• Home
  • »
  • News
  • »
  • entertainment
  • »
  • Serial Timings: ಜೊತೆ ಜೊತೆಯಲಿ ಸೀರಿಯಲ್‍ಗೆ ಶಾಕ್, ರಾತ್ರಿ 8.30ಕ್ಕೆ ಶ್ರೀರಸ್ತು ಶುಭಮಸ್ತು !

Serial Timings: ಜೊತೆ ಜೊತೆಯಲಿ ಸೀರಿಯಲ್‍ಗೆ ಶಾಕ್, ರಾತ್ರಿ 8.30ಕ್ಕೆ ಶ್ರೀರಸ್ತು ಶುಭಮಸ್ತು !

ರಾತ್ರಿ 8.30ಕ್ಕೆ ಬರಲಿದೆ ಶ್ರೀರಸ್ತು ಶುಭಮಸ್ತು ಧಾರಾವಾಹಿ

ರಾತ್ರಿ 8.30ಕ್ಕೆ ಬರಲಿದೆ ಶ್ರೀರಸ್ತು ಶುಭಮಸ್ತು ಧಾರಾವಾಹಿ

ಇಷ್ಟು ದಿನ ಜೀ ಕನ್ನಡದಲ್ಲಿ ರಾತ್ರಿ 8.30ಕ್ಕೆ ಜೊತೆ ಜೊತೆಯಲಿ ಸೀರಿಯಲ್ ಧಾರಾವಾಹಿ ಪ್ರಸಾರವಾಗ್ತಿತ್ತು. ಈಗ ಅದೇ ಟೈಂಗೆ ಶ್ರೀರಸ್ತು ಶುಭಮಸ್ತು ಧಾರಾವಾಹಿ ಬರಲಿದೆ. ಹಾಗಾದ್ರೆ ಜೊತೆ ಜೊತೆಯಲಿ ಧಾರಾವಾಹಿ ಮುಗಿಯುತ್ತಾ? ಎಂಬ ಅನುಮಾನಗಳು ಶುರುವಾಗಿವೆ.

  • News18 Kannada
  • Last Updated :
  • Karnataka, India
  • Share this:

    ಜೀ ಕನ್ನಡ ವಾಹಿನಿ (Zee Kannada) ಪ್ರೇಕ್ಷಕರಿಗೆ ಮನರಂಜನೆ (Entertainment) ನೀಡುವಲ್ಲಿ ಸದಾ ಮುಂದಿರುತ್ತೆ. ವಾರದ ದಿನಗಳಲ್ಲಿ ಜನಪ್ರಿಯ ಧಾರಾವಾಹಿಗಳ (Serial) ಮೂಲಕ ಜನರನ್ನು ರಂಜಿಸಿದ್ರೆ, ವಾರಾಂತ್ಯದಲ್ಲಿ ರಿಯಾಲಿಟಿ ಶೋ ಕಾರ್ಯಕ್ರಮಗಳ ಮೂಲಕ ಜನರನ್ನು ಹಿಡಿದಿಡುವಲ್ಲಿ ಯಶಸ್ವಿಯಾಗುತ್ತಿದೆ. ಈಗಾಗಲೇ ಪಾರು, ಹಿಟ್ಲರ್ ಕಲ್ಯಾಣ, ಪುಟ್ಟಕ್ಕನ ಮಕ್ಕಳು, ಗಟ್ಟಿಮೇಳ, ಜೊತೆ ಜೊತೆಯಲಿ, ಸತ್ಯ, ನಾಗಿಣಿಯಂತಹ ಹಿಟ್ ಧಾರಾವಾಹಿಗಳನ್ನು ನೀಡುತ್ತಾ ಇದೆ. ಈಗ ಮತ್ತೊಂದು ಹೊಸ ಧಾರಾವಾಹಿ ಶೀಘ್ರದಲ್ಲೇ ಬರಲಿದೆ. ಅದೇ ಶ್ರೀರಸ್ತು ಶುಭಮಸ್ತು (Shrirasthu Shubhamasthu) ಈ ಧಾರಾವಾಹಿಯಲ್ಲಿ ನಟಿ ಸುಧಾರಾಣಿ ಅವರು ಅಭಿನಯಿಸುತ್ತಿದ್ದಾರೆ. ನಟನ ಪಾತ್ರದಲ್ಲಿ ನಮ್ಮನೆ ಯುವರಾಣಿ ಖ್ಯಾತಿಯ ಅನಿ ಅಂದ್ರೆ ದೀಪಕ್ ಅಭಿನಯಿಸಲಿದ್ದಾರೆ. ಧಾರಾವಾಹಿಯು ಅಕ್ಟೋಬರ್ 31 (October 31st) ರಿಂದ ರಾತ್ರಿ 8.30ಕ್ಕೆ ಪ್ರಸಾರವಾಗಲಿದೆ. ಹಾಗಾದ್ರೆ ಜೊತೆ ಜೊತೆಯಲಿ ಕಥೆ ಏನು?


    ರಾತ್ರಿ 8.30ಕ್ಕೆ ಶ್ರೀರಸ್ತು ಶುಭಮಸ್ತು
    ಜೀ ಕನ್ನಡದಲ್ಲಿ ಶ್ರೀರಸ್ತು ಶುಭಮಸ್ತು ಅನ್ನೂ ಹೊಸ ಧಾರಾವಾಹಿ ಅಕ್ಟೋಬರ್ 31 ರಿಂದ ರಾತ್ರಿ 8.30ಕ್ಕೆ ಪ್ರಸಾರವಾಗಲಿದೆ. ಇದರಲ್ಲಿ ನಟನ ಪಾತ್ರದಲ್ಲಿ ನಮ್ಮನೆ ಯುವರಾಣಿ ಖ್ಯಾತಿಯ ಅನಿ ಅಂದ್ರೆ ದೀಪಕ್ ಅಭಿನಯಿಸಲಿದ್ದಾರೆ. ದೀಪಕ್‍ನ ತಾಯಿ ಪಾತ್ರದಲ್ಲಿ ನಟಿ ಸುಧಾರಾಣಿ ಅಭಿನಯಿಸಲಿದ್ದಾರೆ. ಹೊರಗಿನ ಜಗತ್ತು ಮರೆತು ತನ್ನ ಕುಟುಂಬಾನೇ ಒಂದು ಪ್ರಪಂಚ ಅಂತಾ ಬದುಕ್ತಿರೋ ಹೆಣ್ಣುಮಕ್ಕಳ ಕಥೆ ಇದಾಗಿದೆ. ಮನೆಗಾಗಿ ಜೀವನ ಮೀಸಲಿಟ್ಟಿರೋ ಪಾತ್ರದಲ್ಲಿ ಸುಧಾರಾಣಿ ಇದ್ದಾರೆ.


    ಜೊತೆ ಜೊತೆಯಲಿ ಕಥೆ ಏನು?
    ಇಷ್ಟು ದಿನ ಜೀ ಕನ್ನಡದಲ್ಲಿ ರಾತ್ರಿ 8.30ಕ್ಕೆ ಜೊತೆ ಜೊತೆಯಲಿ ಸೀರಿಯಲ್ ಧಾರಾವಾಹಿ ಪ್ರಸಾರವಾಗ್ತಿತ್ತು. ಈಗ ಅದೇ ಟೈಂಗೆ ಶ್ರೀರಸ್ತು ಶುಭಮಸ್ತು ಧಾರಾವಾಹಿ ಬರಲಿದೆ. ಹಾಗಾದ್ರೆ ಜೊತೆ ಜೊತೆಯಲಿ ಧಾರಾವಾಹಿ ಮುಗಿಯುತ್ತಾ? ಎಂಬ ಅನುಮಾನಗಳು ಶುರುವಾಗಿವೆ. ಅಥವಾ ಜೊತೆ ಜೊತೆಯಲಿ ಧಾರಾವಾಹಿಯನ್ನು ಬೇರೆ ಟೈಂಗೆ ಹಾಕ್ತಾರಾ ಕಾದು ನೋಡಬೇಕು.


    ಇದನ್ನೂ ಓದಿ: Ramachari: ಚಾರು ಹುಡುಕಲು ದಟ್ಟ ಕಾಡಿನಲ್ಲಿ ರಾಮಾಚಾರಿ ಹೆಜ್ಜೆ! ಉಳಿಯುತ್ತಾ ಕೊಬ್ಬಿದ ರಾಣಿ ಪ್ರಾಣ?


    ಅನಿರುದ್ಧ್ ಇಲ್ಲದೇ ಧಾರಾವಾಹಿಗೆ ಹೊಡೆತ ಬಿತ್ತಾ?
    ಜೊತೆ ಜೊತೆಯಲ್ಲಿ ಧಾರಾವಾಹಿಗೆ ತುಂಬಾ ಜನ ಅಭಿಮಾನಿಗಳು ಇದ್ರು. ಅದರಲ್ಲೂ ಆರ್ಯನ ಪಾತ್ರ ಮಾಡ್ತಿದ್ದ ಅನಿರುದ್ಧ್ ಗಾಗಿ ಅದೆಷ್ಟೋ ಅಭಿಮಾನಿಗಳು ಸೀರಿಯಲ್ ನೋಡ್ತಾ ಇದ್ರು. ಈಗ ಅವರಿಲ್ಲದ ಧಾರಾವಾಹಿಯನ್ನು ಜನ ನೋಡ್ತಾ ಇಲ್ವಾ? ಅದಕ್ಕೆ ಧಾರಾವಾಹಿ ಸಮಯವನ್ನು ಬದಲು ಮಾಡಿದ್ರಾ ಅನ್ನೋ ಪ್ರಶ್ನೆಗಳು ಎದ್ದಿವೆ.


    zee kannada new serial, shrirasthu shubhamasthu start october 31st, what about jothe jotheyali serial, ಜೊತೆ ಜೊತೆಯಲಿ ಸೀರಿಯಲ್‍ಗೆ ಶಾಕ್, ರಾತ್ರಿ 8.30ಕ್ಕೆ ಬರಲಿದೆ ಶ್ರೀರಸ್ತು ಶುಭಮಸ್ತು ಧಾರಾವಾಹಿ, kannada news, karnataka news,
    ಅನಿರುದ್ಧ್


    ಸುಧಾರಾಣಿ ಏನ್ ಹೇಳಿದ್ದಾರೆ?
    ಶ್ರೀರಸ್ತು ಶುಭಮಸ್ತು ಧಾರಾವಾಹಿಯಲ್ಲಿ ಸುಧಾರಾಣಿ ಅವರು ತುಳಸಿ ಎಂಬ ಪಾತ್ರವನ್ನು ನಿಭಾಯಿಸುತ್ತಿದ್ದಾರೆ. ಸೀರಿಯಲ್‍ನಲ್ಲಿ ಇಬ್ಬರು ಮಕ್ಕಳ ತಾಯಿ. ಕುಟುಂಬಕ್ಕಾಗಿ ಎಲ್ಲವನ್ನೂ ತ್ಯಾಗ ಮಾಡುವವಳು ತುಳಸಿ. ಈ ಧಾರಾವಾಹಿಯಲ್ಲಿ ಅತ್ತೆಯ ಪಾತ್ರಕ್ಕೆ ಬೆನ್ನೆಲುಬಾಗಿ ನಿಲ್ಲುವವಳೇ ಸೊಸೆ. ಹೊರಜಗತ್ತಿಗೆ ತುಳಸಿಯನ್ನು ಪರಿಚಯಿಸುವವಳೇ ಆಕೆಯ ಸೊಸೆ. ಈ ಕಥೆ ವಿಭಿನ್ನವಾಗಿದೆ ಎಂದು ಸುಧಾರಾಣಿ ಅವರು ಹೇಳಿದ್ದಾರೆ.


    zee kannada new serial, shrirasthu shubhamasthu start october 31st, what about jothe jotheyali serial, ಜೊತೆ ಜೊತೆಯಲಿ ಸೀರಿಯಲ್‍ಗೆ ಶಾಕ್, ರಾತ್ರಿ 8.30ಕ್ಕೆ ಬರಲಿದೆ ಶ್ರೀರಸ್ತು ಶುಭಮಸ್ತು ಧಾರಾವಾಹಿ, kannada news, karnataka news,
    ಸುಧಾರಾಣಿ-ದೀಪಕ್


    ಹಳೆಯ ಶ್ರೀರಸ್ತು ಶುಭಮಸ್ತು ಧಾರಾವಾಹಿ
    ಶ್ರೀರಸ್ತು ಶುಭಮಸ್ತು ಧಾರಾವಾಹಿ ಹೆಸರನ್ನು ಎಲ್ಲರೂ ಕೇಳಿರುತ್ತೀರಿ. ಈಗಾಗಲೇ ಈ ಹೆಸರಿನಲ್ಲಿ ಒಂದು ಧಾರಾವಾಹಿ ಬಂದು ಹೋಗಿದೆ. ಅದರಲ್ಲಿ ಶ್ರೀ ಮಹದೇವ್, ಶ್ವೇತಾ ಆರ್ ಪ್ರಸಾದ್, ಸ್ವಾತಿ, ಸುಧಾ ಬೆಳವಾಡಿ, ಮಾಲತಿ ಸರ್​ದೇಶಪಾಂಡೆಯಂತಹ ದಿಗ್ಗಜರು ನಟಿಸಿದ್ದರು. ಧಾರಾವಾಹಿ ಸಹ ಹಿಟ್ ಆಗಿತ್ತು.


    ಇದನ್ನೂ ಓದಿ: Bhagya Lakshmi: ಭಾಗ್ಯ ಗಂಡನ ಗರ್ಲ್ ಫ್ರೆಂಡ್ ಬೇರೆ ಯಾರೂ ಅಲ್ಲ, ಚಿ ಸೌ ಸಾವಿತ್ರಿ ಸೀರಿಯಲ್‍ನ ಗೌತಮಿ!


    ಹೊಸ ಧಾರಾವಾಹಿ ಬರುತ್ತಿರುವುದು ಖುಷಿಯ ವಿಚಾರವೇ, ಆದ್ರೆ ಜೊತೆ ಜೊತೆಯಲಿ ಧಾರಾವಾಹಿ ಏನ್ ಮಾಡ್ತೀರಾ? ಯಾವ ವೇಳೆಗೆ ಹಾಕ್ತೀರಿ ಎಂದು ಅಭಿಮಾನಿಗಳು ಕೇಳ್ತಾ ಇದ್ದಾರೆ.

    Published by:Savitha Savitha
    First published: