Sathya Serial: ಸತ್ಯ-ಕಾರ್ತಿಕ್‍ ಒಂದಾಗಲು ತೀರ್ಥಯಾತ್ರೆ! ದೇವರು ಕಣ್ಣು ಬಿಡ್ತಾನಾ?

ಸತ್ಯ-ಕಾರ್ತಿಕ್ ಬಾಳು ಸರಿ ಮಾಡಲು ಮಾವ ಪ್ರಯತ್ನ ಮಾಡ್ತಾ ಇದ್ರೆ, ಅತ್ತೆ ಅವರಿಬ್ಬರನ್ನು ದೂರ ಮಾಡೋ ಪ್ರಯತ್ನದ ಹಾದಿಯಲ್ಲಿ ಇದ್ದಾಳೆ. ಏನಾಗುತ್ತೆ ಅಂತ ನೋಡೋಕೆ ಸತ್ಯ ಧಾರಾವಾಹಿ ನೋಡಬೇಕು.

ಕಾರ್ತಿಕ್‍-ಸತ್ಯ

ಕಾರ್ತಿಕ್‍-ಸತ್ಯ

  • Share this:
    ಜೀ ಕನ್ನಡದಲ್ಲಿ  (Zee Kannada) ಪ್ರಸಾರವಾಗುತ್ತಿರುವ ಸತ್ಯ (Sathya) ಧಾರಾವಾಹಿ (Serial) ಬೇರೆ ಎಲ್ಲಾ ಧಾರವಾಹಿಗಳಿಗಿಂತ ವಿಭಿನ್ನವಾದ ಧಾರವಾಹಿ. ಸೋಮವಾರದಿಂದ ಶುಕ್ರವಾರದವರೆಗೆ ರಾತ್ರಿ 9 ಗಂಟೆಗೆ ಪ್ರಸಾರವಾಗುತ್ತೆ. ನಟಿ ಅಂದ್ರೆ ಅಳು, ನೋವು, ಮನೆ, ಕೆಲಸ ಅಂತ ಇರುತ್ತೆ. ಆದ್ರೆ ಎಲ್ಲರಿಗೂ ಬೇರೆಯದ್ದೇ ರೀತಿ ನಿರೀಕ್ಷೆ ಹುಟ್ಟಿಸಿದ್ದ ಸತ್ಯ ಸೀರಿಯಲ್. ಯಾವನೋ ಅಲ್ಲ, ಯಾವಳೋ ಅನ್ನೋ ಮೂಲಕ ಕನ್ನಡಿಗರ ಮನಗೆದ್ದ ಧಾರಾವಾಹಿ. ರಫ್ ಅಂಡ್ ಟಫ್ ಮೂಲಕ ಹೆಣ್ಣು ಮಕ್ಕಳು ಈ ತರನೂ ಇರಬಹುದ ಎಂದು ತೋರಿಸಿಕೊಟ್ಟ ಹೊಸ ಕಲ್ಪನೆ. ಸತ್ಯ ಲೈಪ್‍ನಲ್ಲಿ (Life) ಕಾರ್ತಿಕ್ ಜೊತೆ ನಡೆದ ಮದುವೆ ಎಂಬ ತಿರುವು ಎಲ್ಲವನ್ನೂ ಬದಲಾಯಿಸಿದೆ. ಸತ್ಯ ಮತ್ತು ಕಾರ್ತಿಕ್ ಇಬ್ಬರಿಗೂ ಮದುವೆ (Marriage) ಇಷ್ಟ ಇಲ್ಲ. ಅದಕ್ಕೆ ಅವರನ್ನು ಒಂದು ಮಾಡಲು ಕಾರ್ತಿಕ್ ತಂದೆ ರಾಮಚಂದ್ರ ಮತ್ತು ತಾಯಿ ಸೀತಾ ತೀರ್ಥಯಾತ್ರೆ ಹೊರಟಿದ್ದಾರೆ.

    ಸತ್ಯ ಬಳಿ ಡಿವೋರ್ಸ್ ಪೇಪರ್ ಗೆ  ಸಹಿ ಮಾಡಿಸಿಕೊಂಡಿರುವ ಸೀತಾ
    ಸತ್ಯ ಗಂಡುಬೀರಿ ಥರ ಬೆಳೆದ ಹುಡುಗಿ. ಆಕೆಗೆ ಯಾವ ಸಂಪ್ರದಾಯಗಳು ಅಷ್ಟಾಗಿ ಗೊತ್ತಿಲ್ಲ. ಗ್ಯಾರೇಜ್ ನಡೆಸುತ್ತಿದ್ದವಳು. ಅಡುಗೆ ಮನೆಯಲ್ಲಿ ಅಡುಗೆ ಮಾಡಬೇಕು ಅಂದ್ರೆ ತುಂಬಾ ಕಷ್ಟ. ಸತ್ಯ ಮದುವೆಯಾಗಿ ಕಾರ್ತಿಕ್ ಮನೆಗೆ ಬಂದಿರೋದು ಅತ್ತೆ ಸೀತಾಗೆ ಸ್ವಲ್ಪವೂ ಇಷ್ಟ ಇಲ್ಲ. ಅವಳಿಗೆ ಆಚಾರ ವಿಚಾರ ಏನೂ ಗೊತ್ತಿಲ್ಲ ಎಂದು ಪದೇ ಪದೇ ಅವಮಾನ ಮಾಡುತ್ತಲೇ ಇದ್ದಾಳೆ. ಸತ್ಯ ಏನೇ ಕೆಲಸ ಮಾಡಿದ್ರೂ ತಪ್ಪು ಕಂಡು ಹಿಡಿದು ಬೈಯ್ತಾಳೆ.

    ಸತ್ಯ ಮನೆಗೆ ಬಂದಿರೋದು ಸೀತಾ ಮತ್ತು ಕಾರ್ತಿಕ್‍ಗೆ ಇಷ್ಟ ಇಲ್ಲ. ಕೋಟೆ ಮನೆಗೆ ಸತ್ಯ ತಕ್ಕ ಸೊಸೆ ಅಲ್ಲ ಎನ್ನುವುದು ಅವರ ವಾದ. ಅದಕ್ಕೆ ಹೇಗಾದ್ರೂ ಸತ್ಯಳನ್ನೂ ದೂರ ಮಾಡಬೇಕು ಅಂತ ಸೀತಾ, ಡಿವೋರ್ಸ್ ಪ್ಲ್ಯಾನ್ ಮಾಡಿದ್ದಾಳೆ. ಡಿವೋರ್ಸ್ ಪೇಪರ್ ರೆಡಿ ಮಾಡಿ ತಂದು, ಸತ್ಯಾಳನ್ನು ಕರೆದು, ನನ್ನ ಮಗನ ಖುಷಿಗಾಗಿ ನೀನು ಡಿವೋರ್ಸ್ ಕೊಟ್ಟು, ಈ ಮನೆ ಬಿಟ್ಟು ಹೋಗಬೇಕು ಎಂದು ಸೀತಾ ಹೇಳಿದ್ದಾಳೆ. ಸತ್ಯ ಸಹ ಒಪ್ಪಿ ಸಹಿ ಹಾಕಿದ್ದಾಳೆ.

    ಬದಲಾಗುತ್ತಿರುವ ಸತ್ಯಾಗೆ ಸಂಕಷ್ಟ!
    ಗಂಡ ಮತ್ತು ಗಂಡನ ಮನೆಯವರಿಗಾಗಿ ಸತ್ಯ ಎಲ್ಲವನ್ನು ಕಲಿತು ಬದಲಾಗುವ ಸಮಯದಲ್ಲಿ ಅತ್ತೆ ಸೀತಾ ಡಿವೋರ್ಸ್ ಪೇಪರ್ ಮುಂದಿಟ್ಟಿದ್ದಾಳೆ. ಸಹಿ ಮಾಡಿರುವ ಸತ್ಯಾಗೆ ಮುಂದೇನು ಮಾಡಬೇಕು ಎಂದು ತಿಳಿಯದೇ ಕೊರಗುತ್ತಿದ್ದಾಳೆ. ರಾತ್ರಿಯೆಲ್ಲಾ ನಿದ್ದೆ ಮಾಡದೇ ಒದ್ದಾಡುತ್ತಿದ್ದಾಳೆ. ಕಾರ್ತಿಕ್ ಏಕೆ ಹೀಗೆ ಕೂತಿದ್ದೀಯಾ ಅಂತ ಕೇಳಿದ್ರೂ ಹೇಳುತ್ತಿಲ್ಲ. ಎಲ್ಲವನ್ನೂ ತಾನೇ ಅನುಭವಿಸುತ್ತಿದ್ದಾಳೆ.

    ಇದನ್ನೂ ಓದಿ: Gattimela: ತನ್ನಮ್ಮ ಸುಹಾಸಿನಿ ಅಲ್ಲ ಅನ್ನೋ ವಿಷಯ ಆದ್ಯಾಗೆ ತಿಳೀತಾ? ಅಣ್ಣ ವೇದಾಂತ್ ಮುಂದೆ ಪ್ರಶ್ನೆಗಳ ಸುರಿಮಳೆ 

    ಡಿವೋರ್ಸ್ ಬಗ್ಗೆ ಯಾರಿಗೆ ಹೇಳಬೇಡ ಎಂದಿರುವ ಸೀತಾ
    ಇನ್ನೂ ಅತ್ತೆ ಸೀತಾ ಸತ್ಯ ಬಳಿ ಡಿವೋರ್ಸ್ ಪೇಪರ್​ಗೆ ಸಹಿ ಮಾಡಿಸಿಕೊಂಡು, ಇದು ನಮ್ಮಿಬ್ಬರ ನಡುವೆ ಮಾತ್ರ ಇರಬೇಕು. ಈ ವಿಷಯ ಯಾರಿಗೂ ಗೊತ್ತಾಗಬಾರದು ಎಂದು ಹೇಳಿದ್ದಾಳೆ. ಅದಕ್ಕೆ ಸತ್ಯ ಆ ವಿಚಾರವನ್ನು ಯಾರ ಮುಂದೆ ಹೇಳಲಾಗದೇ ಒಬ್ಬಳೆ ಸಂಕಟ ಪಡುತ್ತಿದ್ದಾಳೆ.

    Zee Kannada serial, Kannada serials, Sathya Serial, Satya Kannada serial director, Sathya serial Kannada cast, ಸತ್ಯ ಧಾರಾವಾಹಿ, ಜೀ ಕನ್ನಡದಲ್ಲಿ ಪ್ರಸಾರವಾಗುವ ಧಾರಾವಾಹಿಗಳು, Kannada news, Karnataka news,
    ಸೀತಾ


    ತೀರ್ಥಯಾತ್ರೆ ಪ್ಲ್ಯಾನ್ ಮಾಡಿದ ರಾಮಚಂದ್ರ
    ತನ್ನ ಪತ್ನಿ ಸೀತಾಗೆ, ಸತ್ಯ ಸೊಸೆಯಾಗಿ ಬಂದಿರುವುದು ಇಷ್ಟ ಇಲ್ಲ ಎಂದು ರಾಮಚಂದ್ರ ರಾಯರಿಗೆ ಗೊತ್ತಾಗಿದೆ. ಅದಕ್ಕೆ ಅವರು ತೀರ್ಥಯಾತ್ರೆ ಪ್ಲ್ಯಾನ್ ಮಾಡಿದ್ದಾರೆ. ಮನೆಯವರನ್ನೆಲ್ಲಾ ಕರೆದು. ನಾವು ತೀರ್ಥಯಾತ್ರೆಗೆ ಹೋಗುತ್ತೇವೆ ಎಂದು ತಿಳಿಸಿದ್ದಾರೆ. ಇದಕ್ಕೆ ಇನ್ನೂ ಸೀತಾ ಒಪ್ಪಿಕೊಂಡಿಲ್ಲ. ಏನ್ ಮಾಡ್ತಾರೆ ಅಂತ ಇವತ್ತು ಗೊತ್ತಾಗುತ್ತೆ.

    ಇದನ್ನೂ ಓದಿ: Kendasampige: ಕಾಲೋನಿ ನೀರಿಗಾಗಿ ಕಾರ್ಪೊರೇಟರ್ ಮನೆ ಬಾಗಿಲಿಗೆ ಕೊಡ ಹಿಡಿದು ಬಂದ ಸುಮನಾ?

    ಸತ್ಯ-ಕಾರ್ತಿಕ್ ಬಾಳು ಸರಿ ಮಾಡಲು ಮಾವ ಪ್ರಯತ್ನ ಮಾಡ್ತಾ ಇದ್ರೆ, ಅತ್ತೆ ಅವರಿಬ್ಬರನ್ನು ದೂರ ಮಾಡೋ ಪ್ರಯತ್ನದ ಹಾದಿಯಲ್ಲಿ ಇದ್ದಾಳೆ. ಏನಾಗುತ್ತೆ ಅಂತ ನೋಡೋಕೆ ಸತ್ಯ ಧಾರಾವಾಹಿ ನೋಡಬೇಕು.
    Published by:Savitha Savitha
    First published: