Hitler Kalyana: ಎಜೆ ವಿರುದ್ಧ ಲೀಲಾಗೆ ಸಿಕ್ಕಿದೆ ಸಾಕ್ಷಿ, ಪವಿತ್ರಾ ಬರ್ತಡೇ ದಿನ ಬಿಗ್​ ಟ್ವಿಸ್ಟ್​!

ಲೀಲಾಗೆ ಎಜೆ ಯನ್ನು ಕಂಡ್ರೆ ಆಗಲ್ಲ. ಭಯದ ಜೊತೆ ಕೋಪವು ಇದೆ. ಎಜೆ ಮೊದಲನೇ ಹೆಂಡತಿ ಅಣ್ಣ, ಲೀಲಾ ಬಳಿ ಇಲ್ಲ ಸಲ್ಲದ್ದನ್ನು ಹೇಳಿದ್ದಾರೆ. ಮೊದಲ ಹೆಂಡತಿಯನ್ನು ಎಜೆ ಕೊಂದಿದ್ದಾರೆ. ಅವರ ವಿರುದ್ಧ ಯಾರಾದ್ರೂ ಮಾತನಾಡಿದ್ರೆ ಅವರು ಸಹಿಸಲ್ಲ. ಕೊಂದೇ ಬಿಡುತ್ತಾರೆ ಅಂತ ಹೇಳಿದ್ದಾರೆ. ಪವಿತ್ರ ಬರ್ತ್ ಡೇ ದಿನ ಮೂರು ಮೂರು ತಿರುವುಗಳು ನಡೆಯಲಿದ್ದು, ಏನಾಗಲಿದೆ ಎಂದು ಪ್ರೇಕ್ಷಕರ ಕುತೂಹಲ ಹೆಚ್ಚಿದೆ.

ಹಿಟ್ಲರ್ ಕಲ್ಯಾಣ

ಹಿಟ್ಲರ್ ಕಲ್ಯಾಣ

 • Share this:
  ಹಿಟ್ಲರ್ ಕಲ್ಯಾಣ (Hitler Kalyana), ಜೀ ಕನ್ನಡದಲ್ಲಿ  (Zee Kannada) ಸೋಮವಾರದಿಂದ ಶುಕ್ರವಾರದವರೆಗೆ ಸಂಜೆ 7 ಗಂಟೆಗೆ ಪ್ರಸಾರವಾಗುತ್ತಿರುವ ಧಾರಾವಾಹಿ (Serial). ಈ ಕಥೆ ಬೇರೆ ಧಾರಾವಾಹಿಗಳಿಗಿಂತ ವಿಭಿನ್ನವಾಗಿದ್ದು ಜನಪ್ರಿಯತೆ ಗಳಿಸಿದೆ. ಈಗಾಗಲೇ ಮೂವರು ಸೊಸೆಯರನ್ನು ಹೊಂದಿರುವ ಎಜೆ (AJ) ಅವರಿಗಾಗಿ ಅತ್ತೆ ಸ್ಥಾನ ತುಂಬಲು ಎಡವಟ್ಟು ರಾಣಿ ಲೀಲಾಳನ್ನು ಮದುವೆಯಾಗಿದ್ದಾರೆ. ಲೀಲಾ (Leela) ಪ್ರತಿದಿನವೂ ಏನಾದ್ರೂ ಒಂದು ಎಡವಟ್ಟು ಕೆಲಸ ಮಾಡಿ ಎ.ಜೆ ಕೈಯಲ್ಲಿ ಬೈಸಿಕೊಳ್ಳುತ್ತಾ ಇರುತ್ತಾಳೆ. ಇಬ್ಬರ ನಡುವೆ ವಯಸ್ಸಿನ (Age) ಅಂತರವೂ ಹೆಚ್ಚಿರುವುದರಿಂದ, ಹೊಂದಾಣಿಕೆ ಕಷ್ಟವಾಗುತ್ತಿದೆ. ಅಲ್ಲದೇ ಲೀಲಾ ಕಂಡರೆ ಮೂವರು ಸೊಸೆಯಂದಿರುಗೂ ಆಗಲ್ಲ. ಲೀಲಾಳನ್ನು ಹೇಗಾದ್ರೂ ಮನೆಯಿಂದ ಆಚೆ ಹಾಕಬೇಕು ಎಂದು ಕಾಯುತ್ತಿದ್ದಾರೆ. ಅದಕ್ಕೆ ತಕ್ಕಂತೆ ಸನ್ನಿವೇಶಗಳನ್ನು ಸಹ ಸೃಷ್ಟಿಸುತ್ತಿದ್ದಾರೆ.

  ಎಜೆ ವಿರುದ್ಧ ಲೀಲಾಗೆ ಸಿಕ್ಕಿದೆ ಸಾಕ್ಷಿ
  ಲೀಲಾಗೆ ಎಜೆ ಯನ್ನು ಕಂಡ್ರೆ ಆಗಲ್ಲ. ಭಯದ ಜೊತೆ ಕೋಪವು ಇದೆ. ಎಜೆ ಮೊದಲನೇ ಹೆಂಡತಿ ಅಣ್ಣ, ಲೀಲಾ ಬಳಿ ಇಲ್ಲ ಸಲ್ಲದ್ದನ್ನು ಹೇಳಿದ್ದಾರೆ. ಮೊದಲ ಹೆಂಡತಿಯನ್ನು ಎಜೆ ಕೊಂದಿದ್ದಾರೆ. ಅವರ ವಿರುದ್ಧ ಯಾರಾದ್ರೂ ಮಾತನಾಡಿದ್ರೆ ಅವರು ಸಹಿಸಲ್ಲ. ಕೊಂದೇ ಬಿಡುತ್ತಾರೆ ಅಂತ ಹೇಳಿದ್ದಾರೆ. ಲೀಲಾಳು ಅದನ್ನು ನಿಜ ಎಂದು ನಂಬಿದ್ದಾಳೆ. ಮೊನ್ನೆ ಮೊನ್ನೆಯಷ್ಟೇ ಲೀಲಾ ತನ್ನ ಸೊಸೆಯಂದಿರಿಗೆ ಬೈದಳು ಅಂತ ಬಿಲ್ಡಿಂಗ್ ವೊಂದರ ಮೇಲೆ ಕರೆದುಕೊಂಡು ಹೋಗಿ ವಾರ್ನಿಂಗ್ ಕೊಟ್ಟಿದ್ದರು.

  ಲೀಲಾಗೆ ಪೆನ್‍ಡ್ರೈವ್ ಕಳಿಸಿರುವ ಅನಾಮಿಕ
  ಈಗ ಮನೆಗೆ ಲೀಲಾ ಹೆಸರಿಗೆ ಪಾರ್ಸಲ್ ಬಂದಿದ್ದು, ಅನಾಮಿಕ ಪತ್ರದ ಜೊತೆ ಪೆನ್‍ಡ್ರೈವ್ ಕಳಿಸಿದ್ದಾನೆ. ನಿನಗೆ ಎಜೆ ಮನೆಯಲ್ಲಿ ಕಷ್ಟ ಆಗುತ್ತಿದೆ ಎಂದು ಗೊತ್ತು. ನಿನ್ನ ಮಾತನ್ನು ಯಾರೂ ನಂಬುತ್ತಿಲ್ಲ ತಾನೆ. ನಾನು ನಿನ್ನ ಬೆಂಬಲಕ್ಕೆ ಸದಾ ಇರುತ್ತೇನೆ. ಈ ಪೆನ್ ಡ್ರೈವ್‍ನಲ್ಲಿ ಎಜೆ ವಿರುದ್ಧದ ಸಾಕ್ಷಿ ಇದೆ ಎಂದು ಹೇಳಿರುತ್ತಾನೆ.

  ಇದನ್ನೂ ಓದಿ: Ramachari: ರಾಮಾಚಾರಿ ಮನೆಗೆ ಬಂದು ಸವಾಲ್ ಹಾಕಿದ ಚಾರು! ದುರಂಹಕಾರಕ್ಕೆ ಫುಲ್​ಸ್ಟಾಪ್ ಯಾವಾಗ? 

  ಪವಿತ್ರಾ ಬರ್ತ್‍ಡೇ ದಿನ ವಿಡಿಯೋ ಪ್ಲೇ ಮಾಡಲು ಚಿಂತನೆ
  ಇನ್ನು ಆ ಪೆನ್‍ಡ್ರೈವ್‍ನಲ್ಲಿ ಎಜೆ ಲೀಲಾಳನ್ನು ಬಿಲ್ಡಿಂಗ್ ಮೇಲಿಂದ ತಳ್ಳಿ, ಸಾಯಿಸ್ತೀನಿ ಅನ್ನೋ ಎಚ್ಚರಿಕೆ ನಿಡೋ ದೃಶ್ಯ ಇದೆ. ಇದನ್ನು ನೋಡಿ ಗಾಬರಿಯಾಗಿರುವ ಲೀಲಾ, ಎಜೆ ಮೊದಲನೇ ಹೆಂಡತಿ ಅಣ್ಣನಿಗೆ ಕರೆ ಮಾಡಿ. ನನಗೆ ಎಜೆ ವಿರುದ್ಧದ ಒಂದು ಸಾಕ್ಷಿ ಸಿಕ್ಕಿದೆ. ಅದನ್ನು ಪವಿತ್ರಾ ಬರ್ತ್‍ಡೇ ದಿನ ಎಲ್ಲರ ಮುಂದೆ ಹಾಕ್ತೀನಿ ಎಂದು ಹೇಳಿದ್ದಾಳೆ.

  Zee Kannada serial, Hitler Kalyan serial today episode, Hitler Kalyan serial cast, Birthday party in Hitler Kalyan serial, ಹಿಟ್ಲರ್ ಕಲ್ಯಾಣ ಧಾರಾವಾಹಿ, ಜೀ ಕನ್ನಡ ಧಾರಾವಾಹಿಗಳು, Kannada news, Karnataka news,
  ಹಿಟ್ಲರ್ ಕಲ್ಯಾಣ


  ಅಕ್ಕನ ಬಳಿ ನಿಜ ಹೇಳ್ತಿನಿ ಅಂತಿರೋ ರೇವತಿ
  ಲೀಲಾ ತಂಗಿ ರೇವತಿ, ಪವಿತ್ರಾ ಗಂಡ ದೇವ್‍ನನ್ನು ಲವ್ ಮಾಡುತ್ತಿದ್ದಾಳೆ. ದೇವ್ ಸಹ ಚುಕ್ಕಿಯನ್ನು ಮದುವೆಯಾಗುಲು, ಹೆಂಡ್ತಿಯನ್ನೇ ಬಿಲ್ಡಿಂಗ್ ಮೇಲಿಂದ ತಳ್ಳಿ ಕೋಮ ಪರಿಸ್ಥಿತಿಗೆ ತಂದಿಟ್ಟಿದ್ದಾನೆ. ಅಲ್ಲದೇ ರೇವತಿ, ದೇವ್ ಬಳಿ ನಾನು ಎಜೆ ಮನೆಗೆ ಬರುತ್ತೇನೆ ಅಕ್ಕನ ಮುಂದೆ ಎಲ್ಲ ಸತ್ಯ ಹೇಳಿ, ನಮ್ಮ ತಪ್ಪು ಒಪ್ಪಿಕೊಳ್ಳೋಣ ಅಂತ ಹೇಳ್ತಿದ್ದಾಳೆ. ಅದಕ್ಕೆ ದೇವ್ ಗಾಬರಿಯಾಗಿದ್ದಾನೆ. ಎಲ್ಲಿ ತನ್ನ ಮೋಸದ ವಿಷಯ ಬಯಲಾಗುತ್ತೋ ಅಂತ ಒದ್ದಾಡುತ್ತಿದ್ದಾನೆ.

  ಇದನ್ನೂ ಓದಿ: Sathya Serial: ಡಿವೋರ್ಸ್ ಪೇಪರ್ ಗೆ ಇವತ್ತು ಸಹಿ ಮಾಡಲಿರುವ ಸತ್ಯ! ಸುಲಭವಾಗಿ ಸೋಲು ಒಪ್ಪಿಕೊಳ್ತಾಳಾ ಲೇಡಿ ರಾಮಾಚಾರಿ? 

  ಪವಿತ್ರಾ ಬರ್ತ್ ಡೇ ದಿನ ಸಪ್ರೈಸ್ ಕೊಡ್ತೀನಿ ಅಂತಿರೋ ಎಜೆ
  ಇನ್ನೊಂದೆಡೆ ದೇವ್ ರೇವತಿ ಬಳಿ ಮಾತನಾಡುವಾಗ, ತಪ್ಪಿಸಿಕೊಳ್ಳಲು ನನ್ನ ಹೆಂಡ್ತಿ ಪವಿತ್ರ ಬರ್ತ್ ಡೇ ಕೇಕ್ ಆರ್ಡರ್ ಮಾಡುತ್ತಿದ್ದೆ ಅಂತ ಹೇಳ್ತಾನೆ. ಅದಕ್ಕೆ ಎಜೆ ಪವಿತ್ರಾ ಬರ್ತ್ ಡೇ ಗ್ರ್ಯಾಂಡ್ ಆಗಿ ಮಾಡಲು ರೆಡಿ ಮಾಡಿದ್ದಾನೆ. ಅಲ್ಲದೇ ಪವಿತ್ರಾ ಬಳಿ ಬಂದು, ನಿನ್ನ ಬರ್ತ್ ಡೇ ದಿನ ನಿನಗೆ ಸಪ್ರೈಸ್ ಕೊಡ್ತೀನಿ ಅಂತ ಹೇಳ್ತಿದ್ದಾನೆ.

  ಪವಿತ್ರ ಬರ್ತ್ ಡೇ ದಿನ ಮೂರು ಮೂರು ತಿರುವುಗಳು ನಡೆಯಲಿದ್ದು, ಏನಾಗಲಿದೆ ಎಂದು ಪ್ರೇಕ್ಷಕರ ಕುತೂಹಲ ಹೆಚ್ಚಿದೆ. ಎಲ್ಲವನ್ನೂ ನೋಡಲು ಹಿಟ್ಲರ್ ಕಲ್ಯಾಣ ಧಾರಾವಾಹಿ ನೋಡಬೇಕು.
  Published by:Savitha Savitha
  First published: