Jothe Jotheyali: ಜೊತೆ ಜೊತೆಯಲಿ ಆರ್ಯವರ್ಧನ್ ಪಾತ್ರಕ್ಕೆ ಇವರು ಜೀವ ತುಂಬ್ತಾರಾ? ಕಾಲ್ ಬಂದಿದ್ದು ಸತ್ಯ ಎಂದ ಹರೀಶ್ ರಾಜ್

ಜೊತೆ ಜೊತೆಯಲಿ ಧಾರಾವಾಹಿ ತಂಡದಿಂದ ಹರೀಶ್ ರಾಜ್ ಅವರಿಗೆ ಕಾಲ್ ಹೋಗಿದೆಯಂತೆ. ಆದರೆ ಯಾವ ಪಾತ್ರಕ್ಕೆ ಎಂಬುದರ ಬಗ್ಗೆ ಹರೀಶ್ ರಾಜ್ ಅವರಿಗೆ ಹೇಳಿಲ್ವಂತೆ. ಆರ್ಯವರ್ಧನ್ ಪಾತ್ರ ಕೊಟ್ಟರೆ ಖುಷಿಯ ವಿಚಾರವೇ ಎಂದು ಹರೀಶ್ ರಾಜ್ ಅವರು ಹೇಳಿದ್ದಾರೆ.

ಆರ್ಯವರ್ಧನ್ ಪಾತ್ರಕ್ಕೆ ಹರೀಶ್ ರಾಜ್?

ಆರ್ಯವರ್ಧನ್ ಪಾತ್ರಕ್ಕೆ ಹರೀಶ್ ರಾಜ್?

 • Share this:
  ಜೊತೆ ಜೊತೆಯಲಿ (Jothe Jotheyali) ಸೀರಿಯಲ್ (Serial), ಜೀ ಕನ್ನಡದ  (Zee Kannada) ಜನಪ್ರಿಯ ಧಾರಾವಾಹಿಗಳಲ್ಲಿ ಒಂದು. ಪ್ರೀತಿಗೆ ವಯಸ್ಸಿನ ಅಂತರ ಇಲ್ಲ ಎಂದು ತೋರಿಸಿಕೊಟ್ಟ ಸೀರಿಯಲ್. ಸೋಮವಾರದಿಂದ ಶುಕ್ರವಾರದವರೆಗೆ ರಾತ್ರಿ 8.30ಕ್ಕೆ ಜನ ಟಿವಿ ಮುಂದೆ ಕೂರುವಂತೆ ಮೋಡಿ ಮಾಡಿರುವ ಸೀರಿಯಲ್. ನಟ ಆರ್ಯವರ್ಧನ್ , ನಟಿ ಅನು ಸಿರಿಮನೆ. ಅನು, ಆರ್ಯವರ್ಧನ್‍ಗಿಂತ 20 ವರ್ಷ ಚಿಕ್ಕವಳು ಆದರೂ ಅವರನ್ನೇ ಪ್ರೀತಿಸಿ, ಮನೆಯವರ ಅನುಮತಿ ಪಡೆದು ಮದುವೆಯಾಗಿದ್ದಾರೆ. ರೀಲ್ ಕಥೆಯೇನೋ ಚೆನ್ನಾಗಿ ಓಡುತಿತ್ತು. ಅದ್ರೆ ರಿಯಲ್ ಆಗಿ ಶೂಟಿಂಗ್ ವೇಳೆ ಮಾತಿನ ಚಕಮಕಿ ನಡೆದು, ಧಾರಾವಾಹಿಯಿಂದ ನಟ ಅನಿರುದ್ಧ್ (Anirudh )  ಔಟ್ ಆಗಿದ್ದಾರೆ. ಆ ಪಾತ್ರಕ್ಕೆ ಹರೀಶ್ ರಾಜ್ (Harish Raj) ಅವರು ಬರ್ತಾರೆ ಅನ್ನೋ ಸುದ್ದಿ ಹರಡಿದೆ.

  ಅನಿರುದ್ಧ್ ಬದಲು ಹರೀಶ್ ರಾಜ್!
  ನಟ ಅನಿರುದ್ಧ್ ಅವರು ಜೊತೆಜೊತೆಯಲಿ ಸೀರಿಯಲ್‍ನಿಂದ ಹೊರ ಹೋದ ಬಳಿಕ ಯಾರು ಸೀರಿಯಲ್‍ನ ಮುಂದಿನ ಹೀರೋ ಅನ್ನೋ ಪ್ರಶ್ನೆ ಹುಟ್ಟಿತ್ತು. ಆರೂರು ಜಗದೀಶ್ ಅವರು ಮೊದಲೇ ನಾಯಕನನ್ನು ಆಯ್ಕೆ ಮಾಡಿಕೊಂಡು ಅನಿರುದ್ಧ್​ಗೆ ಗೇಟ್ ಪಾಸ್ ಕೊಟ್ಟಿದ್ದಾರಾ? ಅನ್ನೋ ಪ್ರಶ್ನೆ ಹುಟ್ಟಿತ್ತು. ಇದೀಗ ಎಲ್ಲಾ ಗೊಂದಲಕ್ಕೂ ತೆರೆ ಬಿದ್ದಿದ್ದು ಸ್ಯಾಂಡಲ್‍ವುಡ್ ನಟ ಹರೀಶ್ ರಾಜ್ ಅವರು ಆರ್ಯವರ್ಧನ್ ಪಾತ್ರಕ್ಕೆ ಆಯ್ಕೆ ಮಾಡಲಾಗಿದೆ ಎಂದು ಉನ್ನತ ಮೂಲಗಳಿಂದ ತಿಳಿದು ಬಂದಿದೆ.

  ಹಾಗಾದ್ರೆ ಹರೀಶ್ ರಾಜ್ ಏನು ಹೇಳಿದ್ದಾರೆ.
  ಜೊತೆ ಜೊತೆಯಲಿ ಧಾರಾವಾಹಿ ತಂಡದಿಂದ ಹರೀಶ್ ರಾಜ್ ಅವರಿಗೆ ಕಾಲ್ ಹೋಗಿದೆಯಂತೆ. ಆದರೆ ಯಾವ ಪಾತ್ರಕ್ಕೆ ಎಂಬುದರ ಬಗ್ಗೆ ಹರೀಶ್ ರಾಜ್ ಅವರಿಗೆ ಹೇಳಿಲ್ವಂತೆ. ಆರ್ಯವರ್ಧನ್ ಪಾತ್ರ ಕೊಟ್ಟರೆ ಖುಷಿಯ ವಿಚಾರವೇ ಎಂದು ಹರೀಶ್ ರಾಜ್ ಅವರು ಹೇಳಿದ್ದಾರೆ. ಇನ್ನೂ ನಾನು ಜೀ ಕನ್ನಡ ವಾಹಿನಿ ಜೊತೆ ಮಾತನಾಡಬೇಕಿದೆ. ಈ ಧಾರಾವಾಹಿ ತಂಡ ಸೇರುವ ಬಗ್ಗೆ ಮಾತುಕತೆ ಆಗಬೇಕಾಗಿದೆ. ಹಾಗಾಗಿ ಈಗಲೇ ನಾನು ಏನೂ ಹೇಳುವ ಆಗಿಲ್ಲ ಎಂದಿದ್ದಾರೆ.

  ಇದನ್ನೂ ಓದಿ: Ramachari Serial: ಮನೆಯವರ ರಕ್ಷಿಸಲು ಮಾಡದ ತಪ್ಪು ಒಪ್ಪಿಕೊಂಡ ರಾಮಾಚಾರಿ! ಪೊಲೀಸರು ಅರೆಸ್ಟ್ ಮಾಡ್ತಾರಾ?

  ಅನು ಜೊತೆ ಜೊತೆಯಾಗಲಿದ್ದಾರೆ ಹರೀಶ್ ರಾಜ್
  ಅನು ಸಿರಿಮನೆ ಹಾಗೂ ಆರ್ಯವರ್ಧನ್ ಜೋಡಿ ಪ್ರೇಕ್ಷಕರ ಮನಗೆದ್ದ ಜೋಡಿಯಾಗಿತ್ತು. ಇದೀಗ ಪಾತ್ರದ ಬದಲಾವಣೆಯನ್ನು ಜನರು ಹೇಗೆ ಸ್ವೀಕರಿಸ್ತಾರೆ ಅನ್ನೋದನ್ನೂ ಕಾದು ನೋಡಬೇಕಿದೆ. ಇತ್ತ ಆರ್ಯವರ್ಧನ್ ಪಾತ್ರಕ್ಕೆ ಅನಿರುದ್ಧ್ ಅವರೇ ಬೇಕು ಎಂದು ಮಹಿಳಾ ಅಭಿಮಾನಿಗಳು ಆಗ್ರಹಿಸಿದ್ರು. ಆರೂರು ಜಗದೀಶ್ ವಿರುದ್ಧ ಸಾಮಾಜಿಕ ಜಾಲತಾಣದಲ್ಲೂ ಅಭಿಮಾನಿಗಳು ಕಿಡಿಕಾರಿದ್ರು. ಅನಿರುದ್ಧ್ ಅವರನ್ನೇ ಆರ್ಯವರ್ಧನ್ ಪಾತ್ರಕ್ಕೆ ಕರೆತನ್ನಿ ಎನ್ನುವ ಕೂಗು ಜೋರಾಗಿತ್ತು.

  ಹಲವು ಚಿತ್ರಗಳಲಿ ಅಭಿನಯಿಸಿದ ಅನುಭವಿ ಹರೀಶ್ ರಾಜ್
  1997 ರಲ್ಲಿ ರಾಜೇಂದ್ರ ಸಿಂಗ್ ಬಾಬು ಅವರ ನಿರ್ದೇಶನದಲ್ಲಿ ಸೌಂದರ್ಯ ಅವರು ನಟಿಸಿದ್ದ ದೋಣಿ ಸಾಗಲಿ ಚಿತ್ರದ ಮೂಲಕ ಹರೀಶ್ ರಾಜ್ ಸಿನಿಪಯಣ ಆರಂಭವಾಯಿತು. ಅದೇ ವರ್ಷ ಖ್ಯಾತ ನಿರ್ದೇಶಕ ಗಿರೀಶ್ ಕಾಸರವಳ್ಳಿ ಅವರು ನಿರ್ದೇಶಿಸಿದ್ದ ತಾಯಿ ಸಾಹೇಬ ಚಿತ್ರದಲ್ಲಿ ನಟಿಸಿದ್ದ ಹರೀಶ್ ಇದುವರೆಗೂ 70 ಸಿನಿಮಾಗಳಲ್ಲಿ ಅಭಿನಯಿಸಿದ್ದಾರೆ. ಹರೀಶ್ ರಾಜ್ ನಿರ್ಮಿಸಿ, ನಿರ್ದೇಶಿಸಿದ ಭಕ್ತಿ ಪ್ರಧಾನ ಶ್ರೀ ಸತ್ಯನಾರಾಯಣ ಸಿನಿಮಾದಲ್ಲಿ 16 ವಿಭಿನ್ನ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಕ್ಕಾಗಿ ಲಿಮ್ಕಾ ಬುಕ್ ಆಫ್ ರೆಕಾರ್ಡ್​ನಲ್ಲಿ ಅವರ ಹೆಸರು ಸೇರಿಸಲಾಗಿದೆ.

  ಇದನ್ನೂ ಓದಿ: Olavina Nildana: ಸಿದ್ಧಾಂತ್ ಮನೆಗೆ ಬರಲು ರೆಡಿಯಾದ ತಾರಿಣಿ ಮನೆಯವರು, ಈಗೇನ್ ಮಾಡ್ತಾನೆ ಸಿದ್ದು?

  ಜೊತೆ ಜೊತೆಯಲಿ ಆರ್ಯವರ್ಧನ್ ಪಾತ್ರಕ್ಕೆ ದೊಡ್ಡ ಅಭಿಮಾನಿ ಬಳಗವೇ ಇದೆ. ಆರೂರು ಜಗದೀಶ್ ಅವರು ಅಳೆದು ತೂಗಿಯೇ ಆರ್ಯನ ಪಾತ್ರಕ್ಕೆ ನಟ ಹರೀಶ್ ರಾಜ್​ರನ್ನು ಆಯ್ಕೆ ಮಾಡಿದ್ದಾರೆ ಎನ್ನಲಾಗಿದೆ.
  Published by:Savitha Savitha
  First published: