ಜೀ ಕನ್ನಡದಲ್ಲಿ (Zee Kannada) ಸಂಜೆ 6.30ಕ್ಕೆ ಪ್ರಸಾರವಾಗುತ್ತಿರುವ ಪಾರು (Paaru) ಸೀರಿಯಲ್ (Serial) ಹಲವಾರು ಜನರ ಮನಸ್ಸು ಗೆದ್ದಿದೆ. ದಿನಕ್ಕೊಂದು ತಿರುವಿನೊಂದಿಗೆ ಅಭಿಮಾನಿಗಳನ್ನು ಹಿಡಿದಿಟ್ಟುಕೊಳ್ಳುವಲ್ಲಿ ಯಶಸ್ವಿಯಾಗುತ್ತಿದೆ. ಅಖಿಲಾಂಡೇಶ್ವರಿ ಪಾತ್ರದಲ್ಲಿರುವ ವಿನಯ್ ಪ್ರಸಾದ್ ಅಭಿನಯ ನೋಡೋದೇ ಒಂದು ಚೆಂದ. ಅರಸನ ಕೋಟೆಯನ್ನು ಬೆಳೆಸುತ್ತಾ, ತನ್ನ ಮಕ್ಕಳನ್ನು ಬೆಳೆಸುತ್ತ, ತನ್ನ ಕೋಟೆಯನ್ನು ಭದ್ರಮಾಡಿಕೊಳ್ಳುತ್ತಾ ಮುನ್ನೆಡೆಯುತ್ತಿದ್ದಾರೆ. ತನ್ನ ಪಾತ್ರಕ್ಕೆ ಹೊಂದುವಂತೆ ಮೇಕಪ್ ಹಾಕಿಕೊಂಡು, ಗತ್ತು, ಗಾಂಭಿರ್ಯದಿಂದ ಸಂಸಾರದ, ಜೊತೆ ಕಂಪನಿಯನ್ನು ನಡೆಸುಕೊಂಡು ಹೋಗುತ್ತಿದ್ದಾಳೆ. ಆದ್ರೆ ಈಗ ಈ ಸುಂದರ ಸಂಸಾರದಲ್ಲಿ ಬಿರುಕು ಮೂಡಿದೆ. ಆದಿತ್ಯ ಆಸ್ತಿಯಲ್ಲಿ ಪಾಲು ಕೇಳಿದ್ದಾನೆ. ಎಲ್ಲರೂ ಬೇಜಾರು ಮಾಡಿಕೊಂಡಿದ್ದಾರೆ. ಪಾರು ತಾಯಿ (Mother) ಆಗುತ್ತಿದ್ದು, ಈ ಸುದ್ದಿ ಮತ್ತೆ ಎಲ್ಲರನ್ನೂ ಒಗ್ಗೂಡಿಸುತ್ತಾ ನೋಡಬೇಕು.
ಅರುಂಧತಿ ಬಲೆಯಲ್ಲಿ ಪ್ರೀತು
ಮೊನಿಕಾ ಎಂಬುವವಳು ಪ್ರೀತುವಿನ ಸ್ನೇಹಿತೆ. ಪ್ರೀತು ಜೊತೆ ಒಳ್ಳೆಯವಳಂತೆ ನಟಿಸಿ, ಅವನಿಗೆ ಕಂಠ ಪೂರ್ತಿ ಕುಡಿಸಿ ಜೊತೆಗಿರುವಂತೆ ವಿಡಿಯೋ ಮಾಡಿಕೊಂಡಿದ್ದಾಳೆ. ಅದನ್ನು ಮಾಡಿಸಿರೋದ ಅಖಿಲಾಂಡೇಶ್ವರಿ ಶತ್ರು ಅರುಂಧತಿ. ಆ ವಿಡಿಯೋ ಮುಂದಿಟ್ಟುಕೊಂಡು ಪ್ರೀತುವನ್ನು ಆಟ ಆಡಿಸುತ್ತಿದ್ದಾರೆ. ಪ್ರೀತು ಅರುಂಧತಿ ಹೇಳಿದಂತೆ ಕೇಳುತ್ತಿದ್ದಾನೆ.
ಪ್ರೀತು ಅರುಂಧತಿ ಮಾತು ಕೇಳುವ ಅನಿವಾರ್ಯದಲ್ಲಿ ಇದ್ದಾನೆ. ಅದಕ್ಕೆ ಆಸ್ತಿಯಲ್ಲಿ ಪಾಲು ಕೇಳು ನಿಮ್ಮ ಅಮ್ಮನ ಬಳಿ ಎಂದು ಹೇಳಿದ್ದಾಳೆ. ಅದಕ್ಕೆ ಪ್ರೀತು ಅಮ್ಮನ ಬಳಿ ಆಸ್ತಿ ಕೇಳಲು ರೆಡಿಯಾಗಿದ್ದ.
ಆಸ್ತಿಯಲ್ಲಿ ಪಾಲು ಕೇಳಿರುವ ಆದಿತ್ಯ
ಪ್ರೀತು ಅಮ್ಮನ ಬಳಿ ಆಸ್ತಿಯಲ್ಲಿ ಪಾಲು ಕೇಳಿ ಬಿಡ್ತಾನೆ. ಮತ್ತೆ ಅವನು ಅಮ್ಮನ ದೃಷ್ಟಿಯಲ್ಲಿ ಕೆಟ್ಟ ಮಗ ಆಗ್ತಾನೆ ಎಂದು, ಪ್ರೀತು ಕೇಳೋಕು ಮೊದಲೇ ಆದಿತ್ಯ ನಮ್ಮ ಮನೆಯಲ್ಲಿ ಎಲ್ಲವೂ ಸರಿ ಇಲ್ಲ. ನನಗೆ ಆಸ್ತಿಯಲ್ಲಿ ಪಾಲು ಬೇಕೇ ಬೇಕು ಎಂದು ಹಠ ಹಿಡಿಸಿದ್ದಾನೆ. ಅದಕ್ಕೆ ಪಾರ್ವತಿಯೂ ಸಾಥ್ ನೀಡಿದ್ದಾಳೆ.
ಬೇರೆ ಅಡುಗೆ ಮಾಡಿದ ಪಾರು
ಅಖಿಲಾಂಡೇಶ್ವರಿ ದೃಷ್ಟಿಯಲ್ಲಿ ತಾವು ಕೆಟ್ಟವರಂತೆ ಕಾಣಬೇಕು ಎಂದು, ಪಾರ್ವತಿ ಮನೆಯಲ್ಲಿ ಬೇರೆ ಅಡುಗೆ ಮಾಡಿದ್ದಾಳೆ. ಅದನ್ನು ಇಬ್ಬರೇ ಕೂತುಕೊಂಡು ಊಟ ಮಾಡಿದ್ದಾರೆ. ಅದನ್ನು ನೋಡಿ ಅಖಿಲಾಂಡೇಶ್ವರಿಗೆ ಇನ್ನಷ್ಟು ಕೋಪ ಹೆಚ್ಚಾಗಿದೆ. ನಾಳೆಯೇ ನಿಮ್ಮ ಪಾಲಿಗೆ ಸಿಗಬೇಕಾದ ಆಸ್ತಿ ಸಿಗಲಿದೆ ಎಂದು ಹೇಳಿದ್ದಾಳೆ.
ತಾಯಿ ಆಗುತ್ತಿರುವ ಪಾರು
ಪಾರು ತಲೆ ಸುತ್ತಿ ಬಿದ್ದಿರುತ್ತಾಳೆ. ಆಗ ಪಾರು ತಾಯಿ ಎಂದು ಗೊತ್ತಾಗಿದೆ. ಮನೆ ಕೆಲಸದಾಕೆ ಸಾವಿತ್ರಿ ಪಾರ್ವತಿ ಬಾಯಿಗೆ ಸಕ್ಕರೆ ಹಾಕಿ, ನೀನು ತಾಯಿ ಆಗ್ತಾ ಇದ್ದೀಯಾ. ಅರಸನ ಕೋಟೆಗೆ ಮರಿ ರಾಜಕುಮಾರ ಬರ್ತಾನೆ ಎಂದು ಪಾರು ಖುಷಿಯಾಗಿದ್ದಾಳೆ. ಆಕೆ ಸಾವಿತ್ರಿಯನ್ನು ತಬ್ಬಿಕೊಂಡು ಕಣ್ಣೀರು ಹಾಕಿದ್ದಾಳೆ.
ಮುರಿದ ಮನಸ್ಸುಗಳನ್ನು ಒಗ್ಗೂಡಿಸುತ್ತಾ?
ಪಾರು ತಾಯಿ ಆಗ್ತಿರುವ ವಿಚಾರ ಮನೆಯವರಿಗೆ ಗೊತ್ತಾದ್ರೆ ಎಲ್ಲರೂ ಖುಷಿ ಆಗ್ತಾರೆ. ಈ ಸುದ್ದಿಯಿಂದ ಮುರಿದ ಮನಸ್ಸುಗಳು ಮತ್ತೆ ಒಗ್ಗೂಡಬಹುದು. ಅರಸನಕೋಟೆಯಲ್ಲಿ ಮತ್ತೆ ಸಂತೋಷ ನೆಲಸಬಹುದು. ಆದ್ರೆ ಪಾರು ಈ ಸುದ್ದಿಯನ್ನು ಮನೆಯವರಿಗೆಲ್ಲಾ ಹೇಳ್ತಾಳಾ? ಇಲ್ವಾ ಗೊತ್ತಿಲ್ಲ.
ಇದನ್ನೂ ಓದಿ: Amulya Gowda: ಥೈಲ್ಯಾಂಡ್ನಲ್ಲಿ ಅಮೂಲ್ಯ ಗೌಡ ಸುತ್ತಾಟ, ನೀವೂ ನೋಡಿ ಬಿಗ್ ಬಾಸ್ ಬೆಡಗಿಯ ಫೋಟೋ
ಅರಸನಕೋಟೆಯಲ್ಲಿ ಸಂಭ್ರಮ ಮನೆ ಮಾಡುತ್ತಾ? ಅಖಿಲಾ ಎಲ್ಲವನ್ನೂ ಮರೆಯುತ್ತಾಳಾ? ಪಾರು ಈ ಸುದ್ದಿಯನ್ನು ಮನೆಯವರಿಗೆಲ್ಲಾ ಹೇಳ್ತಾಳಾ? ಮುಂದೇನಾಗುತ್ತೆ ಅಂತ ನೋಡೋಕೆ ಪಾರು ಧಾರಾವಾಹಿ ನೋಡಬೇಕು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ