Paaru: ಅಖಿಲಾಂಡೇಶ್ವರಿ ಬಳಿ ರಾಖಿ ಕಟ್ಟಿಸಿಕೊಳ್ಳಲು ಬಂದ ವೀರಣ್ಣ; ಅರಸನಕೋಟೆಯಲ್ಲಿ ಸಂಭ್ರಮವೋ, ಸಂಭ್ರಮ

ಅಖಿಲಾ ಮತ್ತು ವೀರಣ್ಣ ನಡುವೆ ಗಲಾಟೆಗಳಾಗಿ ಸುಮಾರ ವರ್ಷ ಮಾತು ಬಿಟ್ಟಿರುತ್ತಾರೆ. ಆದ್ರೆ ವೀರಣ್ಣನ ಮಗಳು ಜನನಿ, ಪ್ರೀತುನನ್ನು ಮದುವೆ ಆದ ಮೇಲೆ ಎರಡು ಸಂಸಾರದ ಮಧ್ಯೆ ಇದ್ದ ಬಿರುಕು ಸರಿದು ಪ್ರೀತಿ ಮೂಡಿರುತ್ತೆ. ಆದ ಕಾರಣ ಅಖಿಲಾ ಎಷ್ಟೋ ವರ್ಷಗಳಿಂದ ವೀರಣ್ಣನಿಗೆ ರಾಖಿ ಕಟ್ಟಿರುವುದಿಲ್ಲ. ಅದಕ್ಕೆ ಈ ಬಾರಿ ವೀರಣ್ಣನೇ ರಾಖಿ ಕಟ್ಟಿಸಿಕೊಳ್ಳಲು ಬಂದಿದ್ದಾನೆ.

ವೀರಣ್ಣ-ಅಖಿಲಾಂಡೇಶ್ವರಿ

ವೀರಣ್ಣ-ಅಖಿಲಾಂಡೇಶ್ವರಿ

  • Share this:
    ಪಾರು (Paaru) ಧಾರಾವಾಹಿ (Serial), ಜೀ ಕನ್ನಡದಲ್ಲಿ (Zee Kannada) ಪ್ರಸಾರವಾಗುವ ಜನಪ್ರಿಯ ಧಾರಾವಾಹಿಗಳಲ್ಲಿ ಒಂದು. ಸೋಮವಾರದಿಂದ ಶುಕ್ರವಾರದವರೆಗೆ ಸಂಜೆ 6.30ಕ್ಕೆ ಪ್ರಸಾರವಾಗುತ್ತೆ. ಕೆಲ ದಿನಗಳಿಂದ ಅರಸನಕೋಟೆಯಲ್ಲಿ ಏನೇನೂ ಘಟನೆಗಳು ನಡೆಯುತ್ತಿವೆ. ಎಲ್ಲರೂ ಬೇಸರದಿಂದ ಇದ್ದಾರೆ. ಈಗ ಅಖಿಲಾ ಕಿರಿಯ ಪುತ್ರ ರಾಸಲೀಲೆ ಪ್ರಕರಣದಲ್ಲಿ ಸಿಲುಕಿಕೊಂಡು, ಮನೆ ಮರ್ಯಾದೆ ಹೋಗುತ್ತೆ ಅಂತ ಏನೂ ಮಾತನಾಡದೇ ಮೌನವಾಗಿದ್ದಾನೆ. ಪ್ರೀತು ಮೌನವಾಗಿರುವುದನ್ನು ಕಂಡ ಮನೆಯವರೆಲ್ಲಾ ಗಾಬರಿಯಾಗಿದ್ದಾರೆ. ಅವನಿಗೆ ಏನಾಯ್ತು ಎಂದು ತಿಳಿದುಕೊಳ್ಳಲು ಆಗದೇ ಒದ್ದಾಡುತ್ತಿದ್ದಾರೆ. ಈ ನಡುವೆ ರಕ್ಷಾ ಬಂಧನ (Raksha Bandana) ಹಬ್ಬ ಬಂದಿದ್ದು, ಮನೆ ಸ್ವಲ್ಪ ಖುಷಿಯಲ್ಲಿದೆ. ಎಷ್ಟೋ ವರ್ಷಗಳ ನಂತರ ಅಖಿಲಾಂಡೇಶ್ವರಿ ಬಳಿ ರಾಖಿ ಕಟ್ಟಿಸಿಕೊಳ್ಳಲು ಊರಿನಿಂದ ವೀರಣ್ಣ (Veranna)ಬಂದಿದ್ದಾನೆ.

    ರಾಖಿ ಹಬ್ಬದ ಸಂಭ್ರಮ

    ಒಡಹುಟ್ಟಿದವರ ನಡುವಿನ ರಕ್ಷಣೆ ಪ್ರೀತಿ ಮತ್ತು ಬಾಂಧವ್ಯವನ್ನು ಬಲಪಡಿಸುವ ಮತ್ತು ಭಾವನಾತ್ಮಕ ಸಂಕೇತವಾಗಿ ಆಚರಿಸುವ ಹಬ್ಬ ರಕ್ಷಾ ಬಂಧನ. ರಕ್ಷಾ ಬಂಧನದ ದಿನ ಸಹೋದರಿಯರು ಸಹೋದರರ ಮಣಿಕಟ್ಟಿಗೆ ರಾಖಿ ಕಟ್ಟುವ ಮೂಲಕ ಪ್ರೀತಿ ಹಂಚುತ್ತಾರೆ. ಇದೇ ವೇಳೆ ಸಹೋದರರು ತಮ್ಮ ಸಹೋದರರಿಯರ ರಕ್ಷಣೆಯ ಜವಾಬ್ದಾರಿಯನ್ನು ಪಡೆಯುತ್ತಾರೆ. ಇವತ್ತು ಅರಸನಕೋಟೆಯಲ್ಲೂ ರಕ್ಷಾ ಬಂಧನದ ಸಂಭ್ರಮ ಮನೆ ಮಾಡಿದೆ.

    ಮನೆ ಕೆಲಸದವರಿಗೆ ರಾಖಿ ಕಟ್ಟಿದ ಅಖಿಲಾಂಡೇಶ್ವರಿ

    ಪ್ರತಿ ವರ್ಷ ರಾಖಿ ಹಬ್ಬದ ದಿನ ಅಖಿಲಾಂಡೇಶ್ವರಿ ತಮ್ಮ ಮನೆಯ ಕೆಸದವರಿಗೆಲ್ಲಾ ರಾಖಿ ಕಟ್ಟಿ, ಸಿಹಿ ತಿನ್ನಿಸುತ್ತಾಳೆ. ಜೊತೆಗಿರುವವರು ನಮ್ಮ ಮನೆಯವರ ರೀತಿ, ಅಣ್ಣ ತಮ್ಮಂದಿರು ಇದ್ದಂತೆ ಅನ್ನೋ ಭಾವನೆ ಅಖಿಲಾಂಡೇಶ್ವರಿಯದ್ದು. ಈ ಬಾರಿಯೂ ಮನೆಯಲ್ಲಿ ಎಲ್ಲರಿಗೂ ರಾಖಿ ಕಟ್ಟಿದ್ದಾಳೆ.

    Zee Kannada serial, Kannada serial, Paaru serial today episode, Paaru serial cast, Raksha Bandana episode, ಪಾರು ಧಾರಾವಾಹಿ, ರಾಖಿ ಹಬ್ಬದ ಸಂಭ್ರಮ, ಜೀ ಕನ್ನಡ ಧಾರಾವಾಹಿಗಳು, Kannada news, Karnataka news,
    ಪಾರು ಧಾರಾವಾಹಿ


    ಜೇನು ತುಪ್ಪ ಉಡುಗೊರೆ ನೀಡಿದ ಕೆಲಸದವ

    ಅಖಿಲಾಂಡೇಶ್ವರಿ ರಾಖಿ ಕಟ್ಟಿದ್ದಕ್ಕೆ ಕೆಲಸದವರೊಬ್ಬರು, ಅಖಿಲಾಂಡೇಶ್ವರಿಗೆ ಜೇನುತುಪ್ಪವನ್ನು ಉಡುಗೊರೆಯಾಗಿ ನೀಡಿದ್ದಾರೆ. ಅಖಿಲಾಗೆ ಆಶ್ಚರ್ಯ ಆಗಿದೆ. ಖುಷಿಯೂ ಆಗಿದೆ. ತನಗೆ ಜೇನು ತುಪ್ಪ ಇಷ್ಟ ಎಂದು ಯಾರು ಎಂದು ಕೇಳುತ್ತಾಳೆ. ಆಗ ಆತ ಬಾಗಿಲ ಕಡೆ ಬೆರಳು ಮಾಡಿ ತೋರಿಸುತ್ತಾನೆ. ಆಗಲೇ ವೀರಣ್ಣನ ಎಂಟ್ರಿ ಆಗುತ್ತೆ.

    ಇದನ್ನೂ ಓದಿ: Puttakkana Makkalu: ಬಂಗಾರಮ್ಮನ ಮಗ ಕಂಠಿ ಯಾರೆಂದು ಪೊಲೀಸ್‍ಗೆ ಗೊತ್ತಾಯ್ತಾ? ಕಣ್ಣ ಮುಚ್ಚಾಲೆ ಮುಕ್ತಾಯ

    ಅಖಿಲಾಂಡೇಶ್ವರಿ ಬಳಿ ರಾಖಿ ಕಟ್ಟಿಸಿಕೊಳ್ಳಲು ಬಂದ ವೀರಣ್ಣ

    ಅಖಿಲಾ ಮತ್ತು ವೀರಣ್ಣ ನಡುವೆ ಗಲಾಟೆಗಳಾಗಿ ಸುಮಾರ ವರ್ಷ ಮಾತು ಬಿಟ್ಟಿರುತ್ತಾರೆ. ಆದ್ರೆ ವೀರಣ್ಣನ ಮಗಳು ಜನನಿ, ಪ್ರೀತುನನ್ನು ಮದುವೆ ಆದ ಮೇಲೆ ಎರಡು ಸಂಸಾರದ ಮಧ್ಯೆ ಇದ್ದ ಬಿರುಕು ಸರಿದು ಪ್ರೀತಿ ಮೂಡಿರುತ್ತೆ. ಆದ ಕಾರಣ ಅಖಿಲಾ ಎಷ್ಟೋ ವರ್ಷಗಳಿಂದ ವೀರಣ್ಣನಿಗೆ ರಾಖಿ ಕಟ್ಟಿರುವುದಿಲ್ಲ. ಅದಕ್ಕೆ ಈ ಬಾರಿ ವೀರಣ್ಣನೇ ರಾಖಿ ಕಟ್ಟಿಸಿಕೊಳ್ಳಲು ಬಂದಿದ್ದಾನೆ.

    ಅಣ್ಣನನ್ನು ಕಂಡು ಖುಷಿಯಾದ ಅಖಿಲಾ

    ಅಖಿಲಾಂಡೇಶ್ವರಿಗೆ ತನ್ನ ಮನೆಯಲ್ಲಿ ವೀರಣ್ಣನನ್ನು ಕಂಡು ತುಂಬಾ ಖುಷಿಯಾಗಿದೆ. ಎಷ್ಟೋ ವರ್ಷಗಳು ಆದ ಮೇಲೆ ರಾಖಿ ಕಟ್ಟೋ ಭಾಗ್ಯ ಸಿಕ್ತು ಎಂದು ಸಂತೋಷದಲ್ಲಿದ್ದಾಳೆ. ಇವತ್ತಿನ ಸಂಚಿಕೆಯಲ್ಲಿ ತನ್ನ ಅಣ್ಣನಿಗೆ ರಾಖಿ ಕಟ್ಟಲಿದ್ದಾಳೆ.

    ಇದನ್ನೂ ಓದಿ: Gattimela: ಧ್ರುವನ ಕಿಡ್ನಾಪ್​ ಮಾಡಿ ಮದುವೆಯಾಗ್ತಾಳಾ ಅದಿತಿ? ಅತ್ತಿಗೆ ಸಹಾಯ ಸಿಗುತ್ತಾ?

    ಪ್ರೀತು ರಾಣ ಬೀಸಿದ ರಾಸಲೀಲೆಯಲ್ಲಿ ಸಿಲುಕಿ ಒದ್ದಾಡುತ್ತಿದ್ದಾನೆ. ಅಮ್ಮ ಮೀಟಿಂಗ್ ಅಟೆಂಡ್ ಮಾಡು ಎಂದು ಪ್ರೀತುಗೆ ಹೇಳುತ್ತಾಲೆ. ಅಷ್ಟರಲ್ಲಿ ರಾಣಾ ಕರೆ ಮಾಡಿ ನೀನು ಯಾವುದೇ ಮೀಟಿಂಗ್ ಗೆ ಹೋಗುವಂತಿಲ್ಲ.

    ಮನೆ ಬಿಟ್ಟು ಎಲ್ಲೂ ಹೋಗ ಕೂಡದು. ಹೋದ್ರೆ ನಿನ್ನ ವಿಡಿಯೋ ಲೀಕ್ ಮಾಡ್ತೀನಿ ಅಂತ ಭಯಪಡಿಸುತ್ತಿದ್ದಾನೆ. ಏನೆನೋ ತೊಂದರೆಗಳನ್ನು ಅನುಭವಿಸುತ್ತಿದ್ದ ಕುಟುಂಬದಲ್ಲಿ ರಕ್ಷಾ ಬಂಧನ ಹಬ್ಬ ಸಂತೋಷವನ್ನು ತಂದಿದೆ. ಈ ಎಲ್ಲ ಸಡಗರವನ್ನು ನೀವು ಕಣ್ತುಂಬಿಕೊಳ್ಳಬೇಕು ಅಂದ್ರೆ ಇವತ್ತಿನ ಪಾರು ಧಾರಾವಾಹಿ ಸಂಚಿಕೆ ನೋಡಬೇಕು.
    Published by:Savitha Savitha
    First published: