ಧಾರಾವಾಹಿಗಳ ಮೂಲಕ ಗುರುತಿಸಿಕೊಂಡ ಹಲವು ಕಲಾವಿದರು, ತಮ್ಮ ಮುಂದಿನ ಹೆಜ್ಜೆಯನ್ನು ಸಿನಿಮಾರಂಗ (Film Industry) ದಲ್ಲಿಡಲು ಬಯಸುತ್ತಾರೆ. ಇನ್ನೂ ಕೆಲ ನಟ-ನಟಿಯರು, ಸಿನಿಮಾ, ಕಿರುತೆರೆ ಎರಡನ್ನೂ ಬ್ಯಾಲೆನ್ಸ್ ಮಾಡುತ್ತಿರುತ್ತಾರೆ. ಕಳೆದ ನಾಲ್ಕು ವರ್ಷಗಳಿಂದ ಕಿರುತೆರೆಯಲ್ಲಿರುವ ಪವಿತ್ರ ಬಿ ನಾಯ್ಕ್ (Pavithra B Naik) ಉದಯೋನ್ಮುಖ ನಟಿ. ಪಾರು (Paaru) ಧಾರಾವಾಹಿಯಲ್ಲಿ ಜನನಿ ಪಾತ್ರ ಮಾಡುತ್ತಿರುವ ನಟಿ ಪವಿತ್ರಾ ಬಿ ನಾಯ್ಕ್ ಅವರು ಇಂಜಿನಿಯರಿಂಗ್ ಮುಗಿಸಿದ್ದು, ಐಟಿ ಕಂಪನಿಯಲ್ಲಿ ಕೆಲಸ ಮಾಡಬೇಕಿತ್ತು. ಆದರೆ ಕಿರುತೆರೆಗೆ (Small Screen) ಪಾದಾರ್ಪಣೆ ಮಾಡುವ ಮೂಲಕ ನಟನೆಯನ್ನೇ ಈಗ ಫುಲ್ ಟೈಂ ಜಾಬ್ ಮಾಡಿಕೊಂಡಿದ್ದಾರೆ.
ಪಾರು ಧಾರಾವಾಹಿ ಶುರುವಿನಿಂದಲೂ ಪ್ರೇಕ್ಷಕರನ್ನು ಹಾಗೆ ಹಿಡಿದಿಟ್ಟುಕೊಂಡಿದ್ದು. ಈ ಧಾರಾವಾಹಿಯಲ್ಲಿ ಹಲವು ನಟ-ನಟಿಯರು ಹೊಸಬರಿದ್ದಾರೆ. ಪಾರು ಧಾರಾವಾಹಿಯ ನಾಯಕಿ ಮೋಕ್ಷಿತಾ ಪೈ ಸೇರಿದಂತೆ ಹಲವರು ಹೊಸಬರಿದ್ದಾರೆ. ಈಗ ಮೋಕ್ಷಿತಾ ಪೈ ಹಾಗೂ ಪವಿತ್ರಾ ಬಿ ನಾಯ್ಕ್ ಇಬ್ಬರೂ ಕೂಡ ಪರಭಾಷೆಯತ್ತ ಮುಖ ಮಾಡಿದ್ದಾರೆ.
ಮೊದಲನೇ ಧಾರವಾಹಿ ರಕ್ಷಾಬಂಧನ ತಲ್ಲಿ ಪವಿತ್ರ ಬಿ ನಾಯ್ಕ ಅವರ ಅದೃಷ್ಟವೇನೋ ಕೈಕೊಟ್ಟಿತ್ತು 95 ಎಪಿಸೋಡ್ಗೆ ಧಾರವಾಹಿ ಮುಗಿದಿತ್ತು. ಈ ಬಗ್ಗೆ ಪವಿತ್ರ ಬಿ ನಾಯ್ಕ ಅವರಿಗೆ ಬಹಳ ಬೇಸರವಿದೆ ಅಂತೆ. ಇನ್ನು ಈ ಧಾರವಾಹಿಯ ವಿಭಿನ್ನ ಕಥೆಯನ್ನೊಳಗೊಂಡಿತ್ತು. ಅಣ್ಣ-ತಂಗಿ ಸಂಬಂಧವನ್ನು ಮುಖ್ಯ ವಸ್ತುವನ್ನಾಗಿರಿಸಿದ ಈ ಧಾರವಾಹಿ ಶೀಘ್ರವಾಗಿ ಮುಗಿದಿರುವು್ದು ವಿಶೇಷ.
ಪವಿತ್ರ ಅವರು ಇನ್ಸ್ಟಾಗ್ರಾಮ್ ನಲ್ಲಿ ಆಕ್ಟಿವ್ ಆಗಿದ್ದು ಆಗಾಗ ರೀಲ್ಸ್ ಮೂಲಕ ಅಭಿಮಾನಿಗಳನ್ನು ರಂಜಿಸುತ್ತಿದ್ದಾರೆ. ವಿಭಿನ್ನ ರೀತಿಯಲ್ಲಿ ಸಾಂಪ್ರದಾಯಿಕವಾಗಿ ಫೋಟೋಶೂಟ್ ಮಾಡಿಸಿ ತಮ್ಮ ಇನ್ಸ್ಟಾಗ್ರಾಂ ಪ್ಲೀಸ್ ನಲ್ಲಿ ಫೋಟೋಗಳನ್ನು ಹಂಚಿಕೊಳ್ಳುತ್ತಿದ್ದಾರೆ.
ಪರಭಾಷೆಯ ಕಿರುತೆರೆಗೆ ಪಾದಾರ್ಪಣೆ
ಇದೀಗ ಪರಭಾಷೆಯ ಕಿರುತೆರೆಗೆ ಪಾದಾರ್ಪಣೆ ಮಾಡಿರುವ ಪವಿತ್ರಾ ಧಾರಾವಾಹಿಯಲ್ಲಿ ನಟಿಸುತ್ತಿದ್ದಾರೆ. ತೆಲುಗಿನ ಕಿರುತೆರೆಯಲ್ಲಿ ಮೂಡಿ ಬರುತ್ತಿರುವ ನುವ್ವು ನೇನು ಪ್ರೇಮ ಎಂಬ ಧಾರಾವಾಹಿಗೆ ಬಣ್ಣ ಹಚ್ಚಿದ್ದಾರೆ. ಪವಿತ್ರಾ ಬಿ.ನಾಯ್ಕ್ ಅವರಿಗೆ ಈ ಹಿಂದೆಯೇ ಇತರೆ ಭಾಷೆಗಳು ಹಾಗೂ ವೆಬ್ ಸಿರೀಸ್ ನಲ್ಲಿ ನಟಿಸುವಂತೆ ಆಫರ್ ಗಳು ಬರುತ್ತಿದ್ದವು. ಆದರೆ ಪವಿತ್ರಾ ಅವರಿಗೆ ವೆಬ್ ಸಿರೀಸ್ ನಲ್ಲಿ ನಟಿಸುವುದು ಅಷ್ಟು ಇಷ್ಟವಿರಲಿಲ್ಲವಂತೆ. ಹಾಗಾಗಿ ವೆಬ್ ಸಿರೀಸ್ ನಲ್ಲಿ ನಟಿಸಲು ಸಿಕ್ಕ ಅವಕಾಶಗಳನ್ನು ಕೈ ಬಿಟ್ಟಿದ್ದಾರೆ. ಇನ್ನು
ಉದಯ ವಾಹಿನಿಯಲ್ಲಿ ಪ್ರಸಾರಗೊಳ್ಳುತ್ತಿದ್ದ ಕಾದಂಬರಿ ಧಾರವಾಹಿ ಮುಖ್ಯ ಪಾತ್ರಧಾರಿಯಾಗಿದ್ದರು ಕಾಣಿಸಿಕೊಂಡಿದ್ದರು. ಆದರೆ ಅಲ್ಲಿಯೂ ಅವರ ಅದೃಷ್ಟ ಕೈಕೊಟ್ಟಿತ್ತು ಉತ್ತಮ ಕಥೆಯನ್ನೊಳಗೊಂಡ ಧಾರವಾಹಿ ಕೆಲವೇ ಎಪಿಸೋಡ್ ಗಳಲ್ಲಿ ಮುಕ್ತಾಯಗೊಂಡಿತ್ತು. ಆದರೆ ಅಲ್ಲೂ ತಮ್ಮ ಉತ್ತಮ ನಟನೆಯಿಂದ ಅವರು ಹಲವಾರು ಅಭಿಮಾನಿಗಳನ್ನು ಪಡೆದಿದ್ದರು.
ಇನ್ನು ಪಾರು ಧಾರಾವಾಹಿಯಲ್ಲಿ ನಟನ ತಮ್ಮನ ಹೆಂಡತಿಯಾಗಿ ಕಾಣಿಸಿಕೊಳ್ಳುತ್ತಿರುವ ಇವರು ಉತ್ತಮ ರೀತಿಯಲ್ಲಿ ನಟಿಸಿ ವೀಕ್ಷಕರನ್ನು ಹಿಡಿದಿಟ್ಟುಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ. 'ಪಾರು' ಧಾರಾವಾಹಿಯಲ್ಲಿ ಎಲ್ಲ ಪಾತ್ರಗಳು ತುಂಬ ಪವರ್ಫುಲ್ ಆಗಿವೆ. ಹೀರೋ-ಹೀರೋಯಿನ್ನಂತೆ ಉಳಿದ ಪಾತ್ರಗಳಿಗೂ ಸಾಕಷ್ಟು ಮಹತ್ವ ಇದೆ. ಅಂತೆಯೇ ಜನನಿ ಪಾತ್ರ ಜನಮನ್ನಣೆ ಗಳಿಸಿದೆ. ಜನನಿ ಪಾತ್ರಕ್ಕೆ ಬಣ್ಣ ಹಚ್ಚಿರುವ ನಟಿ ಪವಿತಾ ಬಿ ನಾಯ್ಕ್ ಅವರು 'ಪಾರು' ಗಿಂತ ಮುಂಚೆ 'ರಕ್ಷಾ ಬಂಧನ', 'ಕಾದಂಬರಿ' ಸೀರಿಯಲ್ನಲ್ಲಿ ನಟಿಸಿದ್ದರು.
Published by:Swathi Nayak
First published:
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ