Puttakkana Makkalu: ಸೀರೆ ಕಟ್ಟಿ ಖೋ ಖೋ ಕೋಚ್ ಆಗಿದ್ದಾಳೆ ಪುಟ್ಟಕ್ಕ, ಮೆಸ್ ನಡೆಸೋಳು ಹೇಗೆ ಆಟ ಹೇಳಿ ಕೊಡ್ತಾಳೆ?

ಮಗಳು ಸುಮಾ ಮತ್ತು ಆಕೆಯ ತಂಡಕ್ಕಾಗಿ ಪುಟ್ಟಕ್ಕ ಕೋಚ್ ಆಗಿದ್ದಾಳೆ. ತನ್ನ ಗದ್ದೆಯನ್ನೇ ಆಟದ ಮೈದಾನವಾಗಿ ಬದಲಾಯಿಸಿದಿದ್ದಾಳೆ. ಮಕ್ಕಳಿಗೆಲ್ಲಾ 10 ರೌಂಡ್ ಓಡಲು ಹೇಳಿದ್ದಾಳೆ. ಪುಟ್ಟಕ್ಕನೇ ಆಟದ ಮೈದಾನಕ್ಕೆ ನಮಸ್ಕಾರ ಮಾಡಿ ಬಂದಿದ್ದಾಳೆ. ಅಂದ್ರೆ ಪುಟ್ಟಕ್ಕನೇ ಖೋ ಖೋ ಹೇಳಿ ಕೊಡುವ ಕೋಚ್.

ಪುಟ್ಟಕ್ಕನ ಮಕ್ಕಳು ಧಾರಾವಾಹಿ

ಪುಟ್ಟಕ್ಕನ ಮಕ್ಕಳು ಧಾರಾವಾಹಿ

 • Share this:
  ಪುಟ್ಟಕ್ಕನ ಮಕ್ಕಳು (Puttakkana Makkalu), ಜೀ ಕನ್ನಡದ (Zee Kannada) ಹೆಸರಾಂತ ಧಾರಾವಾಹಿ (Serial). ಸೋಮವಾರದಿಂದ ಶುಕ್ರವಾರದವರೆಗೆ (Monday to Friday) ಪ್ರತಿದಿನ ಸಂಜೆ 7.30ಕ್ಕೆ ಪ್ರಸಾರವಾಗುತ್ತದೆ (Telecast). ಪುಟ್ಟಕ್ಕನ ಮಕ್ಕಳು ಧಾರಾವಾಹಿಯಲ್ಲಿ ಪುಟ್ಟಕ್ಕನ ಪಾತ್ರದಲ್ಲಿ ಉಮಾಶ್ರೀ ಅಮೋಘವಾಗಿ ಅಭಿನಯಿಸುತ್ತಿದ್ದಾರೆ. ಉಮಾಶ್ರೀ ಗಂಡ ಆಕೆಯನ್ನು ಬಿಟ್ಟು ಅದೇ ಊರಿನಲ್ಲಿ ರಾಜಿ ಎಂಬಾಕೆಯನ್ನು ಎರಡನೇ ಮದುವೆಯಾಗಿದ್ದಾನೆ (Marriage). ಇನ್ನು ಉಮಾಶ್ರೀಗೆ ಮೂವರು ಹೆಣ್ಣು ಮಕ್ಕಳು. ಗಂಡ ಬಿಟ್ಟು ಹೋಗಿದ್ದರೂ, ಮೂವರನ್ನು ಚೆನ್ನಾಗಿ ಸಾಕಿದ್ದಾಳೆ. ಮೆಸ್ ಒಂದನ್ನು ನಡೆಸುತ್ತಿದ್ದು, ಅದರಿಂದ ಜೀವನ ಸಾಗಿಸುತ್ತಿದ್ದಾಳೆ. ಮೊದಲನೇ ಮಗಳು ಸಹನಾ ಓದದೇ ತನ್ನ ತಾಯಿಗೆ ಹೋಟೆಲ್ ಕೆಲಸದಲ್ಲಿ ಸಹಾಯ ಮಾಡುತ್ತಿದ್ದಾಳೆ. ಎರಡನೇ ಮಗಳು ಸ್ನೇಹ (Sneha) ಓದಿನಲ್ಲೂ ಜೋರು. ಮಾತಿನಲ್ಲೂ ಜೋರು. ಮೂರನೇ ಮಗಳು ಸುಮಾ (Suma) ಓದಿನ ಜೊತೆ ಆಟಗಳಲ್ಲೂ ಮುಂದು.

  ಮೂರನೇ ಮಗಳು ಸುಮಾ ತಂಡಕ್ಕೆ ಖೋ ಖೋ ಕೋಚ್ ಇಲ್ಲ
  ಸುಮಾ ಮತ್ತು ಆಕೆಯ ತಂಡ ಖೋ ಖೋ ಆಟವನ್ನು ಚೆನ್ನಾಗಿ ಆಡುತ್ತಾರೆ. ಆದರೆ ಅವರ ಕಾಲೇಜಿನಲ್ಲಿ ಇವರಿಗೆ ಸರಿಯಾಗಿ ತರಬೇತಿ ಸಿಗುತ್ತಿಲ್ಲ. ಸರಿಯಾದ ಕೋಚ್ ಇಲ್ಲದ ಕಾರಣ, ಪಂದ್ಯಗಳನ್ನು ಸೋಲುತ್ತಿದ್ದಾರೆ. ಈ ಬಗ್ಗೆ ಪುಟ್ಟಕ್ಕನೇ ಕಾಲೇಜಿಗೆ ಹೋಗಿ ಅವರ ಪಿ.ಟಿ ಮಾಸ್ಟರ್ ಬಳಿ ಮಾತನಾಡುತ್ತಾರೆ. ಆದ್ರೆ ಅವರು ನಾನು ತರಬೇತಿ ಕೊಡಲ್ಲ ಎಂದು ಹೇಳುತ್ತಾರೆ. ಅಲ್ಲದೇ ಅವರ ಕಾಲೇಜಿನ ಪ್ರಿನ್ಸಿಪಾಲ್, ವಿದ್ಯಾರ್ಥಿಗಳು ಆಟ ಆಡಲು ತೊಂದರೆ ಇಲ್ಲ. ಆದ್ರೆ ಕೋಚ್ ಅನ್ನು ಅವರೇ ಹುಡುಕಿಕೊಳ್ಳಬೇಕು ಎನ್ನುತ್ತಾರೆ.

  ಕೋಚ್ ಹುಡುಕಿ ಕೊಡುತ್ತೇನೆ ಎಂದಿರುವ ಪುಟ್ಟಕ್ಕ
  ಪುಟ್ಟಕ್ಕ ಕಾಲೇಜಿನಲ್ಲಿ ಅವರ ಮೇಷ್ಟ್ರುಗಳ ಬಳಿ ಕೋಚ್ ಹುಡುಕುವುದಾಗಿ ಹೇಳಿದ್ದಾರೆ. ನಮ್ಮ ಮಕ್ಕಳು ಗೆದ್ದೇ ಗೆಲ್ಲುತ್ತಾರೆ ಅಂತ ಹೇಳಿ ಬಂದಿದ್ದಾರೆ. ಆದ್ರೆ ಕೋಚ್ ಯಾರು ಅನ್ನುವುದನ್ನು ಮಾತ್ರ ಹೇಳಿಲ್ಲ. ಸುಮಾ ಮತ್ತು ಆಕೆಯ ಗೆಳತಿಯರು ಕೋಚ್ ಯಾರು ಅನ್ನೋ ಕುತೂಹಲದಲ್ಲಿ ಇದ್ದಾರೆ.

  ಇದನ್ನೂ ಓದಿ: Ramachari: ದುಡ್ಡಿನ ಆಸೆ ತೋರಿಸಿದ ಚಾರು ಜೈಲು ಸೇರುತ್ತಾಳಾ? ರಾಮಾಚಾರಿ ಕೊಟ್ಟ ಶಾಕ್‍ಗೆ ತತ್ತರ!

  ಚೆನ್ನಾಗಿ ಆಡೋ ತಂಡಕ್ಕೆ ದೊಡ್ಡ ತರಬೇತಿದಾರರು ಬೇಕಿಲ್ಲ
  ಸುಮಾ ಒಂದೇ ಸಮಾ ತನ್ನ ಅವ್ವನನ್ನು ಕಾಡುತ್ತಿದ್ದಾಳೆ. ಕೋಚ್ ಯಾರು ಅಂತ ಹೇಳು ಅಂತ. ಅದಕ್ಕೆ ಪುಟ್ಟಕ್ಕ ಚೆನ್ನಾಗಿ ಆಡೋ ತಂಡಕ್ಕೆ ದೊಡ್ಡ ತರಬೇತುದಾರ ಬೇಕಿಲ್ಲ. ಯಾರೇ ಹೇಳಿಕೊಟ್ರು, ನಾವು ಗೆಲ್ಲುತ್ತೇವೆ ಎಂಬ ನಂಬಿಕೆ ನಿಮಗೆ ಇರಬೇಕು. ಪಿಟಿ ಮಾಸ್ಟರ್ ಹೆಂಗೆಲ್ಲಾ ಮಾತನಾಡಿದ್ದಾರೆ ಕೇಳಿಸಿಕೊಂಡೇ ತಾನೇ. ಅವನ ಮಾತು ಸುಳ್ಳು ಮಾಡಲು ಆದ್ರೂ, ನೀವು ಗೆಲ್ಲಲೇ ಬೇಕು ಎಂದು ಪುಟ್ಟಕ್ಕ ಮಗಳು ಸುಮಾಗೆ ಕಿವಿಮಾತು ಹೇಳಿದ್ದಾಳೆ.

  ಮಗಳಿಗಾಗಿ ಕೋಚ್ ಆದ ಪುಟ್ಟಕ್ಕ
  ಮಗಳು ಸುಮಾ ಮತ್ತು ಆಕೆಯ ತಂಡಕ್ಕಾಗಿ ಪುಟ್ಟಕ್ಕ ಕೋಚ್ ಆಗಿದ್ದಾಳೆ. ತನ್ನ ಗದ್ದೆಯನ್ನೇ ಆಟದ ಮೈದಾನವಾಗಿ ಬದಲಾಯಿಸಿದಿದ್ದಾಳೆ. ಮಕ್ಕಳಿಗೆಲ್ಲಾ 10 ರೌಂಡ್ ಓಡಲು ಹೇಳಿದ್ದಾಳೆ. ಆದ್ರೂ ಕೋಚ್ ಯಾರು ಎಂದು ಹೇಳಿಲ್ಲ. ಆಟಗಾರರೆಲ್ಲಾ ಕೋಚ್ ಯಾರು ಎಂದು ಕಾಯುತ್ತಿದ್ದಾರೆ. ಆದ್ರೆ ಯಾವ ಕೋಚ್ ಸಹ ಬಂದಿಲ್ಲ. ಪುಟ್ಟಕ್ಕನೇ ಆಟದ ಮೈದಾನಕ್ಕೆ ನಮಸ್ಕಾರ ಮಾಡಿ ಬಂದಿದ್ದಾಳೆ. ಅಂದ್ರೆ ಪುಟ್ಟಕ್ಕನೇ ಖೋ ಖೋ ಹೇಳಿ ಕೊಡುವ ಕೋಚ್.

  ಇದನ್ನೂ ಓದಿ: Kannadathi: ಹರ್ಷ-ಭುವಿಯ ಮೊದಲ ರಾತ್ರಿ! ಈಳಿಗೆ ಮಣೆ ಹಿಡಿದು ನಿಂತ ವರೂಧಿನಿ

  ಹಾಗಾದ್ರೆ ಪುಟ್ಟಕ್ಕ ಯಾವ ರೀತಿ ತರಬೇತಿ ಕೊಡುತ್ತಾಳೆ. ಸುಮಾ ಮತ್ತು ಆಕೆಯ ತಂಡ ಗೆಲ್ಲುತ್ತಾ? ಎಲ್ಲವನ್ನು ನೋಡಲು ಪುಟ್ಟಕ್ಕನ ಮಕ್ಕಳು ಧಾರಾವಾಹಿ ನೋಡಬೇಕು.
  Published by:Savitha Savitha
  First published: