Paaru Serial: ಪಾರುವನ್ನು ಸೊಸೆ ಎಂದು ಒಪ್ಪಿಕೊಳ್ಳೋಕೆ ರೆಡಿಯಾದ ಅಖಿಲಾಂಡೇಶ್ವರಿ! ಆದಿಗೆ ಎರಡನೇ ಮದುವೆ?

ಪಾರ್ವತಿ ಮತ್ತು ಅವನು ಚೆನ್ನಾಗಿ ಇರುತ್ತಾರೆ ಅಲ್ವಾ ಎಂದು ಕೇಳುತ್ತಾಳೆ. ಅದಕ್ಕೆ ಗುರುಗಳು, ಈ ರೀತಿ ಹೇಳ್ತೀನಿ ಅಂತ ತಪ್ಪು ತಿಳ್ಕೋಬೇಡಿ. ನಿಮ್ಮ ಮಗನ ಜಾತಕದ ಪ್ರಕಾರ, ಅವನಿಗೆ ಎರಡನೇ ಮದುವೆ ಯೋಗ ಇದೆ ಎಂದು ಗುರುಗಳು ಹೇಳ್ತಾರೆ. ಅದನ್ನು ಕೇಳಿ ಅಖಿಲಾ ಶಾಕ್ ಆಗಿದ್ದಾರೆ.

ಪಾರು-ಅಖಿಲಾಂಡೇಶ್ವರಿ

ಪಾರು-ಅಖಿಲಾಂಡೇಶ್ವರಿ

  • Share this:
ಜೀ ಕನ್ನಡದಲ್ಲಿ (Zee Kannada) ಸಂಜೆ 6.30ಕ್ಕೆ ಪ್ರಸಾರವಾಗುತ್ತಿರುವ ಪಾರು (Paaru) ಸೀರಿಯಲ್ (Serial) ಹಲವಾರು ಜನರ ಮನಸ್ಸು ಗೆದ್ದಿದೆ. ದಿನಕ್ಕೊಂದು ತಿರುವಿನೊಂದಿಗೆ ಅಭಿಮಾನಿಗಳನ್ನು (Fans) ಹಿಡಿದಿಟ್ಟುಕೊಳ್ಳುವಲ್ಲಿ ಯಶಸ್ವಿಯಾಗುತ್ತಿದೆ. ಅಖಿಲಾಂಡೇಶ್ವರಿ ಪಾತ್ರದಲ್ಲಿರುವ ವಿನಯ್ ಪ್ರಸಾದ್ ಅಭಿನಯ ನೋಡೋದೇ ಒಂದು ಚೆಂದ. ಅರಸನ ಕೋಟೆಯನ್ನು ಬೆಳೆಸುತ್ತಾ, ತನ್ನ ಮಕ್ಕಳನ್ನು ಬೆಳೆಸುತ್ತ, ತನ್ನ ಕೋಟೆಯನ್ನು ಭದ್ರಮಾಡಿಕೊಳ್ಳುತ್ತಾ ಮುನ್ನೆಡೆಯುತ್ತಿದ್ದಾರೆ. ತನ್ನ ಪಾತ್ರಕ್ಕೆ ಹೊಂದುವಂತೆ ಮೇಕಪ್ ಹಾಕಿಕೊಂಡು, ಗತ್ತು, ಗಾಂಭಿರ್ಯದಿಂದ ಸಂಸಾರದ, ಜೊತೆ ಕಂಪನಿಯನ್ನು ನಡೆಸುಕೊಂಡು ಹೋಗುತ್ತಿದ್ದಾಳೆ. ಅಖಿಲಾ ಹಿರಿಯ ಪುತ್ರ ಅಮ್ಮನ ವಿರೋಧದ ನಡುವೆಯೂ ಪಾರ್ವತಿಯನ್ನು (Parvati) ಮದುವೆ (Marriage) ಆಗಿರುತ್ತಾನೆ. ಇಷ್ಟು ದಿನ ಪಾರ್ವತಿಯನ್ನು ಸೊಸೆ ಎಂದು ಅಖಿಲಾ ಒಪ್ಪಿರಲಿಲ್ಲ. ಈಗ ಸೊಸೆ (Daughter in law) ಎಂದು ಒಪ್ಪಿಕೊಳ್ಳಲು ತಯಾರಾಗಿದ್ದಾಳೆ (Decide).

ಪಾರ್ವತಿಯನ್ನು ಸೊಸೆ ಎಂದು ಒಪ್ಪಿಕೊಂಡಿದ್ದಿಲ್ಲ ಅಖಿಲಾ
ಪಾರು ಮೊದಲು ಅಖಿಲಾಂಡೇಶ್ವರಿ ಮನೆಯಲ್ಲಿ ಕೆಲಸ ಮಾಡಿಕೊಂಡು ಇರುತ್ತಾಳೆ. ಆಗ ಅಖಿಲಾ ದೊಡ್ಡ ಮಗ ಆದಿತ್ಯನಿಗೆ ಪಾರು ಮೇಲೆ ಲವ್ ಆಗುತ್ತೆ. ಪಾರ್ವತಿಗೂ ಆದಿತ್ಯ ಅಂದ್ರೆ ಇಷ್ಟ ಇರುತ್ತೆ. ಅದಕ್ಕೆ ಇಬ್ಬರು ಅಖಿಲಾಂಡೇಶ್ವರಿಗೆ ಹೇಳದೇ ಮದುವೆ ಆಗಿರುತ್ತಾರೆ. ಅದಕ್ಕೆ ನಂಬಿಕೆ ಉಳಿಸಿಕೊಳ್ಳಲಿಲ್ಲ ಎಂದು ಪಾರು ಮತ್ತು ಆದಿತ್ಯನನ್ನು ಅಖಿಲಾಂಡೇಶ್ವರಿ ಮಾತನಾಡಿಸುವುದನ್ನು ಬಿಟ್ಟಿದ್ದಾರೆ. ಪಾರ್ವತಿಯನ್ನು ಸೊಸೆ ಎಂದು ಒಪ್ಪಿಕೊಂಡಿರುವುದಿಲ್ಲ.

ಪಾರುಳನ್ನು ಸೊಸೆ ಎಂದು ಒಪ್ಪಿಕೊಳ್ಳಲು ತೀರ್ಮಾನ
ಈಗ ಅಖಿಲಾಂಡೇಶ್ವರಿ ಪಾರ್ವತಿಯನ್ನು ಸೊಸೆ ಎಂದು ಒಪ್ಪಿಕೊಳ್ಳಲು ತೀರ್ಮಾನ ಮಾಡಿದ್ದಾಳೆ. ಈ ಬಗ್ಗೆ ಗುರುಗಳ ಬಗ್ಗೆ ಕೇಳುತ್ತಿದ್ದಾಳೆ. ನನಗೋಸ್ಕರ ಎಂತಹ ತ್ಯಾಗಕ್ಕೂ ಸಿದ್ಧವಾಗಿರೋ ಈ ರೀತಿ ಹುಡುಗಿಯನ್ನ, ನಾನು ಸೊಸೆಯಾಗಿ ಪಡಿಯೋಕೆ ಪುಣ್ಯ ಮಾಡಿದೆ. ನಾನೇ ಹುಡುಕಿದ್ರು ಇಂತಹ ಹುಡುಗಿ ಸಿಕ್ತಾ ಇರಲಿಲ್ಲ. ಆದ್ರೆ, ನಾನು ಇನ್ನೂ ಅವಳನ್ನು ಅಧಿಕೃತವಾಗಿ ನನ್ನ ಸೊಸೆ ಎಂದು ಒಪ್ಪಿಕೊಂಡಿಲ್ಲ.

ಇದನ್ನೂ ಓದಿ: Hitler Kalyana: ಲೀಲಾ ತಂಗಿಯನ್ನು ಕಿಡ್ನ್ಯಾಪ್ ಮಾಡಿ ಎ.ಜೆಗೆ ಸವಾಲ್ ಹಾಕಿದ ದೇವ್! ಮುಂದಿದೆ ಬಿಗ್ ಟ್ವಿಸ್ಟ್

ಆದ್ರೆ ಇವತ್ತು ಮನಸಾರೆ ಸೊಸೆ ಎಂದು ಒಪ್ಪಿಕೊಳ್ಳಲು ತೀರ್ಮಾನ ಮಾಡಿದ್ದೇನೆ. ಸದಾ ಎಲ್ಲರಿಗೂ ಒಳ್ಳೆಯದಾಗಲಿ ಎಂದು ಬಯಸೋ ಅವಳಿಗೆ ಏಕೆ, ಯಾವಗ್ಲೂ ಅಪಾಯ ಉಂಟಾಗುತ್ತೆ. ನನ್ನ ಮಗ, ಸೊಸೆ ಇಬ್ಬರು ಸುಖವಾಗಿ ಚೆನ್ನಾಗಿ ಬಾಳಬೇಕು ಎನ್ನುವುದೇ ನನ್ನ ಆಸೆ ಎಂದು ಅಖಿಲಾಂಡೇಶ್ವರಿ ಹೇಳುತ್ತಾಳೆ.

Zee Kannada serial, Paaru serial today episode, Paaru serial cast, Second marriage matter in episode, ಪಾರು ಧಾರಾವಾಹಿ, ಆದಿಗೆ ಎರಡನೇ ಮದುವೆ ಭವಿಷ್ಯ, ಜೀ ಕನ್ನಡ ಧಾರಾವಾಹಿಗಳು, Kannada news, Karnataka news,
ಪಾರು


ಆದಿತ್ಯನ ಜಾತಕ ತೋರಿಸಿದ ಅಖಿಲಾ
ಆದಿತ್ಯನ ಜಾತಕ ನೋಡಿದ ಗುರುಗಳು ನಿಮ್ಮ ಮಗನ ಜಾತಕ ತುಂಬಾ ಸೊಗಸಾಗಿದೆ. ಉದೋಗದಲ್ಲಿ ತುಂಬಾ ದೊಡ್ಡ ಯಶಸ್ಸನ್ನು ಕಾಣ್ತಾರೆ. ಕೈ ಹಾಕಿದ ಕೆಲಸಗಳೆಲ್ಲಾ ಕೈ ಗೂಡುತ್ತೆ ಎಂದು ಗುರುಗಳು ಹೇಳ್ತಾರೆ. ಅದನ್ನು ಕೇಳಿ, ಅಖಿಲಾ ಖುಷಿಯಾಗಿದ್ದಾರೆ.

ಆದಿಗೆ ಎರಡನೇ ಮದುವೆ ಯೋಗ
ಉದ್ಯೋಗದ ಬಗ್ಗೆ ಕೇಳಿದ ನಂತರ, ನನ್ನ ಮಗನ ವೈಯಕ್ತಿಕ ಜೀವನದ ಬಗ್ಗೆ ಹೇಳಿ ಗುರುಗಳೇ, ಪಾರ್ವತಿ ಮತ್ತು ಅವನು ಚೆನ್ನಾಗಿ ಇರುತ್ತಾರೆ ಅಲ್ವಾ ಎಂದು ಕೇಳುತ್ತಾಳೆ. ಅದಕ್ಕೆ ಗುರುಗಳು, ಈ ರೀತಿ ಹೇಳ್ತೀನಿ ಅಂತ ತಪ್ಪು ತಿಳ್ಕೋಬೇಡಿ. ನಿಮ್ಮ ಮಗನ ಜಾತಕದ ಪ್ರಕಾರ, ಅವನಿಗೆ ಎರಡನೇ ಮದುವೆ ಯೋಗ ಇದೆ ಎಂದು ಗುರುಗಳು ಹೇಳ್ತಾರೆ. ಅದನ್ನು ಕೇಳಿ ಅಖಿಲಾ ಶಾಕ್ ಆಗಿದ್ದಾರೆ.

ಇದನ್ನೂ ಓದಿ: Gattimela: ಕೆಡುಕು ಬಯಸುವ ಸುಹಾಸಿನಿಗೆ ಮತ್ತೊಬ್ಬ ಬಾಸ್! ಯಾರದು ಹೊಸ ಪರಿಚಯ?

ಪಾರ್ವತಿಯನ್ನು ಪ್ರಾಣಕ್ಕಿಂತ ಹೆಚ್ಚಾಗಿ ಪ್ರೀತಿ ಮಾಡೋ ಆದಿತ್ಯ ಎರಡನೇ ಮದುವೆ ಆಗ್ತಾನಾ? ಏನಿದು ಹೊಸ ಟ್ವಿಸ್ಟ್? ಮುಂದೇನಾಗುತ್ತೆ? ಎಲ್ಲವನ್ನೂ ನೋಡಲು ಪಾರು ಧಾರಾವಾಹಿ ನೋಡಬೇಕು.
Published by:Savitha Savitha
First published: