Jothe Jotheyali: ಆರ್ಯವರ್ಧನ್ ಅಂತ್ಯಸಂಸ್ಕಾರ ಆಗೋವಾಗ್ಲೇ ಅರೆಸ್ಟ್ ಆಗ್ತಾಳಾ ಅನು?

ಆರ್ಯ ದೊಡ್ಡ ಉದ್ಯಮಿ ಆದ ಕಾರಣ ಯಾರೋ ದ್ವೇಷಕ್ಕೆ ಕೊಲೆ ಮಾಡಿಸಿರಬಹುದು ಎಂಬ ಅನುಮಾನ ಶುರುವಾಗಿದೆ. ಅದಕ್ಕೆ ಪೊಲೀಸರು ತನಿಖೆ ಮಾಡ್ತಿದ್ದಾರೆ. ಸುತ್ತಿ ಬಂದು ತನಿಖೆ ಅನು ಬಳಿ ಬಂದು ನಿಲ್ಲುತ್ತಿದೆ. ಅನು ಇದಕ್ಕೆ ಕಾರಣ ಎಂದು ಹೇಳಲಾಗ್ತಿದೆ.

ಅನು ಅರೆಸ್ಟ್?

ಅನು ಅರೆಸ್ಟ್?

 • Share this:
  ಜೀ ಕನ್ನಡದಲ್ಲಿ (Zee Kannada) ಪ್ರಸಾರವಾಗುತ್ತಿರುವ ಜನಪ್ರಿಯ ಧಾರಾವಾಹಿಗಳಲ್ಲಿ ಜೊತೆ ಜೊತೆಯಲಿ (Jothe Jotheyali) ಸೀರಿಯಲ್ ಸಹ ಒಂದು. ಸೋಮವಾರದಿಂದ ಶುಕ್ರವಾರದವರೆಗೆ ರಾತ್ರಿ 8.30ಕ್ಕೆ ಪ್ರಸಾರವಾಗುತ್ತೆ. ಧಾರಾವಾಹಿಗೆ (Serial) ಅದೆಷ್ಟೋ ಅಭಿಮಾನಿಗಳು ಇದ್ದಾರೆ. ಅದರಲ್ಲೂ ಆರ್ಯವರ್ಧನ್ ಅಂದ್ರೆ ಅನಿರುದ್ಧ್ ಗೆ (Anirudh) ತುಂಬಾ ಜನ ಅಭಿಮಾನಿಗಳು ಇದ್ದರು. ಸೀರಿಯಲ್ ಶೂಟಿಂಗ್‍ನಲ್ಲಿ ಆದ ಕಿರಿಕ್‍ನಿಂದ ಅನಿರುದ್ಧ್ ಧಾರಾವಾಹಿಯಿಂದ ಔಟ್ ಆಗಿದ್ದಾರೆ. ಆ ಪಾತ್ರಕ್ಕೆ ಹರೀಶ್ ರಾಜ್ (Harish Raj) ಬಂದಿದ್ದಾರೆ. ಪಾತ್ರ ಅದಲು ಬದಲು ಮಾಡಲು, ಮೊದಲು ಹರೀಶ್ ರಾಜ್ ವಿಶ್ವಾಸ್ ದೇಸಾಯಿ ಪಾತ್ರದಲ್ಲಿ ಬಂದಿದ್ದರು. ಅವರು ಆತ್ಮಹತ್ಯೆ ಮಾಡಿಕೊಳ್ಳುತ್ತಾರೆ. ಅದೇ ಟೈಂಗೆ ಆರ್ಯವರ್ಧನ್‍ಗೆ ಅಪಘಾತ (Accident) ಆಗುತ್ತೆ. ಮುಖ ಬದಲಿಸಬೇಕಾಗುತ್ತೆ. ಅದಕ್ಕೆ ಆರ್ಯವರ್ಧನ್‍ಗೆ ವಿಶ್ವಾಸ್ ದೇಸಾಯಿ ಮುಖ ಹಾಕಲಾಗಿದೆ.

  ವಿಶ್ವಾಸ್ ದೇಸಾಯಿ ಮೃತ ದೇಹದ ಮುಂದೆ ಕಣ್ಣೀರು
  ಮುಖ ಅದಲು ಬದಲು ಆದ ಕಾರಣ, ಆರ್ಯವರ್ಧನ್ ವಿಶ್ವಾಸ್ ದೇಸಾಯಿ ಹೆಸರಲ್ಲಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ವಿಶ್ವಾಸ್ ದೇಸಾಯಿ ಮೃತ ದೇಹ ಆರ್ಯವರ್ಧನ್ ರೂಪದಲ್ಲಿ ಬಂದಿದೆ. ಸತ್ತವನು ಆರ್ಯ ಎಂದುಕೊಂಡು ಮನೆಯವರೆಲ್ಲಾ ಕಣ್ಣೀರು ಹಾಕುತ್ತಿದ್ದಾರೆ. ಸತ್ಯ ಒಪ್ಪಿಕೊಳ್ಳುಲು ಆಗದೇ ಇದ್ರೂ ಅನು, ಆರ್ಯ ಸರ್ ಎಂದುಕೊಂಡು, ವಿಶ್ವಾಸ್ ದೇಸಾಯಿ ಮೃತ ದೇಹದ ಮುಂದೆ ಕಣ್ಣೀರು ಹಾಕುತ್ತಿದ್ದಾಳೆ.

  ಅಂತ್ಯ ಸಂಸ್ಕಾರ ನೇರವೇರಿಸಿದ ಹರ್ಷ ವರ್ಧನ್
  ಮನೆಯವರಿಗೆ ಆರ್ಯವರ್ಧನ್ ಬದುಕಿರೋ ವಿಚಾರ ಗೊತ್ತಿಲ್ಲ. ವಿಶ್ವಾಸ್ ದೇಸಾಯಿಯನ್ನು ಆರ್ಯ ಎಂದುಕೊಂಡು ಅಂತ್ಯ ಸಂಸ್ಕಾರ ಮಾಡಲು ಎಲ್ಲ ಸಿದ್ಧತೆ ಮಾಡಿದ್ದಾರೆ. ಪ್ರೀತಿಯ ದಾದಾನನ್ನು ಕಳೆದುಕೊಂಡ ಹರ್ಷ ಕಣ್ಣೀರು ಹಾಕುತ್ತಿದ್ದಾನೆ. ಅವರ ಕೈ ಕೆಳಗೆ ಬೆಳೆದ ಹುಡುಗ ಅವರಿಗೆ ಕೊಳ್ಳಿ ಇಡುವಂತೆ ಆಗಿದೆ. ಅಣ್ಣ ಆರ್ಯವರ್ಧನ್‍ಗೆ ಕೊಳ್ಳಿ ಇಟ್ಟು ಅಂತ್ಯಸಂಸ್ಕಾರ ನೇರವೇರಿಸಿದ್ದಾರೆ.

  ಇದನ್ನೂ ಓದಿ: Ramachari: ಪ್ರಪಾತಕ್ಕೆ ಬಿದ್ದಿದ್ದಾಳೆ ಚಾರು! ಕಾಪಾಡ್ತಾನಾ ರಾಮಾಚಾರಿ?

  ಅಂತ್ಯ ಸಂಸ್ಕಾರ ಜಾಗಕ್ಕೆ ಬಂದ ಪೊಲೀಸ್
  ಹರ್ಷ ಆರ್ಯನ ಚಿತೆಗೆ ಬೆಂಕಿ ಇಡುತ್ತಿದ್ದಂತೆ ಅಲ್ಲಿಗೆ ಪೊಲೀಸರ ಎಂಟ್ರಿ ಆಗಿದೆ. ಆರ್ಯನ ಕಳೆದುಕೊಂಡ ನೋವಿನಲ್ಲಿರುವ ಕುಟುಂಬ ಶಾಕ್ ಆಗಿದೆ. ಇಲ್ಲಿಗೆ ಯಾಕೆ ಪೊಲೀಸರು ಬಂದಿದ್ದಾರೆ ಎಂದು ಆತಂಕಗೊಂಡಿದ್ದಾರೆ. ಎಲ್ಲರೂ ಒಂದು ಕ್ಷಣ ಶಾಕ್‍ನಲ್ಲಿ ಪೊಲೀಸರನ್ನು ನೋಡುತ್ತಿದ್ದಾರೆ.

  Zee Kannada serial, Kannada serial, Jote Joteyali Kannada serial, Hero Anirudh Role Change, ಜೊತೆ ಜೊತೆಯಲಿ ಧಾರಾವಾಹಿ, ಆರ್ಯವರ್ಧನ್ ಪಾತ್ರ ಬದಲಿಸಲು ಅಪಘಾತದ ಎಪಿಸೋಡ್, ಅನು ಅರೆಸ್ಟ್ ಮಾಡಲು ಬಂದ ಪೊಲೀಸ್, ಜೀ ಕನ್ನಡದಲ್ಲಿ ಪ್ರಸಾರವಾಗುವ ಧಾರಾವಾಹಿಗಳು, Kannada news, Karnataka news,
  ಅಂತ್ಯ ಸಂಸ್ಕಾರ ನೇರವೇರಿಸಿದ ಹರ್ಷ


  ಆರ್ಯವರ್ಧನ್‍ದು ಕೊಲೆನಾ?
  ಆರ್ಯ ತನ್ನ ತಾಯಿ ಪ್ರಿಯದರ್ಶಿನಿ ನೋಡಲು ಹೋಗುತ್ತಿದ್ದಾಗ ಕಾರು ಅಪಘಾತವಾಗಿದೆ. ಆದ್ರೆ ಆರ್ಯ ದೊಡ್ಡ ಉದ್ಯಮಿ ಆದ ಕಾರಣ ಯಾರೋ ದ್ವೇಷಕ್ಕೆ ಕೊಲೆ ಮಾಡಿಸಿರಬಹುದು ಎಂಬ ಅನುಮಾನ ಶುರುವಾಗಿದೆ. ಅದಕ್ಕೆ ಪೊಲೀಸರು ತನಿಖೆ ಮಾಡ್ತಿದ್ದಾರೆ. ಸುತ್ತಿ ಬಂದು ತನಿಖೆ ಅನು ಬಳಿ ಬಂದು ನಿಲ್ಲುತ್ತಿದೆ. ಅನು ಇದಕ್ಕೆ ಕಾರಣ ಎಂದು ಹೇಳಲಾಗ್ತಿದೆ.

  Zee Kannada serial, Kannada serial, Jote Joteyali Kannada serial, Hero Anirudh Role Change, ಜೊತೆ ಜೊತೆಯಲಿ ಧಾರಾವಾಹಿ, ಆರ್ಯವರ್ಧನ್ ಪಾತ್ರ ಬದಲಿಸಲು ಅಪಘಾತದ ಎಪಿಸೋಡ್, ಅನು ಅರೆಸ್ಟ್ ಮಾಡಲು ಬಂದ ಪೊಲೀಸ್, ಜೀ ಕನ್ನಡದಲ್ಲಿ ಪ್ರಸಾರವಾಗುವ ಧಾರಾವಾಹಿಗಳು, Kannada news, Karnataka news,
  ಅನು ಅರೆಸ್ಟ್ ಮಾಡಲು ಬಂದ ಪೊಲೀಸ್?


  ಆರ್ಯನ ಕೊಲ್ಲಿಸಿದ್ದು ಅನುನಾ?
  ಆರ್ಯ ಮತ್ತು ಅನು ಇಬ್ಬರು ಒಬ್ಬರನ್ನೊಬ್ಬರು ಪ್ರೀತಿಸಿ ಮದುವೆ ಆದ ಜೋಡಿ. ಮೊದ ಮೊದಲು ಎಲ್ಲಾ ಚೆನ್ನಾಗಿತ್ತು. ಅನುಗೆ ಯಾವಾಗ ಆರ್ಯನ ಮೊದಲಿನ ಜೀವನದ ಬಗ್ಗೆ ಗೊತ್ತಾಯ್ತೋ ಅಂದಿನಿಂದ, ಅವನ್ನು ದ್ವೇಷ ಮಾಡಲು ಶುರ ಮಾಡಿದ್ಲು.ಅದಕ್ಕೆ ಅನು ಆರ್ಯನನ್ನು ಕೊಲ್ಲಿಸಿದ್ದಾಳೆ ಎನ್ನೋ ಗಾಳಿ ಸುದ್ದಿ ಹಬ್ಬಿವೆ. ಅದಕ್ಕೆ ಪೊಲೀಸರು ಬಂದಿದ್ದಾರೆ.

  ಇದನ್ನೂ ಓದಿ: Kendasampige: ಕಣ್ಮುಂದೆಯೇ ಹೊತ್ತಿ ಉರಿಯುತ್ತಿದ್ದಾನೆ ತಮ್ಮ, ಸುಮಿಯ ನೋವಿನ ಕಣ್ಣೀರು!

  ಆರ್ಯನ ಕೇಸ್ ಮೇಲೆ ಅನು ಅರೆಸ್ಟ್ ಆಗ್ತಾಳಾ? ನೋವಿನಲ್ಲಿರೋಳಿಗೆ ಮತ್ತಷ್ಟು ಸಂಕಟನಾ? ಮುಂದೇನಾಗುತ್ತೆ ಅಂತ ನೋಡೋಕೆ ಜೊತೆ ಜೊತೆಯಲಿ ಸೀರಿಯಲ್ ನೋಡಬೇಕು.
  Published by:Savitha Savitha
  First published: