತ್ತಾಯ್ತಾ ಪಾರುಗೆ? ಮುಂದಿದೆ ಬಿಗ್ ಟ್ವಿಸ್ಟ್!

ಪಾರುಗೆ ತನಗೆ ಆ್ಯಸಿಡ್ ಹಾಕಿದವ ಅರುಂಧತಿ ಅಣ್ಣ ಎಂದು ಅನುಮಾನ ಬರುತ್ತೆ. ಅದು ಈ ಅರುಂಧತಿ ಅಣ್ಣನೇ ಎಂದು ಕಂಡು ಹಿಡಿದು ಕಪಾಳಕ್ಕೆ ಬಾರಿಸುತ್ತಾಳೆ. ನೀನೆ ನನಗೆ ಆ್ಯಸಿಡ್ ಹಾಕಿದ್ದು ಎಂದು ಹೇಳುತ್ತಾಳೆ. ದಿನದಿಂದ ದಿನಕ್ಕೆ ಕುತೂಹಲ ಹೆಚ್ಚಾಗುತ್ತಿದೆ. ಎಲ್ಲ ಕುತೂಹಲಕ್ಕೂ ಇವತ್ತಿನ ಸಂಚಿಕೆ ನೋಡಬೇಕು.

ಪಾರು ಧಾರಾವಾಹಿ

ಪಾರು ಧಾರಾವಾಹಿ

  • Share this:
ಜೀ ಕನ್ನಡದಲ್ಲಿ (Zee Kannada) ಪ್ರಸಾರವಾಗುತ್ತಿರುವ ಧಾರಾವಾಹಿಗಳಲ್ಲಿ ಪಾರು (Paaru) ಸಹ ಜನಪ್ರಿಯ ಧಾರಾವಾಹಿ (Serial). ಸಂಜೆ 6.30ಕ್ಕೆ ಪ್ರಸಾರ ಆಗುತ್ತದೆ. ದಿನಕ್ಕೊಂದು ತಿರುವಗಳೊಂದಿಗೆ ಜನರ ಮನಸ್ಸು ಗೆದ್ದಿದೆ. ಮನೆ ಕೆಲಸದವಳಾಗಿದ್ದ ಪಾರು , ಆದಿತ್ಯನ ಮನುಸ್ಸು ಗೆದ್ದ ಆ ಮನೆ ಸೊಸೆಯಾಗಿದ್ದಾಳೆ. ಆದ್ರೆ ಪಾರು ಸೊಸೆಯಾಗಿ ಬಂದಿದ್ದು, ಅಖಿಲಾಂಡೇಶ್ವರಿಗೆ ಇಷ್ಟ ಇಲ್ಲ. ಆದ ಕಾರಣ ಪಾರು ಮತ್ತು ಆದಿತ್ಯ (Adithya) ಬಳಿ ಮಾತು ಬಿಟ್ಟಿದ್ದಾಳೆ. ಈ ನಡುವೆ ಎಲ್ಲದನ್ನೂ ಬಂಡವಾಳ ಮಾಡಿಕೊಂಡ ಅಖಿಲಾ ಪರಮ ಶತ್ರುಗಳು ಮನೆ (Home) ಒಡೆಯುವ ಕೆಲಸ (Work) ಮಾಡುತ್ತಿದ್ದಾರೆ. ಏನಾದರೂ ಮಾಡಿ ಅವರ ಸಂಸಾರ ಹಾಳು ಮಾಡಬೇಕು ಎಂದು ಪಣ ತೊಟ್ಟಿದ್ದಾರೆ.

ಆದ್ರೆ ಹೆಚ್ಚೆತ್ತ ಅಖಿಲಾಂಡೇಶ್ವರಿ ತನ್ನ ಸಂಸಾರದ ಸುದ್ದಿಗೆ ಬಂದವರಿಗೆ ಸರಿಯಾದ ಪಾಠ ಕಲಿಸುತ್ತಿದ್ದಾಳೆ. ಪಾರು ಮತ್ತು ಜನನಿ ಅಂದ್ರೆ ಇಬ್ಬರು ಸೊಸೆಯರ ಜೊತೆ ಶತ್ರುಗಳು ತಕ್ಕ ಬುದ್ಧಿ ಕಲಿಸುತ್ತಿದ್ದಾಳೆ.

ಶತ್ರು ಅರುಂಧತಿ ಮನೆಗೆ ನುಗ್ಗಿ ಎಚ್ಚರಿಕೆ
ಅಖಿಲಾಂಡೇಶ್ವರಿಗೆ ತನ್ನ ಮನೆಯಲ್ಲಿ ನಡೆಯುತ್ತಿರುವ ಘಟನೆಗಳಿಗೆ ಅರುಂಧತಿ ಕಾರಣ ಎಂದು ಗೊತ್ತಾಗುತ್ತದೆ. ಅದಕ್ಕೆ ಆಕೆ ಪೊಲೀಸರಿಗೂ ದೂರ ನೀಡದೇ ತನ್ನ ಇಬ್ಬರು ಸೊಸೆಯೊಂದಿರ ಜೊತೆ ಅಂದ್ರೆ ಜನನಿ ಮತ್ತು ಪಾರು ಜೊತೆ ಅರುಂಧತಿ ಮನೆ ಮೇಲೆ ದಾಳಿ ಮಾಡುತ್ತಾರೆ. ಖುಷಿಯಾಗಿ ಮಾತನಾಡುತ್ತಾ ಕುಳಿತ ಅರುಂಧತಿಗೆ ಬರ ಸಿಡಿಲು ಬಡಿದಂತೆ ಆಗುತ್ತದೆ.

ಶತ್ರು ಮನೆಯಲ್ಲಿ ಅಡುಗೆ ತಯಾರಿಸಲು ಹೇಳಿದ ಅಖಿಲಾಂಡೇಶ್ವರಿ
ಇನ್ನು ಅರುಂಧತಿ ಮನೆಗೆ ಎಂಟ್ರಿ ಕೊಡುತ್ತಿದ್ದಂತೆ ಅಖಿಲಾಂಡೇಶ್ವರಿ ಪಾರು, ಜನನಿಗೆ ಅವರ ಮನೆಯಲ್ಲಿ ಅಡುಗೆ ಮಾಡುವಂತೆ ಹೇಳುತ್ತಾಳೆ. ಅದಕ್ಕೆ ಅರುಂಧತಿ ಅಣ್ಣ ಹೇಯ್ ಎಂದು ಕೂಗಿದಾಗ ಅಖಿಲಾ ಅವನ ಕೆನ್ನೆಗೆ ಒಂದು ಬಾರಿಸಿ, ಸೊಸೆಯರಿಗೆ ಅಡುಗೆ ಮಾಡಲು ಹೇಳುತ್ತಾಳೆ.

ಇದನ್ನೂ ಓದಿ: Hitler Kalyana: ಎಜೆಯಿಂದ ಜೀವ ಉಳಿಸಿಕೊಳ್ಳಲು ಪರದಾಡುತ್ತಿದ್ದ ಲೀಲಾಗೆ ಅಪ್ಪನ ಫೋನ್ ಕಾಲ್ ಉರುಳಾಯ್ತೆ? 

ತನಗೆ ಆ್ಯಸಿಡ್ ಹಾಕಿದ್ದು ಅರುಂಧತ್ತಿ ಅಣ್ಣ ಎಂದು ತಿಳಿಯುತ್ತಾ?
ಕಳೆದ ವಾರ ಪಾರು ಮೇಲೆ ಆ್ಯಸಿಡ್ ದಾಳಿ ನಡೆದಿರುತ್ತೆ. ಅದಕ್ಕೆ ಜನನಿ ಕಾರಣ ಎಂದು ಜನನಿ ಗಂಡ ಪ್ರೀತು ಅನುಮಾನ ಪಟ್ಟಿರುತ್ತಾನೆ. ಜನನಿಯನ್ನು ಮನೆಯಿಂದ ಆಚೆ ಹಾಕಲು ಪ್ರಯತ್ನ ಮಾಡಿರುತ್ತಾನೆ. ಆದ್ರೆ ಪಾರ್ವತಿ, ಇದಕ್ಕೆ ಕಾರಣ ಜನನಿ ಅಲ್ಲ ಎಂದು ಅವಳನ್ನು ಮನೆಯಲ್ಲಿ ಉಳಿಸಿಕೊಂಡಿರುತ್ತಾಳೆ. ಆದ್ರೆ ಮೂವರು ಅರುಂಧತಿ ಮನೆಯಿಂದ ಹೊರಡುವಾಗ, ಪಾರುಗೆ ತನಗೆ ಆ್ಯಸಿಡ್ ಹಾಕಿದವ ಅರುಂಧತಿ ಅಣ್ಣ ಎಂದು ಅನುಮಾನ ಬರುತ್ತೆ.

ಅರುಂಧತಿ ಅಣ್ಣನಿಗೆ ಕಪಾಳ ಮೋಕ್ಷ
ಇನ್ನು ಪಾರುಗೆ ತನಗೆ ಆ್ಯಸಿಡ್ ದಾಳಿ ಮಾಡಲು ಬಂದಾಗ ಆತನ ಕಣ್ಣುಗಳನ್ನು ನೋಡಿರುತ್ತಾಳೆ. ಈಗ ಸೂಕ್ಷ್ಮವಾಗಿ ಗಮನಿಸಿ, ಅದು ಈ ಅರುಂಧತಿ ಅಣ್ಣನೇ ಎಂದು ಕಂಡು ಹಿಡಿದು ಕಪಾಳಕ್ಕೆ ಬಾರಿಸುತ್ತಾಳೆ. ನೀನೆ ನನಗೆ ಆ್ಯಸಿಡ್ ಹಾಕಿದ್ದು ಎಂದು ಹೇಳುತ್ತಾಳೆ.

ಇದನ್ನೂ ಓದಿ: Lakshana Serial: ನಕ್ಷತ್ರಾಗೆ ತೊಂದ್ರೆ ಕೊಡೋ ಮೌರ್ಯನ ಪ್ಲ್ಯಾನ್ ಶ್ವೇತಾಗೆ ಗೊತ್ತಾಯ್ತಾ? ಇವತ್ತೇನಾಗುತ್ತೇ ನೋಡಿ 

ನಿಜ ಗೊತ್ತಾದ ಅಖಿಲಾಂಡೇಶ್ವರಿ ಏನು ಮಾಡ್ತಾಳೆ?
ಇನ್ನು ತನ್ನ ಸೊಸೆ ಮೇಲೆ ದಾಳಿ ನಡೆಸಿದ್ದು ಅರುಂಧತಿ ಅಣ್ಣ ಎಂದು ಗೊತ್ತಾದ್ರೆ ಅಖಿಲಾಂಡೇಶ್ವರಿ ಏನು ಮಾಡ್ತಾಳೆ ಅನ್ನೋ ಕುತೂಹಲ ಹೆಚ್ಚಾಗಿದೆ. ಅಲ್ಲದೇ ಅರಸನ ಕೋಟೆ ಸೊಸೆ ಮೇಲೆ ಕಣ್ಣು ಹಾಕಿದ್ರೆ ಏನ್ ಆಗುತ್ತೆ ಅಂತ ತೋರಿಸಿ ಕೊಡುತ್ತಾರೋ? ಅಖಿಲಾಂಡೇಶ್ವರಿಗೆ ವಿಷಯ ತಿಳಿದು ಕೆಂಡಾಮಂಡಲವಾಗಿದ್ದಾಳೆ. ಅರುಂಧತಿ ಮತ್ತು ಆಕೆಯ ಅಣ್ಣನ ಮೇಲೆ ಮತ್ತಷ್ಟು ಕೋಪ ಹೆಚ್ಚಾಗಿದೆ. ಈಗಾಲಾದ್ರೂ ಪೊಲೀಸರಿಗೆ ದೂರು ಕೊಟ್ಟು ಪಾಪಿಗಳು ಜೈಲಿನಲ್ಲಿ ಕೊಳೆಯುವಂತೆ ಮಾಡ್ತಾರಾ ನೋಡಬೇಕು.

ದಿನದಿಂದ ದಿನಕ್ಕೆ ಕುತೂಹಲ ಹೆಚ್ಚಾಗುತ್ತಿದೆ. ಎಲ್ಲ ಕುತೂಹಲಕ್ಕೂ ಇವತ್ತಿನ ಸಂಚಿಕೆ ನೋಡಬೇಕು.
Published by:Savitha Savitha
First published: