ಜೀ ಕನ್ನಡದಲ್ಲಿ (Zee Kannada) ಪ್ರಸಾರವಾಗುವ ಜನಪ್ರಿಯ ಧಾರಾವಾಹಿಗಳಲ್ಲಿ (Serials) ಜೊತೆ ಜೊತೆಯಲಿ (Jothe Jotheyali) ಸೀರಿಯಲ್ ಕೂಡ ಒಂದು. ಪ್ರೀತಿಗೆ ವಯಸ್ಸಿನ ಅಂತರ ಇಲ್ಲ ಎಂದು ತೋರಿಸಿಕೊಟ್ಟ ಸೀರಿಯಲ್. ಸೋಮವಾರದಿಂದ ಶುಕ್ರವಾರದವರೆಗೆ ರಾತ್ರಿ 9.30ಕ್ಕೆ ಪ್ರಸಾರವಾಗುತ್ತಿದೆ. ಈ ಸೀರಿಯಲ್ಗೆ ಅಸಂಖ್ಯಾತ ಅಭಿಮಾನಿಗಳು ಇದ್ದಾರೆ. ಆದ್ರೆ ಸೀರಿಯಲ್ ಸೆಟ್ ನಲ್ಲಿ ಆದ ಗಲಾಟೆಯಿಂದ ಅನಿರುದ್ಧ್ ಔಟ್ ಆದ ಮೇಲೆ ಸ್ವಲ್ಪ ಅಭಿಮಾನಿಗಳು ಕಡಿಮೆ ಆಗಿದ್ದಾರೆ ಎಂದು ಹೇಳಲಾಗ್ತಿದೆ. ಆರ್ಯನ ಪಾತ್ರಕ್ಕೆ ನಟ ಹರೀಶ್ ರಾಜ್ (Harish Raj) ಬಂದಿದ್ದಾರೆ. ನಿಧಾನವಾಗಿ ಆರ್ಯನ ಸ್ಥಾನವನ್ನು ಆವರಿಸಿಕೊಳ್ತಿದ್ದಾರೆ. ಸದ್ಯ ಧಾರಾವಾಹಿಯಲ್ಲಿ ಮುಖ ಸಂಜುದು, ಮನಸ್ಸು ಆರ್ಯವರ್ಧನ್. ಮೋಸದಿಂದ ಝೇಂಡೆ ಆರ್ಯನ ಕಂಪನಿ ಬಾಸ್ (Boss) ಆಗಿದ್ದಾನೆ.
ಆರ್ಯ ಬದುಕಿರುವುದು ಝೇಂಡೆಗೆ ಗೊತ್ತಿದೆ
ಇಷ್ಟು ದಿನ ಝೇಂಡೆ ಸಹ ಆರ್ಯ ಸತ್ತಿದ್ದಾನೆ ಎಂದುಕೊಂಡಿದ್ದ. ಈಗ ಸತ್ಯ ಗೊತ್ತಾಗಿದೆ. ಪ್ರಿಯದರ್ಶಿನಿ ಆರ್ಯ ಬದುಕಿರುವ ಸತ್ಯ ಹೇಳಿದ್ದಾಳೆ. ತನ್ನ ಗೆಳೆಯ ಬದುಕಿದ್ದಾನೆ ಎಂದು ಖುಷಿಯಾಗಿ ಇದ್ದಾನೆ. ಅವನ ಜೊತೆ ಸ್ನೇಹ ಬೆಳಸಿಕೊಂಡು, ಅನು ಕಡೆ ಹೋಗದಂತೆ ಮಾಡಬೇಕು ಎಂದುಕೊಂಡಿದ್ದಾನೆ.
ಮೀರಾ ಸಹಾಯದಿಂದ ಕಂಪನಿ ಸೇರ್ಪಡೆ
ವಿಶ್ವಾಸ್ ದೇಸಾಯಿ ಆರ್ಯ ಎಂದು ಝೇಂಡೆಗೆ ಗೊತ್ತಾಗಿದ್ದೇ ತಡ, ಹೇಗಾದ್ರೂ ಮಾಡಿ ಮತ್ತೆ ಆರ್ಯವರ್ಧನ್ ಕಂಪನಿ ಸೇರಬೇಕು ಎಂದುಕೊಂಡಿದ್ದ. ಅದಕ್ಕೆ ಮೀರಾಳ ಸಹಾಯ ಕೇಳಿದ್ದ, ಆಕೆಯ ಸಹಾಯದಿಂದ ಮತ್ತೆ ಕಂಪನಿ ಸೇರಿಕೊಂಡಿದ್ದ, ಆದ್ರೆ ಈಗ ವಂಚನೆ ಮಾಡಿ ಆರ್ಯನ ಕಂಪನಿ ಬಾಸ್ ಆಗಿದ್ದಾನೆ.
ಇದನ್ನೂ ಓದಿ: Actress Mrunal Thakur: ನ್ಯಾಚುರಲ್ ಸ್ಟಾರ್ ನಾನಿಗೆ ನಾಯಕಿಯಾದ 'ಸೀತಾರಾಮಂ' ಸಿನಿಮಾದ ಮೃಣಾಲ್ ಠಾಕೂರ್!
ಮೋಸದಿಂದ ಸೀಲ್ ಬಳಕೆ
ಝೇಂಡೆ ಮೀರಾಳಿಗೆ ಮೋಸ ಮಾಡಿದ್ದಾನೆ. ಆರ್ಯ ಅವಳ ವೀಕ್ನೆಸ್ ಎನ್ನುವುದು ಝೇಂಡೆಗೆ ಗೊತ್ತು. ಅದಕ್ಕೆ. ಮೀರಾಜಿ ನೀವು ನನಗೆ ಸಹಾಯ ಮಾಡಿದ್ರೆ, ನಾನು ನಿಮ್ಮ ಮುಂದೆ ಆರ್ಯ ಸರ್ ನ್ನು ತಂದು ನಿಲ್ಲಿಸುತ್ತೇನೆ ಎಂದು ಹೇಳುತ್ತಾನೆ. ಮೀರಾ ಆರ್ಯ ಸರ್ ಬೇಕು ಎಂದು ಝೇಂಡೆ ಹೇಳಿದ ಹಾಗೆ ಕೇಳ್ತಾಳೆ. ಕಂಪನಿ ಸೀಲ್ ತಂದು ಕೊಡುತ್ತಾಳೆ.
ಶಾರದಾ ಬಳಿ ಸಹಿ
ಝೇಂಡೆ ಮೀರ ಬಳಿ ಸೀಲ್ ತರಿಸಿ ಅದನ್ನು ದುರ್ಬಳಕೆ ಮಾಡಿಕೊಂಡಿದ್ದಾನೆ. ಅಲ್ಲದೇ ಶಾರದಾ ದೇವಿ ಬಳಿ ತನಗೆ ಬೇಕಾದ ಕಡೆ ಮೋಸದಿಂದ ಸೈನ್ ಹಾಕಿಸಿಕೊಂಡಿದ್ದಾನೆ. ಎಲ್ಲರೂ ಮತ್ತೆ ಝೇಂಡೆಯನ್ನು ನಂಬಿದ್ದಕ್ಕೆ ಸರಿಯಾಗಿ ಮೋಸ ಮಾಡಿದ್ದಾನೆ. ತಾನೇ ಬಾಸ್ ಎಂದು ಹೇಳುತ್ತಿದ್ದಾನೆ.
ವರ್ಧನ್ ಕಂಪನಿ ಮುಖ್ಯಸ್ಥ, ಮಾರ್ಯದೆ ಕೊಡಿ
ಅನು ಇದೇನಿದು ಝೇಂಡೆ ಎಂದು ಕೇಳುತ್ತಾಳೆ. ಅದಕ್ಕೆ ಝೇಂಡೆ, ಅನು ಮೇಡಂ ಅಂತ ನಾನು ಹೇಳ್ತಾ ಇದ್ದೀನಿ. ನೀವು ಝೇಂಡೆ ಸರ್ ಎಂದು ಕರೆಯಿರಿ ಎಂದು ಹೇಳ್ತಾನೆ. ಮೀರಾಗೂ ಸರ್ ಎಂದು ಕರೆಯಲು ಆದೇಶ ನೀಡ್ತಾನೆ.
ಹರ್ಷ ಹೊಡೆಯಲು ಹೋದಾಗ, ನೀನು ನನಗೆ ಬುದ್ದಿಯಲ್ಲಿ, ಬಲದಲ್ಲಿ ಸಮ ಇಲ್ಲ, ಹಿಂದಕ್ಕೆ ಹೋಗು ಎಂದು ಹೇಳ್ತಾನೆ. ಅಷ್ಟರಲ್ಲಿ ಶಾರದಾ ದೇವಿ ಹೂವು ತಂದು ಝೇಂಡೆಯನ್ನು ಸ್ವಾಗತ ಮಾಡ್ತಾರೆ. ಅದಕ್ಕೆ ಎಲ್ಲರೂ ಅಚ್ಚರಿ ಗೊಂಡಿದ್ದಾರೆ.
ಇದನ್ನೂ ಓದಿ: Kannadathi: ಭುವಿ ಕೊಲ್ಲಲು ಬಂದ ರೌಡಿಗಳು, ಹರ್ಷನಿಗೆ ಹೆಚ್ಚಿದ ಟೆನ್ಶನ್!
ಅನು ಈಗ ಏನ್ ಮಾಡ್ತಾಳೆ. ತನ್ನ ಕಂಪನಿಯನ್ನು ಹೇಗೆ ಉಳಿಸಿಕೊಳ್ತಾಳೆ. ಮುಂದೇನಾಗುತ್ತೆ ಅಂತ ಜೊತೆ ಜೊತೆಯಲಿ ಸೀರಿಯಲ್ ನೋಡಬೇಕು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ