Jothe Jotheyali: ರಾಜನಂದಿನಿ ಸಾವನ್ನಪ್ಪಿದ ಜಾಗಕ್ಕೆ ಆರ್ಯವರ್ಧನನ್ನು ಕರೆಸುತ್ತಿದ್ದಾಳೆ ಅನು! ಬಯಲಾಗುತ್ತಾ ಆರ್ಯನ ನಿಜ ಬಣ್ಣ?

ಅನು, ರಾಜನಂದಿನಿ ಸಾವನ್ನಪ್ಪಿದ ಸ್ಥಳಕ್ಕೆ ಹೋಗಿದ್ದಾಳೆ. ಅಲ್ಲಿ ರಾಜನಂದಿನಿ ಸತ್ತ ಘಟನೆಯನ್ನು ನೆನಪಿಸಿಕೊಳ್ಳುತ್ತಿದ್ದಾಳೆ. ಯಾವ ಜಾಗದಲ್ಲಿ ಎಲ್ಲಾ ಮುಗಿದೋಯ್ತು ಅಂತ ಖುಷಿ ಪಟ್ರೂ, ಆ ಜಾಗದಲ್ಲಿ ಹಳೇ ಬಾಕಿ ವಸೂಲಿ ಮಾಡೋಕೆ ಬಂದಿದ್ದೇನೆ ಎಂದು ಅನು ಹೇಳುತ್ತಿದ್ದಾಳೆ.

ಜೊತೆ ಜೊತೆಯಲಿ ಸೀರಿಯಲ್

ಜೊತೆ ಜೊತೆಯಲಿ ಸೀರಿಯಲ್

 • Share this:
  ಜೊತೆ ಜೊತೆಯಲಿ (Jote Joteyali) ಸೀರಿಯಲ್ (Serial), ಜೀ ಕನ್ನಡದ (Zee Kannada) ಜನಪ್ರಿಯ ಧಾರಾವಾಹಿಗಳಲ್ಲಿ ಇದು ಒಂದು. ಪ್ರೀತಿಗೆ ವಯಸ್ಸಿನ ಅಂತರ ಇಲ್ಲ ಎಂದು ತೋರಿಸಿಕೊಟ್ಟ ಧಾರಾವಾಹಿ. ಸೋಮವಾರದಿಂದ ಶುಕ್ರವಾರದವರೆಗೆ ರಾತ್ರಿ 8.30ಕ್ಕೆ ಜನ ಟಿವಿ ಮುಂದೆ ಕೂರುವಂತೆ ಮೋಡಿ ಮಾಡಿರು ಸೀರಿಯಲ್. ನಟ ಆರ್ಯವರ್ಧನ್, ನಟಿ ಅನು ಸಿರಿಮನೆ. ಅನು, ಆರ್ಯವರ್ಧನ್‍ಗಿಂತ 20 ವರ್ಷ ಚಿಕ್ಕವಳು ಆದರೂ ಅವರನ್ನೇ ಪ್ರೀತಿಸಿ, ಮನೆಯವರು ಅನುಮತಿ ಪಡೆದು ಮದುವೆ (Marriage) ಮಾಡಿಕೊಂಡಿದ್ದಾರೆ. ಮೊದ ಮೊದಲು ಇಬ್ಬರು ಚೆನ್ನಾಗೇ ಇದ್ದರೂ. ಆದ್ರೆ ಇತ್ತೀಚೆಗೆ ಅನುಗೆ, ಆರ್ಯವರ್ಧನ್ ಅವರು ಹಳೇ ಜೀವನದ ಸತ್ಯಗಳು ಗೊತ್ತಾಗಿವೆ. ಅದಕ್ಕೆ ನ್ಯಾಯ ಕೊಡಿಸಬೇಕು ಎಂಬ ಸತ್ಯದ ಹೋರಾಟದಲ್ಲಿ ಇದ್ದಾಳೆ. ಇವತ್ತು ರಾಜನಂದಿನಿ (Raja Nandini) ಸಾವನ್ನಪ್ಪಿದ ಸ್ಥಳಕ್ಕೆ ಆರ್ಯವರ್ಧನ್ ಅವರನ್ನು ಕರೆಸುತ್ತಿದ್ದಾಳೆ ಅನು.

  ರಾಜನಂದಿನಿ ಸಾವನ್ನಪ್ಪಿದ ಜಾಗದಲ್ಲಿ ಅನು
  ಇನ್ನು ಅನುಗೆ ಹಳೆಯ ಸತ್ಯಗಳು ಗೊತ್ತಾಗಿದ್ದು, ಆರ್ಯ ಎಷ್ಟೇ ಹೇಳಿದ್ರೂ ಅನು ಅವರ ಮಾತುಗಳನ್ನು ಕೇಳುತ್ತಿಲ್ಲ. ಆರ್ಯ ಕರೆ ಮಾಡಿ ಅನುಗೆ ಮನೆಗೆ ಬರುವಂತೆ ಹೇಳುತ್ತಾನೆ. ಅದಕ್ಕೆ ಅನು ನಾನು ಬರಲ್ಲ. ನಾನು ಹೇಳಿದ ಸ್ಥಳಕ್ಕೆ ಬನ್ನಿ ಎನ್ನುತ್ತಾಳೆ. ಅನು ಮಾತು ಕೇಳಿ ಆರ್ಯ ವರ್ಧನ್ ಗಾಬರಿಯಾಗಿದ್ದಾರೆ. ಅನು ರಾಜನಂದಿನಿ ಸಾವನ್ನಪ್ಪಿದ ಸ್ಥಳಕ್ಕೆ ಹೋಗಿದ್ದಾಳೆ. ಅಲ್ಲಿ ರಾಜನಂದಿನಿ ಸತ್ತ ಘಟನೆಯನ್ನು ನೆನಪಿಸಿಕೊಳ್ಳುತ್ತಿದ್ದಾಳೆ. ಯಾವ ಜಾಗದಲ್ಲಿ ಎಲ್ಲಾ ಮುಗಿದೋಯ್ತು ಅಂತ ಖುಷಿ ಪಟ್ರೂ, ಆ ಜಾಗದಲ್ಲಿ ಹಳೇ ಬಾಕಿ ವಸೂಲಿ ಮಾಡೋಕೆ ಬಂದಿದ್ದೇನೆ ಎಂದು ಅನು ಹೇಳುತ್ತಿದ್ದಾಳೆ.

  Zee Kannada serial, Jote Joteyali serial, Kannada serial, jote joteyali serial song, ಜೊತೆ ಜೊತೆಯಲಿ ಧಾರಾವಾಹಿ, ಜೀ ಕನ್ನಡ ಧಾರಾವಾಹಿಗಳು, Kannada news, Karnataka news,
  ರಾಜನಂದಿನಿ


  ಝೇಂಡೆಗೆ ವಾರ್ನ್ ಮಾಡಿದ ಅನು
  ಸತ್ಯ ಸುಡಲು ಬೆಂಕಿ ಇಟ್ರೆ, ಆ ಬೆಂಕಿ ಒಂದು ದಿನ ಸತ್ಯ ಸುಟ್ಟವರನ್ನೇ ಸುಡುತ್ತೆ. ಆ ದಿನ ನಿಮ್ಮ ಪಾಲಿಗೆ ಇವತ್ತು. ಇವತ್ತೇ ಎಲ್ಲನೂ ಮುಗಿಯುತ್ತೆ, ಎಲ್ಲಾ ನಿರ್ಧಾರ ಆಗುತ್ತೆ. ಪ್ರಪಂಚಕ್ಕೆ ಆರ್ಯವರ್ಧನ್ ಏನೂ ಅಂತ ಗೊತ್ತಾಗುತ್ತೆ. ಅವರ ಸ್ಥಾನ ಗೊತ್ತಾದ ಮೇಲೆ, ನಿಮ್ಮ ಸ್ಥಾನದ ಬಗ್ಗೆ ಪ್ರಶ್ನೆಯೇ ಇಲ್ಲ ಝೇಂಡೆ. ಬಿ ಕೇರ್ ಫುಲ್ ಎಂದು ಅನು ಸಿರಿಮನೆ ಝೇಂಡೆಗೆ ಎಚ್ಚರಿಕೆ ಕೊಟ್ಟಿದ್ದಾಳೆ.

  ಇದನ್ನೂ ಓದಿ: Olavina Nildana: ತಾರಿಣಿಯ ಸುಳ್ಳು ಪ್ರೀತಿ ಸುದ್ದಿ ಕೇಳಿ ತಾತನಿಗೆ ಹೃದಯಾಘಾತ! ಮನೆ ಮಂದಿಗೆಲ್ಲಾ ಆಘಾತ!

  ಅನುಗೆ ಆರ್ಯವರ್ಧನ್ ಬಗ್ಗೆ ಗೊತ್ತಾಗಿರುವ ಸತ್ಯವೇನು?
  ಅನು ಸಿರಿಮನೆ ಈ ಧಾರಾವಾಹಿಯಲ್ಲಿ ಬರುವ ಆರ್ಯವರ್ಧನ್ ಅವರ ಮೊದಲನೇ ಹೆಂಡತಿ ರಾಜನಂದಿಯ ಮರುಜನ್ಮ. ಮದುವೆ ಆಗಿ ಅನು ಆರ್ಯ ಮನೆಗೆ ಬಂದ ನಂತರ, ಆಕೆಗೆ ಒಂದೊಂದೆ ಸತ್ಯಗಳು ಗೊತ್ತಾಗಿವೆ. ರಾಜನಂದಿನಿಯ ತಂದೆ ಸಾವಿಗೆ ಆರ್ಯವರ್ಧನ್ ಕಾರಣ. ರಾಜನಂದಿನಿ ಸಾವಿಗೆ ಆರ್ಯ ಕಾರಣ, ಮೋಸದಿಂದ ಆಸ್ತಿ, ಅಧಿಕಾರಕ್ಕಾಗಿ ಹೀಗೆಲ್ಲಾ ಮಾಡಿದ್ದಾರೆ ಎಂದು ತಿಳಿದಿದೆ.

  ಆರ್ಯವರ್ಧನ್ ಬಳಿ ಸತ್ಯ ಬಾಯ್ಬಿಡಿಸಲು ಯತ್ನ!
  ರಾಜನಂದಿನಿಯ ಮತ್ತೆ ಅನು ಆಗಿ ಹುಟ್ಟಿ ಬಂದಿದ್ದಾಳೆ. ಕಳೆದ ಜನ್ಮದಲ್ಲಿ ತನಗಾದ ಮೋಸ ಗೊತ್ತಾಗಿದೆ. ಅದಕ್ಕೆ ಆ ಸತ್ಯವನ್ನು ಆರ್ಯವರ್ಧನ್ ಬಾಯಿಂದ ಕೇಳಬೇಕು ಎಂದು ಶತ ಪ್ರಯತ್ನ ಮಾಡುತ್ತಿದ್ದಾಳೆ. ಮೀರಾ, ಹರ್ಷ ವರ್ಧನ್ ಜೊತೆ ಸೇರಿ ಬಲೆಗಳನ್ನು ಹೆಣೆಯುತ್ತಿದ್ದಾರೆ. ಅದಕ್ಕೆ ಆರ್ಯ, ಝೇಂಡೆ ಮಾತ್ರ ಬೀಳ್ತಾ ಇಲ್ಲ.

  ಸಾವನ್ನಪ್ಪಿದ ಸ್ಥಳದಲ್ಲಿ ಸತ್ಯ ಶೋಧನೆ
  ರಾಜನಂದಿನಿಯೇ ಅನು ಆಗಿ ಹುಟ್ಟಿ ಬಂದಿದ್ದಾಳೆ. ಆದ ಕಾರಣ ಆಕೆಗೆ ಎಲ್ಲಾ ಸತ್ಯಗಳು ಗೊತ್ತು. ತನ್ನ ಸಾವಿಗೆ ಆರ್ಯನೇ ಕಾರಣ ಎಂದು. ಅದಕ್ಕೆ ಅಲ್ಲೇ ಸತ್ಯ ಶೋಧನೆ ಮಾಡುಲು ಮುಂದಾಗಿದ್ದಾಳೆ ಅನು. ಅದಕ್ಕೆ ಆರ್ಯವರ್ಧನ್‍ಗೆ ಅದೇ ಜಾಗಕ್ಕೆ ಬರಲು ಹೇಳಿದ್ದಾಳೆ. ಆರ್ಯನು ಸಹ ಅನು ಏಕೆ ಈ ರೀತಿ ಮಾಡುತ್ತಿದ್ದಾಳೆ ಎಂದು ಗೊತ್ತಾಗದೇ ಕಂಗಾಲಾಗಿದ್ದಾರೆ.

  ಇದನ್ನೂ ಓದಿ: Serial Shooting: ಮಳೆಯಿಂದಾಗಿ ಧಾರಾವಾಹಿ ಶೂಟಿಂಗ್​ಗೆ ತೊಂದರೆ, ಚಿತ್ರೀಕರಣದ ಮೇಲೆ ಪ್ರಭಾವ ಬೀರಿದ ವರುಣ

  ಇವತ್ತು ಅನು ಸಿರಿಮನೆ, ತನಗೆ ಗೊತ್ತಾಗಿರುವ ಸತ್ಯವನ್ನೆಲಾ ಆರ್ಯ ವರ್ಧನ್ ಬಳಿ ಹೇಳ್ತಾಳಾ. ಅನು ಮಾತಿಗೆ ಆರ್ಯನ ಪ್ರತಿಕ್ರಿಯೆ ಹೇಗಿರುತ್ತೆ? ಎಲ್ಲವನ್ನೂ ನೋಡಲು ಜೊತೆ ಜೊತೆಯಲ್ಲಿ ಸಂಚಿಕೆ ನೋಡಬೇಕು.
  Published by:Savitha Savitha
  First published: