ಜೀ ಕನ್ನಡದಲ್ಲಿ (Zee Kannada) ಪ್ರಸಾರವಾಗುವ ಜನಪ್ರಿಯ ಧಾರಾವಾಹಿಗಳಲ್ಲಿ ಜೊತೆ ಜೊತೆಯಲಿ (Jothe Jotheyali) ಸೀರಿಯಲ್ ಕೂಡ ಒಂದು. ಪ್ರೀತಿಗೆ ವಯಸ್ಸಿನ ಅಂತರ ಇಲ್ಲ ಎಂದು ತೋರಿಸಿಕೊಟ್ಟ ಸೀರಿಯಲ್. ಸೋಮವಾರದಿಂದ ಶುಕ್ರವಾರದವರೆಗೆ ರಾತ್ರಿ 9.30ಕ್ಕೆ ಪ್ರಸಾರವಾಗುತ್ತಿದೆ. ಈ ಸೀರಿಯಲ್‍ಗೆ ಹೆಚ್ಚು ಅಭಿಮಾನಿಗಳು (Fans) ಇದ್ದಾರೆ. ಆದ್ರೆ ಸೀರಿಯಲ್ ಸೆಟ್ ನಲ್ಲಿ ಆದ ಗಲಾಟೆಯಿಂದ ಅನಿರುದ್ಧ್ ಔಟ್ ಆದ ಮೇಲೆ, ಆರ್ಯನ ಪಾತ್ರವನ್ನು ನಟ ಹರೀಶ್ ರಾಜ್ (Harish Raj) ನಿರ್ವಹಿಸುತ್ತಿದ್ದಾರೆ. ಆರ್ಯವರ್ಧನ್ ಆದ ಅಪಘಾತದಿಂದ ಎಲ್ಲವನ್ನೂ ಮರೆತಿದ್ದರು. ಈಗ ಹಳೆಯದೆಲ್ಲಾ ನೆನಪಿಗೆ ಬಂದಿದೆ. ಮೋಸ ಮಾಡಿದ ಝೇಂಡೆ ವಿರುದ್ಧ ಆರ್ಯ ಕೋಪಗೊಂಡಿದ್ದಾನೆ. ಝೇಂಡೆ ಅನು ಸಿರಿಮನೆಯನ್ನು ಕಿಡ್ನ್ಯಾಪ್ (Kidnap) ಮಾಡಿದ್ದಾನೆ.
ಹಳೆಯದೆಲ್ಲಾ ನೆನಪಾಗಿದೆ
ಆರ್ಯವರ್ಧನ್‍ಗೆ ಅಪಘಾತವಾಗಿರುತ್ತೆ. ಹಳೆಯದೆಲ್ಲಾ ಮರೆತು ಹೋಗಿರುತ್ತೆ. ಅಪಘಾತದಲ್ಲಿ ಮುಖ ಎಲ್ಲಾ ಜಜ್ಜಿ ಹೋಗಿದ್ದ ಕಾರಣ ವಿಶ್ವಾಸ್ ದೇಸಾಯಿ ಮುಖ ಹಾಕಿರುತ್ತಾರೆ. ಆರ್ಯನಿಗೆ ತಾನು ಯಾರು ಎಂದು ಗೊತ್ತಿಲ್ಲದೇ, ಯಾರು ಏನ್ ಹೇಳ್ತಾರೋ, ಅದನ್ನು ನಂಬುತ್ತಿದ್ದ. ಡಾಕ್ಟರ್ ನೀವೇ ಆರ್ಯ ಎಂದು ಒಮ್ಮೆ ಹೇಳಿದ್ರು. ಆದ್ರೂ ಮನೆಯವರು ಒಪ್ಪಲು ರೆಡಿ ಇರಲಿಲ್ಲ. ಈಗ ಆರ್ಯವರ್ಧನ್‍ಗೆ ಹಳೆದೆಲ್ಲಾ ನೆನಪಾಗಿದೆ.
ನಾಪತ್ತೆಯಾಗಿದ್ದ ಅನು ಸಿರಿಮನೆ!
ಅನುಗೆ ಇವನೇ ಆರ್ಯ ಅಂತ ಹೇಳಿದ್ರೂ ಯಾಕೋ ನಂಬೋಕೆ ಆಗ್ತಾ ಇಲ್ಲ. ಅಲ್ಲದೇ ವಿಶ್ವಾಸ್ ದೇಸಾಯಿ ಹೆಂಡ್ತಿ ಆರಾಧನ ಇಲ್ಲಿಗೆ ಬಂದಿದ್ದಾಳೆ. ವಿಶ್ ನನಗೆ ಬೇಕು ಎನ್ನುತ್ತಿದ್ದಾಳೆ. ಅದಕ್ಕೆ ಅನುಗೆ ಬೇಸರವಾಗಿದೆ. ಆಕೆ ಮನೆ ಬಿಟ್ಟು ಹೋಗಿದ್ದಾಳೆ. ನನ್ನನ್ನು ನಾನು ಸುರಕ್ಷಿತವಾಗಿ ನೋಡಿಕೊಳ್ತೇನೆ. ಯಾರು ಹುಡುಕಬೇಡಿ ಎಂದು ಪತ್ರ ಬರೆದಿಟ್ಟು ಹೋಗಿದ್ದಾಳೆ.
ಆರೋಗ್ಯ ಕೇಂದ್ರದಲ್ಲಿದ್ದ ಅನು
ಮನೆ ಬಿಟ್ಟು ಬಂದಿದ್ದ ಅನು ವರ್ಧನ್ ಆರೋಗ್ಯ ಕೇಂದ್ರದಲ್ಲಿ ಇರುತ್ತಾರೆ. ಅನು ಮೊಬೈಲ್ ಲೋಕೇಷನ್ ಅಲ್ಲಿ ತೋರಿಸುತ್ತೆ. ಆಗ ಮನೆಯವರೆಲ್ಲಾ ಆ ಆರೋಗ್ಯ ಕೇಂದ್ರಕ್ಕೆ ಕಾಲ್ ಮಾಡಿ ವಿಚಾರಿಸಿದ್ದಾರೆ. ಅನು ಇದ್ದಾಳಾ ಎಂದು. ರಾತ್ರಿ ಇದ್ದರು. ಬೆಳಗ್ಗೆ ಇಲ್ಲ, ಎಲ್ಲೋ ಹೋಗಿದ್ದಾರೆ ಎಂದು ಹೇಳ್ತಾರೆ. ಅದಕ್ಕೆ ಆರ್ಯ ಕೋಪಮಾಡಿಕೊಳ್ತಾನೆ.
ಅನು ಕಿಡ್ನ್ಯಾಪ್ ಮಾಡಿದ ಝೇಂಡೆ
ಜೀವನದ ಬಂಧ ನಿಮ್ಮನ್ನು ಹೆಂಗ್ ಕಟ್ಟಿ ಹಾಕಿದೆ ನೋಡಿ, ಉಳಿದುಕೊಳ್ಳಲು ಸರಿಯಾದ ಜಾಗ ಆಯ್ಕೆ ಮಾಡಿದ್ದೀರಿ. ನೀವು ಇಲ್ಲಿ ಇದ್ದೀರಿ ಎಂದು ಯಾರಿಗೂ ಗೊತ್ತಾಗಲ್ಲ. ಗೊತ್ತಾಗಲು ಈ ಝೇಂಡೆ ಬಿಡಲ್ಲ ಎಂದು ಅನುಗೆ ಹೇಳ್ತಾ ಇದ್ದಾನೆ. ಬಾಯಿಗೆ ಬಟ್ಟೆ ಕಟ್ಟಿ ಕಾರಿನಲ್ಲಿ ಕೂರಿಸಿಕೊಂಡು ಕಿಡ್ನ್ಯಾಪ್ ಮಾಡಿ ಹೋಗ್ತಾ ಇದ್ದಾನೆ.
ಝೇಂಡೆ ಮೇಲೆ ಆರ್ಯನ ಕೋಪ
ಅನು ಕಾಣದೇ ಇರಲು ಝೇಂಡೆ ಕಾರಣ. ಅವನೇ ಈ ಕೆಲಸ ಮಾಡಿದ್ದಾನೆ ಎಂದು ಆರ್ಯ ಮನೆಯವರ ಮುಂದೆ ಹೇಳ್ತಾ ಇದ್ದಾನೆ. ಝೇಂಡೆ ನಾನು ನಿನ್ನ ಯಾವುದೇ ಕಾರಣಕ್ಕೂ ಬಿಡಲ್ಲ. ನಿನ್ನ ಮುಖವಾಡದ ನಾಟಕ ಇವತ್ತಿಗೆ ಕೊನೆ ಎಂದು ಆರ್ಯವರ್ಧನ್ ಹೇಳ್ತಾ ಇದ್ದಾನೆ. ಮೊದಲೇ ಆರ್ಯನಿಗೆ ಝೇಂಡೆ ಮೇಲೆ ಕೋಪ ಇತ್ತು. ಈಗ ಅದು ಹೆಚ್ಚಾಗಿದೆ.
ಇದನ್ನೂ ಓದಿ: Bhagya Lakshmi: ಲಕ್ಷ್ಮಿ ಭೇಟಿಯಾಗಲು ಒಪ್ಪಿದ ವೈಷ್ಣವ್, ಮದುವೆಯಾಗುವುದು ಕೀರ್ತಿನಾ?
ಆರ್ಯನಿಗೆ ಅನು ಸಿಗ್ತಾಳಾ? ಝೇಂಡೆಗೆ ಸರಿಯಾದ ಶಿಕ್ಷೆ ಕೊಡಿಸುತ್ತಾನಾ? ಅನು ಆರ್ಯನನ್ನು ಒಪ್ಪಿಕೊಳ್ತಾಳಾ? ಮುಂದೇನಾಗುತ್ತೆ ಅಂತ ನೋಡೋಕೆ ಜೊತೆ ಜೊತೆಯಲಿ ಸೀರಿಯಲ್ ನೋಡಬೇಕು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ