ಜೀ ಕನ್ನಡದಲ್ಲಿ (Zee Kannada) ಸಂಜೆ 6.30ಕ್ಕೆ ಪ್ರಸಾರವಾಗುತ್ತಿರುವ ಪಾರು (Paaru) ಸೀರಿಯಲ್ (Serial) ಹಲವಾರು ಜನರ ಮನಸ್ಸು ಗೆದ್ದಿದೆ. ದಿನಕ್ಕೊಂದು ತಿರುವಿನೊಂದಿಗೆ ಅಭಿಮಾನಿಗಳನ್ನು ಹಿಡಿದಿಟ್ಟುಕೊಳ್ಳುವಲ್ಲಿ ಯಶಸ್ವಿಯಾಗುತ್ತಿದೆ. ಅಖಿಲಾಂಡೇಶ್ವರಿ ಪಾತ್ರದಲ್ಲಿರುವ ವಿನಯ್ ಪ್ರಸಾದ್ ಅಭಿನಯ ನೋಡೋದೇ ಒಂದು ಚೆಂದ. ಅರಸನ ಕೋಟೆಯನ್ನು ಬೆಳೆಸುತ್ತಾ, ತನ್ನ ಮಕ್ಕಳನ್ನು ಬೆಳೆಸುತ್ತ, ತನ್ನ ಕೋಟೆಯನ್ನು ಭದ್ರಮಾಡಿಕೊಳ್ಳುತ್ತಾ ಮುನ್ನೆಡೆಯುತ್ತಿದ್ದಾರೆ. ತನ್ನ ಪಾತ್ರಕ್ಕೆ ಹೊಂದುವಂತೆ ಮೇಕಪ್ ಹಾಕಿಕೊಂಡು, ಗತ್ತು, ಗಾಂಭಿರ್ಯದಿಂದ ಸಂಸಾರದ, ಜೊತೆ ಕಂಪನಿಯನ್ನು ನಡೆಸುಕೊಂಡು ಹೋಗುತ್ತಿದ್ದಾಳೆ. ಆದ್ರೆ ಈಗ ಈ ಸುಂದರ ಸಂಸಾರದಲ್ಲಿ (Family) ಬಿರುಕು ಮೂಡಿದೆ. ಆದಿತ್ಯ ಜನರ ಮುಂದೆಯೇ ತನಗೆ ಆಸ್ತಿಯಲ್ಲಿ ಪಾಲು ಬೇಕೆಂದು ಕೇಳಿದ್ದಾನೆ.
ಅರುಂಧತಿ ಬಲೆಯಲ್ಲಿ ಪ್ರೀತು
ಮೊನಿಕಾ ಎಂಬುವವಳು ಪ್ರೀತುವಿನ ಸ್ನೇಹಿತೆ. ಪ್ರೀತು ಜೊತೆ ಒಳ್ಳೆಯವಳಂತೆ ನಟಿಸಿ, ಅವನಿಗೆ ಕಂಠ ಪೂರ್ತಿ ಕುಡಿಸಿ ಜೊತೆಗಿರುವಂತೆ ವಿಡಿಯೋ ಮಾಡಿಕೊಂಡಿದ್ದಾಳೆ. ಅದನ್ನು ಮಾಡಿಸಿರೋದ ಅಖಿಲಾಂಡೇಶ್ವರಿ ಶತ್ರು ಅರುಂಧತಿ. ಆ ವಿಡಿಯೋ ಮುಂದಿಟ್ಟುಕೊಂಡು ಪ್ರೀತುವನ್ನು ಆಟ ಆಡಿಸುತ್ತಿದ್ದಾರೆ. ಪ್ರೀತು ಅರುಂಧತಿ ಹೇಳಿದಂತೆ ಕೇಳುತ್ತಿದ್ದಾನೆ.
ಆಸ್ತಿಯಲ್ಲಿ ಪಾಲು ಕೇಳುವಂತೆ ಪ್ರೀತುಗೆ ಒತ್ತಡ
ಪ್ರೀತು ಅರುಂಧತಿ ಮಾತು ಕೇಳುವ ಅನಿವಾರ್ಯದಲ್ಲಿ ಇದ್ದಾನೆ. ಅದಕ್ಕೆ ಆಸ್ತಿಯಲ್ಲಿ ಪಾಲು ಕೇಳು ನಿಮ್ಮ ಅಮ್ಮನ ಬಳಿ ಎಂದು ಹೇಳಿದ್ದಾಳೆ. ಅದಕ್ಕೆ ಪ್ರೀತು ಅಮ್ಮನ ಬಳಿ ಆಸ್ತಿ ಕೇಳಲು ರೆಡಿಯಾಗಿದ್ದಾನೆ. ಈ ವಿಷ್ಯ ಆದಿತ್ಯ ಮತ್ತು ಪಾರುಗೆ ಗೊತ್ತಾಗಿದೆ. ಅದಕ್ಕೆ ಹೇಗಾದ್ರೂ ತಡೆಯಬೇಕು ಎಂದು ಕೊಂಡಿದ್ರು. ಅದು ಆಗಿಲ್ಲ.
ಇದನ್ನೂ ಓದಿ: Geetha Bhat: ಯಕ್ಷಗಾನದಲ್ಲಿ ವಿಷ್ಣು ಅವತಾರ, ಗೀತಾ ಭಟ್ ನಟನೆ ಅದ್ಭುತ!
ತಾನೇ ಆಸ್ತಿ ಕೇಳಲು ಸಜ್ಜು
ಪ್ರೀತು ಅಮ್ಮನ ಬಳಿ ಆಸ್ತಿ ಕೇಳಿ, ಅವರ ದೃಷ್ಟಿಯಲ್ಲಿ ಕೆಟ್ಟವನಾಗಬಾರದು ಎಂದು ತಾನೇ ಆಸ್ತಿ ಕೇಳಲು ಮುಂದಾಗಿದ್ದಾನೆ. ಅದಕ್ಕೆ ಪಾರು ಸಹ ಸಾಥ್ ನೀಡ್ತಾ ಇದ್ದಾಳೆ. ತನ್ನ ತಮ್ಮ ಈಗಾಗಲೇ ಅಮ್ಮನ ದೃಷ್ಟಿಯಲ್ಲಿ ತುಂಬಾ ಕೆಟ್ಟವನಾಗಿದ್ದಾನೆ. ಇನ್ನೂ ಆಗುವುದು ಬೇಡ ಎಂದು ಈ ರೀತಿ ಮಾಡ್ತಾ ಇದ್ದಾನೆ.
ಅಖಿಲಾಂಡೇಶ್ವರಿ ಧರ್ಮಾಧಿಕಾರಿ ಪಟ್ಟಕ್ಕೆ ಕುತ್ತು
ಪ್ರತಿ ವರ್ಷದಂತೆ ದೇವಸ್ಥಾನದಲ್ಲಿ ಅಖಿಲಾಂಡೇಶ್ವರಿಗೆ ಧರ್ಮಾಧಿಕಾರಿ ಪಟ್ಟ ನೀಡಲು ಕಾರ್ಯಕ್ರಮ ಏರ್ಪಡಿಸಿರುತ್ತಾರೆ. ಆ ಕಾರ್ಯಕ್ರಮಕ್ಕೆ ಎಲ್ಲರೂ ಹೋಗಿರುತ್ತಾರೆ. ಆಗ ಅರುಂಧತಿ ಬಂದು ತಡೆಯುತ್ತಾಳೆ. ಪ್ರತಿ ವರ್ಷ ಇವರಿಗೆ ಧರ್ಮಾಧಿಕಾರಿ ಪಟ್ಟ ನೀಡುತ್ತೀರಿ. ಬೇರೆಯವರಿಗೂ ಅವಕಾಶ ಕೊಡಿ ಎಂದು ಕೇಳ್ತಾರೆ. ಅದಕ್ಕೆ ಪೂಜಾರಿಗಳು ಇಲ್ಲಿ ಇರುವ ಯಾರಾದ್ರೂ ಒಬ್ಬರು ಬೇಡ ಎಂದ್ರೆ. ನಾವು ಈ ಪಟ್ಟ ಕೊಡಲ್ಲ ಎಂದು ಹೇಳ್ತಾರೆ.
ಆಸ್ತಿಯಲ್ಲಿ ಪಾಲು ಕೇಳಿದ ಪ್ರೀತು
ಆಗ ದೇವಸ್ಥಾನದಲ್ಲೇ ಇದ್ದ ಆದಿತ್ಯ ಕೈ ಎತ್ತಿ. ನಾನು ಈ ಧರ್ಮಾಧಿಕಾರಿ ಪಟ್ಟ ನೀಡಲು ಒಪ್ಪಲ್ಲ. ನಮ್ಮ ಮನೆಯಲ್ಲಿ ಒಗ್ಗಟ್ಟು ಇಲ್ಲ. ನನಗೆ ಆಸ್ತಿಯಲ್ಲಿ ಪಾಲು ಬೇಕು ಎಂದು ಕೇಳಿದ್ದಾನೆ. ಆದಿತ್ಯನ ಮಾತು ಕೇಳಿ ಅಖಿಲಾ ಮತ್ತು ಮನೆಯವರೆಲ್ಲಾ ಶಾಕ್ ಆಗಿದ್ದಾರೆ. ಇವನು ಈ ರೀತಿ ಯಾಕ್ ಹೇಳ್ತಾ ಇದ್ದಾನೆ ಎಂದು ಆತಂಕಗೊಂಡಿದ್ದಾರೆ.
ಇದನ್ನೂ ಓದಿ: Rupesh Shetty-Koragajja: ಬಿಗ್ ಬಾಸ್ ಗೆಲುವಿನ ಹಿಂದಿದೆಯಾ ಕೊರಗಜ್ಜನ ಕೃಪೆ? ದೈವದ ಮಹಿಮೆ ತೆರೆದಿಟ್ಟ ರೂಪೇಶ್ ಶೆಟ್ಟಿ!
ಪ್ರೀತುಗಾಗಿ ಆದಿತ್ಯ ಈ ರೀತಿ ಮಾಡ್ತಾ ಇದ್ದಾನೆ. ಈ ಸತ್ಯ ಅಖಿಲಾಂಡೇಶ್ವರಿಗೆ ತಿಳಿಯುತ್ತಾ? ಮುಂದೇನಾಗುತ್ತೆ ಅಂತ ನೋಡೋಕೆ ಪಾರು ಧಾರಾವಾಹಿ ನೋಡಬೇಕು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ