ಜೀ ಕನ್ನಡ (Zee Kannada) ವಾಹಿನಿ ಪ್ರೇಕ್ಷಕರಿಗೆ ಮನರಂಜನೆ ನೀಡುವಲ್ಲಿ ಸದಾ ಮುಂದಿರುತ್ತೆ. ವಾರದ ದಿನಗಳಲ್ಲಿ ಜನಪ್ರಿಯ ಧಾರಾವಾಹಿಗಳ (Serials) ಮೂಲಕ ಜನರನ್ನು ರಂಜಿಸಿದ್ರೆ, ವಾರಾಂತ್ಯದಲ್ಲಿ ರಿಯಾಲಿಟಿ ಶೋ (Reality Show) ಕಾರ್ಯಕ್ರಮಗಳ ಮೂಲಕ ಜನರನ್ನು ಹಿಡಿದಿಡುವಲ್ಲಿ ಯಶಸ್ವಿಯಾಗುತ್ತಿದೆ. ಈಗಾಗಲೇ ಪಾರು, ಹಿಟ್ಲರ್ ಕಲ್ಯಾಣ, ಪುಟ್ಟಕ್ಕನ ಮಕ್ಕಳು, ಗಟ್ಟಿಮೇಳ, ಶ್ರೀರಸ್ತು ಶುಭಮಸ್ತು, ಜೊತೆ ಜೊತೆಯಲಿ, ಸತ್ಯ, ನಾಗಿಣಿಯಂತಹ ಹಿಟ್ ಧಾರಾವಾಹಿಗಳನ್ನು ನೀಡುತ್ತಾ ಇದೆ. ಈಗ ಮತ್ತೊಂದು ನೂತನ ರಿಯಾಲಿಟಿ ಶೋ ಕಾರ್ಯಕ್ರಮವನ್ನು ಪರಿಚಯಿಸಿದೆ. ಶನಿವಾರ ಮತ್ತು ಭಾನುವಾರ ಸಂಜೆ 6 ಗಂಟೆಗೆ ಸೂಪರ್ ಕ್ವೀನ್ (Super Queen) ಕಾರ್ಯಕ್ರಮ ಪ್ರಸಾರವಾಗುತ್ತಿದೆ. ಈ ಕಾರ್ಯಕ್ರಮದಲ್ಲಿ ಮಜಾ ಟಾಕೀಸ್ ಖ್ಯಾತಿಯ ರೆಮೋ (Remo) ಭಾಗವಹಿಸಿದ್ದಾರೆ. ಮಗಳಿಗಾಗಿ ಬದುಕು ಕಟ್ಟಿಕೊಂಡ ಗಟ್ಟಿಗಿತ್ತಿ.
ಸೂಪರ್ ಕ್ವೀನ್ ಕಾರ್ಯಕ್ರಮ
ಸೂಪರ್ ಕ್ವೀನ್ ಕಾರ್ಯಕ್ರಮವನ್ನು ಹೆಣ್ಣು ಮಕ್ಕಳಿಗಾಗಿ ಶುರು ಮಾಡಲಾಗಿದೆ. ಈ ಕಾರ್ಯಕ್ರಮದಲ್ಲಿ ಹೆಣ್ಣು ಮಕ್ಕಳು ಸ್ಟ್ರಾಂಗ್ ಎನ್ನುವುದನ್ನು ತೋರಿಸಿ ಕೊಡಲಾಗುತ್ತೆ. ಕಾರ್ಯಕ್ರಮದ ಜಡ್ಜ್ ಗಳಾಗಿ ನಟ ವಿಜಯ ರಾಘವೇಂದ್ರ, ನಟಿ ರಚಿತ್ ರಾಮ್ ಇದ್ದಾರೆ. ನಿರೂಪಕರಾಗಿ ಕುರಿ ಪ್ರತಾಪ್, ಶ್ವೇತಾ ಚೆಂಗಪ್ಪ ಇದ್ದಾರೆ. ಸ್ಪರ್ಧಿಗಳಾಗಿ ಸೀರಿಯಲ್ ಕಲಾವಿದರು, ಗಾಯಕರು ಎಂಟ್ರಿ ಆಗಿದ್ದಾರೆ.
ಹಾಡಿನ ಮೂಲಕ ಎಲ್ಲರನ್ನೂ ನಗಿಸೋ ರೆಮೋ
ರೆಮೋ ತನ್ನ ಜೀವನದಲ್ಲಿ ಹಾಡನ್ನೇ ಬಂಡವಾಳ ಮಾಡಿಕೊಂಡು ಬದುಕಿದವರು. ಮಜಾ ಟಾಕೀಸ್ ನಲ್ಲಿ ಹಾಡು ಹೇಳುತ್ತಾ, ಕನ್ನಡಿಗರ ಮನಸ್ಸು ಗೆದ್ದಿದ್ದರು. ರೆಮೋ ಅಂದ್ರೆ ಹಾಡು, ಅಲ್ಲಿ ನಗುವಿಗೆ ಕೊರತೆ ಇಲ್ಲ ಎನ್ನಿಸುತ್ತೆ. ಆದ್ರೆ ಎಲ್ಲರನ್ನೂ ನಗಿಸೋ ರೆಮೋ ಬಾಳಲ್ಲಿ ಬಿರುಗಾಳಿ ಎದ್ದಿತ್ತು.
ಇದನ್ನೂ ಓದಿ: Bigg Boss Kannada: ಬಿಗ್ಬಾಸ್ ಮನೆಯಲ್ಲಿ ಗೇಮ್ ಯಾರದ್ದು, ಡಬಲ್ ಗೇಮ್ ಯಾರದ್ದು?
ಚಿಕ್ಕಂದಿನಿಂದಲೂ ತುಂಬಾ ಸ್ಟ್ರಾಂಗ್
ರೆಮೋ ಯಾವಗಲೂ ಹುಡುಗರ ರೀತಿ ಸ್ಟ್ರಾಂಗ್. ಅವರ ಬಟ್ಟೆಯೂ ಹುಡಗರ ರೀತಿ. ಅವರು ಈ ರೀತಿ ಇರುವುದು ಈಗ ಅಲ್ಲ. ಅವರು ಚಿಕ್ಕವರಿಂದಗಲೂ ಇದೇ ರೀತಿ ಇರೋದು. ಅಪ್ಪ, ಅಮ್ಮ, ಅಣ್ಣ, ಇವರು. ಇವರದ್ದು ಚಿಕ್ಕ ಕುಟುಂಬ. ಸಂತೋಷವಾಗಿದ್ರು. ಆದ್ರೆ ಇವರ ಪ್ರೀತಿ ಎಲ್ಲವನ್ನೂ ಬದಲಾಯಿಸಿತು.
View this post on Instagram
ಡಿವೋರ್ಸ್ ಹುಡುಗನನ್ನು ಪ್ರೀತಿಸಿದ್ದ ರೆಮೋ
ರೆಮೋಗೂ ಎಲ್ಲರ ಹುಡುಗಿಯರ ರೀತಿ ಪ್ರೀತಿ ಆಗುತ್ತೆ. ಆದ್ರೆ ಅವರು ಪ್ರೀತಿಸಿದ್ದು ಡಿವೋರ್ಸ್ ಆದ ಹುಡುಗನನ್ನು. ಮನೆಯವರ ವಿರೋಧ ಕಟ್ಟಿಕೊಂಡು ಅವರನ್ನು ಮದುವೆ ಆಗ್ತಾರೆ. ಅವರು ಇವರಿಗಿಂತ 13 ವರ್ಷ ದೊಡ್ಡವರಂತೆ. ಆದ್ರೂ ರೆಮೋ ತುಂಬಾ ಇಷ್ಟ ಒಟ್ಟು ಮದುವೆ ಆಗಿದ್ದರು. ಆದ್ರೆ ಅವರು ಅಂದುಕೊಂಡಂತೆ ಪ್ರೀತಿ ಸಿಗಲಿಲ್ಲ. ಅವರನ್ನು ಮನೆಯಲ್ಲಿ ಮೂಲೆ ಗುಂಪು ಮಾಡಿಬಿಟ್ರಂತೆ.
ಇದನ್ನೂ ಓದಿ: Sa Ri Ga Ma Pa: ಆತ್ಮ-ಪರಮಾತ್ಮನ ಬಗ್ಗೆ ಮಾತನಾಡೋ ಪ್ರವೀಣ್ಗೆ ಒಂದು ಕಣ್ಣು ಕಾಣಲ್ಲ, ಇದು ಹಾಡುಗಾರನ ಗೋಳಿನ ಕಥೆ!
5 ವರ್ಷದ ಮಗಳ ಜೊತೆ ಮನೆ ಬಿಟ್ಟು ಬಂದ್ರಂತೆ
ರೆಮೋ ಅವರಿಗೆ ಆ ಜೀವನ ಸಾಕಾಗಿ, 5 ವರ್ಷದ ಮಗಳನ್ನು ಕರೆದುಕೊಂಡು ಮನೆ ಬಿಟ್ಟು ಬಂದ್ರಂತೆ. ಆಗ ಅವರಿಗೆ ಒಂದು ರೂಪಾಯಿ ಸಹ ಇರಲಿಲ್ವಂತೆ. ಬಿಡದೇ ಹಗಲು ರಾತ್ರಿ ಎನ್ನದೇ, ಹಾಡು ಹೇಳಿ, ಜೀವನ ಕಟ್ಟಿಕೊಂಡ್ರಂತೆ. ರಾತ್ರಿ ಮಲಗಿಗಾದ ಮಾತ್ರ ರೆಮೋ ಅಳುತ್ತಿದ್ದರಂತೆ. ಈಗ ಬದುಕಿರುವುದೇ ಮಗಳಿಗಾಗಿ. ಮಗಳ ಜೀವನಕ್ಕೆ ಏನೋ ಒಂದು ಮಾಡೋಣ ಎಂದು ವೇದಿಕೆಯಲ್ಲಿ ಭಾವುಕರಾದ್ರು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ