Mansi Joshi: ನೆಗೆಟಿವ್ ಪಾತ್ರದಲ್ಲಿ ಮಿಂಚಿದ್ದ ಮಾನ್ಸಿ ಜೋಶಿ ಈಗ ಕಿರುತೆರೆಯಲ್ಲಿ ಫುಲ್ ಬ್ಯುಸಿ
Kannada serial: ಬಿಳಿ ಹೆಂಡ್ತಿ ಧಾರಾವಾಹಿ ಮೂಲಕ ಕಿರುತೆರೆಗೆ ಎಂಟ್ರಿ ಕೊಟ್ಟ ನಟಿ ಮಾನ್ಸಿ ಜೋಶಿ ಕಳೆದ ನಾಲ್ಕು ವರ್ಷಗಳಿಂದ ಕಿರುತೆರೆಯಲ್ಲಿ ನೆಗೆಟಿವ್ ಶೇಡ್ ಪಾತ್ರದಲ್ಲಿ ಗುರುತಿಸಿಕೊಂಡವರು.
ಬಿಳಿ ಹೆಂಡ್ತಿ (Bili hendthi) ಧಾರಾವಾಹಿ ಮೂಲಕ ಕಿರುತೆರೆಗೆ ಎಂಟ್ರಿ ಕೊಟ್ಟ ನಟಿ ಮಾನ್ಸಿ ಜೋಶಿ (Mansi Joshi) ಕಳೆದ ನಾಲ್ಕು ವರ್ಷಗಳಿಂದ ಕಿರುತೆರೆಯಲ್ಲಿ ನೆಗೆಟಿವ್ ಶೇಡ್ ಪಾತ್ರದಲ್ಲಿ ಗುರುತಿಸಿಕೊಂಡವರು. ಜೀ ಕನ್ನಡ ವಾಹಿನಿಯಲ್ಲಿ ಮೂಡಿ ಬರುತ್ತಿರುವ ಪಾರು (Paaru) ಧಾರವಾಹಿಯು ಇವರಿಗೆ ಒಳ್ಳೆಯ ಹೆಸರನ್ನು ಗಳಿಸಲು ದಾರಿಮಾಡಿಕೊಟ್ಟಿತು. ನೆಗೆಟಿವ್ ಪಾತ್ರ (Negative Role) ದಲ್ಲಿ ಅಭಿನಯಿಸುತ್ತಿದ್ದರೂ ಅಭಿಮಾನಿಗಳನ್ನು ಪಡೆಯುವಲ್ಲಿ ಇವರೇನು ಸೋಲಲಿಲ್ಲ. ಮಾನ್ಸಿ ಕೇವಲ ಕನ್ನಡದಲ್ಲಿ ಒಂದೇ ಅಲ್ಲದೆ ತೆಲುಗಿನಲ್ಲಿಯೂ ನಟಿಸಿದ್ದಾರೆ. ಉದಯ ಟಿವಿಯಲ್ಲಿ ಪ್ರಸಾರವಾಗುತ್ತಿರುವ 'ಕಸ್ತೂರಿ ನಿವಾಸ' ಸೀರಿಯಲ್ನ ತೆಲುಗು ರಿಮೇಕ್ಗೆ ಮಾನ್ಸಿ ಜೋಶಿ ಬಣ್ಣ ಹಚ್ಚಿದ್ದರು.
ಏಕಕಾಲಕ್ಕೆ 2 ಧಾರಾವಾಹಿಯಲ್ಲಿ ಮಾನ್ಸಿ ಜೋಶಿ
'ಏಕಕಾಲಕ್ಕೆ ಕನ್ನಡದಲ್ಲಿ ವಿಲನ್ ಪಾತ್ರ, ತೆಲುಗಿನಲ್ಲಿ ಹೀರೋಯಿನ್ ಆಗಿ ಕಾಣಿಸಿಕೊಳ್ಳುತ್ತಿದ್ದೇನೆ. ಇನ್ನು ಹೀರೋಯಿನ್ ಪಾತ್ರ ಅಂದರೆ ಅಳುಮುಂಜಿ ಅಂತ ಹೇಳೋದುಂಟು. ಆದರೆ ತೆಲುಗಿನಲ್ಲಿ ಎಲ್ಲೆಲ್ಲಿ ತಪ್ಪು ನಡೆಯುತ್ತದೆಯೋ ಅಲ್ಲಿಯೇ ಸರಿಯಾಗಿ ತಿರುಗಿಸುವ ಕೊಡುವ ಹಾಗೆ, ತಪ್ಪು ತಿದ್ದುವ ರೀತಿಯಲ್ಲಿ ನನ್ನ ಪಾತ್ರವಿದೆ. ಹೀಗಾಗಿ ಇದು ನನಗೆ ತುಂಬ ಖುಷಿಯಾಯ್ತು. ಕಿರುತೆರೆಗೆ ಬಂದಾಗಿನಿಂದ ಒಂದಾದ ಮೇಲೆ ಒಂದರಂತೆ ಪ್ರಾಜೆಕ್ಟ್ ಮಾಡುತ್ತಿದ್ದೇನೆ. ನಿಜಕ್ಕೂ ನಾನು ಪುಣ್ಯ ಮಾಡಿದ್ದೇನೆ ಎಂದುಕೊಳ್ತೀನಿ. ಜನರ ಪ್ರೀತಿ-ವಿಶ್ವಾಸ, ದೇವರ ದಯೆಯಿಂದ ಇದೆಲ್ಲ ಸಾಧ್ಯವಾಗಿದೆ' ಎಂದು ಮಾನ್ಸಿ ಜೋಶಿ ಖುಷಿ ಹಂಚಿಕೊಂಡಿದ್ದಾರೆ.
ಉದಯ ಟಿವಿಯಲ್ಲಿ ಪ್ರಸಾರವಾಗುತ್ತಿರುವ 'ಕಸ್ತೂರಿ ನಿವಾಸ' ಸೀರಿಯಲ್ನ ತೆಲುಗು ರಿಮೇಕ್ಗೆ ಮಾನ್ಸಿ ಜೋಶಿ ಬಣ್ಣ ಹಚ್ಚಿದ್ದರು. ಭರತನಾಟ್ಯ ಡ್ಯಾನ್ಸರ್ ಆಗಿ ಗುರುತಿಸಿಕೊಂಡಿರುವ ಮಾನ್ಸಿ ಜೋಶಿ ಅವರಿಗೆ ಹಲವು ಕನಸುಗಳಿವೆ. ಭರತನಾಟ್ಯ ಕಲಿತಿರುವ ಮಾನ್ಸಿ ದೇಶದ ವಿವಿಧ ಭಾಗಗಳಲ್ಲಿ ಕಾರ್ಯಕ್ರಮವನ್ನು ನೀಡಿದ್ದಾರೆ. ಬರೋಬ್ಬರಿ 250ಕ್ಕೂ ಹೆಚ್ಚು ಡ್ಯಾನ್ಸ್ ಶೋಗಳನ್ನು ನೀಡಿದ್ದಾರೆ. ಮಾನ್ಸಿ ಜೋಶಿಗೆ ಡ್ಯಾನ್ಸ್ ಅಂದರೆ ತುಂಬಾ ಇಷ್ಟ. ಮಾನ್ಸಿಗೆ ತಮ್ಮದೇ ಆದ ಒಂದು ಡ್ಯಾನ್ಸ್ ಸ್ಕೂಲ್ ಅನ್ನು ತೆರೆಯಬೇಕು. ಹಲವರಿಗೆ ಡ್ಯಾನ್ಸ್ ಹೇಳಿಕೊಡಬೇಕು ಎಂಬ ಕನಸಿದೆ. ಈ ಕನಸನ್ನು ನನಸು ಮಾಡಿಕೊಳ್ಳುವ ದಾರಿಯಲ್ಲೇ ಮುಂದೆ ಸಾಗುತ್ತಿದ್ದಾರೆ.
ಆರಂಭದ ದಿನಗಳಲ್ಲಿ ಯೂಟ್ಯೂಬ್ ವೆಬ್ ಸಿರೀಸ್ ಇವರು ಫೇಮಸ್ ಆಗಿದ್ದರು. ಇದರ ಮೂಲಕವೇ ಧಾರಾವಾಹಿಗಳಲ್ಲಿ ನಟಿಸುವ ಅವಕಾಶ ಒದಗಿಬಂದಿತ್ತು ಎನ್ನುತ್ತಾರೆ ಮಾಸ್ಸಿ ಜೋಶಿ. ಅಂದ್ಹಾಗೆ ಇವರು ಉಷಾ ಭಂಡಾರಿ ಅವರ ಗರಡಿಯಲ್ಲಿ ನಟನೆಯನ್ನು ಕಲಿತಿರುವುದು ಇನ್ನೂ ವಿಶೇಷ.
'ಬಿಳಿ ಹೆಂಡ್ತಿ' ಧಾರಾವಾಹಿ ಮೂಲಕ ಬಣ್ಣದ ಲೋಕಕ್ಕೆ ಪಾದಾರ್ಪಣೆ
ಮಾನ್ಸಿ ಜೋಶಿ 'ಬಿಳಿ ಹೆಂಡ್ತಿ' ಧಾರಾವಾಹಿ ಮೂಲಕ ಬಣ್ಣದ ಲೋಕಕ್ಕೆ ಪಾದಾರ್ಪಣೆ ಮಾಡಿದ್ದರು. ಬಳಿಕ 'ರಾಧಾ ರಮಣ' ಧಾರಾವಾಹಿಯಲ್ಲಿ ರಮಣನ ತಂಗಿಯ ಪಾತ್ರದಲ್ಲಿ ಕಾಣಿಸಿಕೊಂಡರು. ತುಂಬಾ ಮುಗ್ಧೆ ಪಾತ್ರದಲ್ಲಿ ನಟಿಸಿದ ಮಾನ್ಸಿ ನಂತರ 'ಪಾರು' ಧಾರಾವಾಹಿಯಲ್ಲಿ ನೆಗೆಟಿವ್ ರೋಲ್ನಲ್ಲಿ ನಟಿಸಿದ್ದರು. ಇಷ್ಟೇ ಅಲ್ಲದೇ, 'ನಾಯಕಿ' ಎಂಬ ಧಾರಾವಾಹಿಯಲ್ಲೂ ಮಾನ್ಸಿ ಜೋಶಿ ನಟಿಸಿದ್ದು, ಕನ್ನಡದ 'ಕಸ್ತೂರಿ ನಿವಾಸ' ಧಾರಾವಾಹಿಯ ರಿಮೇಕ್ ತೆಲುಗಿನಲ್ಲಿ ಮೂಡಿ ಬಂದಿತ್ತು ಇದರಲ್ಲೂ ಮಾನ್ಸಿ ನಟಿಸಿದ್ದರು. ಇನ್ನು ತಮಿಳಿನ 'ಅಮೃತವರ್ಷಿಣಿ' ಧಾರಾವಾಹಿಯಲ್ಲೂ ಕಾಣಿಸಿಕೊಂಡಿದ್ದಾರೆ. ಕೊರೊನಾ ಕಾರಣದಿಂದ ಈ ಧಾರಾವಾಹಿಯಿಂದ ಅರ್ಧಕ್ಕೆ ಕೈ ಬಿಡಬೇಕಾಯ್ತು.
ತೆಲುಗಿನಲ್ಲಿ ಮೂಡಿ ಬಂದ 'ಆಕಾಸಮಂತ' ಧಾರಾವಾಹಿಯು ಈಗ ಕನ್ನಡದಲ್ಲೂ ರಿಮೇಕ್ ಆಗಿದೆ. ಅದೇ ಅಣ್ಣ ತಂಗಿ ಧಾರಾವಾಹಿ. ಬಾಳೆ ಕುಮಾರ್ ನಿರ್ದೇಶನದ ಈ ಧಾರಾವಾಹಿಯಲ್ಲಿ ಮಾನ್ಸಿ ಜೋಶಿ ಕೂಡ ಬಣ್ಣ ಹಚ್ಚಿದ್ದಾರೆ. ಮಧು ಸಾಗರ್, ಅಖಿಲಾ ದೇಚಮ್ಮಾ, ರಾಜೇಶ್ ಧ್ರುವ ಹಾಗೂ ಮಾನ್ಸಿ ಜೋಶಿ ಲೀಡ್ ಪಾತ್ರದಲ್ಲಿ ನಟಿಸುತ್ತಿದ್ದಾರೆ. ಹಳ್ಳಿಯ ಅಭಿವೃದ್ಧಿಗೋಸ್ಕರ ಕೆಲಸ ಮಾಡುವ ಜಿಲ್ಲಾಧಿಕಾರಿ ಪಾತ್ರದಲ್ಲಿ ಮಾನ್ಸಿ ಜೋಶಿ ಕಾಣಿಸಿಕೊಂಡಿದ್ದಾರೆ. ಈ ಧಾರಾವಾಹಿಯಲ್ಲಿ ಮಾನ್ಸಿ ನಾಯಕಿ ಪಾತ್ರದಲ್ಲಿ ನಟಿಸುತ್ತಿದ್ದಾರೆ.
Published by:Swathi Nayak
First published:
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ