Kamali Serial: ಕಮಲಿ ಕೊಲ್ಲಲು ಕಾರ್ ಗೆ ಬಾಂಬ್ ಫಿಕ್ಸ್ ಮಾಡಿದ ಅನಿಕಾ, ಬದಲಾದವಳಂತೆ ನಾಟಕ ಮಾಡಿ ಮತ್ತೆ ಮೋಸ!

ಅನಿಕಾ ಬದಲಾಗಿದ್ದಾಳೆ ಎಂದುಕೊಂಡ ಮನೆಯವರು, ಆಕೆಯನ್ನು ಭೇಟಿಯಾಗಲು ಕಾರಿನಲ್ಲಿ ಹೋಗುತ್ತಿದ್ದಾರೆ. ಕಾರಿನಲ್ಲಿ ಅನಿಕಾ ಅಪ್ಪ-ಅಮ್ಮ, ಕಮಲಿ ಇದ್ದಾರೆ. ಅವರು ಬದುಕ ಬಾರದು ಎಂದು ಅನಿಕಾ ಕಮಲಿ ಹೋಗುತ್ತಿರುವ ಕಾರಿಗೆ ಬಾಂಬ್ ಇಡಿಸಿದ್ದಾಳೆ.

ಕಮಲಿ ಸೀರಿಯಲ್

ಕಮಲಿ ಸೀರಿಯಲ್

 • Share this:
  ಕಮಲಿ (Kamali) ಸೀರಿಯಲ್ (Serial) 2018ರಲ್ಲಿ ತನ್ನದೇ ಛಾಪು ಸೃಷ್ಟಿಸಿದ್ದ ಧಾರಾವಾಹಿ. ಜೀ ಕನ್ನಡಲ್ಲಿ ಈಗ ಪ್ರತಿ ದಿನ ರಾತ್ರಿ 10 ಗಂಟೆಗೆ ಈ ಧಾರವಾಹಿ ಪ್ರಸಾರವಾಗುತ್ತೆ. ಮೊದಲು ಸಂಜೆ 7 ಗಂಟೆಗೆ ಪ್ರಸಾರವಾಗುತ್ತಿತ್ತು. ಹಳ್ಳಿ ಹುಡುಗಿಯೊಬ್ಬಳು, ಸಿಟಿಗಾಗಿ ತನ್ನ ಗುರಿ ತಲುಪಲು ಓದುವುದ್ಕಾಗಿ ಬರೋ ಕಥೆ. ಅಪ್ಪ ಇಲ್ಲದೇ ಬೆಳೆದ ಕಮಲಿಗೆ ಸಾವಿರಾರು ಕನಸು ಹೊತ್ತು ಬೆಂಗಳೂರಿಗೆ (Bengaluru) ಬರುತ್ತಾಳೆ. ಇಲ್ಲಿಗೆ ಬಂದ ಮೇಲೆ ಆಕೆಗೆ ತನ್ನ ತಂದೆ, ಅಜ್ಜಿ-ತಾತಾ, ಚಿಕ್ಕಮ್ಮ, ತಂಗಿ ಎಲ್ಲರೂ ಸಿಗುತ್ತಾರೆ. ಅಲ್ಲದೇ ರಿಷಿ ಎಂಬುವವರನ್ನು ಪ್ರೀತಿಸಿ ಮದುವೆಯಾಗುತ್ತಾಳೆ (Love Marriage). ಅನಿಕಾಗೆ ಕಮಲಿಯನ್ನು ಕಂಡ್ರೆ ಆಗುವುದಿಲ್ಲ. ಅಲ್ಲದೇ ಹಲವು ತಪ್ಪುಗಳನ್ನು ಮಾಡಿದ್ದು, ಜೈಲಿಗೆ ಹೋಗುವ ಭಯದಲ್ಲಿ ಇದ್ದಾಳೆ. ಅದಕ್ಕೆ ಕಮಲಿ ಕೊಲ್ಲಲು ಸ್ಕೆಚ್ ಹಾಕಿದ್ದು, ಕಾರ್ ಗೆ ಬಾಂಬ್ (Car Bomb) ಫಿಕ್ಸ್ ಮಾಡಿಸಿದ್ದಾಳೆ.

  ಬದಲಾದಂತೆ ನಟಿಸಿದ ಅನಿಕಾ
  ಅನಿಕಾ ಎಷ್ಟೋ ಬಾರಿ ಕಮಲಿಯನ್ನು ಕೊಲ್ಲಲು ಪ್ರಯತ್ನಿಸಿದ್ದಾಳೆ. ಅಲ್ಲದೇ ಅಂಬಿ ಕೊಲೆಗೂ ಸಹ ಕಾರಣವಾಗಿದ್ದಾಳೆ. ಅಜ್ಜಿಯನ್ನು ಕಿಡ್ನ್ಯಾಪ್ ಮಾಡಿ ತೊಂದರೆ ಕೊಟ್ಟಿದ್ದಾಳೆ. ಅಪ್ಪನನ್ನು ಕಿಡ್ನ್ಯಾಪ್ ಮಾಡಿಸಿ, ಕೊಲ್ಲಲು ಪ್ರಯತ್ನ ಪಟ್ಟಿದ್ದಳು.

  ಇದೆಲ್ಲವೂ ಮನೆ ಅವರಿಗೆ ಗೊತ್ತಾಗಿದೆ. ಅದಕ್ಕೆ ಆಕೆಯನ್ನು ಜೈಲಿಗೆ ಹಾಕಿಸಬೇಕು ಎಂದುಕೊಂಡರು. ಆದ್ರೆ ಅನಿಕಾ ತಾನು ಬದಲಾಗಿದ್ದೇನೆ ಎಂದು ಕಣ್ಣಿರು ಇಟ್ಟಿದ್ದಾಳೆ ಅದನ್ನು ಮನೆಯವರು ನಂಬಿ ಮೋಸ ಹೋಗಿದ್ದಾರೆ.

  ಕಮಲಿ ಬರುತ್ತಿರುವ ಕಾರಿನಲ್ಲಿ ಬಾಂಬ್
  ಅನಿಕಾ ಬದಲಾಗಿದ್ದಾಳೆ ಎಂದುಕೊಂಡ ಮನೆಯವರು, ಆಕೆಯನ್ನು ಭೇಟಿಯಾಗಲು ಕಾರಿನಲ್ಲಿ ಹೋಗುತ್ತಿದ್ದಾರೆ. ಕಾರಿನಲ್ಲಿ ಅನಿಕಾ ಅಪ್ಪ-ಅಮ್ಮ, ಕಮಲಿ ಇದ್ದಾರೆ. ಅವರು ಬದುಕಬಾರದು ಎಂದು ಅನಿಕಾ ಕಮಲಿ ಹೋಗುತ್ತಿರುವ ಕಾರಿಗೆ ಬಾಂಬ್ ಇಡಿಸಿದ್ದಾಳೆ.

  ಇವರು ಬದುಕಿದ್ರೆ ತಾನೇ ತೊಂದ್ರೆ, ಜೈಲಿಗೆ ಹೋಗುವುದು. ಇವರೆಲ್ಲಾ ಸತ್ತರೆ, ನಾನು ಆಯಾಗಿ ವಿದೇಶದಲ್ಲಿ ಹೋಗಿ ಸೆಟಲ್ ಆಗಬಹುದು ಎಂದುಕೊಂಡು ಈ ರೀತಿ ಮಾಡಿದ್ದಾಳೆ.

  ಇದನ್ನೂ ಓದಿ: Shiva Rajkumar-Coffee Nadu Chandu: ನಿಮ್ಮಂಥಾ ಅಭಿಮಾನಿ ಪಡೆದಿದ್ದು ಪುಣ್ಯ ಎಂದ ಹ್ಯಾಟ್ರಿಕ್ ಹೀರೋ, ಕಾಫಿ ನಾಡು ಚಂದು ಖುಷ್

  ಕಮಲಿ ಉಳಿಸಲು ಪರದಾಡುತ್ತಿರುವ ರಿಷಿ
  ರಿಷಿಗೆ ಹೇಗೋ ಅನಿಕಾ, ಕಮಲಿ ಅವರ ಕಾರಿಗೆ ಬಾಂಬ್ ಇಟ್ಟಿರುವ ವಿಷಯ ಗೊತ್ತಾಗಿದೆ. ಅದಕ್ಕೆ ಕಮಲಿ ಅವರನ್ನು ಕಾಪಾಡಲು ಪರದಾಡುತ್ತಿದ್ದಾನೆ. ಹೇಗಾದ್ರೂ ಮಾಡಿ ಅವರನ್ನು ಕಾರಿನಿಂದ ಇಳಿಸಲು ಪ್ರಯತ್ನ ಪಡುತ್ತಿದ್ದಾನೆ. ಆದ್ರೆ ಕಮಲಿಗೆ ಕಾಲ್ ಹೋಗುತ್ತಿಲ್ಲ. ಸತತವಾಗಿ ಕರೆ ಮಾಡುತ್ತಿದ್ದಾನೆ. ಮತ್ತು ಅವರ ಕಾರನ್ನು ಹಿಂಬಾಲಿಸುತ್ತಿದ್ದಾನೆ.  Zee Kannada serial, Kannada serial, Kamali serial, Kamali serial Kannada cast, kamali serial upcoming story. ಕಮಲಿ ಧಾರಾವಾಹಿ, ಜೀ ಕನ್ನಡದಲ್ಲಿ ಪ್ರಸಾರವಾಗುವ ಧಾರಾವಾಹಿಗಳು, Kannada news, Karnataka news,
  ಅನಿಕಾ


  ಉಳಿಯುತ್ತಾ ಕಮಲಿ ಪ್ರಾಣ?
  ರಿಷಿ ಸರ್ ಎಷ್ಟೇ ಪ್ರಯತ್ನ ಮಾಡಿದ್ರೂ ಕಮಲಿಯವರನ್ನು ಸಂಪರ್ಕಿಸಲು ಆಗುತ್ತಿಲ್ಲ. ಅನಿಕಾ ಈ ಬಾರಿ ಪಕ್ಕಾ ಪ್ಲ್ಯಾನ್ ಮಾಡಿದ್ದಾಳೆ. ಹಾಗಾದ್ರೆ ಕಮಲಿ ಮತ್ತು ಆಕೆಯ ಕುಟುಂಬದವರನ್ನು ಕಾಪಾಡಲು ಆಗಲ್ವಾ? ಬಾಂಬ್ ಬ್ಲಾಸ್ಟ್ ಆಗಿ ಎಲ್ಲರೂ ಪ್ರಾಣ ಕಳೆದುಕೊಳ್ಳುತ್ತಾರಾ? ಇಲ್ಲ, ಸುದ್ದಿ ಗೊತ್ತಾಗಿ ಕಾರಿನಂದ ಇಳಿಯುತ್ತಾರಾ ಗೊತ್ತಿಲ್ಲ.

  ಇದನ್ನೂ ಓದಿ: Kendasampige: ತಂದೆ ಪ್ರಾಣ ಉಳಿಸಿಕೊಳ್ಳಲು ಸುಮಿ ಪರದಾಟ, ದುಡ್ಡು ಕೊಟ್ಟು ತನ್ನ ಮಗನನ್ನು ಮದುವೆ ಮಾಡಿಕೋ ಎಂದ ವಿಜಯ!

  ಮತ್ತೆ ಅನಿಕಾಳಿಂದ ನಂಬಿಕೆ ದ್ರೋಹ
  ಅನಿಕಾ ತನ್ನ ಬೇಬಿ, ಒಳ್ಳೆಯವಳಾಗಿದ್ದಾಳೆ ಎಂದುಕೊಂಡಿದ್ದ ಅಮ್ಮನಿಗೂ ಅನಿಕಾ ವಂಚಿಸಿದ್ದಾಳೆ. ತಂದೆ ಸಹ ಮಗಳು ಎಂದು ಆಕೆ ಮಾಡಿದ ತಪ್ಪನ್ನು ಮನಿಸಿದ್ದಾನೆ. ಇನ್ನೂ ಕಮಲಿ ಸಹ ತನ್ನ ತಂಗಿ ತಾನೇ ಎಂದು ಎಲ್ಲವನ್ನೂ ಮರೆತಿದ್ದಾಳೆ. ಆದ್ರೆ ಅನಿಕಾ ಮಾತ್ರ ಮೂವರು ಇರುವ ಕಾರಿಗೆ ಬಾಂಬ್ ಇಟ್ಟು ಕೊಲ್ಲಲು ಯತ್ನಿಸುತ್ತಿದ್ದಾಳೆ. ಏನಾಗುತ್ತೆ ಅಂತ ನೋಡೋಕೆ ಕಮಲಿ ಧಾರಾವಾಹಿ ನೋಡಬೇಕು.
  Published by:Savitha Savitha
  First published: