• Home
  • »
  • News
  • »
  • entertainment
  • »
  • Super Queen: ಸೂಪರ್ ಕ್ವೀನ್ ಕಾರ್ಯಕ್ರಮದಲ್ಲಿ ಗೀತಾ ಭಟ್, ತನ್ನ ಆಸೆ ಈಡೇರಿದ ಖುಷಿಯಲ್ಲಿ ನಟಿ!

Super Queen: ಸೂಪರ್ ಕ್ವೀನ್ ಕಾರ್ಯಕ್ರಮದಲ್ಲಿ ಗೀತಾ ಭಟ್, ತನ್ನ ಆಸೆ ಈಡೇರಿದ ಖುಷಿಯಲ್ಲಿ ನಟಿ!

ಸೂಪರ್ ಕ್ವೀನ್ ಕಾರ್ಯಕ್ರಮದಲ್ಲಿ ಗೀತಾ ಭಟ್

ಸೂಪರ್ ಕ್ವೀನ್ ಕಾರ್ಯಕ್ರಮದಲ್ಲಿ ಗೀತಾ ಭಟ್

ಚಿಕ್ಕ ವಯಸ್ಸಿನಿಂದ ನನಗೆ ಇರೋ ವಿಶ್ ಅಂದ್ರೆ ಅಪ್ಪನನ್ನು ಹಗ್ ಮಾಡಬೇಕು ಎನ್ನುವುದಂತೆ. ನಾನು ಇಲ್ಲಿಯವರೆಗೂ ಅಪ್ಪನನ್ನು ಒಂದು ಸಲವೂ ಹಗ್ ಮಾಡಿಲ್ಲ ಎಂದು ಗೀತಾ ಭಟ್ ಹೇಳಿದ್ದಾರೆ.

  • News18 Kannada
  • Last Updated :
  • Karnataka, India
  • Share this:

    ಜೀ ಕನ್ನಡ (Zee Kannada) ವಾಹಿನಿ ಪ್ರೇಕ್ಷಕರಿಗೆ ಮನರಂಜನೆ (Entertainment) ನೀಡುವಲ್ಲಿ ಸದಾ ಮುಂದಿರುತ್ತೆ. ವಾರದ ದಿನಗಳಲ್ಲಿ ಜನಪ್ರಿಯ ಧಾರಾವಾಹಿಗಳ (Serials) ಮೂಲಕ ಜನರನ್ನು ರಂಜಿಸಿದ್ರೆ, ವಾರಾಂತ್ಯದಲ್ಲಿ ರಿಯಾಲಿಟಿ ಶೋ ಕಾರ್ಯಕ್ರಮಗಳ ಮೂಲಕ ಜನರನ್ನು ಹಿಡಿದಿಡುವಲ್ಲಿ ಯಶಸ್ವಿಯಾಗುತ್ತಿದೆ. ಈಗಾಗಲೇ ಪಾರು, ಹಿಟ್ಲರ್ ಕಲ್ಯಾಣ, ಪುಟ್ಟಕ್ಕನ ಮಕ್ಕಳು, ಗಟ್ಟಿಮೇಳ, ಶ್ರೀರಸ್ತು ಶುಭಮಸ್ತು, ಜೊತೆ ಜೊತೆಯಲಿ, ಸತ್ಯ, ನಾಗಿಣಿಯಂತಹ ಹಿಟ್ ಧಾರಾವಾಹಿಗಳನ್ನು ನೀಡುತ್ತಾ ಇದೆ. ಈಗ ಮತ್ತೊಂದು ನೂತನ ರಿಯಾಲಿಟಿ ಶೋ ಕಾರ್ಯಕ್ರಮವನ್ನು ಪರಿಚಯಿಸಿದೆ. ಸೂಪರ್ ಕ್ವೀನ್ (Super Queen) ಎಂಬ ರಿಯಾಲಿಟಿ ಶನಿವಾರದಿಂದ ಶುರುವಾಗಿದೆ. ಶನಿವಾರ ಮತ್ತು ಭಾನುವಾರ ಸಂಜೆ 6 ಗಂಟೆಗೆ ಕಾರ್ಯಕ್ರಮ ಪ್ರಸಾರವಾಗುತ್ತಿದೆ. ಈ ಕಾರ್ಯಕ್ರಮದಲ್ಲಿ ನಟಿ ಗೀತಾ ಭಟ್ (Geetha Bhat) ತಮ್ಮ ಖುಷಿ-ನೋವು ಹಂಚಿಕೊಂಡಿದ್ದಾರೆ.


    ಸೂಪರ್ ಕ್ವೀನ್ ಕಾರ್ಯಕ್ರಮ
    ಸೂಪರ್ ಕ್ವೀನ್ ಕಾರ್ಯಕ್ರಮವನ್ನು ಹೆಣ್ಣು ಮಕ್ಕಳಿಗಾಗಿ ಶುರುಮಾಡಲಾಗಿದೆ. ಈ ಕಾರ್ಯಕ್ರಮದಲ್ಲಿ ಹೆಣ್ಣು ಮಕ್ಕಳು ಸ್ಟ್ರಾಂಗ್ ಎನ್ನುವುದನ್ನು ತೋರಿಸಿ ಕೊಡಲಾಗುತ್ತೆ. ಕಾರ್ಯಕ್ರಮದ ಜಡ್ಜ್ ಗಳಾಗಿ ನಟ ವಿಜಯ ರಾಘವೇಂದ್ರ, ನಟಿ ರಚಿತ್ ರಾಮ್ ಇದ್ದಾರೆ. ನಿರೂಪಕರಾಗಿ ಕುರಿ ಪ್ರತಾಪ್, ಶ್ವೇತಾ ಚೆಂಗಪ್ಪ ಇದ್ದಾರೆ. ಸ್ಪರ್ಧಿಗಳಾಗಿ ಸೀರಿಯಲ್ ಕಲಾವಿದರು, ಗಾಯಕರು ಎಂಟ್ರಿ ಆಗಿದ್ದಾರೆ.


    ಸೂಪರ್ ಕ್ವೀನ್ ಕಾರ್ಯಕ್ರಮಕ್ಕೆ ನಟಿ ಗೀತಾ ಭಟ್
    ಬ್ರಹ್ಮಗಂಟು ಧಾರಾವಾಹಿಯಲ್ಲಿ ಲಕ್ಕಿಯ ಮುದ್ದಿನ ಮಡದಿ ಪಾತ್ರ ಮಾಡಿದ್ದಳು ಗೀತಾ. ಅವಳು ಇರುವ ದಪ್ಪಕ್ಕೆ ಅವಳನ್ನು ಎಲ್ಲರೂ ಗುಂಡಮ್ಮ ಗುಂಡಮ್ಮ ಎಂದು ರೇಗಿಸುತ್ತಿದ್ದರು. ಈಗ ಅದೇ ಗುಂಡಮ್ಮ ಸೂಪರ್ ಕ್ವೀನ್ ಕಾರ್ಯಕ್ರಮಕ್ಕೆಎಂಟ್ರಿ ಆಗಿದ್ದಾರೆ. ಕಾರ್ಯಕ್ರಮದಲ್ಲಿ ತಮ್ಮ ಮನದ ಮಾತು ಹಂಚಿಕೊಂಡಿದ್ದಾರೆ.


    zee kannada program, super queen reality show, actress geetha bhat, geetha nhat dream come true, ಸೂಪರ್ ಕ್ವೀನ್ ಕಾರ್ಯಕ್ರಮದಲ್ಲಿ ಗೀತಾ ಭಟ್, ತನ್ನ ಆಸೆ ಈಡೇರಿದ ಖುಷಿಯಲ್ಲಿ ನಟಿ!, kannada news, karnataka news,
    ಸೂಪರ್ ಕ್ವೀನ್ ಕಾರ್ಯಕ್ರಮಕ್ಕೆ ನಟಿ ಗೀತಾ ಭಟ್


    ಇದನ್ನೂ ಓದಿ: Nammamma Super Star: ನಮ್ಮಮ್ಮ ಸೂಪರ್ ಸ್ಟಾರ್ ಸೀಸನ್ 2ಗೆ ವಂಶಿಯೇ ಬಾಸ್! ಸ್ಪರ್ಧಿಗಳ ಕಾಲೆಳೆದಿದ್ದು ಹೇಗೆ ಗೊತ್ತಾ?


    ನಟಿ ಗೀತಾ ಭಟ್ ಹೇಳಿದ್ದೇನು?
    'ಕಾಲೇಜಿನಲ್ಲಿ ಇದ್ದಾಗ, ಸ್ಕೂಲ್ ನಲ್ಲಿ ಇದ್ದಾಗ ನಾನು ಈ ರೀತಿ ದಪ್ಪ ಇರುವುದರಿಂದ ತುಂಬಾ ಜನ ಗೇಲಿ ಮಾಡ್ತಾ ಇದ್ರು. ತುಂಬಾ ಜನ ತಮಾಷೆ ಮಾಡ್ತಾ ಇದ್ರು. ಬೇರೆ ಬೇರೆ ಹೆಸರುಗಳಲ್ಲಿ ಕರೆಯುತ್ತಿದ್ರು. ಡುಮ್ಮಿ, ಆಲದ ಮರ, ಪೂರಿ ಮೂಟೆ ಏನೇನೋ ಹೇಳ್ತಾ ಇದ್ರು. ಯಾವ ರೇಷನ್ ಅಕ್ಕಿ ತಿನ್ನಿಸುತ್ತೀರಾ? ನಿಮ್ಮ ಮಗಳಿಗೆ ಎಂದು ನಮ್ಮ ಅಪ್ಪ ಅಮ್ಮನ ಬಳಿ ಕೇಳ್ತಾ ಇದ್ರು. ನಿನ್ ಯಾರು ಮದುವೆ ಆಗ್ತಾರೆ? ಎಂದು ಕೇಳ್ತಾ ಇದ್ರು.



    ಆಗ ನನಗೆ ಮನಸ್ಸಿಗೆ ಒಂದು ರೀತಿ ಹಿಂಸೆ ಆಗ್ತಾ ಇತ್ತು. ಆದ್ರೆ ಈ ತರದ್ದು ಒಂದು ಅವಕಾಶ ಬರುತ್ತೆ. ನನಗೆ ಇರೋ ಒಂದು ಮೈನಸ್ ಪ್ಲಸ್ ಆಗಿ ಬದಲಾಗುತ್ತೆ ಅಂತ ಕನಸು ಮನಸಲ್ಲೂ ಅಂದುಕೊಂಡಿರಲಿಲ್ಲ. ಅಲ್ಲಿಂದ ಇಲ್ಲಿಗೆ ಬರೋಕೆ ಒಂದು ಜರ್ನಿ ಇತ್ತಲ್ಲ, ಆ ಜರ್ನಿಯಲ್ಲಿ ತುಂಬಾ ಕಲಿತಿದ್ದೇನೆ. ತುಂಬಾ ವಿಷಯಗಳನ್ನು ಕಳ್ಕೊಂಡಿದೀನಿ, ಪಡೆದುಕೊಂಡಿದ್ದೇನೆ. ನಾನು 30 ಕೆ.ಜಿ ತೂಕ ಕಳೆದುಕೊಂಡಿದ್ದೇನೆ. ಇನ್ನೂ 30 ಕೆಜಿ ತೂಕ ಕಳೆದುಕೊಳ್ಳುವ ಗೋಲ್ ಇದೆ.' ಎಂದು ಗೀತಾ ಭಟ್ ಹೇಳಿದ್ದಾರೆ.


    ಗೀತಾ ಅವರ ನೇರವೇರದ ಕನಸು ನನಸಾಯ್ತು
    ಚಿಕ್ಕ ವಯಸ್ಸಿನಿಂದ ನನಗೆ ಇರೋ ವಿಶ್ ಅಂದ್ರೆ ಅಪ್ಪನನ್ನು ಹಗ್ ಮಾಡಬೇಕು ಎನ್ನುವುದಂತೆ. ನಾನುಇಲ್ಲಿಯವರೆಗೂ ಅಪ್ಪನನ್ನು ಒಂದು ಸಲವೂ ಹಗ್ ಮಾಡಿಲ್ಲ.


    zee kannada program, super queen reality show, actress geetha bhat, geetha nhat dream come true, ಸೂಪರ್ ಕ್ವೀನ್ ಕಾರ್ಯಕ್ರಮದಲ್ಲಿ ಗೀತಾ ಭಟ್, ತನ್ನ ಆಸೆ ಈಡೇರಿದ ಖುಷಿಯಲ್ಲಿ ನಟಿ!, kannada news, karnataka news,
    ಗೀತಾ ಅವರ ನೇರವೇರದ ಕನಸು ನನಸಾಯ್ತು


    ಇದನ್ನೂ ಓದಿ: Bigg Boss Kannada: ಬಿಗ್ ಬಾಸ್ ಮನೆಯಿಂದ ದೀಪಿಕಾ ದಾಸ್ ಔಟ್, ಸ್ಟ್ರಾಂಗ್ ಅಭ್ಯರ್ಥಿ ಆದ್ರೂ ಆಟ ನಡೆಯಲಿಲ್ಲ! 


    ನಮ್ಮ ಕುಟುಂಬದಲ್ಲಿ ಗೌರವ ಹೆಚ್ಚು. ಅದಕ್ಕೆ ಯಾರನ್ನೂ ಮುಟ್ಟುವುದಿಲ್ಲ. ಎಲ್ಲ ಅಪ್ಪ ಮಗಳನ್ನು ನೋಡಿದಾಗ, ನಾನು ಅಪ್ಪನನ್ನು ಹಗ್ ಮಾಡಬೇಕು ಎನ್ನಿಸುತ್ತೆ ಎಂದಿದ್ದಾರೆ. ವಾಹಿನಿಯವರು ಗೀತಾ ಆಸೆ ನೆರವೇರಿಸಿದ್ದಾರೆ.

    Published by:Savitha Savitha
    First published: