Paaru Serial: ಪಾರು ಪ್ರಾಣ ಅಪಾಯದಲ್ಲಿ, ಅತ್ತೆ ಅಖಿಲಮ್ಮನಿಗಾಗಿ ಜೀವ ಒತ್ತೆ ಇಟ್ಟ ಸೊಸೆ!

ಅರುಂಧತಿ ಹುಡುಗರು ದೇವಸ್ಥಾನದ ಮೆಟ್ಟಿಲ ಮೇಲೆ ಗಾಜಿನ ಚೂರುಗಳನ್ನು ಹಾಕಿದ್ದಾರೆ. ಅದನ್ನು ನೋಡಿದ ಪಾರು ಅತ್ತೆಗೆ ಏನೂ ಆಗಬಾರದು ಎಂದು, ಅವರು ಇನ್ನೇನು ಮೆಟ್ಟಿಲ ಮೇಲೆ ಕಾಲಿಡಬೇಕು, ಅಷ್ಟರಲ್ಲಿ ಪಾರು ಮೆಟ್ಟಿಲಿಗೆ ಅಡ್ಡಲಾಗಿ ಮಲಗುತ್ತಾಳೆ. ಆಕೆಯನ್ನು ತುಳಿದುಕೊಂಡು ಅಖಿಲಾ ಮೇಲೆ ಹೋಗುತ್ತಾಳೆ. ಈಗ ಗ್ಲಾಸ್ ಪಾರು ಹೊಟ್ಟೆಗೆ ಚುಚ್ಚಿಕೊಂಡಿದೆ.

ಪಾರು-ಅಖಿಲಾ

ಪಾರು-ಅಖಿಲಾ

  • Share this:
    ಜೀ ಕನ್ನಡದಲ್ಲಿ (Zee Kannada) ಸಂಜೆ 6.30ಕ್ಕೆ ಪ್ರಸಾರವಾಗುತ್ತಿರುವ ಪಾರು (Paaru) ಸೀರಿಯಲ್ (Serial) ಹಲವಾರು ಜನರ ಮನಸ್ಸು ಗೆದ್ದಿದೆ. ದಿನಕ್ಕೊಂದು ತಿರುವಿನೊಂದಿಗೆ ಅಭಿಮಾನಿಗಳನ್ನು ಹಿಡಿದಿಟ್ಟುಕೊಳ್ಳುವಲ್ಲಿ ಯಶಸ್ವಿಯಾಗುತ್ತಿದೆ. ಅಖಿಲಾಂಡೇಶ್ವರಿ ಪಾತ್ರದಲ್ಲಿರುವ ವಿನಯ್ ಪ್ರಸಾದ್ (Vinay Prasad) ಅಭಿನಯ ನೋಡೋದೇ ಒಂದು ಚೆಂದ. ಅರಸನಕೋಟೆಯನ್ನು ಬೆಳೆಸುತ್ತಾ, ತನ್ನ ಮಕ್ಕಳನ್ನು ಬೆಳೆಸುತ್ತ, ತನ್ನ ಕೋಟೆಯನ್ನು ಭದ್ರಮಾಡಿಕೊಳ್ಳುತ್ತಾ ಮುನ್ನಡೆಯುತ್ತಿದ್ದಾರೆ. ತನ್ನ ಪಾತ್ರಕ್ಕೆ ಹೊಂದುವಂತೆ ಮೇಕಪ್ ಹಾಕಿಕೊಂಡು, ಗತ್ತು, ಗಾಂಭಿರ್ಯದಿಂದ ಸಂಸಾರದ, ಜೊತೆ ಕಂಪನಿಯನ್ನು ನಡೆಸಿಕೊಂಡು ಹೋಗುತ್ತಿದ್ದಾಳೆ ಅಖಿಲಾ. ಈಗ ಅಖಿಲಾಂಡೇಶ್ವರಿ ಕುಟುಂಬದ ಮೇಲೆ ವೈರಿಗಳ ಕೆಟ್ಟ ಕಣ್ಣು ಬಿದ್ದಿದೆ. ಅದಕ್ಕೆ ವ್ರತ ಮಾಡುತ್ತಿರುವ ಅತ್ತೆಗಾಗಿ (Mother in law) ಜೀವ ಒತ್ತೆ ಇಟ್ಟಿದ್ದಾಳೆ ಪಾರು.

    ಬದಲಾಗಿರುವ ಪ್ರೀತು ವರ್ತನೆ
    ಅಖಿಲಾ ಎರಡನೇ ಮಗ ಪ್ರೀತುವನೆ ವರ್ತನೆಯಲ್ಲಿ ತುಂಬಾ ಬದಲಾಗಿದೆ. ಅದಕ್ಕೆ ಕಾರಣ ಅಖಿಲಾ ವೈರಿ ಅರುಂಧತಿ. ಪ್ರೀತುವಿನ ವಿಡಿಯೋ ಇಟ್ಟುಕೊಂಡು ಅವನಿಗೆ ಭಯ ಪಡಿಸುತ್ತಿದ್ದಾಳೆ. ನಾನು ಹೇಳಿದ ರೀತಿ ಕೇಳದಿದ್ದರೆ, ನಿನ್ನ ವಿಡಿಯೋ ವೈರಲ್ ಮಾಡ್ತೀನಿ ಎಂದು ಕಾಟ ಕೊಡುತ್ತಿದ್ದಾಳೆ. ಅದಕ್ಕೆ ಪ್ರೀತು ಅರುಂಧತಿ ಹೇಳಿದಂತೆ ಕೇಳುತ್ತಿದ್ದಾನೆ. ಮನೆಯವರ ಜೊತೆ ರೂಡ್ ಆಗಿ ನಡೆದುಕೊಳ್ಳುತ್ತಿದ್ದಾನೆ.

    Zee Kannada serial, Paaru serial today episode, paaru serial paaru real name, Paaru in problem, ಪಾರು ಧಾರಾವಾಹಿ, ಪಾರು ಪ್ರಾಣ ಅಪಾಯದಲ್ಲಿ, ಜೀ ಕನ್ನಡ ಧಾರಾವಾಹಿಗಳು, Kannada news, Karnataka news,
    ಪಾರು ಸೀರಿಯಲ್


    ಅತ್ತಿಗೆ ಪಾರುಳನ್ನು ತಳ್ಳಿದ್ದ ಪ್ರೀತು
    ಪಾರ್ವತಿ ಪ್ರೀತುವಿನ ವರ್ತನೆಯಲ್ಲಿ ಆದ ಬದಲಾವಣೆಯಿಂದ ಬೇಸತ್ತು, ಏನಾಯ್ತು ಎಂದು ಕೇಳುತ್ತಾಳೆ. ಆದ್ರೆ ಪ್ರೀತು ಜೋರು ಮಾಡುತ್ತಾನೆ. ನನಗೆ ಏನು ಆಗಿಲ್ಲ ಎನ್ನುತ್ತಾನೆ. ಆಗ ಪಾರು ಕೈ ಅಡ್ಡ ಹಿಡಿಯುತ್ತಾಳೆ. ನೀವು ಹೇಳದೇ ಬಿಡಲ್ಲ ಎನ್ನುತ್ತಾಳೆ ಅದಕ್ಕೆ ಪ್ರೀತು ಪಾರ್ವತಿಯನ್ನು ತಳ್ಳಿ ಹೋಗಿರುತ್ತಾನೆ. ಇದನ್ನು ನೋಡಿದ ಅಖಿಲಾ ಗಾಬರಿಗೊಂಡಿದ್ದಾಳೆ. ನನ್ನ ಮಗನಿಗೆ ಏನೋ ಆಗಿದೆ ಎಂದು ಜೋತಿಷ್ಯ ಕೇಳಿಕೊಂಡು ಬಂದಿದ್ದಾಳೆ. ಅದಕ್ಕೆ ಅವರು ದೇವರ ಕಳಸಾ ಹೊತ್ತು ಸಾಗಬೇಕು ಎಂದಿದ್ದಾರೆ. ಅದಕ್ಕೆ ಏನೂ ಅಡ್ಡಿ ಆಗಬಾರದೆಂದು ಹೇಳಿದ್ದಾರೆ.

    ಇದನ್ನೂ ಓದಿ: Kendasampige: ಕೆಂಡಸಂಪಿಗೆಯ ನಟಿ ಸುಮನಾ ರಿಯಲ್ ತಮ್ಮನಿಂದ ಚಿನ್ನದ ಗಿಫ್ಟ್!

    ಮಗನಿಗಾಗಿ ಕಳಸಾ ಹೊತ್ತ ಅಖಿಲಾ
    ಪ್ರೀತುವಿನ ವರ್ತನೆ ಸರಿ ಮಾಡಲು ಅಖಿಲಾ ಗುರುಗಳು ಹೇಳಿದಂತೆ ಮಡಿಯಿಂದ, ಉಪವಾಸದಿಂದ ದೇವರಿಗೆ ಕಳಸಾ ಹೊತ್ತು ನಡೆಯುತ್ತಿದ್ದಾಳೆ. ಆದ್ರೆ ಅರುಂಧತಿ ಕಡೆಯವರು ಅಖಿಲಾ ನಡೆಯುವ ದಾರಿಯಲ್ಲಿ, ಅವಳ ಕಾಲಿಗೆ ಚುಚ್ಚಲಿ ಎಂದು ಗಾಜಿನ ಚೂರುಗಳನ್ನು ಹಾಕಿದ್ದಾರೆ.

    Zee Kannada serial, Paaru serial today episode, paaru serial paaru real name, Paaru in problem, ಪಾರು ಧಾರಾವಾಹಿ, ಪಾರು ಪ್ರಾಣ ಅಪಾಯದಲ್ಲಿ, ಜೀ ಕನ್ನಡ ಧಾರಾವಾಹಿಗಳು, Kannada news, Karnataka news,
    ಜನನಿ-ಪ್ರೀತು


    ಅತ್ತೆ ಕಾಲಿಗೆ ಗಾಜು ಚುಚ್ಚಬಾರದು ಎಂದು ಅಡ್ಡ ಮಲಗಿದ ಪಾರು
    ಅರುಂಧತಿ ಹುಡುಗರು ದೇವಸ್ಥಾನದ ಮೆಟ್ಟಿಲ ಮೇಲೆ ಗಾಜಿನ ಚೂರುಗಳನ್ನು ಹಾಕಿದ್ದಾರೆ. ಅದನ್ನು ನೋಡಿದ ಪಾರು ಅತ್ತೆಗೆ ಏನೂ ಆಗಬಾರದು ಎಂದು, ಅವರು ಇನ್ನೇನು ಮೆಟ್ಟಿಲ ಮೇಲೆ ಕಾಲಿಡಬೇಕು, ಅಷ್ಟರಲ್ಲಿ ಪಾರು ಮೆಟ್ಟಿಲಿಗೆ ಅಡ್ಡಲಾಗಿ ಮಲಗುತ್ತಾಳೆ. ಆಕೆಯನ್ನು ತುಳಿದುಕೊಂಡು ಅಖಿಲಾ ಮೇಲೆ ಹೋಗುತ್ತಾಳೆ. ಅದಕ್ಕೆ ಆ ಗ್ಲಾಸ್ ಪಾರು ಹೊಟ್ಟೆಗೆ ಚುಚ್ಚಿಕೊಂಡಿದೆ.

    ಇದನ್ನೂ ಓದಿ:  Jote Joteyali: ಅಧಿಕೃತವಾಗಿ ಜೊತೆ ಜೊತೆಯಲಿ ಧಾರಾವಾಹಿಗೆ ಹರೀಶ್ ರಾಜ್ ಎಂಟ್ರಿ

    ಪಾರು ಪ್ರಾಣ ಅಪಾಯದಲ್ಲಿ
    ಗ್ಲಾಸ್ ಹೊಟ್ಟೆಗೆ ಚುಚ್ಚಿ ರಕ್ತ ಹೋಗುತ್ತಿದೆ. ಇದನ್ನು ನೋಡಿದ ಆದಿತ್ಯ ಗಾಬರಿಯಾಗಿದ್ದಾನೆ. ಅಯ್ಯೋ ಪಾರುಗೆ ಏನ್ ಆಯ್ತೋ ಅನ್ನೋ ಚಿಂತೆಯಲ್ಲಿದ್ದಾನೆ. ಪಾರು ಅಖಿಲ ಅತ್ತೆಗಾಗಿ ತನ್ನ ಪ್ರಾಣವನ್ನೇ ಒತ್ತೆಯಿಟ್ಟಿದ್ದಾಳೆ. ಈಗ ಪಾರು ಪ್ರಾಣ ಕಾಪಾಡೋದು ಆದಿತ್ಯನ ಕೈಯಲ್ಲಿದೆ. ಆದಿತ್ಯ ಪಾರು ಪ್ರಾಣ ಕಾಪಾಡ್ತಾನಾ? ಎಲ್ಲವನ್ನೂ ನೋಡಲು ಪಾರು ಧಾರಾವಾಹಿ ನೋಡಬೇಕು.
    Published by:Savitha Savitha
    First published: