• Home
 • »
 • News
 • »
 • entertainment
 • »
 • Paaru: ಪಾರು ಧಾರಾವಾಹಿಯಲ್ಲಿ ದಸರಾ ಹಬ್ಬದ ಸಂಭ್ರಮ ನೋಡಿ, ಕುಣಿದು ಸಂಭ್ರಮಿಸಿದ ಕಲಾವಿದರು

Paaru: ಪಾರು ಧಾರಾವಾಹಿಯಲ್ಲಿ ದಸರಾ ಹಬ್ಬದ ಸಂಭ್ರಮ ನೋಡಿ, ಕುಣಿದು ಸಂಭ್ರಮಿಸಿದ ಕಲಾವಿದರು

ಪಾರು ಧಾರಾವಾಹಿಯಲ್ಲಿ ದಸರಾ ಹಬ್ಬದ ಸಂಭ್ರಮ

ಪಾರು ಧಾರಾವಾಹಿಯಲ್ಲಿ ದಸರಾ ಹಬ್ಬದ ಸಂಭ್ರಮ

ಪಾರು ಧಾರಾವಾಹಿ ಕಲಾವಿದರು ಹಬ್ಬ ಸಿನಿಮಾದ ಹಬ್ಬ ಹಬ್ಬ ನಾಡ ಹಬ್ಬ ದಸರಾಗೆ ಡ್ಯಾನ್ಸ್ ಮಾಡಿದ್ದಾರೆ. ಎಲ್ಲಾ ಕಲಾವಿದರು ಸೇರಿ ಮನೆಯಲ್ಲಿ ಕೂರಿಸಿದ ಗೊಂಬೆಗಳ ಮುಂದೆ ಡ್ಯಾನ್ಸ್ ಮಾಡಿದ್ದಾರೆ.

 • Share this:

  ಜೀ ಕನ್ನಡದಲ್ಲಿ (Zee Kannada) ಸಂಜೆ 6.30ಕ್ಕೆ ಪ್ರಸಾರವಾಗುತ್ತಿರುವ ಪಾರು (Paaru) ಸೀರಿಯಲ್ (Serial) ಹಲವಾರು ಜನರ ಮನಸ್ಸು ಗೆದ್ದಿದೆ. ದಿನಕ್ಕೊಂದು ತಿರುವಿನೊಂದಿಗೆ ಅಭಿಮಾನಿಗಳನ್ನು ಹಿಡಿದಿಟ್ಟುಕೊಳ್ಳುವಲ್ಲಿ ಯಶಸ್ವಿಯಾಗುತ್ತಿದೆ. ಅಖಿಲಾಂಡೇಶ್ವರಿ ಪಾತ್ರದಲ್ಲಿರುವ ವಿನಯ್ ಪ್ರಸಾದ್ ಅಭಿನಯ ನೋಡೋದೇ ಒಂದು ಚೆಂದ. ಅರಸನ ಕೋಟೆಯನ್ನು ಬೆಳೆಸುತ್ತಾ, ತನ್ನ ಮಕ್ಕಳನ್ನು ಬೆಳೆಸುತ್ತ, ತನ್ನ ಕೋಟೆಯನ್ನು ಭದ್ರಮಾಡಿಕೊಳ್ಳುತ್ತಾ ಮುನ್ನೆಡೆಯುತ್ತಿದ್ದಾರೆ. ತನ್ನ ಪಾತ್ರಕ್ಕೆ ಹೊಂದುವಂತೆ ಮೇಕಪ್ ಹಾಕಿಕೊಂಡು, ಗತ್ತು, ಗಾಂಭಿರ್ಯದಿಂದ ಸಂಸಾರದ, ಜೊತೆ ಕಂಪನಿಯನ್ನು ನಡೆಸುಕೊಂಡು ಹೋಗುತ್ತಿದ್ದಾಳೆ. ಪಾರು ಧಾರಾವಾಹಿ ಇತ್ತೀವೆಗೆ 1000 ಸಂಚಿಕೆಗಳನ್ನು ಪೂರೈಸಿದೆ.
  ದಸರಾ (Dasara) ಹಬ್ಬಕ್ಕೆ ಕಲಾವಿದರು ಡ್ಯಾನ್ಸ್ (Dance) ಮಾಡಿ ಸಂಭ್ರಮ ಪಟ್ಟಿದ್ದಾರೆ.


  ಇತ್ತೀಚೆಗೆ 1000 ಸಂಚಿಕೆ ಪೂರೈಸಿದ ತಂಡ
  ಕರುಣೆಯ ಪೈರು ನಮ್ಮೀ ಪಾರು ಎಂದು ಇಡೀ ಕರ್ನಾಟಕವೇ ಒಪ್ಪಿ ಅಪ್ಪಿಕೊಂಡಿರುವ ಮನೆಮಗಳು ಪಾರು. ಕನ್ನಡದ ಜನಪ್ರಿಯ ವಾಹಿನಿ ಜೀ ಕನ್ನಡದಲ್ಲಿ ಪ್ರಸಾರವಾಗುವ ಪಾರು ಧಾರಾವಾಹಿ ಅತ್ಯುತ್ತಮ ತಾರಾಗಣ, ರೋಚಕ ತಿರುವುಗಳ ಅದ್ಭುತ ಕಥೆಯೊಂದಿಗೆ ವೀಕ್ಷಕರನ್ನು ನಿರಂತರವಾಗಿ ರಂಜಿಸುತ್ತಲೇ ಸಾವಿರ ಸಂಚಿಕೆಗಳನ್ನು ಪೂರೈಸಿದೆ.


  ವಿನಯ್ ಪ್ರಸಾದ್ ನಟನೆ ಅದ್ಭುತ
  ಹಲವು ವರ್ಷಗಳಿಂದ ಬೆಳ್ಳಿತೆರೆಯಲ್ಲಿ ರಾರಾಜಿಸಿ ಕನ್ನಡಿಗರ ಮನ ಗೆದ್ದಿರುವ ಹಿರಿಯ ಕಲಾವಿದೆ ವಿನಯಾಪ್ರಸಾದ್ ಅವರು ಅಖಿಲಾಂಡೇಶ್ವರಿ ಪಾತ್ರದಲ್ಲಿ ಕಿರುತೆರೆಗೆ ಕಾಲಿಟ್ಟು ತಮ್ಮ ಮನೋಜ್ಞ ನಟನೆಯ ಮೂಲಕ ಧಾರಾವಾಹಿಯ ಘನತೆ ಹೆಚ್ಚಿಸಿದ್ದಾರೆ. ಇವರೊಟ್ಟಿಗೆ ನವ ಜೋಡಿಯಾಗಿ ಪಾದಾರ್ಪಣೆ ಮಾಡಿದ ಆದಿ ಪಾತ್ರದ ಶರತ್, ಪಾರು ಪಾತ್ರದ ಮೋಕ್ಷಿತಾ ಪೈ ವೀಕ್ಷಕರ ಹೃದಯಕ್ಕೆ ಹತ್ತಿರವಾಗಿದ್ದಾರೆ.


  ಇದನ್ನೂ ಓದಿ: Kendasampige: ವೋಟ್​​ಗಾಗಿ ಸುಮನಾ ಮದುವೆ! ಎಲೆಕ್ಷನ್ ಆದ ಮೇಲೆ ಸುಮನಾಳನ್ನು ಬಿಡ್ತಾನಂತೆ!


  ದಸರಾ ಹಬ್ಬಕ್ಕೆ ನೃತ್ಯ
  ಪಾರು ಧಾರಾವಾಹಿ ಕಲಾವಿದರು ಹಬ್ಬ ಸಿನಿಮಾದ ಹಬ್ಬ ಹಬ್ಬ ನಾಡ ಹಬ್ಬ ದಸರಾಗೆ ಡ್ಯಾನ್ಸ್ ಮಾಡಿದ್ದಾರೆ. ಎಲ್ಲಾ ಕಲಾವಿದರು ಸೇರಿ ಮನೆಯಲ್ಲಿ ಕೂರಿಸಿದ ಗೊಂಬೆಗಳ ಮುಂದೆ ಡ್ಯಾನ್ಸ್ ಮಾಡಿದ್ದಾರೆ.

  View this post on Instagram


  A post shared by Zee Kannada (@zeekannada)
  ಇತರೆ ಕಲಾವಿದರು
  ಇನ್ನು ಕಲಾಸಾಮ್ರಾಟ್ ಎಸ್. ನಾರಾಯಣ್ ಅವರು ವೀರಯ್ಯದೇವ, ನಾಗೇಂದ್ರ ಶಾ ಅವರು ಹನುಮಂತು ಮತ್ತು ನಾಗೇಶ್ ಯಾದವ್ ಅವರು ರಘು ರಾಮ್ ಪಾತ್ರದಲ್ಲಿ ನಟಿಸುತ್ತಿದ್ದರೆ. ಇವರೊಟ್ಟಿಗೆ ಇನ್ನು ಅನೇಕ ಹಿರಿಯ,ಕಿರಿಯ ಕಲಾವಿದರ ದಂಡೇ ಈ ಧಾರಾವಾಹಿಯಲ್ಲಿದ್ದು ನೋಡುಗರನ್ನು ತಮ್ಮ ಅಮೋಘ ಅಭಿನಯದ ಮೂಲಕ ಸೆಳೆಯುವುದರಲ್ಲಿ ಯಶಸ್ವಿಯಾಗಿದ್ದಾರೆ.


  Zee Kannada serial, Kannada serial, Paaru serial today episode, Paaru serial cast, ಪಾರು ಧಾರಾವಾಹಿ, ಪಾರು ಧಾರಾವಾಹಿಯಲ್ಲಿ ದಸರಾ ಹಬ್ಬದ ಸಂಭ್ರಮ ನೋಡಿ, ಕುಣಿದು ಸಂಭ್ರಮಿಸಿದ ಕಲಾವಿದರು, ಜೀ ಕನ್ನಡ ಧಾರಾವಾಹಿಗಳು, Kannada news, Karnataka news,
  ಪಾರು


  ಅಖಿಲಾಂಡೇಶ್ವರಿ ಅಲಂಕಾರ
  ವಿಶೇಷವಾಗಿ ಅಖಿಲಾಂಡೇಶ್ವರಿಯವರ ಅಲಂಕಾರ ಅವರು ಉಡುವ ಸೀರೆ ಧರಿಸುವ ಒಡವೆಗಳಿಗೆ ಅಸಂಖ್ಯಾತ ಮಹಿಳಾ ವೀಕ್ಷಕರು ಆಕರ್ಷಿತರಾಗಿದ್ದಾರೆ ಹಾಗೂ ಅವರನ್ನು ಅನುಕರಿಸುತ್ತಿದ್ದಾರೆ. ಇದೆಲ್ಲದಕ್ಕೂ ಅಖಿಲಾಂಡೇಶ್ವರಿ ಪಾತ್ರದಲ್ಲಿ ಅಭಿನಯಿಸುತ್ತಿರುವ ವಿನಯಾಪ್ರಸಾದ್ ಅವರು ತಮ್ಮನ್ನು ತಾವು ತೊಡಗಿಸಿಕೊಳ್ಳುವ ರೀತಿಗೆ ಅವರ ಶ್ರದ್ಧೆಗೆ ಎಲ್ಲರೂ ತಲೆಬಾಗುತ್ತಾರೆ ಎನ್ನುವುದು ಧಾರಾವಾಹಿ ತಂಡದ ಅಭಿಪ್ರಾಯವಾಗಿದೆ.


  ಇದನ್ನೂ ಓದಿ: Bollywood Gym Fashion: ಬಾಲಿವುಡ್ ತಾರೆಯರ ಜಿಮ್ ಫ್ಯಾಷನ್, ಬಿ-ಟೌನ್ ಟಾಪ್ ನಟಿ ಮಣಿಯರ ವರ್ಕೌಟ್ ಲುಕ್


  ಧೃತಿ ಕ್ರಿಯೇಷನ್ಸ್ ಅಡಿಯಲ್ಲಿ ನಿರ್ಮಾಣವಾಗುತ್ತಿರುವ ಈ ಧಾರಾವಾಹಿಗೆ ನಟ, ನಿರ್ಮಾಪಕ ದಿಲೀಪ್ ರಾಜ್ ಕ್ರಿಯೇಟಿವ್ ಡೈರೆಕ್ಟರ್ ಆಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಅವರ ಪತ್ನಿ ಶ್ರೀವಿದ್ಯಾರಾಜ್ ಅವರು ನಿರ್ಮಾಣದ ಜವಾಬ್ಧಾರಿ ಹೊತ್ತಿದ್ದಾರೆ. ಮತ್ತು ಮೊದಲ ಸಂಚಿಕೆಯಿಂದಲೂ ಗುರುಪ್ರಸಾದ್ ಮುಡೇನಹಳ್ಳಿ ಅವರು ಅದ್ಭುತವಾಗಿ ನಿರ್ದೇಶನ ಮಾಡುತ್ತಿದ್ದಾರೆ.

  Published by:Savitha Savitha
  First published: