• Home
  • »
  • News
  • »
  • entertainment
  • »
  • Paaru: ಅರುಂಧತಿ, ರಾಣಾ ಕುತಂತ್ರದಿಂದ ಅಮ್ಮನ ಮೇಲೆ ತಪ್ಪು ತಿಳಿದುಕೊಂಡ ಆದಿ! ಇತ್ತ ಪ್ರೀತು ಕಥೆ ಏನಾಯ್ತು?

Paaru: ಅರುಂಧತಿ, ರಾಣಾ ಕುತಂತ್ರದಿಂದ ಅಮ್ಮನ ಮೇಲೆ ತಪ್ಪು ತಿಳಿದುಕೊಂಡ ಆದಿ! ಇತ್ತ ಪ್ರೀತು ಕಥೆ ಏನಾಯ್ತು?

ಪಾರು ಧಾರಾವಾಹಿ

ಪಾರು ಧಾರಾವಾಹಿ

ಆದಿ ಪಾರ್ವತಿಯನ್ನು ಹಿಡಿದುಕೊಳ್ಳುವಷ್ಟರಲ್ಲಿ ಅಖಿಲಾ ಬರುತ್ತಾಳೆ. ಅವಳು ಯಾವುದೋ ವಿಷಯಕ್ಕೆ ನಗುತ್ತಾಳೆ. ಅದನ್ನು ನೋಡಿದ ಆದಿ ತಪ್ಪು ತಿಳಿದುಕೊಳ್ತಾನೆ. ಇದರ ಹಿಂದೆ ಅಮ್ಮ ಇದ್ದಾರಾ? ನನ್ನನ್ನು ಪಾರ್ವತಿಯನ್ನು ದೂರ ಮಾಡಲು ಈ ರೀತಿ ಮಾಡ್ತಿದ್ದಾರೆ ಎಂದು ತಪ್ಪು ತಿಳಿದು ಕೊಳ್ತಾನೆ. ಮುಂದೇನಾಗಲಿದೆ?

ಮುಂದೆ ಓದಿ ...
  • Share this:

    ಜೀ ಕನ್ನಡದಲ್ಲಿ (Zee Kannada) ಸಂಜೆ 6.30ಕ್ಕೆ ಪ್ರಸಾರವಾಗುತ್ತಿರುವ ಪಾರು (Paaru) ಸೀರಿಯಲ್ (Serial) ಹಲವಾರು ಜನರ ಮನಸ್ಸು ಗೆದ್ದಿದೆ. ದಿನಕ್ಕೊಂದು ತಿರುವಿನೊಂದಿಗೆ ಅಭಿಮಾನಿಗಳನ್ನು ಹಿಡಿದಿಟ್ಟುಕೊಳ್ಳುವಲ್ಲಿ ಯಶಸ್ವಿಯಾಗುತ್ತಿದೆ. ಅಖಿಲಾಂಡೇಶ್ವರಿ ಪಾತ್ರದಲ್ಲಿರುವ ವಿನಯ್ ಪ್ರಸಾದ್ ಅಭಿನಯ ನೋಡೋದೇ ಒಂದು ಚೆಂದ. ಅರಸನ ಕೋಟೆಯನ್ನು ಬೆಳೆಸುತ್ತಾ, ತನ್ನ ಮಕ್ಕಳನ್ನು ಬೆಳೆಸುತ್ತ, ತನ್ನ ಕೋಟೆಯನ್ನು ಭದ್ರಮಾಡಿಕೊಳ್ಳುತ್ತಾ ಮುನ್ನೆಡೆಯುತ್ತಿದ್ದಾರೆ. ತನ್ನ ಪಾತ್ರಕ್ಕೆ ಹೊಂದುವಂತೆ ಮೇಕಪ್ ಹಾಕಿಕೊಂಡು, ಗತ್ತು, ಗಾಂಭಿರ್ಯದಿಂದ ಸಂಸಾರದ, ಜೊತೆ ಕಂಪನಿಯನ್ನು (Company) ನಡೆಸುಕೊಂಡು ಹೋಗುತ್ತಿದ್ದಾಳೆ. ಈಗ ಅಖಿಲಾ ಮನೆಯಲ್ಲಿ ಏನೇನು ನಡೆಯುತ್ತಿದೆ ಇದಕ್ಕೆಲ್ಲಾ ಕಾರಣ ಅರುಂಧತಿ (Arundhati) ಮತ್ತು ರಾಣಾ. ಪ್ರೀತುವನ್ನುದ ದಾಳವಾಗಿ ಬಳಸಿಕೊಂಡು ಮನೆಯಲ್ಲಿ ಜಗಳ ತಂದಿಡುತ್ತಿದ್ದಾಳೆ.


    ಆದಿ-ಪಾರು ಜೊತೆಗಿರುವಂತೆ ಮಾಡುವ ಪ್ಲ್ಯಾನ್
    ಆದಿ ಜಾತಕದಲ್ಲಿ ಎರಡನೇ ಮದುವೆ ಯೋಗ ಇದೆಯಂತೆ. ಅದಕ್ಕೆ ಅಖಿಲಾ ಅವರಿಬ್ಬರೂ ಹೇಗಾದ್ರೂ ಜೊತೆಗಿರಬೇಕು ಕೊನೆಯವರೆಗು ಎಂದು ಕೊಳ್ತಿದ್ದಾಳೆ. ಆದ್ರೆ ಅದನ್ನು ಆದಿ ತಪ್ಪಾಗಿ ತಿಳಿದುಕೊಳ್ಳುತ್ತಿದ್ದಾನೆ. ಅಮ್ಮ ತನ್ನನ್ನು ಪಾರ್ವತಿಯನ್ನು ದೂರ ಮಾಡಬೇಕು ಎಂದುಕೊಂಡಿರುತ್ತಾನೆ. ಅದಕ್ಕೆ ಅಮ್ಮ ಅಖಿಲಾಂಡೇಶ್ವರಿ ಏನೇ ಮಾಡಿದ್ರು ತಪ್ಪು ತಿಳಿದುಕೊಳ್ಳಿದ್ದಾರೆ.


    ಅರುಂಧತಿ, ರಾಣಾ ಪ್ಲ್ಯಾನ್ 
    ಅಖಿಲಾ ಪರಮ ಶತ್ರುಗಳಾದ ಅರುಂಧತಿ, ರಾಣಾ ಅಖಿಲಾ ಮನೆ ಒಡೆಯುವ ಕೆಲಸ ಮಾಡುತ್ತಿದ್ದಾರೆ. ಅದಕ್ಕೆ ಪ್ರೀತುವನ್ನು ಬಳಸಿಕೊಂಡು, ಹುಡಗಿಯ ಜೊತೆ ಇರುವ ವಿಡಿಯೋ ಮಾಡಿಕೊಂಡು ಬ್ಲ್ಯಾಕ್ ಮೇಲ್ ಮಾಡುತ್ತಿದ್ದಾರೆ. ನಾವು ಹೇಳಿದಂತೆ ಕೇಳದಿದ್ದರೆ, ವಿಡಿಯೋ ಲೀಕ್ ಮಾಡುವುದಾಗಿ ಹೇಳುತ್ತಿದ್ದಾರೆ. ಅದಕ್ಕೆ ಪ್ರೀತು ಅವರು ಹೇಳಿದಂತೆ ಕೇಳುತ್ತಿದ್ದಾನೆ.


    ಇದನ್ನೂ ಓದಿ: Aishwarya-Nawaj: ಬೈಕ್ ರೇಸರ್ ಐಶ್ವರ್ಯ ಮೇಲೆ ಸೈಕೋ ನವಾಜ್‍ಗೆ ಕುಚ್​ಕುಚ್!


    ಅತ್ತಿಗೆಗೆ ಹೆಸರಿಡಿದು ಕರೆದ ಪ್ರೀತು
    ಪ್ರೀತುಗೆ ಅತ್ತಿಗೆ ಪಾರ್ವತಿ ಎಂದ್ರೆ ತುಂಬಾ ಗೌರವ. ಆದ್ರೆ ಈಗ ರಾಣಾ ಬಲೆಯಲ್ಲಿ ಸಿಲುಕಿರುವುದರಿಂದ, ಪ್ರೀತು ಅಸಹಾಯ ಸ್ಥಿತಿಯಲ್ಲಿದ್ದಾನೆ. ಅದಕ್ಕೆ ಅವರು ಹೇಳಿದಂತೆ ಕೇಳುತ್ತಿದ್ದಾನೆ. ಪಾರ್ವತಿಗೆ ಹೆಸರಿಡಿದು ಕರೆಯುತ್ತಾನೆ. ಎಲ್ಲರೂ ಗಾಬರಿಯಿಂದ ನೋಡಿದಾಗ. ಆಕೆ ಈ ಮನೆ ಕೆಲಸದವಳು ತಾನೇ ಅದಕ್ಕೆ ಹೆಸರಿಡಿದು ಕರೆದೇ ಎನ್ನುತ್ತಾನೆ. ಎಲ್ಲರೂ ಸುಮ್ಮನಾಗುತ್ತಾರೆ.


    Zee Kannada serial, Kannada serial, Paaru serial today episode, Paaru serial cast, Paaru called Mother in law, ಪಾರು ಧಾರಾವಾಹಿ, ಅಮ್ಮನ ಮೇಲೆ ತಪ್ಪು ತಿಳಿದುಕೊಂಡ ಆದಿತ್ಯ, ಜೀ ಕನ್ನಡ ಧಾರಾವಾಹಿಗಳು, Kannada news, Karnataka news,
    ಅರುಂಧತಿ


    ಪಾರು ಬೀಳಿಸಲಿರುವ ಪ್ರೀತು
    ರಾಣಾ ಮತ್ತೆ ಪ್ರೀತುಗೆ ಕಾಲ್ ಮಾಡಿ, ನಿಮ್ಮ ಅತ್ತಿಗೆಗೆ ಕಾಲು ಅಡ್ಡ ಕೊಟ್ಟು ಬೀಳಿಸಬೇಕು. ಅದು ನಿಮ್ಮ ಅಣ್ಣ ಆದಿತ್ಯನ ಮುಂದೆ ಎಂದು ಹೇಳಿದ್ದಾರೆ. ಅದರಂತೆ ಟೀ ಕೊಡಲು ಬಂದ ಪಾರ್ವತಿಯನ್ನು ಪ್ರೀತು ತಡೆದು, ತನ್ನ ಅಣ್ಣ ಬರುವುತ್ತಿರುವುದನ್ನು ನೋಡಿ ಪಾರುಗೆ ಕಾಲು ಅಡ್ಡ ಕೊಟ್ಟು ಬೀಳಿಸುತ್ತಾನೆ ಅಷ್ಟರಲ್ಲಿ ಆದಿ ಬಂದು ಹಿಡಿದುಕೊಳ್ತಾನೆ.


    Zee Kannada serial, Kannada serial, Paaru serial today episode, Paaru serial cast, Paaru called Mother in law, ಪಾರು ಧಾರಾವಾಹಿ, ಅಮ್ಮನ ಮೇಲೆ ತಪ್ಪು ತಿಳಿದುಕೊಂಡ ಆದಿತ್ಯ, ಜೀ ಕನ್ನಡ ಧಾರಾವಾಹಿಗಳು, Kannada news, Karnataka news,
    ರಾಣಾ


    ಅಮ್ಮನ ಮೇಲೆ ತಪ್ಪು ತಿಳಿದುಕೊಂಡ ಆದಿ
    ಆದಿ ಪಾರ್ವತಿಯನ್ನು ಹಿಡಿದುಕೊಳ್ಳುವಷ್ಟರಲ್ಲಿ ಅಖಿಲಾ ಬರುತ್ತಾಳೆ. ಅವಳು ಯಾವುದೋ ವಿಷಯಕ್ಕೆ ನಗುತ್ತಾಳೆ. ಅದನ್ನು ನೋಡಿದ ಆದಿ ತಪ್ಪು ತಿಳಿದುಕೊಳ್ತಾನೆ. ಇದರ ಹಿಂದೆ ಅಮ್ಮ ಇದ್ದಾರಾ? ನನ್ನನ್ನು ಪಾರ್ವತಿಯನ್ನು ದೂರ ಮಾಡಲು ಈ ರೀತಿ ಮಾಡ್ತಿದ್ದಾರೆ ಎಂದು ತಪ್ಪು ತಿಳಿದುಕೊಳ್ತಾನೆ.


    ಇದನ್ನೂ ಓದಿ: Jothe Jotheyali: ಅನಿರುದ್ಧ್ ಇಲ್ಲದ ಜೊತೆ ಜೊತೆಯಲಿ ಹೇಗಿದೆ? ಹರೀಶ್ ರಾಜ್‌ ಪಾತ್ರ ಒಪ್ಪಿಕೊಂಡರಾ ಫ್ಯಾನ್ಸ್?


    ಈ ಸಮಸ್ಯೆ ಯಾವಾಗ ಬಗೆಹರಿಯುತ್ತೆ? ಪ್ರೀತು ರಾಣಾ ಬಲೆಯಿಂದ ಪಾರಾಗೋದು ಯಾವಾಗ? ಎಲ್ಲವನ್ನೂ ನೋಡಲು ಪಾರು ಧಾರಾವಾಹಿ ನೋಡಬೇಕು.

    Published by:Savitha Savitha
    First published: