• Home
 • »
 • News
 • »
 • entertainment
 • »
 • Jothe jotheyali: ಆರ್ಯನಿಲ್ಲದೇ ಝೇಂಡೆಗೆ ಮರ್ಯಾದೆ ಇಲ್ವಾ? ಜೊತೆ ಜೊತೆಯಲಿ ಸೀರಿಯಲ್ ಟೈಮೇ ಚೇಂಜಾಯ್ತು!

Jothe jotheyali: ಆರ್ಯನಿಲ್ಲದೇ ಝೇಂಡೆಗೆ ಮರ್ಯಾದೆ ಇಲ್ವಾ? ಜೊತೆ ಜೊತೆಯಲಿ ಸೀರಿಯಲ್ ಟೈಮೇ ಚೇಂಜಾಯ್ತು!

ಜೊತೆ ಜೊತೆಯಲಿ ಸೀರಿಯಲ್ ಟೈಮ್ ಚೇಂಜ್

ಜೊತೆ ಜೊತೆಯಲಿ ಸೀರಿಯಲ್ ಟೈಮ್ ಚೇಂಜ್

ಸೋಮವಾರದಿಂದ ಶುಕ್ರವಾರದವರೆಗೆ ರಾತ್ರಿ 8.30ಕ್ಕೆ ಜನ ಟಿವಿ ಮುಂದೆ ಕೂರುವಂತೆ ಮೋಡಿ ಮಾಡಿರುವ ಜೊತೆ ಜೊತೆಯಲಿ ಸೀರಿಯಲ್‍ಗೆ ಅಸಂಖ್ಯಾತ ಅಭಿಮಾನಿಗಳು ಇದ್ದಾರೆ. ಆದ್ರೆ ಅನಿರುದ್ಧ್ ಗಲಾಟೆಯಿಂದ ಎಲ್ಲವೂ ಬದಲಾಗಿದೆ. ಈಗ ಟೈಮಿಂಗ್ ಕೂಡ!

 • News18 Kannada
 • Last Updated :
 • Karnataka, India
 • Share this:

  ಜೊತೆ ಜೊತೆಯಲಿ (Jothe Joteyali) ಸೀರಿಯಲ್, ಜೀ ಕನ್ನಡದ (Zee Kannada) ಜನಪ್ರಿಯ ಧಾರಾವಾಹಿಗಳಲ್ಲಿ (Serials) ಒಂದು. ಪ್ರೀತಿ ವಯಸ್ಸಿನ ಅಂತರ ಇಲ್ಲ ಎಂದು ತೋರಿಸಿಕೊಟ್ಟ ಸೀರಿಯಲ್. ಸೋಮವಾರದಿಂದ ಶುಕ್ರವಾರದವರೆಗೆ ರಾತ್ರಿ 8.30ಕ್ಕೆ ಜನ ಟಿವಿ ಮುಂದೆ ಕೂರುವಂತೆ ಮೋಡಿ ಮಾಡಿರುವ ಈ ಸೀರಿಯಲ್‍ಗೆ ಅಸಂಖ್ಯಾತ ಅಭಿಮಾನಿಗಳು ಇದ್ದಾರೆ. ಆದ್ರೆ ಸೀರಿಯಲ್ ಸೆಟ್ ನಲ್ಲಿ ಆದ ಗಲಾಟೆಯಿಂದ ಅನಿರುದ್ಧ್ (Anirudh) ಔಟ್ ಆದ ಮೇಲೆ ಸ್ವಲ್ಪ ಅಭಿಮಾನಿಗಳು ಕಡಿಮೆ ಆಗಿದ್ದಾರೆ ಎಂದು ಹೇಳಲಾಗ್ತಿದೆ. ಆರ್ಯನ ಪಾತ್ರಕ್ಕೆ ನಟ ಹರೀಶ್ ರಾಜ್ (Harish Raj) ಬಂದಿದ್ದಾರೆ. ನಿಧಾನವಾಗಿ ಆರ್ಯನ ಸ್ಥಾನವನ್ನು ಆವರಿಸಿಕೊಳ್ತಿದ್ದಾರೆ. ಸದ್ಯ ಧಾರಾವಾಹಿಯಲ್ಲಿ ಮುಖ ಸಂಜುದು, ಮನಸ್ಸು ಆರ್ಯವರ್ಧನ್. ಅಪಘಾತದ ಟ್ವಿಸ್ಟ್ ನಲ್ಲಿ ಆರ್ಯ ಸಂಜು ಆಗಿ ಪಾತ್ರ ಮಾಡಿದ್ದಾರೆ. ಜೊತೆ ಜೊತೆಯಲಿ ಸೀರಿಯಲ್ ಟೈಮ್ (Time) ಚೇಂಜ್ (Change) ಆಗಿದೆ.


  ರಾತ್ರಿ 9.30ಕ್ಕೆ ಜೊತೆ ಜೊತೆಯಲಿ ಧಾರಾವಾಹಿ
  ಇಷ್ಟು ದಿನ ಜೀ ಕನ್ನಡದಲ್ಲಿ ರಾತ್ರಿ 8.30ಕ್ಕೆ ಜೊತೆ ಜೊತೆಯಲಿ ಸೀರಿಯಲ್ ಧಾರಾವಾಹಿ ಪ್ರಸಾರವಾಗ್ತಿತ್ತು. ಈಗ ಅದೇ ಟೈಂಗೆ ಶ್ರೀರಸ್ತು ಶುಭಮಸ್ತು ಧಾರಾವಾಹಿ ಬರಲಿದೆ. ಹಾಗಾದ್ರೆ ಜೊತೆ ಜೊತೆಯಲಿ ಧಾರಾವಾಹಿ ಮುಗಿಯುತ್ತಾ? ಎಂಬ ಅನುಮಾನಗಳು ಶುರುವಾಗಿವೆ. ಅಥವಾ ಜೊತೆ ಜೊತೆಯಲಿ ಧಾರಾವಾಹಿಯನ್ನು ಬೇರೆ ಟೈಂಗೆ ಹಾಕ್ತಾರಾ ಎಂದು ಜನ ಕೇಳ್ತಾ ಇದ್ರು. ಜೊತೆ ಜೊತೆಯಲಿ ಧಾರಾವಾಹಿ ಇನ್ಮುಂದೆ ರಾತ್ರಿ 9.30ಕ್ಕೆ ಪ್ರಸಾರವಾಗಲಿದೆ. ನಾಗಿಣಿ ಧಾರಾವಾಹಿ 10 ಗಂಟೆಗೆ ಪ್ರಸಾರವಾಗಲಿದೆ.


  ಅನಿರುದ್ಧ್ ಇಲ್ಲದೇ ಧಾರಾವಾಹಿಗೆ ಹೊಡೆತ ಬಿತ್ತಾ?
  ಜೊತೆ ಜೊತೆಯಲ್ಲಿ ಧಾರಾವಾಹಿಗೆ ತುಂಬಾ ಜನ ಅಭಿಮಾನಿಗಳು ಇದ್ರು. ಅದರಲ್ಲೂ ಆರ್ಯನ ಪಾತ್ರ ಮಾಡ್ತಿದ್ದ ಅನಿರುದ್ಧ್ ಗಾಗಿ ಅದೆಷ್ಟೋ ಅಭಿಮಾನಿಗಳು ಸೀರಿಯಲ್ ನೋಡ್ತಾ ಇದ್ರು. ಈಗ ಅವರಿಲ್ಲದ ಧಾರಾವಾಹಿಯನ್ನು ಜನ ನೋಡ್ತಾ ಇಲ್ವಾ? ಅದಕ್ಕೆ ಧಾರಾವಾಹಿ ಸಮಯವನ್ನು ಬದಲು ಮಾಡಿದ್ರಾ ಅನ್ನೋ ಪ್ರಶ್ನೆಗಳು ಎದ್ದಿವೆ.


  ಇದನ್ನೂ ಓದಿ: Deepavali Celebration: ವಾಸುಕಿ ವೈಭವ್ ಮತ್ತು ಚಂದನಾ ಅವರ ಸಂಭ್ರಮದ ದೀಪಾವಳಿ ನೋಡಿ


  ಝೇಂಡೆನ ಆಫೀಸ್‍ನಿಂದ ಹೊರಹಾಕ್ತಾನಾ ಹರ್ಷವರ್ಧನ್?
  ಆರ್ಯನಿಲ್ಲದ ಆಫೀಸ್‍ಗೆ ಝೇಂಡೆ ಬಂದಿದ್ದಾನೆ. ಅದಕ್ಕೆ ಏಕೆ ಆಫೀಸ್‍ಗೆ ಬಂದಿದ್ದೀರಿ? ಮೀರಾ ಯಾರನ್ನು ಒಳಗೆ ಬಿಡಬೇಡಿ. ಝೇಂಡೆ ನೀವೇನು ಈ ಕಂಪನಿ ಬಾಸ್ಸಾ? ಅಥವಾ ಈ ಕಂಪನಿ ಉದ್ಯೋಗಿನಾ? ನಿಮಗೆ ಅಂತ ಏನಾದ್ರೂ ಡೆಸಿಗ್ನೇಶನ್ ಇದ್ಯಾ? ನಿಮ್ಮ ಅಸ್ತಿತ್ವ ಏನೇ ಇದ್ರೂ ದಾದಾ ಇರುವವರೆಗೂ ಮಾತ್ರ. ಈಗ ನಿಮಗೆ ಇಲ್ಲಿ ಜಾಗ ಇಲ್ಲ. ಇದನ್ನು ಅವತ್ತೇ ಅಮ್ಮ ಸ್ಪಷ್ಟವಾಗಿ ಹೇಳಿದ್ದಾರೆ. ನಾನ್ ಮತ್ತೆ ಹೇಳೋ ಅವಶ್ಯಕತೆ ಇಲ್ಲ ಎಂದು ಝೇಂಡೆಗೆ ಹರ್ಷ ಹೇಳಿದ್ದಾನೆ.


  zee kannada serial, kannada serial, jothe jotheyali kannada serial, jothe jotheyali serial timing change, ಜೊತೆ ಜೊತೆಯಲಿ ಧಾರಾವಾಹಿ, ಜೊತೆ ಜೊತೆಯಲಿ ಸೀರಿಯಲ್ ಟೈಮ್ ಚೇಂಜ್, ಆರ್ಯನಿಲ್ಲದ ಝೇಂಡೆಗೆ ಮರ್ಯಾದೆ ಇಲ್ಲ, ಜೀ ಕನ್ನಡದಲ್ಲಿ ಪ್ರಸಾರವಾಗುವ ಧಾರಾವಾಹಿಗಳು, kannada news, karnataka news,
  ಝೇಂಡೆ


  ಸಂಜುಗೆ ಕೆಲವೊಂದು ನೆನಪು
  ಆರ್ಯನಿಗೆ ಎಲ್ಲಾ ಮರೆತು ಸಂಜು ಆಗಿ ಬಂದಿದ್ದಾರೆ. ಆದ್ರೆ ಕಂಪನಿಗೆ ಕೆಲಸಕ್ಕೆ ಬಂದಾಗ. ಇಲ್ಲಿ ಮೊದಲೇ ಕೆಲಸ ಮಾಡಿದಂತೆ ಅನ್ನಿಸುತ್ತಿದೆ. ಎಲ್ಲರೂ ಪರಿಚಯ ಅನ್ನೋ ರೀತಿ ಅನ್ನಿಸುತ್ತಿದೆಯಂತೆ. ಎಲ್ಲಾ ಕೆಲಸಗಳನ್ನು ಬೇಗ ಬೇಗ ಮಾಡಿ ಮುಗಿಸುತ್ತಾರೆ. ಇದನ್ನು ನೋಡಿ ಹರ್ಷ, ಮಾನ್ಸಿ, ಮೀರಾ, ಶಾರದಾ ದೇವಿ, ಅನು ಎಲ್ಲರೂ ಆಶ್ಚರ್ಯಗೊಂಡಿದ್ದಾರೆ.


  zee kannada serial, kannada serial, jothe jotheyali kannada serial, jothe jotheyali serial timing change, ಜೊತೆ ಜೊತೆಯಲಿ ಧಾರಾವಾಹಿ, ಜೊತೆ ಜೊತೆಯಲಿ ಸೀರಿಯಲ್ ಟೈಮ್ ಚೇಂಜ್, ಆರ್ಯನಿಲ್ಲದ ಝೇಂಡೆಗೆ ಮರ್ಯಾದೆ ಇಲ್ಲ, ಜೀ ಕನ್ನಡದಲ್ಲಿ ಪ್ರಸಾರವಾಗುವ ಧಾರಾವಾಹಿಗಳು, kannada news, karnataka news,
  ಹರ್ಷವರ್ಧನ್


  ಇದನ್ನೂ ಓದಿ: Yash Deepavali: ಯಶ್ ದೀಪಾವಳಿ ಸಂಭ್ರಮ, ಮಕ್ಕಳೊಂದಿಗೆ ಪಟಾಕಿ ಹಚ್ಚಿ ಸಂಭ್ರಮಿಸಿದ ರಾಕಿಭಾಯ್


  ಮುಂದೇನಾಗುತ್ತೆ? ಧಾರಾವಾಹಿಯನ್ನು ಜನ ಮತ್ತೆ ಒಪ್ಪಿಕೊಳ್ತಾರಾ? ಎಲ್ಲವನ್ನು ನೋಡಲು ಜೊತೆ ಜೊತೆಯಲಿ ಧಾರಾವಾಹಿ ನೋಡಬೇಕು.

  Published by:Savitha Savitha
  First published: