Paaru Serial: ರಿಯಲ್ ಲೈಫ್ ನಲ್ಲೂ ಸೂಪರ್ ಸಿಸ್ಟರ್, ವಿಶೇಷಚೇತನ ತಮ್ಮನನ್ನು ಅಮ್ಮನಂತೆ ನೋಡಿಕೊಳ್ಳುತ್ತಿರುವ ಪಾರು

ಪಾರು ಧಾರಾವಾಹಿಯಲ್ಲಿ ಪಾರು ಆಗಿ ನಟಿಸುತ್ತಿರುವ ಮೋಕ್ಷಿತಾ ರಿಯಲ್ ಲೈಫ್ ಬಗ್ಗೆ ನಿಮಗೆ ಗೊತ್ತಾ? ಧಾರಾವಾಹಿಯಲ್ಲಿ ತಮ್ಮ ಗಣಿಗೆ ಪ್ರೀತಿಯ ಅಕ್ಕನಾಗಿರುವ ಪಾರು, ರಿಯಲ್ ಜೀವನದಲ್ಲೂ ವಿಶೇಷ ಚೇತನ ತಮ್ಮನನ್ನು ಅಮ್ಮನಂತೆ ನೋಡಿಕೊಳ್ಳುತ್ತಿದ್ದಾರೆ.

ಪಾರು,ಗಣಿ,ಜನನಿ

ಪಾರು,ಗಣಿ,ಜನನಿ

  • Share this:
    ಜೀ ಕನ್ನಡದಲ್ಲಿ (Zee Kannada) ಸಂಜೆ 6.30ಕ್ಕೆ ಪ್ರಸಾರವಾಗುತ್ತಿರುವ ಪಾರು (Paaru) ಸೀರಿಯಲ್ (Serial) ಹಲವಾರು ಜನರ ಮನಸ್ಸು ಗೆದ್ದಿದೆ. ದಿನಕ್ಕೊಂದು ತಿರುವಿನೊಂದಿಗೆ ಅಭಿಮಾನಿಗಳನ್ನು (Fans) ಹಿಡಿದಿಟ್ಟುಕೊಳ್ಳುವಲ್ಲಿ ಯಶಸ್ವಿಯಾಗುತ್ತಿದೆ. ಅಖಿಲಾಂಡೇಶ್ವರಿ ಪಾತ್ರದಲ್ಲಿರುವ ವಿನಯ್ ಪ್ರಸಾದ್ ಅಭಿನಯ ನೋಡೋದೇ ಒಂದು ಚೆಂದ. ಅರಸನಕೋಟೆಯನ್ನು ಹೇಗೆ ಬೆಳೆಸುತ್ತಾ, ತನ್ನ ಮಕ್ಕಳನ್ನು ಬೆಳೆಸುತ್ತ, ತನ್ನ ಕೋಟೆಯನ್ನು ಭದ್ರಮಾಡಿಕೊಳ್ಳುತ್ತಾ ಮುನ್ನೆಡೆಯುತ್ತಿದೆ. ತನ್ನ ಪಾತ್ರಕ್ಕೆ ಹೊಂದುವಂತೆ ಮೇಕಪ್ ಹಾಕಿಕೊಂಡು, ಗತ್ತು, ಗಾಂಭಿರ್ಯದಿಂದ ಸಂಸಾರದ, ಜೊತೆ ಕಂಪನಿಯನ್ನು ನಡೆಸುಕೊಂಡು ಹೋಗುತ್ತಿದ್ದಾಳೆ ಅಖಿಲಾ. ಇನ್ನು ಪಾರು ಧಾರಾವಾಹಿಯಲ್ಲಿ ಪಾರು ಆಗಿ ನಟಿಸುತ್ತಿರುವ ಮೋಕ್ಷಿತಾ ರಿಯಲ್ ಲೈಫ್ ಬಗ್ಗೆ ನಿಮಗೆ ಗೊತ್ತಾ? ಧಾರಾವಾಹಿಯಲ್ಲಿ ತಮ್ಮ ಗಣಿಗೆ ಪ್ರೀತಿಯ ಅಕ್ಕನಾಗಿರುವ ಪಾರು, ರಿಯಲ್ (Real) ಜೀವನದಲ್ಲೂ ವಿಶೇಷ ಚೇತನ ತಮ್ಮನನ್ನು (Brother) ಅಮ್ಮನಂತೆ ನೋಡಿಕೊಳ್ಳುತ್ತಿದ್ದಾರೆ.

    ಪಾರುಗೆ ವಿಶೇಷ ಚೇತನ ತಮ್ಮ
    ಆನ್ ಸ್ಕ್ರೀನ್‍ನಲ್ಲಿ ನಗುತ್ತಾ ನಟಿಸುವವರ ನಿಜ ಜೀವನದಲ್ಲಿ ಒಂದಲ್ಲ ಒಂದು ಕಷ್ಟ ಇರುತ್ತೆ. ಎಲ್ಲವನ್ನೂ ಮರೆತು ನಗುತ್ತಾ ನಟನೆ ಮಾಡುತ್ತಾ ಇರುತ್ತಾರೆ. ಪಾರು ಅಂದ್ರೆ ಮೋಕ್ಷಿತಾ ಅವರ ಜೀವನದಲ್ಲೂ ಹಾಗೆ, ಅವರ ತಮ್ಮ ವಿಕಲ ಚೇತನ. ಪಾರುನೇ ಅವನನ್ನ ಸ್ವಂತ ಮಗನಂತೆ ನೋಡಿಕೊಳ್ಳುತ್ತಿದ್ದಾರೆ. ಯಾವುದೇ ಮುಜುಗರ ಪಟ್ಟು ಕೊಳ್ಳದೇ, ಅವರ ಲಾಲಾನೆ, ಪಾಲನೆ ಮಾಡುತ್ತಾರೆ.

    ರೀಲ್ ನಲ್ಲಿ ಗಣಿ ಪಾರು ತಮ್ಮ
    ಇನ್ನು ಧಾರಾವಾಹಿಯಲ್ಲಿ ಡ್ರೈವರ್ ಹನುಮಂತು ಮಗಳಾಗಿರುವ ಪಾರುಗೆ, ಗಣಿ ಎಂಬ ತಮ್ಮನಿದ್ದಾನೆ. ಪಾರುಗೆ ಗಣಿ ಅಂದ್ರೆ ತುಂಬಾ ಇಷ್ಟ. ಧಾರಾವಾಹಿಯಲ್ಲಿ ಇವರಿಗೆ ತಾಯಿ ಇಲ್ಲದ ಕಾರಣ, ಗಣಿಯನ್ನು ಪಾರು ಅಮ್ಮನಂತೆ ನೋಡಿಕೊಳ್ಳುತ್ತಿದ್ದಾಳೆ. ಗಣಿಗೆ ಅಕ್ಕ ಪಾರು ಅಂದ್ರೆ ಪ್ರಾಣ. ಅಲ್ಲದೇ ರಿಯಲ್ ಲೈಫ್ ನಲ್ಲೂ ಗಣಿ ಮೋಕ್ಷಿತ ಅವರಿಗೆ ತಮ್ಮನಂತೆ ಆಗಿ ಬಿಟ್ಟಿದ್ದಾನೆ.

    ಇದನ್ನೂ ಓದಿ: Jothe Jotheyali: ರಾಜನಂದಿನಿ ಸಾವನ್ನಪ್ಪಿದ ಜಾಗಕ್ಕೆ ಆರ್ಯವರ್ಧನನ್ನು ಕರೆಸುತ್ತಿದ್ದಾಳೆ ಅನು! ಬಯಲಾಗುತ್ತಾ ಆರ್ಯನ ನಿಜ ಬಣ್ಣ?

    ಇಬ್ಬರು ಸಹೋದರರಿಗೆ ರಾಖಿ ಕಟ್ಟಿದ ಪಾರು
    ಪಾರು ಈ ಬಾರಿಯ ರಕ್ಷಾ ಬಂಧನವನ್ನು ಇಬ್ಬರು ತಮ್ಮಂದಿರೊಂದಿಗೆ ಆಚರಿಸಿದ್ದಾರೆ. ಒಂದು ಅವರ ನಿಜವಾದ ತಮ್ಮ. ಇನ್ನೊಂದು ಪಾರು ಧಾರಾವಹಿ ಕೊಟ್ಟ ತಮ್ಮ. ಇಬ್ಬರಿಗೂ ರಾಖಿಯನ್ನು ಕಟ್ಟಿ, ಸಿಹಿ ತಿನ್ನಿಸಿ ಸಂಭ್ರಮ ಪಟ್ಟಿದ್ದಾರೆ. ಆ ವಿಡಿಯೋವನ್ನು ತಮ್ಮ ಇನ್‍ಸ್ಟಾಗ್ರಾಂ ನಲ್ಲಿ ಹಂಚಿಕೊಂಡಿದ್ದಾರೆ. ಎಲ್ಲರಿಗೂ ರಕ್ಷಾ ಬಂಧನದ ಶುಭಾಶಯ ಕೋರಿದ್ದಾರೆ.  ಧಾರಾವಾಹಿಯಲ್ಲಿ ತಮ್ಮ ಗಣಿಗೆ ಪ್ರೀತಿಯ ಅಕ್ಕನಾಗಿರುವ ಪಾರು, ರಿಯಲ್ ಜೀವನದಲ್ಲೂ ವಿಶೇಷ ಚೇತನ ತಮ್ಮನನ್ನು ಅಮ್ಮನಂತೆ ನೋಡಿಕೊಳ್ಳುತ್ತಿದ್ದಾರೆ.




    ಮೋಕ್ಷಿತ ಅವರಿಗೆ ತಮ್ಮ ಅಂದ್ರೆ ತುಂಬಾ ಇಷ್ಟ
    ಪಾರು ಅಂದ್ರೆ ನಟಿ ಮೋಕ್ಷಿತ ಅವರಿಗೆ ತಮ್ಮ ಅಂದ್ರೆ ತುಂಬಾ ಇಷ್ಟ. ವಿಶೇಷ ಚೇತನ ತಮ್ಮನನ್ನು ತುಂಬಾ ಮುದ್ದಾಗಿ ನೋಡಿಕೊಳ್ಳುತ್ತಿದ್ದಾರೆ. ತಾಯಿ ಸ್ಥಾನದಲ್ಲಿ ನಿಂತ ಎಲ್ಲ ಕೆಲಸ ಅವರೇ ಮಾಡುತ್ತಾರೆ. ಈ ಹಿಂದೆಯೂ ಜೀ ಕನ್ನಡದ, ಜೀ ಕುಟುಂಬ ಅವಾರ್ಡ್‍ನಲ್ಲಿ, ತನ್ನ ತಮ್ಮನ ಬಗ್ಗೆ ಹೇಳಿಕೊಂಡು ಕಣ್ಣೀರು ಹಾಕಿದ್ರು. ವಾಹಿನಿಯವರು ಅವರನ ರಿಯಲ್ ತಮ್ಮನನ್ನು ಕರೆಸಿದ್ದರು.

    ಇದನ್ನೂ ಓದಿ: Gaalipata 2: ಭಟ್ರು ಜೊತೆ ಗಣಿ ಬಿಟ್ಟ ಗಾಳಿಪಟ-2 ಸೂಪರ್​ ಹಿಟ್​; ಮೊದಲ ದಿನವೇ ಬಾಕ್ಸ್​ ಆಫೀಸ್​ನಲ್ಲಿ ಭರ್ಜರಿ ಕಲೆಕ್ಷನ್​

    ಪಾರು ಧಾರಾವಾಹಿಯಲ್ಲಿ ಮುಗ್ಧೆ ಪಾತ್ರದಲ್ಲಿ ನಟಿಸುತ್ತಿರುವ ಮೋಕ್ಷಿತಾ ಅವರು, ನಿಜ ಜೀವನದಲ್ಲೂ ಅಷ್ಟೇ ಮುಗ್ಧರು. ಅವರ ಜೀವನ ಚೆನ್ನಾಗಿರಲ್ಲಿ. ಅವರ ಅಕ್ಕ-ತಮ್ಮನ ಬಾಂದವ್ಯ ಇದೇ ರೀತಿ ಮುಂದುವರಿಯಲಿ. ಈಗಾಗಲೇ ಪಾರು ಧಾರಾವಾಹಿ ಮೂಲಕ ಕರುನಾಡ ಜನರ ಮನಸ್ಸುನ್ನು ಗೆದ್ದಿದ್ದೀರಿ. ಇನ್ನೂ ಹೆಚ್ಚು, ಹೆಚ್ಚು ಅವಕಾಶಗಳು ನಿಮಗೆ ದೊರೆಯಲಿ. ಆಲ್ ದಿ ಬೆಸ್ಟ್.
    Published by:Savitha Savitha
    First published: