Paaru: ಅಖಿಲಾಂಡೇಶ್ವರಿಗೆ ಅತ್ತೆ ಎಂದ ಪಾರು! ಸರಿ ಹೋಗುತ್ತಾ ಅತ್ತೆ-ಸೊಸೆ ಸಂಬಂಧ?

ಒಂದು ಕಡೆ ಪಾರುಗೆ ಅಖಿಲಾಂಡೇಶ್ವರಿಯನ್ನು ಅತ್ತೆ ಅನ್ನು ಅಂತ ಹೇಳ್ತಿದ್ದಾರೆ. ಇನ್ನೊಂದು ಕಡೆ ಅಖಿಲಾಗೆ ಆಕೆಯ ಮೈದುನಾ ಪಾರ್ವತಿಯನ್ನು ಸೊಸೆ ಎಂದು ಒಪ್ಪಿಕೊಳ್ಳಿ ಎಂದು ಮನವಿ ಮಾಡುತ್ತಿದ್ದಾರೆ. ಅದಕ್ಕೆ ಅಖಿಲಾಂಡೇಶ್ವರಿ ಒಪ್ತಾರಾ ಅನ್ನೋದನ್ನ ನೋಡಬೇಕು.

ಪಾರು-ಅಖಿಲಾಂಡೇಶ್ವರಿ

ಪಾರು-ಅಖಿಲಾಂಡೇಶ್ವರಿ

  • Share this:
    ಜೀ ಕನ್ನಡದಲ್ಲಿ (Zee Kannada) ಸಂಜೆ 6.30ಕ್ಕೆ ಪ್ರಸಾರವಾಗುತ್ತಿರುವ ಪಾರು (Paaru) ಸೀರಿಯಲ್ (Serial) ಹಲವಾರು ಜನರ ಮನಸ್ಸು ಗೆದ್ದಿದೆ. ದಿನಕ್ಕೊಂದು ತಿರುವಿನೊಂದಿಗೆ ಅಭಿಮಾನಿಗಳನ್ನು (Fans) ಹಿಡಿದಿಟ್ಟುಕೊಳ್ಳುವಲ್ಲಿ ಯಶಸ್ವಿಯಾಗುತ್ತಿದೆ. ಅಖಿಲಾಂಡೇಶ್ವರಿ ಪಾತ್ರದಲ್ಲಿರುವ ವಿನಯ್ ಪ್ರಸಾದ್ (Vinay Prasad) ಅಭಿನಯ ನೋಡೋದೇ ಒಂದು ಚೆಂದ. ಅರಸನಕೋಟೆಯನ್ನು ಬೆಳೆಸುತ್ತಾ, ತನ್ನ ಮಕ್ಕಳನ್ನು ಬೆಳೆಸುತ್ತ, ತನ್ನ ಕೋಟೆಯನ್ನು ಭದ್ರಮಾಡಿಕೊಳ್ಳುತ್ತಾ ಮುನ್ನೆಡೆಯುತ್ತಿದ್ದಾರೆ. ತನ್ನ ಪಾತ್ರಕ್ಕೆ ಹೊಂದುವಂತೆ ಮೇಕಪ್ ಹಾಕಿಕೊಂಡು, ಗತ್ತು, ಗಾಂಭಿರ್ಯದಿಂದ ಸಂಸಾರದ, ಜೊತೆ ಕಂಪನಿಯನ್ನು ನಡೆಸುಕೊಂಡು ಹೋಗುತ್ತಿದ್ದಾಳೆ ಅಖಿಲಾ. ಈಗ ಅಖಿಲಾಂಡೇಶ್ವರಿ ಕುಟುಂಬದ (Family) ಮೇಲೆ ವೈರಿಗಳ ಕೆಟ್ಟ ಕಣ್ಣು ಬಿದ್ದಿದೆ. ಆಕೆಯ ಸಂಸಾರವನ್ನು ಒಡೆಯಲು ಯತ್ನಿಸುತ್ತಿದ್ದಾರೆ. ವೈರಿ ಅರುಂಧತಿ ಮುಂದೆ ಒಗ್ಗಟ್ಟು ಪ್ರದರ್ಶಿಸುವ ಸವಾಲು ಎದುರಾಗಿದೆ.

    ಪಾರ್ವತಿಯನ್ನು ಇನ್ನೂ ಸೊಸೆ ಎಂದು ಒಪ್ಪಿಕೊಂಡಿಲ್ಲ ಅಖಿಲಾ
    ಪಾರು ಮೊದಲು ಅಖಿಲಾಂಡೇಶ್ವರಿ ಮನೆಯಲ್ಲಿ ಕೆಲಸ ಮಾಡಿಕೊಂಡು ಇರುತ್ತಾಳೆ. ಆಗ ಅಖಿಲಾ ದೊಡ್ಡ ಮಗ ಆದಿತ್ಯನಿಗೆ ಪಾರು ಮೇಲೆ ಲವ್ ಆಗುತ್ತೆ. ಪಾರ್ವತಿಗೂ ಆದಿತ್ಯ ಅಂದ್ರೆ ಇಷ್ಟ ಇರುತ್ತೆ. ಅದಕ್ಕೆ ಇಬ್ಬರು ಅಖಿಲಾಂಡೇಶ್ವರಿಗೆ ಹೇಳದೇ ಮದುವೆ ಆಗಿರುತ್ತಾರೆ. ಅದಕ್ಕೆ ನಂಬಿಕೆ ಉಳಿಸಿಕೊಳ್ಳಲಿಲ್ಲ ಎಂದು ಪಾರು ಮತ್ತು ಆದಿತ್ಯನನ್ನು ಅಖಿಲಾಂಡೇಶ್ವರಿ ಮಾತನಾಡಿಸುವುದನ್ನು ಬಿಟ್ಟಿದ್ದಾರೆ. ಪಾರ್ವತಿಯನ್ನು ಸೊಸೆ ಎಂದು ಒಪ್ಪಿಕೊಂಡಿಲ್ಲ.

    ಅಮ್ಮನನ್ನು ಅತ್ತೆ ಎನ್ನು ಎಂದ ಆದಿತ್ಯ
    ಮನೆಯಲ್ಲಿ ಜನನಿ-ಪಾರು ಸೇರಿ ಸತ್ಯ ನಾರಾಯಣ ಪೂಜೆ ಇಟ್ಟುಕೊಂಡಿದ್ದಾರೆ. ಅದಕ್ಕೆ ಶತ್ರು ಅರುಂಧತಿಯನ್ನು, ಆದಿತ್ಯ ಕರೆದುಕೊಂಡು ಬಂದಿದ್ದಾನೆ. ನಮ್ಮ ಮನೆಯ ಒಗ್ಗಟ್ಟು ನೋಡು ಬಾ ಎಂದು ಕರೆದುಕೊಂಡು ಬಂದಿದ್ದಾನೆ. ಆದ್ರೆ ಮನೆಯಲ್ಲಿ ಪ್ರೀತು ತಡವಾಗಿ ಬಂದು, ಈಗಾಗಲೇ ಅರುಂಧತಿ ಅನುಮಾನ ಹೆಚ್ಚಾಗಿದೆ. ಇನ್ನು ಪಾರುನೂ ಅಖಿಲಾಂಡೇಶ್ವರಿಯನ್ನು ಅಮ್ಮವರೇ ಎಂದ್ರೆ, ಅರುಧಂತಿಗೆ ಅನುಮಾನ ಹೆಚ್ಚಾಗುತ್ತೆ. ಅದಕ್ಕೆ ಆದಿತ್ಯ, ನಮ್ಮ ವೈರಿಗೆ ನಮ್ಮ ಮನೆಯ ವಿಷಯ ಗೊತ್ತಾಗಬಾರದು. ನೀನು ಆಕೆಯ ಮುಂದೆ ಅಮ್ಮನನ್ನು ಅತ್ತೆ ಎನ್ನು ಎಂದು ಹೇಳುತ್ತಾನೆ.

    ಇದನ್ನೂ ಓದಿ: Bigg Boss OTT: ಬಿಗ್ ಬಾಸ್ ವೇದಿಕೆಯಲ್ಲಿ ಕೆಂಡಸಂಪಿಗೆ ತಂಡ, ರಾಜಕೀಯಕ್ಕೆ ಎಂಟ್ರಿ ಕೊಡ್ತಾರಾ ಕಿಚ್ಚ ಸುದೀಪ್‍!?

    ಪಾರ್ವತಿಯನ್ನು ಸೊಸೆ ಎಂದು ಒಪ್ಪಿಕೊಳ್ಳಿ ಎಂದು ಮನವಿ
    ಒಂದು ಕಡೆ ಪಾರುಗೆ ಅಖಿಲಾಂಡೇಶ್ವರಿಯನ್ನು ಅತ್ತೆ ಅನ್ನು ಅಂತ ಹೇಳ್ತಿದ್ದಾರೆ. ಇನ್ನೊಂದು ಕಡೆ ಅಖಿಲಾಗೆ ಆಕೆಯ ಮೈದುನಾ ಪಾರ್ವತಿಯನ್ನು ಸೊಸೆ ಎಂದು ಒಪ್ಪಿಕೊಳ್ಳಿ ಎಂದು ಮನವಿ ಮಾಡುತ್ತಿದ್ದಾರೆ. ಅದಕ್ಕೆ ಅಖಿಲಾಂಡೇಶ್ವರಿ ಒಪ್ತಾರಾ ಅನ್ನೋದನ್ನ ನೋಡಬೇಕು.

    ಅತ್ತೆಮ್ಮ ಅಖಿಲಾಂಡೇಶ್ವರಿ
    ಅರಸನಕೋಟೆ ಸತ್ಯ ನಾರಾಯಣ ಪೂಜೆಗೆ ಬಂದಿರುವ ಅರುಂಧತಿ ಮುಂದೆ, ಪಾರ್ವತಿ ಅಖಿಲಾಂಡೇಶ್ವರಿಯನ್ನು ಅತ್ತೆಮ್ಮ ಎನ್ನಲಿದ್ದಾಳೆ. ಇದನ್ನು ಅಖಿಲಾ ಹೇಗೆ ಸ್ವೀಕರಿಸುತ್ತಾರೆ ಅನ್ನೋದನ್ನು ನೋಡಬೇಕು. ಅಖಿಲಾಗೆ ಪಾರ್ವತಿ ಮೇಲಿನ ಕೋಪ ಕಡಿಮೆ ಆಗಿ ಪಾರುಳನ್ನು ಸೊಸೆ ಎಂದು ಒಪ್ಪಿಕೊಳ್ಳಬಹುದು.

    Zee Kannada serial, Kannada serial, Paaru serial today episode, Paaru serial cast, Paaru called Mother in law, ಪಾರು ಧಾರಾವಾಹಿ, ಜೀ ಕನ್ನಡ ಧಾರಾವಾಹಿಗಳು, Kannada news, Karnataka news,
    ಅರುಂಧತಿ


    ಅರಸನಕೋಟೆ ಒಗ್ಗಟ್ಟಿಗಾಗಿ ಮುನಿಸು ಮರೆಯುತ್ತಾರಾ?
    ಅರಸನಕೋಟೆಯಲ್ಲಿ ಎಷ್ಟೇ ಭಿನ್ನಾಭಿಪ್ರಾಯ ಇದ್ರೂ, ಅದು ಮನೆಯಿಂದ ಆಚೆ ಹೋಗಲ್ಲ. ಎಲ್ಲ ಮನೆಯವರೇ ಬಗೆಹರಿಸಿಕೊಳ್ಳುತ್ತಾರೆ. ಅದು ಅರುಂಧತಿಗೆ ಗೊತ್ತಾಗಿ ಬಿಟ್ಟರಂತೂ ಅವಳು ನಕ್ಕು ಬಿಡುತ್ತಾಳೆ. ಅದಕ್ಕೆ ಎಲ್ಲವನ್ನೂ ಮರೆತು, ಮನೆಯ ಒಗ್ಗಟ್ಟಿಗಾಗಿ ಅಖಿಲಾ, ಪಾರ್ವತಿಯನ್ನು ಸೊಸೆ ಎಂದು ಒಪ್ಪಿಕೊಳ್ಳುತ್ತಾಳಾ? ಮುನಿಸು ಮರೆತು ಒಂದಾಗ್ತಾರಾ?

    ಇದನ್ನೂ ಓದಿ: Drama junior Winner: ಡ್ರಾಮಾ ಜೂನಿಯರ್ಸ್​​ನ 15 ಸ್ಪರ್ಧಿಗಳಲ್ಲಿ ಸಮೃದ್ಧಿಗೆ ವಿಜಯದ ಕಿರೀಟ

    ಅತ್ತೆಮ್ಮ ಅಖಿಲಾಂಡೇಶ್ವರಿ ಸಂಚಿಕೆಯನ್ನು ಮಿಸ್ ಮಾಡ್ದೇ ನೋಡಿ. ಇವತ್ತು ಮಹತ್ವದ ತಿರುವಿನ ಎಪಿಸೋಡು.
    Published by:Savitha Savitha
    First published: