Vinaya Prasad: ಅರಸನ ಕೋಟೆ ಅಖಿಲಾಂಡೇಶ್ವರಿಯ ರಿಯಲ್​ ಲೈಫ್​ ಸ್ಟೋರಿ ಇದು

ತಮ್ಮ ಗಂಭೀರ ನಟನೆ ಮೂಲಕ ಕಿರುತೆರೆಯಲ್ಲಿ ಅಖಿಲಾಂಡೇಶ್ವರಿಯಾಗಿ ಗುರುತಿಸಿಕೊಂಡ ಹಿರಿಯ ನಟಿ ವಿನಯಪ್ರಸಾದ್ ಸಿನಿಮಾರಂಗದಲ್ಲಿ ಎರಡು ದಶಕಗಳ ಕಾಲ ನಟಿಸಿ ಗುರುತಿಸಿಕೊಂಡವರು ಇವರು.

ತಮ್ಮ ಗಂಭೀರ ನಟನೆ ಮೂಲಕ ಕಿರುತೆರೆಯಲ್ಲಿ ಅಖಿಲಾಂಡೇಶ್ವರಿಯಾಗಿ ಗುರುತಿಸಿಕೊಂಡ ಹಿರಿಯ ನಟಿ ವಿನಯಪ್ರಸಾದ್ ಸಿನಿಮಾರಂಗದಲ್ಲಿ ಎರಡು ದಶಕಗಳ ಕಾಲ ನಟಿಸಿ ಗುರುತಿಸಿಕೊಂಡವರು ಇವರು.

ತಮ್ಮ ಗಂಭೀರ ನಟನೆ ಮೂಲಕ ಕಿರುತೆರೆಯಲ್ಲಿ ಅಖಿಲಾಂಡೇಶ್ವರಿಯಾಗಿ ಗುರುತಿಸಿಕೊಂಡ ಹಿರಿಯ ನಟಿ ವಿನಯಪ್ರಸಾದ್ ಸಿನಿಮಾರಂಗದಲ್ಲಿ ಎರಡು ದಶಕಗಳ ಕಾಲ ನಟಿಸಿ ಗುರುತಿಸಿಕೊಂಡವರು ಇವರು.

  • Share this:
    ತಮ್ಮ ಗಂಭೀರ ನಟನೆ ಮೂಲಕ ಕಿರುತೆರೆಯಲ್ಲಿ ಅಖಿಲಾಂಡೇಶ್ವರಿಯಾಗಿ ಗುರುತಿಸಿಕೊಂಡ ಹಿರಿಯ ನಟಿ ವಿನಯಪ್ರಸಾದ್ (Vinaya Prasad) ಸಿನಿಮಾರಂಗದಲ್ಲಿ ಎರಡು ದಶಕಗಳ ಕಾಲ ನಟಿಸಿ ಗುರುತಿಸಿಕೊಂಡವರು ಇವರು. ಕನ್ನಡ, ತೆಲುಗು, ತಮಿಳು ಮತ್ತು ಮಲಯಾಳಂ ಚಿತ್ರರಂಗದಲ್ಲಿ ತಮ್ಮ ಅಭಿನಯದಿಂದ ಮನಗೆದ್ದಿದ್ದಾರೆ.  ನಟನೆ ಜೊತೆಗೆ ಕಾರ್ಯಕ್ರಮಗಳ ನಿರೂಪಣೆ (Anchoring) ಯನ್ನು ಕೂಡಾ ಮಾಡಿದ್ದಾರೆ. ಅಷ್ಟೇ ಅಲ್ಲದೇ, ಹಾಡನ್ನೂ ಹಾಡುತ್ತಾರೆ. ಬೆಳ್ಳಿತೆರೆ (Silver Screen) ಗೆ ಕಾಲಿಟ್ಟ ವಿನಯಾ ಪ್ರಸಾದ್ ಕನ್ನಡದ ಖ್ಯಾತ ಹಿರಿಯ ನಟಿಯರಲ್ಲಿ ಒಬ್ಬರು. ಸದ್ಯ ಜೀ ಕನ್ನಡದಲ್ಲಿ ಮೂಡಿ ಬರುತ್ತಿರುವ 'ಪಾರು' (Paaru) ಧಾರಾವಾಹಿಯಲ್ಲಿ ಅಖಿಲಾಂಡೇಶ್ವರಿ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. 

    ಸಾವಿತ್ರಿ' ಧಾರಾವಾಹಿ ಮೂಲಕ ಕಿರುತೆರೆ

    ಬೆಳ್ಳಿತೆರೆಯ ಜೊತೆಗೆ ವಿನಯಾ ಪ್ರಸಾದ್ ಅವರು ಕಿರುತೆರೆಯಲ್ಲೂ ತಮ್ಮನ್ನು ತಾವು ತೊಡಗಿಸಿಕೊಂಡಿದ್ದಾರೆ. 'ಸಾವಿತ್ರಿ' ಧಾರಾವಾಹಿ ಮೂಲಕ ಕಿರುತೆರೆಗೆ ಕಾಲಿಟ್ಟ ವಿನಯಾ ಪ್ರಸಾದ್ ಅವರು ಮುಂದೆ 'ಶಕ್ತಿ', 'ಅನುಪಮಾ', 'ಬಂಗಾರ', 'ಸ್ತ್ರೀ', 'ನಂದ ಗೋಕುಲ', 'ನಿತ್ಯೋತ್ಸವ', 'ಸುಂದರಿ' ಸೇರಿದಂತೆ ಹಲವು ಧಾರಾವಾಹಿಗಳಲ್ಲಿ ನಟಿಸಿದ್ದಾರೆ. ಕನ್ನಡ ಮಾತ್ರವಲ್ಲದೆ ಮಲಯಾಳಂನಲ್ಲೂ ಸೀರಿಯಲ್‌ಗಳಲ್ಲಿ ಅಭಿನಯಿಸಿದ್ದಾರೆ. ಸದ್ಯ 'ಪಾರು' ಧಾರಾವಾಹಿಯಲ್ಲಿ ಅಖಿಲಾಂಡೇಶ್ವರಿ ಪಾತ್ರದಲ್ಲಿ ನಟಿಸುತ್ತಿದ್ದಾರೆ.

    ಇದನ್ನೂ ಓದಿ: Gouthami Jadav: ರಫ್ ಅಂಡ್ ಟಫ್ ಲುಕ್ ನಲ್ಲಿ ಮಿಂಚುತ್ತಿರುವ ಗೌತಮಿ ಜಾಧವ್ ರಿಯಲ್ ಲೈಫ್ ನಲ್ಲಿ ಹಾಗಿಲ್ವಂತೆ!

    ವಿನಯಾ ಪ್ರಸಾದ್ ದಕ್ಷಿಣ ಭಾರತ ಚಿತ್ರರಂಗದ ಪ್ರತಿಭಾನ್ವಿತ ನಟಿ. ಕನ್ನಡ, ತೆಲುಗು, ತಮಿಳು ಮತ್ತು ಮಲಯಾಳಂ ಚಿತ್ರರಂಗದಲ್ಲಿ ತಮ್ಮ ನಟನೆಯಿಂದ ಛಾಪನ್ನು ಮೂಡಿಸಿರುವ ಈ ನಟಿ ಜನಿಸಿದ್ದು ಉಡುಪಿಯಲ್ಲಿ. 1988 ರಲ್ಲಿ `ಮಧ್ವಾಚಾರ್ಯ' ಚಿತ್ರದಿಂದ ಅಭಿನಯ ಆರಂಭಿಸಿದ ಇವರು ಅನಂತನಾಗ್ ರವರ `ಗಣೇಶನ ಮದುವೆ' ಚಿತ್ರದಲ್ಲಿ ಮೊದಲಬಾರಿಗೆ ನಾಯಕನಟಿಯಾಗಿ ಕಾಣಿಸಿಕೊಂಡರು.

    ಇನ್ನು ವಿನಯಾ ಪ್ರಸಾದ್ ಅವರು ಅತ್ತ್ಯುತ್ತಮ ನಟಿ ಹಾಗೂ ಅತ್ತ್ಯುತ್ತಮ ಪೋಷಕ ನಟಿ ವಿಭಾಗದಲ್ಲಿ ಕರ್ನಾಟಕ ಚಲನಚಿತ್ರ ಪ್ರಶಸ್ತಿಯನ್ನು ಮುಡಿಗೇರಿಸಿಕೊಂಡಿದ್ದಾರೆ. 'ಆತಂಕ' ಹಾಗೂ 'ಬಣ್ಣದ ಹೆಜ್ಜೆಗಳು' ಚಿತ್ರದಲ್ಲಿನ ನಟನೆಗಾಗಿ ಉತ್ತಮ ನಟಿ ಪ್ರಶಸ್ತಿಯನ್ನು ಪಡೆದಿದ್ದಾರೆ.

    ಮುಂದಿನ ದಿನಗಳಲ್ಲಿ ಇವರು ಹಲವು ಸಿನಿಮಾಗಳಲ್ಲಿ ನಾಯಕಿಯಾಗಿ ಅಭಿನಯಿಸಿ ಸೈ ಎನಿಸಿಕೊಂಡಿದ್ದಾರೆ. `ಚೆಲುವೆ ನೀನು ನಕ್ಕರೆ ಹಾಲಿ ಸಕ್ಕರೆ',`ಮೈಸೂರು ಜಾಣ',`ಸೂರ್ಯೋದಯ' ಮುಂತಾದ ಚಿತ್ರಗಳಲ್ಲಿ ನಾಯಕಿಯಾಗಿ ನಟಿಸಿದರು. ಇವರು ಒಬ್ಬ ಗಾಯಕಿಯೂ ಹೌದು.ಕೆಲವು ವರ್ಷಗಳ ನಂತರ ಪೋಷಕ ಪಾತ್ರಗಳಲ್ಲಿ ನಟಿಸಿತೊಡಗಿದ ವಿನಯಾರವರು ಕಿರುತೆರೆಯಲ್ಲೂ ಅಭಿನಯಿಸಿದ್ದಾರೆ.

    ವಿನಯ ಪ್ರಸಾದ್ ವೈಯಕ್ತಿಕ ಜೀವನ

    ವಿನಯಾ ಪ್ರಸಾದ್ ಅವರು ಜಿ ವಿ ಅಯ್ಯರ್ ಅವರ ಸಿನಿಮಾ 'ಮಧ್ವಾಚಾರ್ಯ'ದಲ್ಲಿ ನಟಿಸುವ ಮೂಲಕ ಬಣ್ಣದ ಲೋಕಕ್ಕೆ ಎಂಟ್ರಿ ನೀಡಿದ್ದಾರೆ. ಉಡುಪಿಯಲ್ಲಿ ಕೃಷ್ಣ ಭಟ್ ಹಾಗೂ ವತ್ಸಲ ದಂಪತಿಯ ಪುತ್ರಿಯಾಗಿ ವಿನಯಾ ಪ್ರಸಾದ್ ಜನಿಸಿದರು. ಅಲ್ಲೇ ಓದು ಮುಗಿಸಿದ  ಮತ್ತೆ ಹಿಂತಿರುಗಿ ನೋಡದ ವಿನಯಾ ಪ್ರಸಾದ್ ಒಂದಾದ ಮೇಲೆ ಒಂದು ಸಿನಿಮಾಗಳಲ್ಲಿ ನಟಿಸಿದರು. 'ನೀನು ನಕ್ಕರೆ ಹಾಲು ಸಕ್ಕರೆ', 'ಕಾಲೇಜ್ ಹೀರೊ', 'ಗಣೇಶನ ಮದುವೆ', 'ಪೊಲೀಸನ ಹೆಂಡ್ತಿ', 'ಗೌರಿ ಗಣೇಶ', 'ಯಾರಿಗೂ ಹೇಳ್ಬೇಡಿ', 'ಮೈಸೂರು ಜಾಣ', 'ಸೂರ್ಯೋದಯ', 'ಮುತ್ತಿನಂಥ ಹೆಂಡತಿ', 'ಕಲ್ಯಾಣೋತ್ಸವ', 'ಮಹಾ ಎಡಬಿಡಂಗಿ' ಸೇರಿದಂತೆ ಹಲವು ಚಿತ್ರಗಳಲ್ಲಿ ನಟಿಸಿದರು.

    ಇದನ್ನೂ ಓದಿ: Doresani: ರೋಚಕ ಹಂತ ತಲುಪಿದ ದೊರೆಸಾನಿ ಸೀರಿಯಲ್; ಆನಂದ್, ದೀಪಿಕಾಳ ಮದುವೆಗೆ ಸಿಗುತ್ತಾ ಗ್ರೀನ್ ಸಿಗ್ನಲ್?

    ಇನ್ನು ವಿನಯಾ ಪ್ರಸಾದ್ ಅವರು ಅತ್ತ್ಯುತ್ತಮ ನಟಿ ಹಾಗೂ ಅತ್ತ್ಯುತ್ತಮ ಪೋಷಕ ನಟಿ ವಿಭಾಗದಲ್ಲಿ ಕರ್ನಾಟಕ ಚಲನಚಿತ್ರ ಪ್ರಶಸ್ತಿಯನ್ನು ಮುಡಿಗೇರಿಸಿಕೊಂಡಿದ್ದಾರೆ. 'ಆತಂಕ' ಹಾಗೂ 'ಬಣ್ಣದ ಹೆಜ್ಜೆಗಳು' ಚಿತ್ರದಲ್ಲಿನ ನಟನೆಗಾಗಿ ಉತ್ತಮ ನಟಿ ಪ್ರಶಸ್ತಿಯನ್ನು ಪಡೆದಿದ್ದಾರೆ.

    ಕೆಲವು ವರ್ಷಗಳ ನಂತರ ಪೋಷಕ ಪಾತ್ರಗಳಲ್ಲಿ ನಟಿಸಿತೊಡಗಿದ ವಿನಯಾರವರು ಕಿರುತೆರೆಯಲ್ಲೂ ಅಭಿನಯಿಸಿದ್ದಾರೆ. ಇನ್ನು ವಿನಯಾ ಪ್ರಸಾದ್ ಅವರ ಮಗಳು ಪ್ರಥಮ ಪ್ರಸಾದ್ ಕೂಡ ನಟಿಯಾಗಿದ್ದಾರೆ. ಡ್ಯಾನ್ಸರ್ ಆಗಿರುವ ಪ್ರಥಮ ಪ್ರಸಾದ್ ಅವರು ಹಲವು ಧಾರಾವಾಹಿಗಳಲ್ಲಿ ನಟಿಸಿದ್ದಾರೆ.
    Published by:Swathi Nayak
    First published: