Paaru Serial: ರೊಚ್ಚಿಗೆದ್ದ ಅಖಿಲಾಂಡೇಶ್ವರಿ, ಪಾರು-ಜನನಿ ಜೊತೆ ಅರುಂಧತಿ ಮನೆಗೆ ಎಂಟ್ರಿ! ಇವತ್ತು ರೋಚಕ ತಿರುವು

ಅರುಂಧತಿ ತಮ್ಮ ಮನೆ ಒಡೆಯುವ ಯತ್ನ ಮಾಡುತ್ತಿದ್ದಾಳೆ ಎಂದು ಅಖಿಲಾಂಡೇಶ್ವರಿ, ಪಾರು, ಜನನಿಗೆ ಕೋಪ ಇದೆ. ಆ ಕೋಪ ಇಂದು ಉಗ್ರ ರೂಪ ತಾಳೋದು ಖಂಡಿತ. ಮೂವರು ಸೇರಿ ಅರುಂಧತಿ ಚಳಿ ಬಿಡಿಸೋದು ಪಕ್ಕಾ. ಅವಳಿಗೆ ಸರಿಯಾಗಿ ಧರ್ಮದೇಟು ನೀಡಿದ್ರೂ ಅನುಮಾನ ಇಲ್ಲ. ಹಾಗಾದ್ರೆ ಇಂದು ಏನಾಗುತ್ತೆ?

ಪಾರು ಧಾರಾವಾಹಿ

ಪಾರು ಧಾರಾವಾಹಿ

  • Share this:
ಜೀ ಕನ್ನಡದಲ್ಲಿ (Zee Kannada) ಸಂಜೆ 6.30ಕ್ಕೆ ಪ್ರಸಾರವಾಗುತ್ತಿರುವ ಪಾರು (Paaru) ಸೀರಿಯಲ್ (Serial) ಹಲವಾರು ಜನರ ಮನಸ್ಸು ಗೆದ್ದಿದೆ. ದಿನಕ್ಕೊಂದು ತಿರುವಿನೊಂದಿಗೆ ಅಭಿಮಾನಿಗಳನ್ನು (Fans) ಹಿಡಿದಿಟ್ಟುಕೊಳ್ಳುವಲ್ಲಿ ಯಶಸ್ವಿಯಾಗುತ್ತಿದೆ. ಅಖಿಲಾಂಡೇಶ್ವರಿ ಪಾತ್ರದಲ್ಲಿರುವ ವಿನಯ್ ಪ್ರಸಾದ್ (Vinay Prasad) ಅಭಿನಯ ನೋಡೋದೇ ಒಂದು ಚೆಂದ. ಅರಸನಕೋಟೆಯನ್ನು ಹೇಗೆ ಬೆಳೆಸುತ್ತಾ, ತನ್ನ ಮಕ್ಕಳನ್ನು ಬೆಳೆಸುತ್ತ, ತನ್ನ ಕೋಟೆಯನ್ನು ಭದ್ರಮಾಡಿಕೊಳ್ಳುತ್ತಾ ಮುನ್ನೆಡೆಯುತ್ತಿದೆ. ತನ್ನ ಪಾತ್ರಕ್ಕೆ ಹೊಂದುವಂತೆ ಮೇಕಪ್ ಹಾಕಿಕೊಂಡು, ಗತ್ತು, ಗಾಂಭಿರ್ಯದಿಂದ ಸಂಸಾರದ, ಜೊತೆ ಕಂಪನಿಯನ್ನು ನಡೆಸುಕೊಂಡು ಹೋಗುತ್ತಿದ್ದಾಳೆ ಅಖಿಲಾ. ಈಗ ಅಖಿಲಾಂಡೇಶ್ವರಿ ಕುಟುಂಬದ (Family) ಮೇಲೆ ವೈರಿಗಳ ಕೆಟ್ಟ ಕಣ್ಣು ಬಿದ್ದಿದೆ. ಆಕೆಯ ಸಂಸಾರವನ್ನು ಒಡೆಯಲು ಯತ್ನಿಸುತ್ತಿದ್ದಾರೆ. ಅದಕ್ಕೆಲ್ಲಾ ಹೇಗೆ ಬುದ್ಧಿ ಕಲಿಸ್ತಾರೆ ಅನ್ನೋದೇ ಥ್ರಿಲ್ಲಿಂಗ್.

ಪಾರು, ಜನನಿ ಜೊತೆ ಹೊರಟಿದ್ದೇಲ್ಲಿಗೆ ಅಖಿಲಾಂಡೇಶ್ವರಿ?
ಪಾರು ಧಾರಾವಾಹಿಯಲ್ಲಿ ಅಖಿಲಾಂಡೇಶ್ವರಿ ಮನೆಯಲ್ಲಿ ದಿನ ಒಂದೊಂದು ಅನಾಹುತಗಳು ನಡೆಯುತ್ತಲೇ ಇವೆ. ಅದಕ್ಕೆಲ್ಲಾ ಕಾರಣ ಎನಿಮಿ ಅರುಂಧತಿ ಎನ್ನುವುದು ಗೊತ್ತಾಗಿದೆ. ಮನೆಯಿಲ್ಲಿರುವ ದಾಮಿನಿಗೆ ಹಣದ ಆಮಿಷ ತೋರಿಸಿ, ಅಖಿಲಾ ಮನೆಯಲಿ ನಡೆಯುವುದನ್ನೆಲ್ಲಾ ತಿಳಿಯುತ್ತಿರುವ ಅರುಂಧತಿ ಒಂದಲ್ಲ ಒಂದು ತೊಂದರೆ ಕೊಡುತ್ತಿದ್ದಳು. ಪಾರು-ಆದಿತ್ಯ ಮದುವೆಯಾಗಿರುವುದು ಅಖಿಲಾಂಡೇಶ್ವರಿಗೆ ಇಷ್ಟ ಇಲ್ಲ. ಅದನ್ನೇ ಬಂಡವಾಳ ಮಾಡಿಕೊಂಡು ಆದಿತ್ಯ, ಅಖಿಲಾಂಡೇಶ್ವರಿಯ ನಡುವಿನ ಅಂತರ ಹೆಚ್ಚು ಮಾಡುವ ಕೆಲಸ ನಡೆಯುತ್ತಿದೆ.

ಅರುಂಧತಿ ಮನೆ ಕಡೆಗೆ ಅತ್ತೆ-ಸೊಸೆಯರ ಪಯಣ
ಅಖಿಲಾಂಡೇಶ್ವರಿಗೆ ತನ್ನ ಮನೆಯಲ್ಲಿ ನಡೆಯುತ್ತಿರುವ ಕೆಟ್ಟ ಘಟನೆಗಳಿಗೆ ಅರುಂಧತಿ ಕಾರಣ ಎಂದು ತಿಳಿದಿದೆ. ಆದ ಕಾರಣ ಮನೆಯವರೆಲ್ಲಾ ಪೊಲೀಸರಿಗೆ ದೂರು ನೀಡೋಣಾ ಅಂತಾರೆ. ಅದಕ್ಕೆ ಅಖಿಲಾ ಬೇಡ, ನಾನು ಅವಳಿಗೆ ಬೇರೆ ರೀತಿಯಲ್ಲು ಬುದ್ಧಿ ಕಲಿಸುತ್ತೇನೆ ಎಂದು ಹೇಳಿದ್ದಾಳೆ. ಪಾರು ಜೊತೆ ಮಾತನಾಡದಿದ್ದರೂ, ಜನನಿ, ಪಾರು ಕರೆದುಕೊಂಡು ಅರುಂಧತಿ ಮನೆಗೆ ಎಂಟ್ರಿ ಕೊಡುತ್ತಿದ್ದಾಳೆ.

ಇದನ್ನೂ ಓದಿ: Priyamani: ಬ್ಲಾಕ್​ ಡ್ರೆಸ್​ನಲ್ಲಿ ಮಿರಿ ಮಿರಿ ಮಿಂಚಿದ ಪ್ರಿಯಾಮಣಿ, ಬಹುಭಾಷಾ ನಟಿಯ ಲುಕ್​ಗೆ ನೆಟ್ಟಿಗರು ಫಿದಾ

ವೈರಿ ಮನೆಯ ಬಾಗಿಲನ್ನು ಕಾಲಿನಿಂದ ಒದ್ದು ತೆಗೆದ ಅರಸನಕೋಟೆ ರಾಣಿ
ಎನಿಮಿ ಅರುಂಧತಿ ಮನೆಗೆ ಅಖಿಲಾಂಡೇಶ್ವರಿ ಇವತ್ತು ಖಡಕ್ ಆಗಿ ಎಂಟ್ರಿ ಕೊಡಲಿದ್ದಾರೆ. ಅರುಂಧತಿ ಮೆಯ ಬಾಗಿಲನ್ನು ತನ್ನ ಚಪ್ಪಲಿ ಕಾಲಿನಿಂದ ಒದ್ದು ತೆಗೆದಿದ್ದಾಳೆ. ಒಳಗೆ ತನ್ನ ಅಣ್ಣನ ಜೊತೆ ಖುಷಿಯಾಗಿ ಮಾತನಾಡಿಕೊಂಡಿದ್ದ ಅರುಂಧತಿ ಶಾಕ್ ಆಗಿದ್ದಾಳೆ. ಮೊದಲು ಅಖಿಲಾ ಒಬ್ಬಳೆ ಬಂದಿದ್ದಾಳೆ ಎಂದು ನೋಡುತ್ತಿದ್ದ ವೈರಿಗೆ. ಅತ್ತೆಯ ಅಕ್ಕ-ಪಕ್ಕ ಪಾರು, ಜನನಿ ಬಂದು ನಿಲ್ಲುವುದು ಕಾಣುತ್ತೆ.

ಅರುಂಧತಿಗೆ ಬೀಳುತ್ತಾ ಧರ್ಮದೇಟು?
ಇವತ್ತಿನ ಎಪಿಸೋಡು ನೋಡೋಕೆ ತುಂಬಾ ಥ್ರಿಲ್ಲಿಂಗ್ ಆಗಿರುತ್ತೆ. ಅರುಂಧತಿ ಮನೆಗೆ ಎಂಟ್ರಿ ಕೊಟ್ಟಿರುವ ಅಖಿಲ್ ಮತ್ತು ಆಕೆಯ ಸೊಸೆಯರು ಏನು ಮಾಡುತ್ತಾರೆ ಎಂದು ಕುತೂಹಲ ಕೆರಳಿಸಿದೆ. ಕಣ್ಣಲ್ಲಿ ತನ್ನ ಬೆಂಕಿ ಹೊರ ಹಾಕುತ್ತಿರುವ ಅಖಿಲಾಂಡೇಶ್ವರಿ, ಅರುಂಧತಿಗೆ ಏನು ಮಾಡುತ್ತಾಳೋ ಗೊತ್ತಿಲ್ಲ. ಇಬ್ಬರು ಸೊಸೆಯರನ್ನು ಬೇರೆ ಕರೆದುಕೊಂಡು ಬಂದಿದ್ದಾಳೆ.

ಮೂವರು ಸೇರಿ ಅರುಂಧತಿ ಚಳಿ ಬಿಡಿಸುತ್ತಾರಾ?
ಮೊದಲೇ ತಮಗೆ ತೊಂದರೆ ಕೊಡುತ್ತಿದ್ದಾಳೆ. ತಮ್ಮ ಮನೆ ಒಡೆಯುವ ಯತ್ನ ಮಾಡುತ್ತಿದ್ದಾಳೆ ಎಂದು ಅಖಿಲಾಂಡೇಶ್ವರಿ, ಪಾರು, ಜನನಿಗೆ ಕೋಪ ಇದೆ. ಆ ಕೋಪ ಇಂದು ಉಗ್ರ ರೂಪ ತಾಳೋದು ಖಂಡಿತ. ಮೂವರು ಸೇರಿ ಅರುಂಧತಿ ಚಳಿ ಬಿಡಿಸೋದು ಪಕ್ಕಾ. ಅವಳಿಗೆ ಸರಿಯಾಗಿ ಧರ್ಮದೇಟು ನೀಡಿದ್ರೂ ಅನುಮಾನ ಇಲ್ಲ.

ಇದನ್ನೂ ಓದಿ: Olavina Nildana: ತಾರಿಣಿಯ ಪ್ರೀತಿಯಲ್ಲಿ ಬೀಳ್ತಿದ್ದಾನಾ ಸಿದ್ಧಾಂತ್? ಇಷ್ಟ ಇಲ್ಲ ಅಂದ್ರೂ ಬೆಟ್ಟದಷ್ಟು ಕಾಳಜಿ

ಇವತ್ತಿನ ಸಂಚಿಕೆಯನ್ನು ತಪ್ಪದೇ ನೋಡಲೇ ಬೇಕು. ಮೂವರು ಅಂದ್ರೆ, ಅಖಿಲಾಂಡೇಶ್ವರಿ, ಪಾರು, ಜನನ ಹೇಗೆ ತಮ್ಮ ಕೋಪ ತಿರೀಸಿಕೊಳ್ಳುತ್ತಾರೆ ಅಂತ ಕಾದು ನೋಡಬೇಕಿದೆ.
Published by:Savitha Savitha
First published: