Paaru Serial: ಧಾಮಿನಿಯ ಕುತಂತ್ರಕ್ಕೆ ಬಲಿಯಾಗುತ್ತಾ ಜನನಿ-ಪಾರು ಸಂಬಂಧ! ಪಾರು ಧಾರಾವಾಹಿಯಲ್ಲಿ ಇದೇನಿದು ಟ್ವಿಸ್ಟ್

ತನ್ನ ಪ್ರತಿ ಹೆಜ್ಜೆಯಲ್ಲೂ ಜೊತೆಗಿದ್ದ ಪತಿ ಆದಿ ಮೈದುನ ಪ್ರೀತು ಹಾಗೂ ತಂಗಿ ಜನನಿ ಹಾಗೂ ಗೆಲುವಿಗೆ ಕಾರಣರಾದ ಎಲ್ಲರ ಮೇಲು ಪಾರುಗೆ ಅಕ್ಕರೆಯಿದೆ.

ತನ್ನ ಪ್ರತಿ ಹೆಜ್ಜೆಯಲ್ಲೂ ಜೊತೆಗಿದ್ದ ಪತಿ ಆದಿ ಮೈದುನ ಪ್ರೀತು ಹಾಗೂ ತಂಗಿ ಜನನಿ ಹಾಗೂ ಗೆಲುವಿಗೆ ಕಾರಣರಾದ ಎಲ್ಲರ ಮೇಲು ಪಾರುಗೆ ಅಕ್ಕರೆಯಿದೆ.

ತನ್ನ ಪ್ರತಿ ಹೆಜ್ಜೆಯಲ್ಲೂ ಜೊತೆಗಿದ್ದ ಪತಿ ಆದಿ ಮೈದುನ ಪ್ರೀತು ಹಾಗೂ ತಂಗಿ ಜನನಿ ಹಾಗೂ ಗೆಲುವಿಗೆ ಕಾರಣರಾದ ಎಲ್ಲರ ಮೇಲು ಪಾರುಗೆ ಅಕ್ಕರೆಯಿದೆ.

 • Share this:
  ಜೀ ಕನ್ನಡ (Zee Kannada) ವಾಹಿನಿಯಲ್ಲಿ ಪ್ರಸಾರಗೊಳ್ಳುತ್ತಿರುವ ಜನಪ್ರಿಯ ಧಾರವಾಹಿಗಳಲ್ಲಿ ಪಾರು (Paaru) ಧಾರಾವಾಹಿ ಕೂಡ ಒಂದು. ಖ್ಯಾತ ಹಿರಿಯ ನಟಿ ವಿನಯಪ್ರಸಾದ್ (Vinaya Prasad) ಅವರಿಂದ ಧಾರಾವಾಹಿಗೆ ಒಂದು ತೂಕ ಹೆಚ್ಚೇ ಜನಪ್ರಿಯತೆ ದೊರೆಯುತ್ತಿದೆ ಎಂದರೆ ತಪ್ಪಾಗಲಾರದು. ಕೊನೆಗೂ ಪಾರು ಅಖಿಲಾಂಡೇಶ್ವರಿಯ ಎಲ್ಲಾ ಪರೀಕ್ಷೆಗಳಲ್ಲೂ ಉತ್ತೀರ್ಣರಳಾಗಿ ಮನೆಯ ಸೊಸೆಯ ಪಟ್ಟವನ್ನು ಪಡೆದುಕೊಂಡಿದ್ದಾಳೆ.  ಎಲ್ಲಾ ಪರೀಕ್ಷೆಗಳನ್ನು ಗೆದ್ದ ಪಾರು ಮನದಲ್ಲಿ ಮನೆ ಮಂದಿಯ ಮೇಲೆಲ್ಲಾ ಕೃತಜ್ಞತೆ ಇದೆ. ತನ್ನ ಪ್ರತಿ ಹೆಜ್ಜೆಯಲ್ಲೂ ಜೊತೆಗಿದ್ದ ಪತಿ ಆದಿ ಮೈದುನ ಪ್ರೀತು ಹಾಗೂ ತಂಗಿ ಜನನಿ (Janani) ಹಾಗೂ ಗೆಲುವಿಗೆ ಕಾರಣರಾದ ಎಲ್ಲರ ಮೇಲು ಪಾರುಗೆ ಅಕ್ಕರೆಯಿದೆ.

  ಪಾರು-ಜನನಿಯ ನಡುವಿನ ಬಾಂಧವ್ಯ ಕೆಡಿಸಲು ಪ್ರಯತ್ನ ಪಡುತ್ತಿದ್ದಾಳೆ ದಾಮಿನಿ

  ಈ ಬಗ್ಗೆ ಸಂತೋಷಪಡುವ ಸಮಯದಲ್ಲೇ ವೀಕ್ಷಕರಿಗೆ ಹೊಸದೊಂದು ಟ್ವಿಸ್ಟ್ ಮೂಲಕ ಪಾರು ಮುಂದೆ ಬಂದಿದೆ. ಪಾರುನ ಗೆಲುವನ್ನು ಸಹಿಸಲಾಗದ ದಾಮಿನಿ ಹೊಸದೊಂದು ಪಿತೂರಿಯೊಂದಿಗೆ ಪಾರು ಮತ್ತು ಜನನಿಯ ನಡುವಿನ ಬಾಂಧವ್ಯವನ್ನು ಹಾಳು ಮಾಡಲು ಪ್ರಯತ್ನ ಪಡುತ್ತಿದ್ದಾಳೆ.

  ಮೊದಲನೇ ಬಾರಿ 300 ಕೋಟಿ ಹೂಡಿಕೆದಾರರನ್ನು ಪಡೆಯಲು ಸೋತ ಪಾರು ನಲ್ಲಿ ಆತ್ಮಸ್ಥೈರ್ಯವನ್ನು ಹೆಚ್ಚಿಸಲು ಜನನಿ ಹಾಗೂ ಪ್ರೀತು ನಾಟಕ ಮಾಡಿ ಹೂಡಿಕೆದಾರರಿಗೆ ನಂಬಿಕೆ ಬರುವಂತಹ ರೀತಿಯಲ್ಲಿ ಮಾತನಾಡುವ ಧೈರ್ಯವನ್ನು ತುಂಬಿಸುವ ಯಶಸ್ವಿಯಾಗಿದ್ದರು.

  ಇದನ್ನೂ ಓದಿ: Ibbani: 'ನನ್ನಮ್ಮ ಸೂಪರ್‌ ಸ್ಟಾರ್' ಖ್ಯಾತಿಯ ಇಬ್ಬನಿಯಿಂದ ಕೂದಲು ದಾನ! ವಯಸ್ಸು ಚಿಕ್ಕದಾದರೂ ಮನಸ್ಸು ದೊಡ್ಡದು

  ತನ್ನ ಗೆಲುವಿಗೆ ಅಖಿಲ ಅಮ್ಮನೇ ಕಾರಣ ಎಂದು ಹೇಳಿದ ಪಾರು

  ಆದರೇ ಅಖಿಲಾಂಡೇಶ್ವರಿ ಎಲ್ಲಾ ಟಾಸ್ಕ್ ನಲ್ಲಿ ಗೆದ್ದ ಪಾರು ಕೊನೆಗೆ ತನ್ನ ಗೆಲುವಿಗೆ ಅಖಿಲ ಅಮ್ಮನೇ ಕಾರಣ ಎಂದು ಹೇಳಿ ಬಿಡುತ್ತಾಳೆ. ಅದು ಕೇವಲ ಅಖಿಲ ಮನೆ ಮೇಲಿದ್ದ ಅಭಿಮಾನದ ಮೇಲೆ ಹೊರತು ಬೇರಾವ ಉದ್ದೇಶದಿಂದ ಅಲ್ಲ. ಜನನಿ ಮನದಲ್ಲಿ ಇಲ್ಲ ಸಲ್ಲದ ವಿಚಾರಗಳನ್ನು ದಾಮಿನಿ ತುಂಬಿಸಿ ಬಿಟ್ಟಿದ್ದಾಳೆ. ಗೊಂದಲದಲ್ಲಿ ಜನನಿ ನಡೆಯುತ್ತಿರುವ ಎಲ್ಲಾ ವಿಚಾರಗಳನ್ನೂ ಅವಳ ವಿರುದ್ಧವಾಗಿ ನಡೆಯುತ್ತಿದೆಯೆಂದು ತಿಳಿಯುತ್ತಿದ್ದಾಳೆ.

  ಸಂದರ್ಭವನ್ನು ಬೇಳೆ ಬೇಯಿಸಿಕೊಳ್ಳಲು ಉಪಯೋಗಿಸಿಕೊಳ್ಳುತ್ತಿದ್ದಾಳೆ  ದಾಮಿನಿ 

  ತನ್ನ ಗೆಲುವನ್ನು ಸಿಹಿ ನೀಡಿ ಸಂಭ್ರಮಿಸುತ್ತಿರುವ ಪಾರು ಮನೆಯ ಕೆಲಸದವರಿಗೆ ಹಿಡಿದು ಪ್ರತಿಯೊಬ್ಬರಿಗೂ ಬಾಯಿಗೆ ಸಿಹಿತಿಂಡಿ ನೀಡಿ ಸಂತಸಪಟ್ಟಿದ್ದಾಳೆ. ಆದರೆ ಇದೇ ಸಂದರ್ಭದಲ್ಲಿ ಪಾರು ತಂದೆ ಹನುಮಂತು ಮಗ ಗಣಿ ಪರೀಕ್ಷೆಯಲ್ಲಿ ತೇರ್ಗಡೆ ಹೊಂದಿದ್ದಾನೆ ಎಂದು ಹೇಳಲು ಅಖಿಲಾಂಡೇಶ್ವರಿಯ ಅರಮನೆಗೆ ಬರುತ್ತಾನೆ.

  ತಂದೆಯ ಆಗಮನದಿಂದ ಸಂತಸಗೊಂಡು ಪಾರು ತನ್ನ ಕೈಯಲ್ಲಿದ್ದ ತಿಂಡಿ ತಟ್ಟೆಯನ್ನು ಜನನಿಯ ಕೈಯಲಿಟ್ಟು ಅಲ್ಲಿಂದ ತಂದೆಯ ಹತ್ತಿರ ಹೋಗುತ್ತಾಳೆ. ಈ ಸಂದರ್ಭವನ್ನು ದಾಮಿನಿ ತನ್ನ ಬೇಳೆ ಬೇಯಿಸಿಕೊಳ್ಳಲು ಉಪಯೋಗಿಸಿಕೊಳ್ಳುತ್ತಿದ್ದಾಳೆ. ಪಾರು ಬಗ್ಗೆ ಇಲ್ಲಸಲ್ಲದ ವಿಚಾರಗಳನ್ನು ಜನನಿಯ ತಲೆಯಲ್ಲಿ ತುಂಬಿಸಿ ಬಿಡುತ್ತಾಳೆ.

  ಇದನ್ನೂ ಓದಿ: Bettada Hoo Serial: ಹೂವಿಯ ಪ್ರಾಮಾಣಿಕತೆಗೆ ಸೋತ ಮಾಲಿನಿ! ಬೆಟ್ಟದ ಹೂ ಧಾರಾವಾಹಿಯಲ್ಲಿ ಟ್ವಿಸ್ಟ್

  ಇನ್ನು ಮುಂದೆ ನಿನಗೆ ಈ ಮನೆಯಲ್ಲಿ ಯಾವುದೇ ಸ್ಥಾನ ಇರುವುದಿಲ್ಲ. ಪಾರು ಅಧಿಪತ್ಯ ಬಂದರೆ ನಿನ್ನನ್ನು ಕೇಳುವವರೇ ಇರುವುದಿಲ್ಲ ಎಂದೆಲ್ಲಾ ಮುಗ್ದೆ ಜನನಿಯ ಮನದಲ್ಲಿ ದಾಮಿನಿ ತುಂಬಿಸುತ್ತಿದ್ದಾಳೆ.

  ಆದರೆ ಪಾರು ತನ್ನ ಸಂತೋಷವನ್ನು ಇಮ್ಮಡಿಗೊಳಿಸಿದ ಜನನಿಯ ಬಳಿ ಬಂದು ಧನ್ಯವಾದ ತಿಳಿಸಿ ಗಣಿ ಪಾಸಾಗಲು ನೀವೇ ಕಾರಣ ಎಂದು ಹೇಳಿ ಎರಡೆರಡು ಬಾರಿ ಬಾಯಿಗೆ ಸಿಹಿ ತಿನ್ನಿಸುತ್ತಾಳೆ. ಜನನಿ ಮತ್ತು ಪಾರು ಮಧ್ಯದಲ್ಲಿ ಬಿನ್ನಾಭಿಪ್ರಾಯ ತಂದಿಡುವುದರಲ್ಲಿ ಯಶಸ್ವಿಯಾಗುತ್ತಾಳ ದಾಮಿನಿ ಎನ್ನುವುದನ್ನು ಮುಂದಿನ ಸಂಚಿಕೆಗಳಲ್ಲಿ ತಿಳಿಯಬೇಕಷ್ಟೆ. ಗೆಲುವನ್ನು ಆಚರಿಸುತ್ತಿರುವ ಪಾರು ಜೀವನದಲ್ಲಿ ಇನ್ನೇನು ಹೊಸ ತಿರುವು ಬರುತ್ತದೆ ಎನ್ನುವುದನ್ನು ಕಾದುನೋಡಬೇಕಿದೆ.
  Published by:Swathi Nayak
  First published: