Jothe Jotheyali: ಜೊತೆ ಜೊತೆಯಲಿ ಮೆಗಾ ಟ್ವಿಸ್ಟ್! ಆರ್ಯವರ್ಧನ್ ಪಾತ್ರ ಬದಲಿಸಲು ಆ್ಯಕ್ಸಿಡೆಂಟ್ ಎಪಿಸೋಡ್?

ಅಪಘಾತದಲ್ಲಿ ಆರ್ಯವರ್ಧನ್ ಮುಖಕ್ಕೆ ಏಟಾಗಿ ಗುರುತು ಸಿಗದಂತೆ ಆಗಿದೆಯಂತೆ. ಅದಕ್ಕೆ ಪ್ಲಾಸ್ಟಿಕ್ ಸರ್ಜರಿ ಮಾಡಬೇಕಂತೆ. ಅಂದ್ರೆ ಅನಿರುದ್ಧ್ ಅವರ ಪಾತ್ರವನ್ನು ಮುಗಿಸುತ್ತಾರಾ? ಅದಕ್ಕೆ ಈ ಸರ್ಜರಿ ಸಂಚಿಕೆಯಾ?

ವಿಶ್ವಾಸ್ ದೇಸಾಯಿ-ಆರ್ಯವರ್ಧನ

ವಿಶ್ವಾಸ್ ದೇಸಾಯಿ-ಆರ್ಯವರ್ಧನ

  • Share this:
    ಜೀ ಕನ್ನಡದಲ್ಲಿ  (Zee Kannada) ಪ್ರಸಾರವಾಗುತ್ತಿರುವ ಜನಪ್ರಿಯ ಧಾರಾವಾಹಿಗಳಲ್ಲಿ (Serials) ಜೊತೆ ಜೊತೆಯಲಿ (Jothe Jotheyali) ಸೀರಿಯಲ್ ಸಹ ಒಂದು. ಸೋಮವಾರದಿಂದ ಶುಕ್ರವಾರದವರೆಗೆ ರಾತ್ರಿ 8.30ಕ್ಕೆ ಪ್ರಸಾರವಾಗುತ್ತೆ. ಧಾರಾವಾಹಿಗೆ ಅದೆಷ್ಟೋ ಅಭಿಮಾನಿಗಳು ಇದ್ದಾರೆ. ಅದರಲ್ಲೂ ಆರ್ಯವರ್ಧನ್ ಅಂದ್ರೆ ಅನಿರುದ್ಧ್​ಗೆ (Anirudh)  ತುಂಬಾ ಜನ ಅಭಿಮಾನಿಗಳು (Fans) ಇದ್ದಾರೆ. ಸೀರಿಯಲ್ ಶೂಟಿಂಗ್‍ನಲ್ಲಿ ಆದ ಕಿರಿಕ್‍ನಿಂದ ಅನಿರುದ್ಧ್ ಧಾರಾವಾಹಿಯಿಂದ ಔಟ್ ಆಗಿದ್ದಾರೆ. ಆ ಪಾತ್ರಕ್ಕೆ ಯಾರು ಬರ್ತಾರೆ ಅನ್ನೋ ಕುತೂಹಲ ಹಾಗೇ ಉಳಿದಿದೆ. ಇನ್ನು ಆರ್ಯವರ್ಧನ್ ಸಹೋದರ ಪಾತ್ರಕ್ಕೆ ನಟ ಹರೀಶ್ ರಾಜ್ ಬಂದಿದ್ದಾರೆ. ಮಾಡಿದ ಸಾಲಕ್ಕೆ ವಿಶ್ವಾಸ್ ದೇಸಾಯಿ ನೀರಿಗೆ ಹಾರಿದ್ದಾನೆ. ಇತ್ತ ಆರ್ಯವರ್ಧನ್​ಗೆ ಅಪಘಾತವಾಗಿದೆ. ಇಬ್ಬರು ಒಂದೇ ಆಸ್ಪತ್ರೆ ಸೇರಿದ್ದಾರೆ.

    ಪ್ರಿಯದರ್ಶಿನಿ ಇಬ್ಬರು ಮಕ್ಕಳಿಗೂ ಕಂಟಕ?
    ಪ್ರಿಯದರ್ಶಿನಿ ಆರ್ಯವರ್ಧನ ಅಮ್ಮ. ಪ್ರಿಯದರ್ಶಿನಿ ಮನೆಗೆ ಜೋಗತವ್ವ ಬಂದು, ಎಚ್ಚರಿಕೆ ಕೊಟ್ಟಿದ್ದಳು. ನಿನ್ನ ಇಬ್ಬರು ಮಕ್ಕಳಲ್ಲಿ ಒಬ್ಬರಿಗೆ ಕಂಟಕ ಇದೆ ಎಂದು ಹೇಳುತ್ತಾಳೆ. ಆದ್ರೆ ಯಾವ ಮಗನಿಗೆ ಎಂಬುದನ್ನು ಹೇಳುವುದಿಲ್ಲ. ಅದನ್ನು ಕೇಳಿಸಿಕೊಂಡ ಪ್ರಿಯದರ್ಶಿನಿ ಗಾಬರಿ ಆಗಿದ್ದಳು. ಯಾಕಂದ್ರೆ ಜೋಗತವ್ವ ಹೇಳಿದ ಮಾತುಗಳೆಲ್ಲಾ ನಿಜ ಆಗುತ್ತೆ ಅದಕ್ಕೆ. ಆದ್ರೆ ಈಗ ಇಬ್ಬರು ಮಕ್ಕಳ ಪ್ರಾಣ ಅಪಾಯದಲ್ಲಿದೆ.

    ನೀರಿಗೆ ಹಾರಿದ ವಿಶ್ವಾಸ್ ದೇಸಾಯಿ
    ವಿಶ್ವಾಸ್ ದೇಸಾಯಿ, ಪ್ರಿಯದರ್ಶಿನಿ ಮಗ, ಆರ್ಯವರ್ಧನ್ ಸಹೋದರ. ವಿದೇಶಕ್ಕೆ ದುಡಿಯಲು ಹೋಗಿ ಕೋಟಿ ಕೋಟಿ ನಷ್ಟ ಅನುಭವಿಸುತ್ತಿದ್ದಾರೆ. ಮಾಡಿದ ಸಾಲ ತೀರಿಸಲು ಆಗದೇ ಸಾಯುವ ನಿರ್ಧಾರ ಮಾಡಿ, ನೀರಿಗೆ ಹಾರಿ ಆತ್ಮಹತ್ಯೆ ಯತ್ನ ಮಾಡಿದ್ದಾನೆ. ಅಲ್ಲಿ ಇದ್ದ ಜನ ಅವನನ್ನು ಕಾಪಾಡಿ ಆಸ್ಪತ್ರೆಗೆ ಕರೆದುಕೊಂಡು ಬಂದಿದ್ದಾರೆ.

    ಆಸ್ಪತ್ರೆಗೆ ಬಂದ ಆದಿ, ಎ.ಜೆ, ವೇದಾಂತ್
    ವಿಶ್ವಾಸ್ ದೇಸಾಯಿಯನ್ನು ಕಾಪಾಡಿದ ಜನ ಅವನ ಮೊಬೈಲ್‍ನಿಂದ ಆದಿ, ಎಜೆ, ವೇದಾಂತ್ ಗೆ ಕರೆ ಮಾಡಿದ್ದಾರೆ. ಅವನ ಡಯಲ್ ಲೀಸ್ಟ್​ನಲ್ಲಿದ್ದ ನಂಬರ್ ಅವರದ್ದು. ವಿಶ್ವಾಸ್ ದೇಸಾಯಿ ಆತ್ಮಹತ್ಯೆಗೆ ಯತ್ನಿಸಿದ್ದಾರೆ ಅಂತ ಗೊತ್ತಾಗಿದ್ದೇ ತಡ, ಮೂವರು ಆಸ್ಪತ್ರೆಗೆ ಬಂದಿದ್ದಾರೆ. ಏನಾಯ್ತು ಅಂತ ನೋಡಲು ಆತಂಕದಿಂದ ಬಂದಿದ್ದಾರೆ.

    ಇದನ್ನೂ ಓದಿ: Kannadathi: ಅಮ್ಮಮ್ಮನ ಪರೀಕ್ಷೆ ಮಾಡಿಸಲು ಹೋಗಿ ಸಾನಿಯಾ ಸಿಕ್ಕಿ ಹಾಕಿಕೊಳ್ತಾಳಾ? ಅತ್ತೆ V/s ಸೊಸೆ

    ಪ್ರಿಯದರ್ಶಿನಿ ನೋಡಲು ಹೊರಟ ಆರ್ಯನಿಗೆ ಅಪಘಾತ
    ಪ್ರಿಯದರ್ಶಿನಿ ತನ್ನ ಆರ್ಯನಿಗೆ ಕರೆ ಮಾಡಿ, ನಿನ್ನಿಂದ ಒಂದು ಸಹಾಯ ಬೇಕು. ಮನೆಗೆ ಬಾ ಎನ್ನುತ್ತಾಳೆ. ಅದಕ್ಕೆ ಆರ್ಯ ಖುಷಿಯಿಂದ ಹೆತ್ತಮ್ಮನನ್ನು ನೋಡಲು ಹೋಗುತ್ತಾ ಇರುತ್ತಾನೆ. ಆಗ ದಾರಿಯಲ್ಲಿ ಲಾರಿ ಬಂದು ಗುದ್ದಿ, ಅಪಘಾತವಾಗುತ್ತೆ. ಆಗ ಜನ ಅವನ್ನು ಆಸ್ಪತ್ರೆಗೆ ಸೇರಿಸಿದ್ದಾರೆ. ವಿಶ್ವಾಸ್ ದೇಸಾಯಿ, ಆರ್ಯವರ್ಧನ ಒಂದೇ ಆಸ್ಪತ್ರೆಗೆ ಸೇರಿದ್ದಾರೆ.

    Zee Kannada serial, Kannada serial, Jote Joteyali Kannada serial, Hero Anirudh Role Change, ಜೊತೆ ಜೊತೆಯಲಿ ಧಾರಾವಾಹಿ, ಆರ್ಯವರ್ಧನ್ ಪಾತ್ರ ಬದಲಿಸಲು ಅಪಘಾತದ ಎಪಿಸೋಡ್?, ಜೀ ಕನ್ನಡದಲ್ಲಿ ಪ್ರಸಾರವಾಗುವ ಧಾರಾವಾಹಿಗಳು, Kannada news, Karnataka news,
    ಜೊತೆ ಜೊತೆಯಲಿ


    ಪ್ಲಾಸ್ಟಿಕ್ ಸರ್ಜರಿ ಆಗಬೇಕಂತೆ ಆರ್ಯನಿಗೆ
    ಅಪಘಾತದಲ್ಲಿ ಆರ್ಯವರ್ಧನ್ ಮುಖಕ್ಕೆ ಏಟಾಗಿ ಗುರುತು ಸಿಗದಂತೆ ಆಗಿದೆಯಂತೆ. ಅದಕ್ಕೆ ಪ್ಲಾಸ್ಟಿಕ್ ಸರ್ಜರಿ ಮಾಡಬೇಕಂತೆ. ಅಂದ್ರೆ ಅನಿರುದ್ಧ್ ಅವರ ಪಾತ್ರವನ್ನು ಮುಗಿಸುತ್ತಾರಾ? ಅದಕ್ಕೆ ಈ ಸರ್ಜರಿ ಸಂಚಿಕೆಯಾ? ಹಾಗಾದ್ರೆ ಆರ್ಯವರ್ಧನ್ ಅವರ ಪಾತ್ರ ಮಾಡುತ್ತಿದ್ದ ಅನಿರುದ್ಧ್ ಅವರ ಎಪಿಸೋಡ್‍ಗಳು ಮುಗಿದವಾ? ಹಾಗಾದ್ರೆ ಆ ಪಾತ್ರಕ್ಕೆ ಯಾರು ಬರ್ತಾರೆ? ಇನ್ನೂ ಆರ್ಯನ ಪಾತ್ರಕ್ಕೆ ಯಾರು ಬರ್ತಾರೆ ಅನ್ನೋ ಕುತೂಹಲ ಹಾಗೇ ಇದೆ.

    ಇದನ್ನೂ ಓದಿ: Kendasampige: ಸುಮನಾ ಮರ್ಯಾದೆ ತೆಗೆಯಲು ಮುಂದಾದ ಕಾಳಿ, ಯಾರು ಇಲ್ಲದ ವೇಳೆ ಮನೆಗೆ ಬಂದ!

    ಜೊತೆ ಜೊತೆಯಲ್ಲಿ ಧಾರಾವಾಹಿಯಲ್ಲಿ ಮುಂದೇನಾಗುತ್ತೆ? ಆರ್ಯನ ಪಾತ್ರಕ್ಕೆ ಯಾರು ಬರ್ತಾರೆ? ತೀವ್ರ ಕುತೂಹನ ಮೂಡಿದೆ. ನಿಮ್ಮ ಎಲ್ಲ ಕುತೂಹಲಕ್ಕೂ ಒಂದೇ ಪರಿಹಾರ. ಜೊತೆ ಜೊತೆಯಲಿ ಸಂಚಿಕೆಗಳನ್ನು ನೋಡುವುದು.
    Published by:Savitha Savitha
    First published: