• Home
 • »
 • News
 • »
 • entertainment
 • »
 • Paaru 1000 Episode: ಪಾರುಗೆ 1000 ಸಂಚಿಕೆಗಳ ಸಂಭ್ರಮ, ಧಾರಾವಾಹಿ ತಂಡ ಖುಷ್

Paaru 1000 Episode: ಪಾರುಗೆ 1000 ಸಂಚಿಕೆಗಳ ಸಂಭ್ರಮ, ಧಾರಾವಾಹಿ ತಂಡ ಖುಷ್

ಮನೆ ಮಗಳು ಪಾರುಗೆ 1000 ಸಂಚಿಕೆಗಳ ಸಂಭ್ರಮ

ಮನೆ ಮಗಳು ಪಾರುಗೆ 1000 ಸಂಚಿಕೆಗಳ ಸಂಭ್ರಮ

ಕರ್ನಾಟಕವೇ ಒಪ್ಪಿ ಅಪ್ಪಿಕೊಂಡಿರುವ ಮನೆಮಗಳು ಪಾರು. ಕನ್ನಡದ ಜನಪ್ರಿಯ ವಾಹಿನಿ ಜೀ ಕನ್ನಡದಲ್ಲಿ ಪ್ರಸಾರವಾಗುವ ಪಾರು ಧಾರಾವಾಹಿ ಅತ್ಯುತ್ತಮ ತಾರಾಗಣ, ರೋಚಕ ತಿರುವುಗಳ ಅದ್ಭುತ ಕಥೆಯೊಂದಿಗೆ ವೀಕ್ಷಕರನ್ನು ನಿರಂತರವಾಗಿ ರಂಜಿಸುತ್ತಲೇ ಸಾವಿರ ಸಂಚಿಕೆಗಳನ್ನು ಪೂರೈಸುತ್ತಿದೆ.

 • Share this:

  ಜೀ ಕನ್ನಡದಲ್ಲಿ (Zee Kannada) ಸಂಜೆ 6.30ಕ್ಕೆ ಪ್ರಸಾರವಾಗುತ್ತಿರುವ ಪಾರು (Paaru) ಸೀರಿಯಲ್ (Serial) ಹಲವಾರು ಜನರ ಮನಸ್ಸು ಗೆದ್ದಿದೆ. ದಿನಕ್ಕೊಂದು ತಿರುವಿನೊಂದಿಗೆ ಅಭಿಮಾನಿಗಳನ್ನು ಹಿಡಿದಿಟ್ಟುಕೊಳ್ಳುವಲ್ಲಿ ಯಶಸ್ವಿಯಾಗುತ್ತಿದೆ. ಅಖಿಲಾಂಡೇಶ್ವರಿ ಪಾತ್ರದಲ್ಲಿರುವ ವಿನಯ್ ಪ್ರಸಾದ್ ಅಭಿನಯ ನೋಡೋದೇ ಒಂದು ಚೆಂದ. ಅರಸನ ಕೋಟೆಯನ್ನು ಬೆಳೆಸುತ್ತಾ, ತನ್ನ ಮಕ್ಕಳನ್ನು ಬೆಳೆಸುತ್ತ, ತನ್ನ ಕೋಟೆಯನ್ನು ಭದ್ರಮಾಡಿಕೊಳ್ಳುತ್ತಾ ಮುನ್ನೆಡೆಯುತ್ತಿದ್ದಾರೆ. ತನ್ನ ಪಾತ್ರಕ್ಕೆ ಹೊಂದುವಂತೆ ಮೇಕಪ್ ಹಾಕಿಕೊಂಡು, ಗತ್ತು, ಗಾಂಭಿರ್ಯದಿಂದ ಸಂಸಾರದ, ಜೊತೆ ಕಂಪನಿಯನ್ನು ನಡೆಸುಕೊಂಡು ಹೋಗುತ್ತಿದ್ದಾಳೆ. ನಿಮ್ಮ ಮನೆ ಮಗಳು ಪಾರು ಧಾರಾವಾಹಿಗೆ 1000 ಸಂಚಿಕೆಗಳ (1000 Episodes) ಸಂಭ್ರಮ. ಖುಷಿಯಲಿದೆ ಸೀರಿಯಲ್ ಟೀಮ್ (Team).


  1000 ಸಂಚಿಕೆ ಪೂರೈಸಿದ ತಂಡ
  ಕರುಣೆಯ ಪೈರು ನಮ್ಮೀ ಪಾರು ಎಂದು ಇಡೀ ಕರ್ನಾಟಕವೇ ಒಪ್ಪಿ ಅಪ್ಪಿಕೊಂಡಿರುವ ಮನೆಮಗಳು ಪಾರು. ಕನ್ನಡದ ಜನಪ್ರಿಯ ವಾಹಿನಿ ಜೀ ಕನ್ನಡದಲ್ಲಿ ಪ್ರಸಾರವಾಗುವ ಪಾರು ಧಾರಾವಾಹಿ ಅತ್ಯುತ್ತಮ ತಾರಾಗಣ, ರೋಚಕ ತಿರುವುಗಳ ಅದ್ಭುತ ಕಥೆಯೊಂದಿಗೆ ವೀಕ್ಷಕರನ್ನು ನಿರಂತರವಾಗಿ ರಂಜಿಸುತ್ತಲೇ ಸಾವಿರ ಸಂಚಿಕೆಗಳನ್ನು ಪೂರೈಸುತ್ತಿದೆ.


  ವಿನಯ್ ಪ್ರಸಾದ್ ನಟನೆ ಅದ್ಭುತ
  ಹಲವು ವರ್ಷಗಳಿಂದ ಬೆಳ್ಳಿತೆರೆಯಲ್ಲಿ ರಾರಾಜಿಸಿ ಕನ್ನಡಿಗರ ಮನ ಗೆದ್ದಿರುವ ಹಿರಿಯ ಕಲಾವಿದೆ ವಿನಯಾಪ್ರಸಾದ್ ಅವರು ಅಖಿಲಾಂಡೇಶ್ವರಿ ಪಾತ್ರದಲ್ಲಿ ಕಿರುತೆರೆಗೆ ಕಾಲಿಟ್ಟು ತಮ್ಮ ಮನೋಜ್ಞ ನಟನೆಯ ಮೂಲಕ ಧಾರಾವಾಹಿಯ ಘನತೆ ಹೆಚ್ಚಿಸಿದ್ದಾರೆ. ಇವರೊಟ್ಟಿಗೆ ನವ ಜೋಡಿಯಾಗಿ ಪಾದಾರ್ಪಣೆ ಮಾಡಿದ ಆದಿ ಪಾತ್ರದ ಶರತ್, ಪಾರು ಪಾತ್ರದ ಮೋಕ್ಷಿತಾ ಪೈ ವೀಕ್ಷಕರ ಹೃದಯಕ್ಕೆ ಹತ್ತಿರವಾಗಿದ್ದಾರೆ.


  Zee Kannada serial, Kannada serial, Paaru serial today episode, Paaru serial cast, Paaru serial complete 1000 episodes, ಪಾರು ಧಾರಾವಾಹಿ, ಮನೆ ಮಗಳು ಪಾರುಗೆ 1000 ಸಂಚಿಕೆಗಳ ಸಂಭ್ರಮ, ಜೀ ಕನ್ನಡ ಧಾರಾವಾಹಿಗಳು, Kannada news, Karnataka news,
  ಪಾರು


  ಇತರೆ ಕಲಾವಿದರು
  ಇನ್ನು ಕಲಾಸಾಮ್ರಾಟ್ ಎಸ್. ನಾರಾಯಣ್ ಅವರು ವೀರಯ್ಯದೇವ, ನಾಗೇಂದ್ರ ಶಾ ಅವರು ಹನುಮಂತು ಮತ್ತು ನಾಗೇಶ್ ಯಾದವ್ ಅವರು ರಘು ರಾಮ್ ಪಾತ್ರದಲ್ಲಿ ನಟಿಸುತ್ತಿದ್ದರೆ. ಇವರೊಟ್ಟಿಗೆ ಇನ್ನು ಅನೇಕ ಹಿರಿಯ,ಕಿರಿಯ ಕಲಾವಿದರ ದಂಡೇ ಈ ಧಾರಾವಾಹಿಯಲ್ಲಿದ್ದು ನೋಡುಗರನ್ನು ತಮ್ಮ ಅಮೋಘ ಅಭಿನಯದ ಮೂಲಕ ಸೆಳೆಯುವುದರಲ್ಲಿ ಯಶಸ್ವಿಯಾಗಿದ್ದಾರೆ.


  ಇದನ್ನೂ ಓದಿ: Bigg Boss Season 9: ಅರುಣ್ ಸಾಗರ್​ಗೆ ಕ್ಲಾಸ್ ತೆಗೆದುಕೊಂಡ ಕಿಚ್ಚ ಸುದೀಪ್, ಜೋಕರ್ ಆಗ್ಬೇಡಿ ಅಂತ ವಾರ್ನಿಂಗ್!


  ಕಿರುತೆರೆಗೆ ವೈಭವವನ್ನು ಪರಿಚಯಿಸಿದ ಮೊದಲ ಸೀರಿಯಲ್
  ವಿನೂತನ ನಿರೂಪಣೆಯ ಶೈಲಿ ಮೂಲಕ ಈಗಾಗಲೇ ಸೂಪರ್ ಹಿಟ್ ಆಗಿರುವ ಪಾರು ಧಾರಾವಾಹಿ ತನ್ನ ಅದ್ಧೂರಿತನವನ್ನು ಎಲ್ಲಿಯೂ ಬಿಟ್ಟುಕೊಡದೆ ಮೊದಲ ಸಂಚಿಕೆಯಿಂದ ಈಗಿನವರೆಗೂ ಗುಣಮಟ್ಟದಲ್ಲಿ ರಾಜಿಯಾಗದೆ ಶ್ರೀಮಂತ ಸೆಟ್ ಗಳು , ಭವ್ಯ ಬಂಗಲೆ , ಪ್ರತಿದೃಶ್ಯದ ಸಿರಿವಂತಿಕೆ ವೀಕ್ಷಕರಿಗೆ ಸಿನಿಮಾದ ಅನುಭವ ನೀಡಬೇಕು ಎನ್ನುವ ತಂಡದ ಪ್ರಯತ್ನಕ್ಕೆ ಎಲ್ಲರಿಂದಲೂ ಮೆಚ್ಚುಗೆ ಸಿಕ್ಕಿದೆ. ಹಾಗು ಕಿರುತೆರೆಗೆ ಈ ವೈಭವವನ್ನು ಪರಿಚಯಿಸಿದ ಮೊದಲ ಸೀರಿಯಲ್ ಎಂಬ ಹೆಗ್ಗಳಿಕೆಯೂ ಹೊಂದಿದೆ.


  ಕುತೂಹಲ ಹೆಚ್ಚಿಸಿದ ಧಾರಾವಾಹಿ
  ಕಥೆಯಲ್ಲಿ ನಮ್ಮ ನೆಲದ ಸಂಸ್ಕøತಿಗೆ ಹೆಚ್ಚು ಮಹತ್ವ ನೀಡಿ ಅದನ್ನು ಪ್ರತಿಬಿಂಬಿಸುವ ಪ್ರಯತ್ನಕ್ಕೆ ವೀಕ್ಷಕರಿಂದ ಮೆಚ್ಚುಗೆ ವ್ಯಕ್ತವಾಗಿದೆ. ಅಷ್ಟೇ ಅಲ್ಲದೆ ಅಂದಿನಿಂದ ಇಂದಿನವರೆಗೂ ಅದೇ ಗುಣಮಟ್ಟವನ್ನು ಕಾಯ್ದಿಸಿರಿಕೊಂಡು ಬಂದಿರುವುದು ವಿಶೇಷ. ಪ್ರೀತಿ, ಸ್ನೇಹ, ಕಾಳಜಿ, ಆದರ್ಶ, ವಾತ್ಸಲ್ಯ ಮತ್ತು ಮನರಂಜನೆ ಹೀಗೆ ಎಲ್ಲವನ್ನು ಒಟ್ಟುಗೂಡಿಸಿ 1000 ಸಂಚಿಕೆಗಳನ್ನು ಪೂರೈಸುತ್ತಿದೆ.


  Zee Kannada serial, Kannada serial, Paaru serial today episode, Paaru serial cast, Paaru serial complete 1000 episodes, ಪಾರು ಧಾರಾವಾಹಿ, ಮನೆ ಮಗಳು ಪಾರುಗೆ 1000 ಸಂಚಿಕೆಗಳ ಸಂಭ್ರಮ, ಜೀ ಕನ್ನಡ ಧಾರಾವಾಹಿಗಳು, Kannada news, Karnataka news,
  ಪ್ರೀತು-ಜನನಿ


  ಈ ಹೊತ್ತಿನಲ್ಲಿ ಅಖಿಲಾಂಡೇಶ್ವರಿಯು ಪಾರುಳನ್ನು ಸೊಸೆಯಾಗಿ ಒಪ್ಪಿಕೊಳ್ಳುವ ಹಂತದಲ್ಲಿದ್ದು ಮುಂದಿನ ಕಥೆ ಯಾವ ರೀತಿಯಲ್ಲಿ ತಿರುವು ಪಡೆದುಕೊಳ್ಳಲಿದೆ ಎಂದು ವೀಕ್ಷಕರು ಕಾಯುವಂತೆ ಮಾಡಿದೆ.


  ಅಖಿಲಾಂಡೇಶ್ವರಿ ಅಲಂಕಾರ
  ವಿಶೇಷವಾಗಿ ಅಖಿಲಾಂಡೇಶ್ವರಿಯವರ ಅಲಂಕಾರ ಅವರು ಉಡುವ ಸೀರೆ ಧರಿಸುವ ಒಡವೆಗಳಿಗೆ ಅಸಂಖ್ಯಾತ ಮಹಿಳಾ ವೀಕ್ಷಕರು ಆಕರ್ಷಿತರಾಗಿದ್ದಾರೆ ಹಾಗೂ ಅವರನ್ನು ಅನುಕರಿಸುತ್ತಿದ್ದಾರೆ. ಇದೆಲ್ಲದಕ್ಕೂ ಅಖಿಲಾಂಡೇಶ್ವರಿ ಪಾತ್ರದಲ್ಲಿ ಅಭಿನಯಿಸುತ್ತಿರುವ ವಿನಯಾಪ್ರಸಾದ್ ಅವರು ತಮ್ಮನ್ನು ತಾವು ತೊಡಗಿಸಿಕೊಳ್ಳುವ ರೀತಿಗೆ ಅವರ ಶ್ರದ್ಧೆಗೆ ಎಲ್ಲರೂ ತಲೆಬಾಗುತ್ತಾರೆ ಎನ್ನುವುದು ಧಾರಾವಾಹಿ ತಂಡದ ಅಭಿಪ್ರಾಯವಾಗಿದೆ.


  ಇದನ್ನೂ ಓದಿ: Navratri Day 07: ನವರಾತ್ರಿ 7ನೇ ದಿನ, ಆರೆಂಜ್ ಡ್ರೆಸ್‍ನಲ್ಲಿ ಬಾಲಿವುಡ್ ನಟಿಯರ ಸಖತ್ ಲುಕ್


  ಧೃತಿ ಕ್ರಿಯೇಷನ್ಸ್ ಅಡಿಯಲ್ಲಿ ನಿರ್ಮಾಣವಾಗುತ್ತಿರುವ ಈ ಧಾರಾವಾಹಿಗೆ ನಟ, ನಿರ್ಮಾಪಕ ದಿಲೀಪ್ ರಾಜ್ ಕ್ರಿಯೇಟಿವ್ ಡೈರೆಕ್ಟರ್ ಆಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಅವರ ಪತ್ನಿ ಶ್ರೀವಿದ್ಯಾರಾಜ್ ಅವರು ನಿರ್ಮಾಣದ ಜವಾಬ್ಧಾರಿ ಹೊತ್ತಿದ್ದಾರೆ. ಮತ್ತು ಮೊದಲ ಸಂಚಿಕೆಯಿಂದಲೂ ಗುರುಪ್ರಸಾದ್ ಮುಡೇನಹಳ್ಳಿ ಅವರು ಅದ್ಭುತವಾಗಿ ನಿರ್ದೇಶನ ಮಾಡುತ್ತಿದ್ದಾರೆ.

  Published by:Savitha Savitha
  First published: