Jote Joteyali: ರಾಜವರ್ಧನ್ ಸಾವಿನ ಹಿಂದೆ ಇರೋ ಸತ್ಯ ಬಯಲು! ಅನು ಈ ಮಾತನ್ನೆಲ್ಲಾ ನಂಬ್ತಾಳಾ?

ಅನು ಆರ್ಯವರ್ಧನ್ ಅವರನ್ನು ಪ್ರೀತಿಸಿ ಮದುವೆ ಆಗಿದ್ದಾಳೆ. ಆದ್ರೆ ಈಗ ಆಕೆಗೆ ಹಳೇ ಸತ್ಯಗಳೆಲ್ಲಾ ಗೊತ್ತಾಗಿದ್ದು, ಆರ್ಯವರ್ಧನ್ ಮೇಲೆ ಕೋಪಗೊಂಡಿದ್ದಾಳೆ.

ಜೊತೆ ಜೊತೆಯಲಿ

ಜೊತೆ ಜೊತೆಯಲಿ

 • Share this:
  ಜೊತೆ ಜೊತೆಯಲಿ (Jote Joteyali) ಸೀರಿಯಲ್ ಜೀ ಕನ್ನಡದ (Zee Kannada) ಜನಪ್ರಿಯ ಧಾರಾವಾಹಿಗಳಲ್ಲಿ ಇದು ಒಂದು. ಪ್ರೀತಿಗೆ ವಯಸ್ಸಿನ ಅಂತರ ಇಲ್ಲ ಎಂದು ತೋರಿಸಿಕೊಟ್ಟ ಧಾರಾವಾಹಿ. ಸೋಮವಾರದಿಂದ ಶುಕ್ರವಾರದವರೆಗೆ ರಾತ್ರಿ 8.30ಕ್ಕೆ ಜನ ಟಿವಿ ಮುಂದೆ ಕೂರುವಂತೆ ಮೋಡಿ ಮಾಡಿದ ಸೀರಿಯಲ್. ನಟ ಆರ್ಯವರ್ಧನ್, ನಟಿ ಅನು ಸಿರಿಮನೆ. ಅನು, ಆರ್ಯವರ್ಧನ್‍ಗಿಂತ 20 ವರ್ಷ ಚಿಕ್ಕವಳು ಆದರೂ ಅವರನ್ನೇ ಪ್ರೀತಿಸಿ (Love), ಮನೆಯವರು ಅನುಮತಿ ಪಡೆದು ಮದುವೆ ಮಾಡಿಕೊಂಡಿದ್ದಾರೆ. ಆದ್ರೆ ಇತ್ತೀಚೆಗೆ ಅನುಗೆ, ಆರ್ಯವರ್ಧನ್ ಅವರು ಹಳೇ ಜೀವನದ ಸತ್ಯಗಳು ಗೊತ್ತಾಗಿವೆ. ಆರ್ಯವರ್ಧನ್ ನೀನು ಬೇರೆ ಅವರ ಮಾತು ಕೇಳಿ ಏನೇನೋ ತಿಳಿದುಕೊಳ್ಳಬೇಡ. ನನ್ನ ಮಾತು ನಂಬು (Trust) ಎಂದು ಅನು ಬಳಿ ಕೇಳಿ ಕೊಳ್ಳುತ್ತಿದ್ದಾನೆ.

  ಅನುಗೆ ಆರ್ಯವರ್ಧನ ಮೇಲೆ ಅನುಮಾನ
  ಅನು ಆರ್ಯವರ್ಧನ್ ಅವರನ್ನು ಪ್ರೀತಿಸಿ ಮದುವೆ ಆಗಿದ್ದಾಳೆ. ಆದ್ರೆ ಈಗ ಆಕೆಗೆ ಹಳೇ ಸತ್ಯಗಳೆಲ್ಲಾ ಗೊತ್ತಾಗಿದ್ದು, ಆರ್ಯವರ್ಧನ್ ಮೇಲೆ ಕೋಪಗೊಂಡಿದ್ದಾಳೆ. ರಾಜನಂದಿನಿ ಹಾಗೂ ರಾಜವರ್ಧನ್ ಸಾವಿಗೆ ಆರ್ಯನೇ ಕಾರಣ ಎಂದು ತಿಳಿದುಕೊಂಡು ಅವರ ಮೇಲೆ ಕೋಪ ಮಾಡಿಕೊಂಡಿದ್ದಾಳೆ. ಅವರು ಏನೇ ಹೇಳಿದ್ರೂ ಸುಳ್ಳು ಹೇಳುತ್ತಾರೆ ಎಂಬ ಅನುಮಾನ ಅನುಗೆ ಕಾಡುತ್ತಾ ಇದೆ. ಅದಕ್ಕೆ ಆರ್ಯ ಏನೇ ಸತ್ಯ ಹೇಳಿದ್ರೂ ನಂಬುತ್ತಿಲ್ಲ.

  ರಾಜವರ್ಧನ್ ಸಾವಿನ ಸತ್ಯ ಬಿಚ್ಚಿಟ್ಟ ಆರ್ಯವರ್ಧನ್
  ಅನು ನನ್ನ ಮಾತು ಕೇಳು, ನಾನು ಹೇಳ್ತಿರೋದೇ ಸತ್ಯ. ನಿನಗೆ ಬೇರೆಯವರು ಹೇಳಿದ್ದು ಸುಳ್ಳು. ಅವತ್ತು ಆ ಕೋಣೆಯಲ್ಲಿ ನಾನು, ರಾಜ ಸಾಹೇಬ್ರು ಇಬ್ಬರೇ ಇದ್ದಿದ್ದು, ನಾನು ಹೇಳ್ತಿರೋದೇ ಸತ್ಯ. ಎಲ್ಲಿ ನಿನ್ನನ್ನು ಕಳೆದುಕೊಂಡು ಬಿಡುತ್ತಿನೋ ಎನ್ನುವ ಭಯದಲ್ಲಿ. ಒಮ್ಮೆ ರಾಜನಂದಿನ, ರಾಜಸಾಹೇಬರ ಬಗ್ಗೆ ಸುಳ್ಳು ಹೇಳಿದ್ದೀನಿ. ಮತ್ತೆ ಆ ತಪ್ಪು ಮಾಡಲ್ಲ ಅನು. ದಯವಿಟ್ಟು ನನ್ನ ನಂಬು. ನಾನು ಈಗ ಹೇಳ್ತಿರೋದೇ ಸತ್ಯ ಎಂದು, ಆರ್ಯವರ್ಧನ್ ಅನು ಬಳಿ ಮನವಿ ಮಾಡುತ್ತಿದ್ದಾರೆ.

  ಇದನ್ನೂ ಓದಿ: Lakshana: ಸಾವು-ಬದುಕಿನ ನಡುವೆ ಹೋರಾಡುತ್ತಿರುವ ನಕ್ಷತ್ರ, ಪತ್ನಿ ಪ್ರಾಣ ಉಳಿಸಿಕೊಳ್ತಾನಾ ಭೂಪತಿ?

  ಸತ್ಯ ಹೇಳಿದ್ದಕ್ಕೆ ಕುಸಿದು ಬಿದ್ರು
  ರಾಜಸಾಹೇಬರಿಗೆ ನಾನು ಯಾರು, ಯಾರ ಮಗ ಎಂದು ಸತ್ಯ ಹೇಳಲು ಕೋಪದಿಂದಲೇ ಅವರ ಕೋಣೆಗೆ ಹೋದೆ. ಸತ್ಯ ಹೇಳಿದ ತಕ್ಷಣ ಅವರ ಮೈ ನಡುಕ ಶುರುವಾಯ್ತು. ನಾನೇ ಒಡೆಯ ಎಂದು ಮೆರೆಯುತ್ತಿದ್ದವರ ಕಾಲು ನೆಲದ ಮೇಲೆ ಬಿದ್ದೋಯ್ತು. ಅವರು ಕುಸಿದ್ರು. ಎದೆ ಹಿಡಿದುಕೊಂಡ್ರು. ನಾನು ತಕ್ಷಣ ಇನ್ನೇಲರ್ ಅವರ ಕೈಗೆ ಕೊಟ್ಟೆ ಆದರೆ, ಅಷ್ಟರಲ್ಲೇ ಅವರು ಪ್ರಾಣ ಬಿಟ್ಟರು.

  ರಾಜ ಸಾಹೇಬರು ನನ್ನ ವೈರಿ ಆಗಿದ್ರೂ ನಿಜ. ಅವರನ್ನು ಸಾಹಿಸಲೇ ಬೇಕು ಅಂತ ಏನು ಇಲ್ಲ ಅಲ್ವಾ ಅನು. ಬೇರೆಯವರು ಹೇಳಿದ್ದನ್ನು ಸುಲಭವಾಗಿ ನಂಬ್ತೀಯಾ. ನಿನ್ನ ಜೀವಕ್ಕಿಂತ ಜಾಸ್ತಿ ಪ್ರೀತಿಸೋ ಗಂಡನನ್ನು ಯಾಕೆ ನಂಬುತ್ತಿಲ್ಲ ಎಂದು ಅನುಗೆ, ಆರ್ಯವರ್ಧನ್ ಪ್ರಶ್ನೆ ಮಾಡುತ್ತಾನೆ.

  ಇದನ್ನೂ ಓದಿ: Ramachari: ರಾಮಾಚಾರಿಗೆ 1 ಕೋಟಿ ಆಫರ್ ಮಾಡಿದ ಚಾರು, ದುಡ್ಡಿಗಾಗಿ ಚಾರು ಹೇಳಿದ್ದನ್ನು ಮಾಡ್ತಾನಾ?

  ಅಪ್ಪನಿಗಾಗಿ ಹೀಗೆಲ್ಲಾ ಮಾಡಿದ್ರಾ ಆರ್ಯವರ್ಧನ್?
  ಆರ್ಯವರ್ಧನ್ ತಂದೆ ರಾಜವರ್ಧನ್ ಮೋಸ ಮಾಡಿದ್ರಂತೆ. ಅದಕ್ಕೆ ಆರ್ಯವರ್ಧನ್ ತಂದೆ ಸಾವನ್ನಪ್ಪಿದ್ರಂತೆ. ಅದಕ್ಕೆ ಆರ್ಯ ರಾಜವರ್ಧನ್ ಮೇಲಿನ ಕೋಪಕ್ಕೆ ಅವರ ಮಗಳು, ರಾಜನಂದಿನಿಯನ್ನು ಪ್ರೀತಿಸಿ ನಾಟಕವಾಡಿ ಮದುವೆ ಆಗಿದ್ದರಂತೆ. ತಂದೆಯವರಿಗೆ ಕೊಟ್ಟ ಮತು ಉಳಿಸಿಕೊಳ್ಳುವ ಅನಿವಾರ್ಯ ಇತ್ತು. ವರ್ಧನ್ ಸಾಮ್ರಾಜ್ಯದ ದೊರೆ ಆಗ್ತೀನಿ ಅನ್ನೋ ಮಾತನ್ನು ನಮ್ಮ ತಂದೆಯವರಿಗೆ ಕೊಟ್ಟಿದ್ದೆ. ಅದಕ್ಕೋಸ್ಕರನೇ ಹೀಗೆಲ್ಲಾ ಮಾಡಬೇಕಾಯ್ತು. ರಾಜನಂದಿನಿ ಅವರನ್ನು ಪ್ರೀತಿಸೋ ನಾಟಕವಾಡಬೇಕಿತ್ತು. ಆದ್ರೆ ನಿಜವಾಗಿಯೂ ಪ್ರೀತಿ ಆಯ್ತು ಎಂದು ಹೇಳುತ್ತಾರೆ.
  Published by:Savitha Savitha
  First published: