Sathya Serial: ಡಿವೋರ್ಸ್ ಪೇಪರ್ ಗೆ ಇವತ್ತು ಸಹಿ ಮಾಡಲಿರುವ ಸತ್ಯ! ಸುಲಭವಾಗಿ ಸೋಲು ಒಪ್ಪಿಕೊಳ್ತಾಳಾ ಲೇಡಿ ರಾಮಾಚಾರಿ?

ಗಂಡ ಮತ್ತು ಗಂಡನ ಮನೆಯವರಿಗಾಗಿ ಸತ್ಯ ಎಲ್ಲವನ್ನು ಕಲಿತು ಬದಲಾಗುವ ಸಮಯದಲ್ಲಿ ಅತ್ತೆ ಸೀತಾ ಡಿವೋರ್ಸ್ ಪೇಪರ್ ಮುಂದಿಟ್ಟಿದ್ದಾಳೆ. ಸಹಿ ಮಾಡು ಎಂದು ಹೇಳಿದ್ದಾಳೆ. ಆಗ ಸತ್ಯ ಒಂದು ದಿನ ಕಾಲಾವಕಾಶ ಕೇಳಿದ್ದಳು. ಆ ಸಮಯ ಮುಗಿದಿದ್ದು, ಅತ್ತೆಗೆ ತನ್ನ ನಿರ್ಧಾರ ತಿಳಿಸಬೇಕಿದೆ.

ಕಾರ್ತಿಕ್-ಸತ್ಯ

ಕಾರ್ತಿಕ್-ಸತ್ಯ

  • Share this:
    ಜೀ ಕನ್ನಡದಲ್ಲಿ (Zee Kannada) ಪ್ರಸಾರವಾಗುತ್ತಿರುವ ಜನಪ್ರಿಯ ಧಾರಾವಾಹಿಗಳಲ್ಲಿ ಸತ್ಯ (Sathya) ಕೂಡು ಒಂದು. ಸೋಮವಾರದಿಂದ ಶುಕ್ರವಾರದವರೆಗೆ ಪ್ರತಿ ದಿನ ರಾತ್ರಿ 9 ಗಂಟೆಗೆ ಪ್ರಸಾರ ಆಗುತ್ತೆ. ಹೆಣ್ಣು ಮಕ್ಕಳ ಪಾತ್ರವನ್ನು ವಿಭಿನ್ನವಾಗಿ ತೋರಿಸಿಕೊಟ್ಟ ಧಾರಾವಾಹಿ (Serial). ಹುಡುಗರ ತರನೇ ಡ್ರೆಸ್ ಮಾಡಿಕೊಂಡು, ಅಪ್ಪನ (Father) ಸ್ಥಾನದಲ್ಲಿ ನಿಂತು ಮನೆ ಜವಾಬ್ದಾರಿ ನೋಡಿಕೊಳ್ಳೋ ರಫ್ ಅಂಡ್ ಟಫ್  ಹುಡುಗಿಯ ಕಥೆ. ಗ್ಯಾರೇಜ್ ನೋಡಿಕೊಂಡು, ತನ್ನ ಕುಟುಂಬ ನೋಡಿಕೊಳ್ಳುತ್ತಿದ್ದ ನಟಿಗೆ, ಆಕೆಯ ಅಕ್ಕ ಮಾಡಿದ ತಪ್ಪಿನಿಂದ ಕಾರ್ತಿಕ್‍ನನ್ನು ಮದುವೆಯಾಗೋ ಪರಿಸ್ಥಿತಿ ಎದುರಾಗುತ್ತೆ. ದೊಡ್ಡವರೆಲ್ಲಾ ಸೇರಿ ಸತ್ಯ-ಕಾರ್ತಿಕ್ ಮದುವೆ ಮಾಡುತ್ತಾರೆ. ಆದ್ರೆ ಈ ಮದುವೆ (Marriage) ಇಬ್ಬರಿಗೂ ಇಷ್ಟ ಇರಲ್ಲ. ಅಲ್ಲದೇ ಕಾರ್ತಿಕ್ ಅಮ್ಮನಿಗೂ ಸತ್ಯ ಸೊಸೆಯಾಗಿ ಬಂದಿರೋದು ಇಷ್ಟ ಇಲ್ಲ. ಅದಕ್ಕೆ ದೂರ ಮಾಡಲು ಡಿವೋರ್ಸ್ (Divorce) ಪ್ಲ್ಯಾನ್ ಮಾಡಿದ್ದಾಳೆ.

    ಸತ್ಯ ಮನೆಗೆ ಬಂದಾಗಿನಿಂದ ಸೀತಾ ಸಿಡಿ-ಮಿಡಿ
    ಸತ್ಯ ಗಂಡುಬೀರಿ ತರ ಬೆಳೆದ ಹುಡುಗಿ. ಆಕೆಗೆ ಯಾವ ಸಂಪ್ರದಾಯಗಳು ಅಷ್ಟಾಗಿ ಗೊತ್ತಿಲ್ಲ. ಗ್ಯಾರೇಜ್ ನಡೆಸುತ್ತಿದ್ದವಳು, ಅಡುಗೆ ಮನೆಯಲ್ಲಿ ಅಡುಗೆ ಮಾಡಬೇಕು ಅಂದ್ರೆ ತುಂಬಾ ಕಷ್ಟ. ಸತ್ಯ ಮದುವೆಯಾಗಿ ಕಾರ್ತಿಕ್ ಮನೆಗೆ ಬಂದಿರೋದು ಅತ್ತೆ ಸೀತಾಗೆ ಸ್ವಲ್ಪವೂ ಇಷ್ಟ ಇಲ್ಲ. ಅವಳಿಗೆ ಆಚಾರ ವಿಚಾರ ಏನೂ ಗೊತ್ತಿಲ್ಲ ಎಂದು ಪದೇ ಪದೇ ಅವಮಾನ ಮಾಡುತ್ತಲೇ ಇದ್ದಾಳೆ. ಸತ್ಯ ಏನೇ ಕೆಲಸ ಮಾಡಿದ್ರೂ ತಪ್ಪು ಕಂಡು ಹಿಡಿದು ಬೈಯ್ತಾಳೆ.

    Zee Kannada serial, Kannada serial, Sathya Kannada serial, Sathya serial Kannada cast, Divorce episode today, ಸತ್ಯ ಧಾರಾವಾಹಿ, ಜೀ ಕನ್ನಡದಲ್ಲಿ ಪ್ರಸಾರವಾಗುವ ಧಾರಾವಾಹಿಗಳು, Kannada news, Karnataka news,
    ಅತ್ತೆ ಸೀತಾ


    ಮದುವೆಯಿಂದ ಕಾರ್ತಿಗ್‍ಗೂ ತೊಂದರೆ
    ಇನ್ನು ಸತ್ಯ ತನ್ನನ್ನು ಮದುವೆಯಾಗಲೆಂದು ತನ್ನ ಅಕ್ಕ ದಿವ್ಯಾಳನ್ನು ಎಲ್ಲೋ ಕಳಿಸಿದ್ದಾಳೆ. ಬೇಕು ಅಂತಾನೇ ನನ್ನ ಮದುವೆಯಾಗಿದ್ದಾಳೆ ಎಂದು ಸತ್ಯಾಗೆ ಪದೇ ಪದೇ ಬೈಯುತ್ತಿರುತ್ತಾನೆ. ಅಲ್ಲದೇ ಆಕೆ ಮನೆಗೆ ಬಂದಾಗಿನಿಂದ ಕುಡಿಯುವ ಅಭ್ಯಾಸ ಬೇರೆ ಮಾಡಿಕೊಂಡಿದ್ದಾನೆ. ನನ್ನ ಜೀವನ ಹಾಳಾಯ್ತು ಎಂದು ಕೊರಗುತ್ತಿದ್ದಾನೆ. ಕುಡಿತದ ಚಟಕ್ಕೆ ಬಿದ್ದಿದ್ದಾನೆ.

    ಇದನ್ನೂ ಓದಿ: Lakshana: ಶ್ವೇತಾಳನ್ನು ಕಿಡ್ನ್ಯಾಪ್ ಮಾಡಿಸಲು ಹೋಗಿ ನಕ್ಷತ್ರಾ ಟ್ರ್ಯಾಪ್ ಆದ್ಲಾ? ಮಿಲ್ಲಿ ಕುತಂತ್ರ ಬಯಲು!

    ಮಗನಿಗಾಗಿ ಡಿವೋರ್ಸ್ ಕೊಡಿಸಲು ಮುಂದಾದ ಸೀತಾ
    ಸತ್ಯ ಮನೆಗೆ ಬಂದಿರೋದು ಸೀತಾ ಮತ್ತು ಕಾರ್ತಿಕ್‍ಗೆ ಇಷ್ಟ ಇಲ್ಲ. ಕೋಟೆ ಮನೆಗೆ ಸತ್ಯ ತಕ್ಕ ಸೊಸೆ ಅಲ್ಲ ಎನ್ನುವುದು ಅವರ ವಾದ. ಅದಕ್ಕೆ ಹೇಗಾದ್ರೂ ಸತ್ಯಳನ್ನೂ ದೂರ ಮಾಡಬೇಕು ಅಂತ ಸೀತಾ, ಡಿವೋರ್ಸ್ ಪ್ಲ್ಯಾನ್ ಮಾಡಿದ್ದಾಳೆ. ಡಿವೋರ್ಸ್ ಪೇಪರ್ ರೆಡಿ ಮಾಡಿ ತಂದು, ಸತ್ಯಾಳನ್ನು ಕರೆದು, ನನ್ನ ಮಗನ ಖುಷಿಗಾಗಿ ನೀನು ಡಿವೋರ್ಸ್ ಕೊಟ್ಟು, ಈ ಮನೆ ಬಿಟ್ಟು ಹೋಗಬೇಕು ಎಂದು ಸೀತಾ ಹೇಳಿದ್ದಾಳೆ.

    ಬದಲಾಗುತ್ತಿರುವ ಸತ್ಯಾಗೆ ಡಿವೋರ್ಸ್ ಸಂಕಷ್ಟ!
    ಗಂಡ ಮತ್ತು ಗಂಡನ ಮನೆಯವರಿಗಾಗಿ ಸತ್ಯ ಎಲ್ಲವನ್ನು ಕಲಿತು ಬದಲಾಗುವ ಸಮಯದಲ್ಲಿ ಅತ್ತೆ ಸೀತಾ ಡಿವೋರ್ಸ್ ಪೇಪರ್ ಮುಂದಿಟ್ಟಿದ್ದಾಳೆ. ಸಹಿ ಮಾಡು ಎಂದು ಹೇಳಿದ್ದಾಳೆ. ಆಗ ಸತ್ಯ ಒಂದು ದಿನ ಕಾಲಾವಕಾಶ ಕೇಳಿದ್ದಳು. ಆ ಸಮಯ ಮುಗಿದಿದ್ದು, ಅತ್ತೆಗೆ ತನ್ನ ನಿರ್ಧಾರ ತಿಳಿಸಬೇಕಿದೆ.

    ಇವತ್ತು ಸಹಿ ಮಾಡಲಿರುವ ಸತ್ಯ!
    ಅತ್ತೆ ಸೀತಾ ಬಳಿ ಬಂದು ಸತ್ಯ ಮಾತನಾಡಲು ಹೋಗುತ್ತಾಳೆ. ನನಗೂ ಮಾತನಾಡಲು ಅವಕಾಶ ಕೊಡಿ ಎನ್ನುತ್ತಾಳೆ. ಆದ್ರೆ ಸೀತಾ, ಹೇ ಹುಡುಗಿ ನನಗೆ ಗೊತ್ತು, ನಿನಗೆ ಈ ಮನೆ ಬಿಟ್ಟು ಹೋಗಲು ಇಷ್ಟ ಇಲ್ಲ ಎಂದು ಎನ್ನುತ್ತಾಳೆ. ಅದಕ್ಕೆ ಸತ್ಯ ಏನೂ ಮಾತನಾಡದೇ ಅತ್ತೆ ಕೊಟ್ಟ ಡಿವೋರ್ಸ್ ಪೇಪರ್‍ಗೆ ಸಹಿ ಮಾಡಿದ್ದಾಳೆ.

    ಇದನ್ನೂ ಓದಿ: Ramachari: ರಾಮಾಚಾರಿ ಮೇಲಿನ ಕೋಪಕ್ಕೆ ಚಾರು ಮಾಡಿದ್ದೆಂತಾ ಕೆಲಸ? ಬೇರೆಯವರನ್ನು ಚಚ್ಚಿ ಚಚ್ಚಿ ಹಾಕಿದ ಕೋಪಿಷ್ಠೆ! 

    ಸತ್ಯಾಗೆ ಇರೋದು 6 ತಿಂಗಳು ಸಮಯ ಮಾತ್ರ. ಅಷ್ಟರಲ್ಲಿ ಗಂಡ ಮತ್ತು ಮನೆಯವರನ್ನು ಒಲಿಸಿಕೊಂಡು, ಕೋಟೆ ಮನೆ ಸೊಸೆಯಾಗಿ ಸಂಸಾರ ಮಾಡ್ತಾಳಾ, ಇಲ್ಲ ಸೋಲು ಒಪ್ಪಿಕೊಂಡು ತವರು ಮನೆ ಸೇರ್ತಾಳಾ ಎಂದು ನೋಡಲು ಸಂಚಿಕೆಗಳನ್ನು ನೋಡಬೇಕು.
    Published by:Savitha Savitha
    First published: