Actress Ankita: ಸಪ್ತಪದಿ ತುಳಿದ ಕಮಲಿ ಬೆಸ್ಟ್ ಪ್ರೆಂಡ್ ನಿಂಗಿ, ಅಂಕಿತಾ ಮದುವೆಯಾಗಿದ್ದು ಯಾರನ್ನು?

ಕಮಲಿ ಸೀರಿಯಲ್‍ನಲ್ಲಿ ಕಮಲಿ ಬೆಸ್ಟ್ ಪ್ರೆಂಡ್ ಆಗಿದ್ದ ನಿಂಗಿ ಅಂದ್ರೆ ಅಂಕಿತಾ ಅವರು ಸುಹಾಸ್ ಎನ್ನುವವರ ಜೊತೆ ತಮ್ಮ ಮದುವೆ ಜೀವನ ಆರಂಭಿಸಿದ್ದಾರೆ. ಬೆಂಗಳೂರಿನಲ್ಲಿ ಇವರು ಮದುವೆಯಾಗಿದ್ದು, ಕಮಲಿ ಧಾರಾವಾಹಿಯ ಕಲಾವಿದರು ಸೇರಿ ಹಲವರು ಭಾಗಿಯಾಗಿದ್ರು.

ಅಂಕಿತಾ-ಸುಹಾಸ್
(ಕೃಪೆ: ಇನ್‍ಸ್ಟಾಗ್ರಾಂ)

ಅಂಕಿತಾ-ಸುಹಾಸ್ (ಕೃಪೆ: ಇನ್‍ಸ್ಟಾಗ್ರಾಂ)

 • Share this:
  ಕಮಲಿ (Kamali) ಸೀರಿಯಲ್ (Serial) 2018ರಲ್ಲಿ ತನ್ನದೇ ಚಾಪು ಸೃಷ್ಟಿಸಿದ್ದ ಧಾರಾವಾಹಿ. ಜೀ ಕನ್ನಡಲ್ಲಿ  (Zee Kannada) ಈಗ ಪ್ರತಿ ದಿನ ರಾತ್ರಿ 10ಗಂಟೆಗೆ ಪ್ರಸಾರವಾಗುತ್ತೆ. ಮೊದಲು ಸಂಜೆ 7 ಗಂಟೆಗೆ ಪ್ರಸಾರವಾಗುತ್ತಿತ್ತು. ಹಳ್ಳಿ ಹುಡುಗಿಯೊಬ್ಬಳು, ಸಿಟಿಗಾಗಿ ತನ್ನ ಗುರಿ ತಲುಪಲು ಓದುವುದ್ಕಾಗಿ ಬರೋ ಕಥೆ. ಆದ್ರೆ ನಾವು ಇವತ್ತು ರೀಲ್ ಧಾರಾವಾಹಿಯ ಬಗ್ಗೆ ಹೇಳುತ್ತಿಲ್ಲ. ಈ ಧಾರಾವಾಹಿಯಲ್ಲಿ ನಟಿಸುತ್ತಿದ್ದವರ ರಿಯಲ್ ಲೈಫ್ ಬಗ್ಗೆ ಹೇಳಲು ಹೊರಟಿದ್ದೀವಿ. ನಿಂಗಿ ಯಾರಿಗೆ ತಾನೇ ಗೊತ್ತಿಲ್ಲ ಹೇಳಿ. ಕಮಲಿ ಧಾರಾವಾಹಿಯಲ್ಲಿ ಕಮಲಿ ಜೀವದ ಗೆಳತಿ ನಿಂಗಿ. ಇಬ್ಬರು ಒಂದೇ ಊರಿನವರು, ಒಂದೇ ಕ್ಲಾಸ್. ಕಮಲಿ ಜೊತೆ ನಿಂಗಿಯೂ ಸಿಟಿಗೆ ಓದಲು ಬಂದಿರುತ್ತಾಳೆ. ಈಗ ನಿಂಗಿ ಅಂದ್ರೆ ಅಂಕಿತಾ (Ankita) ಅವರು ವೈವಾಹಿಕ (Marriage) ಜೀವನಕ್ಕೆ ಕಾಲಿಟ್ಟಿದ್ದಾರೆ.

  ಅಂಕಿತಾ-ಸುಹಾಸ್ ಗಟ್ಟಿಮೇಳ
  ಕಮಲಿ ಸೀರಿಯಲ್‍ನಲ್ಲಿ ಕಮಲಿ ಬೆಸ್ಟ್ ಪ್ರೆಂಡ್ ಆಗಿದ್ದ ನಿಂಗಿ ಅಂದ್ರೆ ಅಂಕಿತಾ ಅವರು ಸುಹಾಸ್ ಎನ್ನುವವರ ಜೊತೆ ತಮ್ಮ ಮದುವೆ ಜೀವನ ಆರಂಭಿಸಿದ್ದಾರೆ. ಬೆಂಗಳೂರಿನಲ್ಲಿ ಇವರು ಮದುವೆಯಾಗಿದ್ದು, ಕಮಲಿ ಧಾರಾವಾಹಿಯ ಕಲಾವಿದರು ಸೇರಿ ಹಲವರು ಭಾಗಿಯಾಗಿದ್ರು.

  Zee Kannada serial, Kamali serial actor marriage, Kannada serial, kamli serial Kannada cast, ಕಮಲಿ ಧಾರಾವಾಹಿ, ವೈವಾಹಿಕ ಜೀವನಕ್ಕೆ ಕಾಲಿಟ್ಟ ಅಂಕಿತಾ, ಜೀ ಕನ್ನಡದಲ್ಲಿ ಪ್ರಸಾರವಾಗುವ ಧಾರಾವಾಹಿಗಳು, Kannada news, Karnataka news,
  ಅಂಕಿತಾ-ಸುಹಾಸ್ ಮದುವೆ


  ಕಳೆದ ವರ್ಷ ನಿಶ್ಚಿತಾರ್ಥ ಮಾಡಿಕೊಂಡಿದ್ದ ನಿಂಗಿ
  ಇನ್ನು ಅಂಕಿತಾ ಅವರು ಸುಹಾಸ್ ಜೊತೆ ಕಳೆದ ವರ್ಷ ಎಂಗೇಜ್‍ಮೆಂಟ್ ಮಾಡಿಕೊಂಡಿದ್ದರು. ಈಗ ಈ ವರ್ಷ ಮದುವೆಯಾಗಿದ್ದಾರೆ. ಕೆಲ ದಿಗಳಿಂದ ಕಮಲಿ ಧಾರಾವಾಹಿಯಲ್ಲಿ ಕಾಣಿಸಿಕೊಂಡಿಲ್ಲ. ಮದುವೆಗೆ ತಯಾರಿ ಮಾಡಿಕೊಳ್ಳುತ್ತಿದ್ದರು ಎಂದು ತಿಳಿದು ಬಂದಿದೆ.

  Zee Kannada serial, Kamali serial actor marriage, Kannada serial, kamli serial Kannada cast, ಕಮಲಿ ಧಾರಾವಾಹಿ, ವೈವಾಹಿಕ ಜೀವನಕ್ಕೆ ಕಾಲಿಟ್ಟ ಅಂಕಿತಾ, ಜೀ ಕನ್ನಡದಲ್ಲಿ ಪ್ರಸಾರವಾಗುವ ಧಾರಾವಾಹಿಗಳು, Kannada news, Karnataka news,
  ಕಳೆದ ವರ್ಷ ನಿಶ್ಚಿತಾರ್ಥ


  ನಿಂಗಿ ಪತಿ ಯಾರು? ಏನ್ ಮಾಡ್ತಾರೆ
  ಅಂಕಿತಾ ಅವರು ಸುಹಾಸ್ ಎಂಬುವವರನ್ನು ಮದುವೆಯಾಗಿದ್ದಾರೆ. ಇವರ ಪತಿ ಸುಹಾಸ್ ಕೆನಡಾದಲ್ಲಿ ನೆಲೆಸಿದ್ದು, ಫೋಟೋಗ್ರಾಫರ್ ಆಗಿ ಕೆಲಸ ಮಾಡುತ್ತಿದ್ದಾರೆ. ಸುಹಾಸ್ ಮೂಲತಃ ಬೆಂಗಳೂರಿನವರು. ಸೋಶಿಯಲ್ ಮೀಡಿಯಾದಲ್ಲಿ ಸುಹಾಸ್ ಸಾಕಷ್ಟು ವನ್ಯಜೀವಿ, ಪರಿಸರದ ಫೋಟೋಗಳನ್ನು ಹಂಚಿಕೊಂಡಿದ್ದಾರೆ.

  ಇದನ್ನೂ ಓದಿ: Puttakkana Makkalu: ಬಂಗಾರಮ್ಮನ ಮಗ ಕಂಠಿ ಯಾರೆಂದು ಪೊಲೀಸ್‍ಗೆ ಗೊತ್ತಾಯ್ತಾ? ಕಣ್ಣ ಮುಚ್ಚಾಲೆ ಮುಕ್ತಾಯ

  ಕೆನಡಾದಲ್ಲಿ ಇರ್ತಾರಾ ಅಂಕಿತಾ
  ಅಂಕಿತಾ ಪತಿ ಸುಹಾಸ್  ಕೆನಡಾದಲ್ಲಿ ಫೋಟೋಗ್ರಾಫರ್ ಆಗಿ ಕೆಲಸ ಮಾಡುತ್ತಿದ್ದಾರೆ. ಹಾಗಾಗಿ ಇನ್ಮುಂದೆ ಅಂಕಿತಾ ಅವರು ಕೆನಾಡದಲ್ಲಿ ಇರಬಹುದು. ಅದಕ್ಕೆ ನಿಂಗಿ ಅಭಿಮಾನಿಗಳು ಇನ್ನು ನಿಂಗಿಯವರು ಪಾತ್ರ ಮಾಡುವುದಿಲ್ವಾ ಅಂತೆಲ್ಲಾ ಕೇಳಿದ್ದಾರೆ. ಅಲ್ಲದೇ ನೀವು ಧಾರಾವಾಹಿ ಮಾಡಿದ್ರೆ ಚೆನ್ನಾಗಿರುತ್ತೆ ಎಂಬ ಸಲಹೆಗಳನ್ನು ನೀಡಿದ್ದಾರೆ.

  2017ರಲ್ಲಿ ಮಿಸ್ ಕರ್ನಾಟಕ ಆಗಿದ್ದ ಅಂಕಿತಾ
  ಕಮಲಿ ಧಾರಾವಾಹಿಯಲ್ಲಿ ಅಂಕಿತಾ ಅವರ ಪಾತ್ರ ನಟಿಯ ಗೆಳತಿ ನಿಂಗಿಯದ್ದ. ಧಾರಾವಾಹಿಯಲ್ಲಿ ಅಂಕಿತಾ 2 ಜಡೆಗಳನ್ನು ಹಾಕಿಕೊಂಡು, ಲಂಗ ದಾವಣಿ ಹಾಕಿ, ಕಣ್ಣಿಗೆ ದಪ್ಪನೆಯ ಕನ್ನಡಕ ಹಾಕಿದ ಹುಡುಗಿ. ಆದ್ರೆ ಅಂಕಿತಾ ಅವರು 2017ರಲ್ಲಿ ಮಿಸ್ ಕರ್ನಾಟಕ ಆಗಿದ್ದಾರೆ. ಮಿಸ್ ಕರ್ನಾಟಕ ಆಗಿದ್ದರೂ, ಕಮಲಿ ಧಾರಾವಾಹಿಯಲ್ಲಿ ನಿಂಗಿ ಪಾತ್ರ ನಿರ್ವಹಿಸಿದ್ದಾರೆ. ಚೆನ್ನಾಗಿ ಅಭಿನಯಿಸಿ ಕರ್ನಾಟಕ ಜನತೆ ಮನ ಗೆದ್ದಿದ್ದರು.

  ಅಪ್ಪು ಅಭಿಮಾನಿ ಈ ನಿಂಗಿ
  ಇನ್ನು ಅಂಕಿತಾ ಅವರಿಗೆ ಪುನೀತ್ ರಾಜ್ ಕುಮಾರ್ ಅಂದ್ರೆ ತುಂಬಾ ಇಷ್ಟ ಅಂತೆ. ಅವರ ಟ್ವಿಟರ್‍ನಲ್ಲೂ ಅಪ್ಪು ಅಭಿಮಾನಿ ಎಂದು ಹಾಕಿಕೊಂಡಿದ್ದಾರೆ. ಅಪ್ಪುವಿನ ಎಲ್ಲಾ ಚಿತ್ರಗಳನ್ನು ನೋಡಿದ್ದಾರಂತೆ. ಅಲ್ಲದೇ ಇವರು ಡ್ಯಾನ್ಸ್ ಕರ್ನಾಟಕ ಡ್ಯಾನ್ಸ್ ಶೋನಲ್ಲೂ ಭಾಗವಹಿಸದ್ದರು. ಆ ಶೋಗೆ ಪುನೀತ್ ರಾಜ್ ಕುಮಾರ್ ಬಂದಾಗ ಅವರ ಜೊತೆ ಫೋಟೋ ತೆಗೆಸಿಕೊಂಡು ಖುಷಿ ಪಟ್ಟಿದ್ರು. ಅದನ್ನು ಸಾಮಾಜಿಕ ಜಾಲತಾಣದಲ್ಲೂ ಹಂಚಿಕೊಂಡಿದ್ದರು.

  ಇದನ್ನೂ ಓದಿ: Doresani: ಮಾತಲ್ಲಿ ಹೇಳಲಾಗದ್ದನ್ನು ಪತ್ರದ ಮೂಲಕ ಹೇಳ್ತಿದ್ದಾಳೆ ದೀಪಿಕಾ! ಲೆಟರ್​ನಲ್ಲಿ ಏನಿದೆ?

  ಇನ್ನು ಅಂಕಿತಾ ಅವರು, ಕಮಲಿ ಧಾರಾವಾಹಿಯಲ್ಲಿ ತಮ್ಮ ಪಾತ್ರ ಮುಂದುವರೆಸುತ್ತಾರೋ, ಇಲ್ವೋ ಗೊತ್ತಿಲ್ಲ. ಸದ್ಯಕ್ಕೆ ಅದನ್ನು ಅವರು ಎಲ್ಲೂ ಹಂಚಿಕೊಂಡಿಲ್ಲ. ಅವರ ವೈವಾಹಿಕ ಜೀವನ ಚೆನ್ನಾಗಿರಲಿ. ಹ್ಯಾಪಿ ಮ್ಯಾರೀಡ್ ಲೈಫ್ ಅಂಕಿತಾ-ಸುಹಾಸ್
  Published by:Savitha Savitha
  First published: