Shrirasthu Shubhamasthu: 'ಶ್ರೀರಸ್ತು ಶುಭಮಸ್ತು' ಅಂತ ಕಿರುತೆರೆಗೆ ಬರ್ತಿದ್ದಾರೆ ಸುಧಾರಾಣಿ, ಜೀ ಕನ್ನಡದಲ್ಲಿ ಹೊಸ ಧಾರಾವಾಹಿ

ಈಗ ಜೀ ಕನ್ನಡದಲ್ಲಿ ಶ್ರೀರಸ್ತು ಶುಭಮಸ್ತು ಅಂತ ಮತ್ತೆ ಧಾರಾವಾಹಿ ಬರಲಿದೆ. ಇದರಲ್ಲಿ ನಟನ ಪಾತ್ರದಲ್ಲಿ ನಮ್ಮನೆ ಯುವರಾಣಿ ಖ್ಯಾತಿಯ ಅನಿ ಅಂದ್ರೆ ದೀಪಕ್ ಅಭಿನಯಿಸಲಿದ್ದಾರೆ. ದೀಪಕ್‍ನ ತಾಯಿ ಪಾತ್ರದಲ್ಲಿ ನಟಿ ಸುಧಾರಾಣಿ ಅಭಿನಯಿಸಲಿದ್ದಾರೆ.

ಶೀಘ್ರದಲ್ಲಿ ಶ್ರೀರಸ್ತು ಶುಭಮಸ್ತು ಧಾರಾವಾಹಿ

ಶೀಘ್ರದಲ್ಲಿ ಶ್ರೀರಸ್ತು ಶುಭಮಸ್ತು ಧಾರಾವಾಹಿ

 • Share this:
  ಜೀ ಕನ್ನಡ (Zee Kannada) ವಾಹಿನಿ (Channel) ಪ್ರೇಕ್ಷಕರಿಗೆ ಮನರಂಜನೆ (Entertainment) ನೀಡುವಲ್ಲಿ ಸದಾ ಮುಂದಿರುತ್ತೆ. ವಾರದ ದಿನಗಳಲ್ಲಿ ಜನಪ್ರಿಯ ಧಾರಾವಾಹಿಗಳ (Serials) ಮೂಲಕ ಜನರನ್ನು ರಂಜಿಸಿದ್ರೆ, ವಾರಾಂತ್ಯದಲ್ಲಿ ರಿಯಾಲಿಟಿ ಶೋ (Reality show) ಕಾರ್ಯಕ್ರಮಗಳ ಮೂಲಕ ಜನರನ್ನು ಹಿಡಿದಿಡುವಲ್ಲಿ ಯಶಸ್ವಿಯಾಗುತ್ತಿದೆ. ಈಗಾಗಲೇ ಪಾರು, ಹಿಟ್ಲರ್ ಕಲ್ಯಾಣ, ಪುಟ್ಟಕ್ಕನ ಮಕ್ಕಳು, ಗಟ್ಟಿಮೇಳ, ಜೊತೆ ಜೊತೆಯಲಿ, ಸತ್ಯ, ನಾಗಿಣಿ, ಕಮಲಿಯಂತಹ ಹಿಟ್ ಧಾರಾವಾಹಿಗಳನ್ನು ನೀಡುತ್ತಾ ಇದೆ. ಈಗ ಮತ್ತೊಂದು ಹೊಸ ಧಾರಾವಾಹಿ ಶೀಘ್ರದಲ್ಲೇ ಬರಲಿದೆ. ಅದೇ ಶ್ರೀರಸ್ತು ಶುಭಮಸ್ತು (Shrirasthu Shubhamasthu). ಈ ಧಾರಾವಾಹಿಯಲ್ಲಿ ನಟಿ ಸುಧಾರಾಣಿ (Sudha Rani) ಅವರು ಅಭಿನಯಿಸುತ್ತಿದ್ದಾರೆ. ನಟನ ಪಾತ್ರದಲ್ಲಿ ನಮ್ಮನೆ ಯುವರಾಣಿ ಖ್ಯಾತಿಯ ಅನಿ ಅಂದ್ರೆ ದೀಪಕ್ (Deepak) ಅಭಿನಯಿಸಲಿದ್ದಾರೆ. ಶೀಘ್ರದಲ್ಲಿ ಧಾರಾವಾಹಿ ಬರಲಿದೆ.

  ಹಳೆಯ ಶ್ರೀರಸ್ತು ಶುಭಮಸ್ತು ಧಾರಾವಾಹಿ
  ಶ್ರೀರಸ್ತು ಶುಭಮಸ್ತು ಧಾರಾವಾಹಿ ಹೆಸರನ್ನು ಎಲ್ಲರೂ ಕೇಳಿರುತ್ತೀರಿ. ಈಗಾಗಲೇ ಈ ಹೆಸರಿನಲ್ಲಿ ಒಂದು ಧಾರಾವಾಹಿ ಬಂದು ಹೋಗಿದೆ. ಅದರಲ್ಲಿ ಶ್ರೀ ಮಹದೇವ್, ಶ್ವೇತಾ ಆರ್ ಪ್ರಸಾದ್, ಸ್ವಾತಿ, ಸುಧಾ ಬೆಳವಾಡಿ, ಮಾಲತಿ ಸರ್‍ದೇಶಪಾಂಡೆಯಂತಹ ದಿಗ್ಗಜರು ನಟಿಸಿದ್ದರು. ಧಾರಾವಾಹಿ ಸಹ ಹಿಟ್ ಆಗಿತ್ತು.

  ಹೊಸ ಶ್ರೀರಸ್ತು ಶುಭಮಸ್ತು ಧಾರಾವಾಹಿ
  ಈಗ ಜೀ ಕನ್ನಡದಲ್ಲಿ ಶ್ರೀರಸ್ತು ಶುಭಮಸ್ತು ಅಂತ ಮತ್ತೆ ಧಾರಾವಾಹಿ ಬರಲಿದೆ. ಇದರಲ್ಲಿ ನಟನ ಪಾತ್ರದಲ್ಲಿ ನಮ್ಮನೆ ಯುವರಾಣಿ ಖ್ಯಾತಿಯ ಅನಿ ಅಂದ್ರೆ ದೀಪಕ್ ಅಭಿನಯಿಸಲಿದ್ದಾರೆ. ದೀಪಕ್‍ನ ತಾಯಿ ಪಾತ್ರದಲ್ಲಿ ನಟಿ ಸುಧಾರಾಣಿ ಅಭಿನಯಿಸಲಿದ್ದಾರೆ. ಹೊರಗಿನ ಜಗತ್ತು ಮರೆತು ತನ್ನ ಕುಟುಂಬಾನೇ ಒಂದು ಪ್ರಪಂಚ ಅಂತಾ ಬದುಕ್ತಿರೋ ಹೆಣ್ಣುಮಕ್ಕಳ ಕಥೆ ಇದಾಗಿದೆ. ಮನೆಗಾಗಿ ಜೀವನ ಮೀಸಲಿಟ್ಟಿರೋ ಪಾತ್ರದಲ್ಲಿ ಸುಧಾರಾಣಿ ಇದ್ದಾರೆ.

  ಇದನ್ನೂ ಓದಿ: Ramachari: ಒನಕೆ ಓಬವ್ವ ಮತ್ತೆ ಹುಟ್ಟಿ ಬರ್ತಿದ್ದಾರೆ! ರಾಮಾಚಾರಿ ಧಾರಾವಾಹಿಲಿ ಹೊಸ ಸಾಹಸ

  ಪ್ರೋಮೋದಲ್ಲಿ ಏನಿದೆ?
  ಧಾರಾವಾಹಿ ತಂಡವು ಪ್ರೋಮೋ ಬಿಟ್ಟಿದೆ. ಅದರಲ್ಲಿ ಸುಧಾರಾಣಿ ಮನೆಯವರಿಗಾಗಿ ಒಂದೇ ಸಮನೇ ಕೆಲಸ ಮಾಡುತ್ತಿರುವುದು ಕಾಣುತ್ತದೆ. ಬೆಳಗ್ಗಿನ ಪೇಪರ್ ಕೊಡುವುದರಿಂದ ಹಿಡಿದು, ಮಗನ ಶೂ ಪಾಲಿಶ್ ಮಾಡೋವರೆಗೂ ಎಲ್ಲಾ ಕೆಲಸ ಮಾಡುತ್ತಾಳೆ. ಗೃಹಿಣಿಯಾಗಿ ಇಡೀ ಮನೆಯನ್ನು ನಿಭಾಯಿಸುವ ಪಾತ್ರವನ್ನು ಸುಧಾರಾಣಿ ಮಾಡುತ್ತಿದ್ದಾರೆ.

  Zee Kannada serial, Kannada serial, Shrirasthu Shubhamasthu serial, ಶ್ರೀರಸ್ತು ಶುಭಮಸ್ತು ಧಾರಾವಾಹಿ, ಜೀ ಕನ್ನಡದಲ್ಲಿ ಪ್ರಸಾರವಾಗುವ ಧಾರಾವಾಹಿಗಳು, Kannada news, Karnataka news,
  ಸುಧಾರಾಣಿ-ದೀಪಕ್


  ಗಂಡ, ಮಕ್ಕಳು, ಮನೆ ಎಂದು ತನ್ನೆಲ್ಲ ಆಸೆಗಳನ್ನು ಪಕ್ಕಕ್ಕಿಟ್ಟು, ದಾಸಿ ರೀತಿ ಬೇರೆಯವರಿಗಾಗಿ ದಿನಪೂರ್ತಿ ದುಡಿಯುವ ಗೃಹಿಣಿ ಎಲ್ಲ ಇದ್ದರೂ ಒಮ್ಮೊಮ್ಮೆ ಒಂಟಿಯಾಗುತ್ತಾಳೆ. ಅವಳ ಪ್ರಪಂಚ ಬದಲಾಗಬೇಕು, ಬದಲಾಯಿಸುವೆ ಎಂಬ ಮಾತನ್ನು ಈ ಧಾರಾವಾಹಿ ಪ್ರೋಮೋದಲ್ಲಿ ಹೇಳಲಾಗಿದೆ.

  ಇದನ್ನೂ ಓದಿ: Kannadathi: ಸಾನಿಯಾ ಗುಟ್ಟು ಹರ್ಷನ ಮುಂದೆ ರಟ್ಟು, ಏನ್ ಪ್ಲ್ಯಾನ್ ಮಾಡಿದ್ರೂ ಅವಳಿಗೇ ತಿರುಗೇಟು!

  ಸುಧಾರಾಣಿ ಏನ್ ಹೇಳಿದ್ದಾರೆ?
  ಶ್ರೀರಸ್ತು ಶುಭಮಸ್ತು ಧಾರಾವಾಹಿಯಲ್ಲಿ ಸುಧಾರಾಣಿ ಅವರು ತುಳಸಿ ಎಂಬ ಪಾತ್ರವನ್ನು ನಿಭಾಯಿಸುತ್ತಿದ್ದಾರೆ. ಸೀರಿಯಲ್‍ನಲ್ಲಿ ಇಬ್ಬರು ಮಕ್ಕಳ ತಾಯಿ. ಕುಟುಂಬಕ್ಕಾಗಿ ಎಲ್ಲವನ್ನೂ ತ್ಯಾಗ ಮಾಡುವವಳು ತುಳಸಿ. ಈ ಧಾರಾವಾಹಿಯಲ್ಲಿ ಅತ್ತೆಯ ಪಾತ್ರಕ್ಕೆ ಬೆನ್ನೆಲುಬಾಗಿ ನಿಲ್ಲುವವಳೇ ಸೊಸೆ. ಹೊರಜಗತ್ತಿಗೆ ತುಳಸಿಯನ್ನು ಪರಿಚಯಿಸುವವಳೇ ಆಕೆಯ ಸೊಸೆ. ಈ ಕಥೆ ವಿಭಿನ್ನವಾಗಿದೆ ಎಂದು ಸುಧಾರಾಣಿ ಅವರು ಹೇಳಿದ್ದಾರೆ.

  Zee Kannada serial, Kannada serial, Shrirasthu Shubhamasthu serial, ಶ್ರೀರಸ್ತು ಶುಭಮಸ್ತು ಧಾರಾವಾಹಿ, ಜೀ ಕನ್ನಡದಲ್ಲಿ ಪ್ರಸಾರವಾಗುವ ಧಾರಾವಾಹಿಗಳು, Kannada news, Karnataka news,
  ದೀಪಕ್


  ಸದ್ಯದಲ್ಲಿ ಜೀ ಕನ್ನಡದಲ್ಲಿ ಶ್ರೀರಸ್ತು ಶುಭಮಸ್ತು ಹೊಸ ಧಾರಾವಾಹಿ ಬರಲಿದೆ. ಸುಧಾರಾಣಿ ಅಭಿನಯ ನೋಡಲು ಮಹಿಳಾ ಅಭಿಮಾನಿಗಳು ಕಾಯ್ತಾ ಇದ್ದಾರೆ.
  Published by:Savitha Savitha
  First published: