Jothe Jotheyali: ಗರ್ಭಿಣಿ ಅನ್ನೋದನ್ನು ಅನು ಗುಟ್ಟಾಗಿಟ್ಟಿದ್ದ ವಿಚಾರ ಎಲ್ಲರ ಮುಂದೆ ರಟ್ಟಾಗುತ್ತಾ? ಜೋಗತವ್ವ ಹೇಳಿದ ಮರ್ಮ ಇದೇನಾ?

ಇವತ್ತು ಆರ್ಯವರ್ಧನ್ ಮನೆಗೆ ಜೋಗತವ್ವ ಬರಲಿದ್ದಾಳೆ. ಜೋಗತವ್ವ ಏನೇ ಹೇಳಿದ್ರೂ ನಿಜ ಆಗುತ್ತದೆ ಎಂಬ ನಂಬಿಕೆ ಎಲ್ಲರಿಗೂ, ಆದ ಕಾರಣ ಆಕೆಯನ್ನು ತುಂಬಾ ನಂಬುತ್ತಾರೆ. 'ಮೂರು ಅಮ್ಮಂದಿರು ಇರುವಾಗ ಬಂದೆ'. ಜೋಗತವ್ವ ಬಂದ ಕೂಡಲೇ ಮೂವರು ತಾಯಂದಿರುವ ಮನೆಗೆ ಬಂದೇ ಎನ್ನುತ್ತಾಳೆ. ಒಂದು ಶಾರದಾ ದೇವಿ, ಎರಡು ಪುಷ್ಪ, ಮೂರು ಯಾರು ಎಂದು ಮನೆಯವರೆಲ್ಲ ತಲೆಕೆಡಿಸಿಕೊಳ್ಳುತ್ತಿದ್ದಾರೆ.

ಜೊತೆ ಜೊತೆಯಲಿ ಸೀರಿಯಲ್

ಜೊತೆ ಜೊತೆಯಲಿ ಸೀರಿಯಲ್

  • Share this:
    ಜೊತೆ ಜೊತೆಯಲಿ (Jothe jotheyali ) ಸೀರಿಯಲ್, ಜೀ ಕನ್ನಡದ (Zee Kannada) ಜನಪ್ರಿಯ ಧಾರಾವಾಹಿ (Serial)ಗಳಲ್ಲಿ ಇದು ಒಂದು. ಪ್ರೀತಿ ವಯಸ್ಸಿನ ಅಂತರ ಇಲ್ಲ ಎಂದು ತೋರಿಸಿಕೊಟ್ಟ ಸೀರಿಯಲ್. ಸೋಮವಾರದಿಂದ ಶುಕ್ರವಾರದವರೆಗೆ ರಾತ್ರಿ 8.30ಕ್ಕೆ ಜನ ಟಿವಿ ಮುಂದೆ ಕೂರುವಂತೆ ಮೋಡಿ ಮಾಡಿರುವ ಸೀರಿಯಲ್. ನಟ ಆರ್ಯವರ್ಧನ್, ನಟಿ ಅನು ಸಿರಿಮನೆ. ಅನು, ಆರ್ಯವರ್ಧನ್‍ಗಿಂತ 20 ವರ್ಷ ಚಿಕ್ಕವಳು ಆದರೂ ಅವರನ್ನೇ ಪ್ರೀತಿಸಿ, ಮನೆಯವರು ಅನುಮತಿ ಪಡೆದು ಮದುವೆ (Marriage)ಯಾಗಿದ್ದಾರೆ. ಮೊದ ಮೊದಲು ಇಬ್ಬರು ಚೆನ್ನಾಗೇ ಇದ್ದರೂ. ಆದ್ರೆ ಇತ್ತೀಚೆಗೆ ಅನುಗೆ, ಆರ್ಯವರ್ಧನ್ ಅವರು ಹಳೇ ಜೀವನದ ಸತ್ಯಗಳು ಗೊತ್ತಾಗಿವೆ. ಅದಕ್ಕೆ ನ್ಯಾಯ ಕೊಡಿಸಬೇಕು ಎಂಬ ಸತ್ಯದ ಹೋರಾಟದಲ್ಲಿ ಇದ್ದಾಳೆ. ಅದಕ್ಕೆ ತಾನು ಗರ್ಭಿಣಿ (Pregnant) ಆಗಿರುವದನ್ನು ಮನೆಯಲ್ಲಿ ಮುಚ್ಚಿಟ್ಟಿದ್ದಾಳೆ.

    ಅನುಗೆ ಆರ್ಯವರ್ಧನ್ ಬಗ್ಗೆ ಗೊತ್ತಾಗಿರುವ ಸತ್ಯವೇನು?
    ಅನು ಸಿರಿಮನೆ ಈ ಧಾರಾವಾಹಿಯಲ್ಲಿ ಬರುವ ಆರ್ಯವರ್ಧನ್ ಅವರ ಮೊದಲನೇ ಹೆಂಡತಿ ರಾಜನಂದಿಯ ಮರುಜನ್ಮ. ಮದುವೆ ಆಗಿ ಅನು ಆರ್ಯ ಮನೆಗೆ ಬಂದ ನಂತರ, ಆಕೆಗೆ ಒಂದೊಂದೆ ಸತ್ಯಗಳು ಗೊತ್ತಾಗಿವೆ. ರಾಜನಂದಿನಿಯ ತಂದೆ ಸಾವಿಗೆ ಆರ್ಯವರ್ಧನ್ ಕಾರಣ. ರಾಜನಂದಿನಿ ಸಾವಿಗೆ ಆರ್ಯ ಕಾರಣ, ಮೋಸದಿಂದ ಆಸ್ತಿ, ಅಧಿಕಾರಕ್ಕಾಗಿ ಹೀಗೆಲ್ಲಾ ಮಾಡಿದ್ದಾರೆ ಎಂದು ತಿಳಿದಿದೆ.

    ಆರ್ಯವರ್ಧನ್ ಬಳಿ ಸತ್ಯ ಬಾಯ್ಬಿಡಿಸಲು ಯತ್ನ!
    ರಾಜನಂದಿನಿಯ ಮತ್ತೆ ಅನು ಆಗಿ ಹುಟ್ಟಿ ಬಂದಿದ್ದಾಳೆ. ಕಳೆದ ಜನ್ಮದಲ್ಲಿ ತನಗಾದ ಮೋಸ ಗೊತ್ತಾಗಿದೆ. ಅದಕ್ಕೆ ಆ ಸತ್ಯವನ್ನು ಆರ್ಯವರ್ಧನ್ ಬಾಯಿಂದ ಕೇಳಬೇಕು ಎಂದು ಶತ ಪ್ರಯತ್ನ ಮಾಡುತ್ತಿದ್ದಾಳೆ. ಮೀರಾ, ಹರ್ಷ ವರ್ಧನ್ ಜೊತೆ ಸೇರಿ ಬಲೆಗಳನ್ನು ಎಣೆಯುತ್ತಿದ್ದಾರೆ. ಅದಕ್ಕೆ ಆರ್ಯ, ಝೇಂಡೆ ಮಾತ್ರ ಬೀಳ್ತಾ ಇಲ್ಲ.

    ಮನೆಯವರು ಬಳಿ ಗರ್ಭಿಣಿ ಅನ್ನೋದನ್ನ ಮುಚ್ಚಿಟ್ಟ ಅನು!
    ಆರ್ಯವರ್ಧನ್ ಸತ್ಯ ಬಯಲು ಮಾಡುವ ತವಕದಲ್ಲಿ ಇದ್ದಾಳೆ ಅನು. ಆದ ಕಾರಣ ತಾನು ಗರ್ಭಿಣಿಯಾಗಿದ್ರೂ, ಅದನ್ನು ಮನೆಯವರ ಮುಂದೆ ಹೇಳಿಲ್ಲ. ಹೇಳಿದ್ರೆ ಇನ್ನೇನು ತೊಂದರೆ ಆಗುತ್ತೋ ಅನ್ನೋ ಭಯದಲ್ಲಿ ಇದ್ದಾಳೆ. ಅದಕ್ಕೆ ತಾನು ಗರ್ಭಿಣಿ ಅನ್ನೋದನ್ನ ಮುಚ್ಚಿಟ್ಟಿದ್ದಾಳೆ. ಒಬ್ಬಳೇ ಆಸ್ಪತ್ರೆಗೆ ಹೋಗಿ ಚೆಕ್ ಅಪ್ ಮಾಡಿಸಿಕೊಳ್ತಿದ್ದಾಳೆ.

    ಇದನ್ನೂ ಓದಿ: Olavina Nildana: ಸಿದ್ಧಾಂತ್ ಪ್ರೀತಿ ಭ್ರಮೆಯಲ್ಲಿದ್ದ ತಾರಿಣಿಗೆ ವಾಸ್ತವದ ಅರಿವು, ಮನೆಯವರಿಗೆ ಸತ್ಯ ಹೇಳಲು ನಿರ್ಧಾರ!

    ಜೋಗತವ್ವ ಮಾತಿನ ಮರ್ಮ ಏನು?
    ಇನ್ನು ಇವತ್ತು ಆರ್ಯವರ್ಧನ್ ಮನೆಗೆ ಜೋಗತವ್ವ ಬರಲಿದ್ದಾಳೆ. ಜೋಗತವ್ವ ಏನೇ ಹೇಳಿದ್ರೂ ನಿಜ ಆಗುತ್ತದೆ ಎಂಬ ನಂಬಿಕೆ ಎಲ್ಲರಿಗೂ, ಆದ ಕಾರಣ ಆಕೆಯನ್ನು ತುಂಬಾ ನಂಬುತ್ತಾರೆ. 'ಮೂರು ಅಮ್ಮಂದಿರು ಇರುವಾಗ ಬಂದೆ'. ಜೋಗತವ್ವ ಬಂದ ಕೂಡಲೇ ಮೂವರು ತಾಯಂದಿರುವ ಮನೆಗೆ ಬಂದೇ ಎನ್ನುತ್ತಾಳೆ. ಒಂದು ಶಾರದಾ ದೇವಿ, ಎರಡು ಪುಷ್ಪ, ಮೂರು ಯಾರು ಎಂದು ಮನೆಯವರೆಲ್ಲ ತಲೆಕೆಡಿಸಿಕೊಳ್ಳುತ್ತಿದ್ದಾರೆ.

    ಉದರದ ಗುಟ್ಟು ಹೆಚ್ಚು ದಿನ ಉಳಿಯಲ್ಲ
    ಜೋಗತವ್ವನ ಮಾತು ಪುಷ್ಪಾಗೆ ಅರ್ಥವಾಗಲ್ಲ. ಆದ ಕಾರಣ ಏನು ಎಂದು ಕೇಳಿದಾಗ. ಗರ್ಭದೊಳಗಿನ ಗುಟ್ಟು ಆ ತಾಯಿ ಒಬ್ಬಳಿಗೆ ಗೊತ್ತು. ಯಾವ ಗುಟ್ಟು ಸಹ ಉದರದಲ್ಲಿ ಬಹಳ ದಿನ ಇರಲು ಸಾಧ್ಯವಿಲ್ಲ. ಬಸರಿನ ರೀತಿ ಆಯಾ ಕಾಲಕ್ಕೆ ಅದು ಲೋಕದ ಮುಂದೆ ಬರಬೇಕು ಎಂದಿದ್ದಾಳೆ.

    ಇದನ್ನೂ ಓದಿ: Sathya Serial: ವರಮಹಾಲಕ್ಷ್ಮಿ ಹಬ್ಬದ ತಯಾರಿ ಜವಾಬ್ದಾರಿ ಸತ್ಯ ಮೇಲೆ! ಏನ್ ಮಾಡ್ತಾಳೆ ಲೇಡಿ ರಾಮಾಚಾರಿ?

    ಅನು ಗರ್ಭಿಣಿ ಇರಬಹುದು ಎಂದು ಪುಷ್ಪಾಗೆ ಅನುಮಾನ
    ಗರ್ಭಿಣಿಯರು ಹೇಗಿರಬೇಕು ಎಂದು ಅನು ಈಗಾಗಲೇ ತಾಯಿ ಪುಷ್ಪ ಬಳಿ ಕೇಳಿ ತಿಳಿದುಕೊಂಡಿದ್ದಾಳೆ. ಅದಕ್ಕೆ ಅನು ಗರ್ಭಿಣಿ ಇರಬುಹುದು ಎಂಬ ಅನುಮಾನ ಬೇರೆ ಬಂದಿದೆ. ಅದಕ್ಕೆ ಜೋಗತವ್ವ ಮಾತು ಸಹ ಹೊಂದುತ್ತಿದೆ.

    ಏನೆಲ್ಲಾ ಆಗ್ತಿದೆ ಅಂತ ತಿಳಿದುಕೊಳ್ಳೋಕೆ ಸಂಚಿಕೆಗಳನ್ನು ನೋಡಬೇಕು.
    Published by:Savitha Savitha
    First published: