• Home
 • »
 • News
 • »
 • entertainment
 • »
 • Super Queen: ಅಪ್ಪ-ಅಮ್ಮ ಇಲ್ಲದ ಐಶ್ವರ್ಯ ಬಹಳ ಗಟ್ಟಿಗಿತ್ತಿ, ಸೂಪರ್ ಕ್ವೀನ್ ನಲ್ಲಿ ಸ್ಪರ್ಧಿ!

Super Queen: ಅಪ್ಪ-ಅಮ್ಮ ಇಲ್ಲದ ಐಶ್ವರ್ಯ ಬಹಳ ಗಟ್ಟಿಗಿತ್ತಿ, ಸೂಪರ್ ಕ್ವೀನ್ ನಲ್ಲಿ ಸ್ಪರ್ಧಿ!

ಅಪ್ಪ-ಅಮ್ಮ ಇಲ್ಲದ ಐಶ್ವರ್ಯ ಗಟ್ಟಿಗಿತ್ತಿ

ಅಪ್ಪ-ಅಮ್ಮ ಇಲ್ಲದ ಐಶ್ವರ್ಯ ಗಟ್ಟಿಗಿತ್ತಿ

ಚಿಕ್ಕ ವಯಸ್ಸಿನಿಂದ ನಾನು, ತಂದೆ, ತಾಯಿ ಅಷ್ಟೆ. ನಾವು ತುಂಬಾ ಕ್ಲೋಸ್ ಆಗಿದ್ವಿ. ಆ ರೀತಿ ಇರುವಾಗ ಒಂದು ಪಿಲ್ಲರ್ ಬಿದ್ರೂ, ಬಿಲ್ಡಿಂಗ್ ಬಿದ್ದು ಹೋಗುತ್ತೆ. ನನ್ನ ಜೀವನ ಇಟ್ಟಿಗೆಯಾಗಿ ಉಳಿದಿದೆ ಎಂದು ನಟಿ ಐಶ್ವರ್ಯ ಬೇಸರದಿಂದ ಹೇಳಿದ್ದಾರೆ.

 • News18 Kannada
 • Last Updated :
 • Karnataka, India
 • Share this:

  ಜೀ ಕನ್ನಡ (Zee Kannada) ವಾಹಿನಿ ಪ್ರೇಕ್ಷಕರಿಗೆ ಮನರಂಜನೆ ನೀಡುವಲ್ಲಿ ಸದಾ ಮುಂದಿರುತ್ತೆ. ವಾರದ ದಿನಗಳಲ್ಲಿ ಜನಪ್ರಿಯ ಧಾರಾವಾಹಿಗಳ (Serials) ಮೂಲಕ ಜನರನ್ನು ರಂಜಿಸಿದ್ರೆ, ವಾರಾಂತ್ಯದಲ್ಲಿ ರಿಯಾಲಿಟಿ ಶೋ ಕಾರ್ಯಕ್ರಮಗಳ ಮೂಲಕ ಜನರನ್ನು ಹಿಡಿದಿಡುವಲ್ಲಿ ಯಶಸ್ವಿಯಾಗುತ್ತಿದೆ. ಈಗಾಗಲೇ ಪಾರು, ಹಿಟ್ಲರ್ ಕಲ್ಯಾಣ, ಪುಟ್ಟಕ್ಕನ ಮಕ್ಕಳು, ಗಟ್ಟಿಮೇಳ, ಶ್ರೀರಸ್ತು ಶುಭಮಸ್ತು, ಜೊತೆ ಜೊತೆಯಲಿ, ಸತ್ಯ, ನಾಗಿಣಿಯಂತಹ ಹಿಟ್ ಧಾರಾವಾಹಿಗಳನ್ನು ನೀಡುತ್ತಾ ಇದೆ. ಈಗ ಮತ್ತೊಂದು ನೂತನ ರಿಯಾಲಿಟಿ ಶೋ ಕಾರ್ಯಕ್ರಮವನ್ನು ಪರಿಚಯಿಸಿದೆ. ಸೂಪರ್ ಕ್ವೀನ್ (Super Queen) ಎಂಬ ರಿಯಾಲಿಟಿ ಶೋ  (Reality Show)ಶನಿವಾರದಿಂದ ಶುರುವಾಗಿದೆ. ಶನಿವಾರ ಮತ್ತು ಭಾನುವಾರ ಸಂಜೆ 6 ಗಂಟೆಗೆ ಕಾರ್ಯಕ್ರಮ ಪ್ರಸಾರವಾಗುತ್ತಿದೆ. ಈ ಕಾರ್ಯಕ್ರಮದಲ್ಲಿ ನಟಿ ಐಶ್ವರ್ಯ ಭಾಗವಹಿಸಿದ್ದಾರೆ. ಈಕೆಗೆ ಅಪ್ಪ-ಅಮ್ಮ ಇಬ್ಬರೂ ಇಲ್ಲ.


  ಸೂಪರ್ ಕ್ವೀನ್ ಕಾರ್ಯಕ್ರಮ
  ಸೂಪರ್ ಕ್ವೀನ್ ಕಾರ್ಯಕ್ರಮವನ್ನು ಹೆಣ್ಣು ಮಕ್ಕಳಿಗಾಗಿ ಶುರು ಮಾಡಲಾಗಿದೆ. ಈ ಕಾರ್ಯಕ್ರಮದಲ್ಲಿ ಹೆಣ್ಣು ಮಕ್ಕಳು ಸ್ಟ್ರಾಂಗ್ ಎನ್ನುವುದನ್ನು ತೋರಿಸಿ ಕೊಡಲಾಗುತ್ತೆ. ಕಾರ್ಯಕ್ರಮದ ಜಡ್ಜ್ ಗಳಾಗಿ ನಟ ವಿಜಯ ರಾಘವೇಂದ್ರ, ನಟಿ ರಚಿತ್ ರಾಮ್ ಇದ್ದಾರೆ. ನಿರೂಪಕರಾಗಿ ಕುರಿ ಪ್ರತಾಪ್, ಶ್ವೇತಾ ಚೆಂಗಪ್ಪ ಇದ್ದಾರೆ. ಸ್ಪರ್ಧಿಗಳಾಗಿ ಸೀರಿಯಲ್ ಕಲಾವಿದರು, ಗಾಯಕರು ಎಂಟ್ರಿ ಆಗಿದ್ದಾರೆ.


  ಸೂಪರ್ ಕ್ವೀನ್ ಕಾರ್ಯಕ್ರಮಕ್ಕೆ ಐಶ್ವರ್ಯ
  ನಾಗಿಣಿ ಧಾರಾವಾಹಿಯಲ್ಲಿ ಐಶ್ವರ್ಯ ಅವರು ಮಾಯಾಂಗನೆ ಪಾತ್ರ ನಿರ್ವಹಿಸುತ್ತಿದ್ದಾರೆ. ಮಂಗಳಗೌರಿ ಧಾರಾವಾಹಿಯಲ್ಲೂ ಸಹ ನಟಿಸಿದ್ದರು. ಈಗ ನಟಿ ಐಶ್ವರ್ಯ ಸೂಪರ್ ಕ್ವೀನ್ ಕಾರ್ಯಕ್ರಮಕ್ಕೆ ಬಂದಿದ್ದಾರೆ. ಐಶ್ವರ್ಯಾ ಅವರ ಸೂಪರ ಕ್ವೀನ್ ಅವರ ತಾಯಿಯಂತೆ. ನನಗೆ ನನ್ನ ಅಮ್ಮ ಯಾಕೆ ಸೂಪರ್ ಕ್ವೀನ್ ಅಂದ್ರೆ, ಅವಳು ವರ್ಕಿಂಗ್ ವುಮೆನ್ ಮತ್ತು ಒಳ್ಳೆ ಡ್ಯಾನ್ಸರ್.


  ಇದನ್ನೂ ಓದಿ: PM Modi Wish: ಈ ಪ್ರಶಸ್ತಿಗೆ ನೀವು ಅರ್ಹರು, ಮೆಗಾ ಸ್ಟಾರ್ ಚಿರಂಜೀವಿ ಹೊಗಳಿದ ಪ್ರಧಾನಿ ಮೋದಿ 


  ಅಪ್ಪ-ಅಮ್ಮ ಇಲ್ಲದ ಐಶ್ವರ್ಯ ಗಟ್ಟಿಗಿತ್ತಿ
  ಅಪ್ಪ-ಅಮ್ಮ ಎಲ್ಲರಿಗೂ ತುಂಬಾ ಮುಖ್ಯ. ತಂದೆ-ತಾಯಿ ಇಲ್ಲ ಅನ್ನೋ ಸಂದರ್ಭ ಒದಗಿಬರುತ್ತೆ ಅಂತ ಜೀವನದಲ್ಲಿ ಅಂದುಕೊಂಡಿರಲಿಲ್ಲ. ಏಕಂದ್ರೆ, ಚಿಕ್ಕ ವಯಸ್ಸಿನಿಂದ ನಾನು, ತಂದೆ, ತಾಯಿ ಅಷ್ಟೆ. ನಾವು ತುಂಬಾ ಕ್ಲೋಸ್ ಆಗಿದ್ವಿ. ಆ ರೀತಿ ಇರುವಾಗ ಒಂದು ಪಿಲ್ಲರ್ ಬಿದ್ರೂ, ಬಿಲ್ಡಿಂಗ್ ಬಿದ್ದು ಹೋಗುತ್ತೆ. ನನ್ನ ಜೀವನ ಇಟ್ಟಿಗೆಯಾಗಿ ಉಳಿದಿದೆ ಎಂದು ನಟಿ ಐಶ್ವರ್ಯ ಬೇಸರದಿಂದ ಹೇಳಿದ್ದಾರೆ.


  ನಾಗಿಣಿ-2 ಮೂಲಕವೇ ಬಿಗ್ ಪರದೆಯಿಂದ ಪುಟ್ಟ ಪರದೆಗೆ ಎಂಟ್ರಿ
  ನಾಗಿಣಿ-2 ಸೀರಿಯಲ್ ಐಶ್ವರ್ಯ ಸಿಂಧೋಗಿ ಪುಟ್ಟ ಪರದೆಗೆ ಎಂಟ್ರಿಕೊಡಲು ನೆರವಾದ ಮೊದಲ ಸೀರಿಯಲ್ ಆಗಿದೆ. ಮಾಯಾಂಗಿಣಿ ಅನ್ನೋ ರೋಲ್ ಅನ್ನ ಒಂದು ತಿಂಗಳ ಮಟ್ಟಿಗೆ ಅಭಿನಯಿಸೋಕೆ ಸೀರಿಯಲ್ ತಂಡ ಐಶ್ವರ್ಯ ಅವರಿಗೆ ಆಫರ್ ಕೊಟ್ಟಿತ್ತು.


  ಐಶ್ವರ್ಯ


  ನಾಗಿಣಿ-2 ಸೀರಿಯಲ್ ನ ಈ ಪಾತ್ರಕ್ಕೆ ನೆಗೆಟಿವ್ ಶೇಡ್ ಇತ್ತು. ಆದರೆ ಪೂರ್ಣ ಪ್ರಮಾಣದಲ್ಲಿ ಇರಲಿಲ್ಲ. ಹಾಗಿದ್ದರೂ ಜನ ಈ ಪಾತ್ರವನ್ನ ಮೆಚ್ಚಿಕೊಂಡರು. ಪಾತ್ರಕ್ಕೆ ಒಳ್ಳೆ ರೆಸ್ಪಾನ್ಸ್ ಬರ್ತಾಯಿದ್ದಂತೆ ಐಶ್ವರ್ಯ ಸಿಂಧೋಗಿ ಪಾತ್ರ ಮುಂದುವರೆಯುತ್ತಲೇ ಹೋಯಿತು. ಈಗಲೂ ಮಾಯಾಂಗಿಣಿ ರೋಲ್ ಜನ ಪ್ರಿಯತೆಗೆ ಗಳಿಸಿಕೊಂಡಿದೆ.


  ಇದನ್ನೂ ಓದಿ: Drishyam 2 Collection: ಬಾಲಿವುಡ್‍ನಲ್ಲಿ ದೃಶ್ಯಂ 2 ಹೊಸ ಸಂಚಲನ, ಮೂರೇ ದಿನಕ್ಕೆ 64 ಕೋಟಿ ಕಲೆಕ್ಷನ್! 


  ಸೀರಿಯಲ್ ಜೊತೆಗೆ ಐಶ್ವರ್ಯ ಸಿಂಧೋಗಿ ಸಿನಿಮಾ ನಂಟು
  ಐಶ್ವರ್ಯ ಸಿಂಧೋಗಿ ಸೀರಿಯಲ್ ಜತೆಗೆ ಸಿನಿಮಾ ನಂಟು ಏನು ಬಿಟ್ಟು ಹೋಗಿಲ್ಲ. ಈಗಾಗಲೇ ಐಶ್ವರ್ಯ ಅಭಿನಯದ ವಾವ್ ಸಿನಿಮಾ ರೆಡಿ ಆಗಿದೆ. ಈ ಸಿನಿಮಾ ಓಟಿಟಿ ಪ್ಲಾಟ್​ ಫಾರಂಗೆ ರೆಡಿ ಆಗಿದೆ. ಈಗಾಗಲೇ ಸೇಲ್ ಕೂಡ ಆಗಿದೆ.

  Published by:Savitha Savitha
  First published: