• Home
 • »
 • News
 • »
 • entertainment
 • »
 • Jothe Jotheyali: ಆರಾಧನಾಗಿಂತ ಅನು ಮೇಲೆ ಸಂಜುಗೆ ಹೆಚ್ಚು ಕಾಳಜಿ, ಇದೇನಾಗುತ್ತಿದೆ ಧಾರಾವಾಹಿಯಲ್ಲಿ?

Jothe Jotheyali: ಆರಾಧನಾಗಿಂತ ಅನು ಮೇಲೆ ಸಂಜುಗೆ ಹೆಚ್ಚು ಕಾಳಜಿ, ಇದೇನಾಗುತ್ತಿದೆ ಧಾರಾವಾಹಿಯಲ್ಲಿ?

ಆರಾಧನಾಗಿಂತ ಅನು ಮೇಲೆ ಹೆಚ್ಚು ಸಂಜುಗೆ ಕಾಳಜಿ

ಆರಾಧನಾಗಿಂತ ಅನು ಮೇಲೆ ಹೆಚ್ಚು ಸಂಜುಗೆ ಕಾಳಜಿ

ಆರಾಧನಾ ಮಾತನ್ನು ಕೇಳದೇ, ಅನು ಬಳಿ ಸಂಜು ಹೋಗುತ್ತಾನೆ. ಏನ್ ಆಯ್ತು ಅನು? ಅನುಗೆ ಹುಷಾರಿಲ್ವಾ? ಅವಳ ಕಾಲಿಗೆ ಏನ್ ಆಯ್ತು ಎಂದು ಕೇಳುತ್ತಾನೆ. ಅದನ್ನು ನೋಡಿ ಆರಾಧನಾ ಬೇಸರ ಮಾಡಿಕೊಂಡಿದ್ದಾಳೆ.

 • News18 Kannada
 • Last Updated :
 • Karnataka, India
 • Share this:

  ಜೊತೆ ಜೊತೆಯಲಿ (Jothe Jotheyali) ಸೀರಿಯಲ್ (Serial), ಜೀ ಕನ್ನಡದ (Zee Kannada) ಜನಪ್ರಿಯ ಧಾರಾವಾಹಿಗಳಲ್ಲಿ ಒಂದು. ಪ್ರೀತಿ ವಯಸ್ಸಿನ ಅಂತರ ಇಲ್ಲ ಎಂದು ತೋರಿಸಿಕೊಟ್ಟ ಸೀರಿಯಲ್. ಸೋಮವಾರದಿಂದ ಶುಕ್ರವಾರದವರೆಗೆ ರಾತ್ರಿ 9.30ಕ್ಕೆ ಪ್ರಸಾರವಾಗುತ್ತಿದೆ. ಈ ಸೀರಿಯಲ್‍ಗೆ ಅಸಂಖ್ಯಾತ ಅಭಿಮಾನಿಗಳು ಇದ್ದಾರೆ. ಆದ್ರೆ ಸೀರಿಯಲ್ ಸೆಟ್ ನಲ್ಲಿ ಆದ ಗಲಾಟೆಯಿಂದ ಅನಿರುದ್ಧ್ ಔಟ್ ಆದ ಮೇಲೆ ಸ್ವಲ್ಪ ಅಭಿಮಾನಿಗಳು ಕಡಿಮೆ ಆಗಿದ್ದಾರೆ ಎಂದು ಹೇಳಲಾಗ್ತಿದೆ. ಆರ್ಯನ ಪಾತ್ರಕ್ಕೆ ನಟ ಹರೀಶ್ ರಾಜ್ ಬಂದಿದ್ದಾರೆ. ನಿಧಾನವಾಗಿ ಆರ್ಯನ ಸ್ಥಾನವನ್ನು ಆವರಿಸಿಕೊಳ್ತಿದ್ದಾರೆ. ಸದ್ಯ ಧಾರಾವಾಹಿಯಲ್ಲಿ ಮುಖ ಸಂಜುದು, ಮನಸ್ಸು ಆರ್ಯವರ್ಧನ್. ಜೊತೆ ಜೊತೆಯಲಿ ಧಾರಾವಾಹಿಗೆ ಟಾಮ್ ಅಂಡ್ ಜೆರ್ರಿಯ ನಟಿ ಮತ್ತು ಜೋಡಿ ಹಕ್ಕಿ ಖ್ಯಾತಿಯ ಚೈತ್ರಾ ರಾವ್ ಎಂಟ್ರಿ ಆಗಿದ್ದಾರೆ. ವಿಶ್ವಾಸ್ ಪತ್ನಿ ಆರಾಧನಾ ಆಗಿ.


  ಆರಾಧನಾಗೆ ಪ್ರಾಮಿಸ್ ಮಾಡಿದ ಅನು
  ಆರಾಧನಾ ತನ್ನ ಗಂಡ ವಿಶ್ವಾಸ್ ತನ್ನ ಜೊತೆ ಬರುತ್ತಿಲ್ಲ ಎಂದು ಬೇಸರ ಮಾಡಿಕೊಂಡಿರುತ್ತಾರೆ. ಆಗ ಅನು, ಆರಾಧನಾ ಅವರೇ ನೀವು ಚಿಂತೆ ಮಾಡಬೇಡಿ. ವಿಶ್ವಾಸ್ ಅಮ್ಮ ಪ್ರಿಯಾ ಅವರು, ನೀವು ಅವರ ಮಗನನ್ನು ದೂರ ಮಾಡ್ತೀರಿ ಎನ್ನುವ ಭಯದಲ್ಲಿದ್ದಾರೆ. ಅದಕ್ಕೆ ಅವರು ಸಂಜುವನ್ನು ಕಳಿಸಲು ಒಪ್ಪುತ್ತಿಲ್ಲ. ನಾನು ವಿಶ್ವಾಸ್‍ನನ್ನು ನಿಮ್ಮ ಜೊತೆ ಕಳಿಸುತ್ತೇನೆ ಎಂದು ಪ್ರಾಮಿಸ್ ಮಾಡಿದ್ದಾಳೆ.


  ಆರ್ಯನೇ ಸಂಜು ಎಂದು ಗೊತ್ತಿಲ್ಲದೇ ಪ್ರಾಮಿಸ್!
  ಅನು, ಸಂಜು ಜೀವನ ಸರಿ ಮಾಡುವ ಆತುರದಲ್ಲಿ, ತನಗೆ ಗೊತ್ತಿಲ್ಲದಂತೆ ತಪ್ಪು ಮಾಡುತ್ತಿದ್ದಾಳೆ. ಆರ್ಯನೇ ಸಂಜು ಅಂತ ಗೊತ್ತಿಲ್ಲದೇ, ಆತನನ್ನು ಆರಾಧನಾ ಜೊತೆ ಕಳಿಸಲು ಮಾತು ಕೊಟ್ಟಿದ್ದಾಳೆ. ಮುಂದೊಂದು ದಿನ ಈ ಸತ್ಯ ಗೊತ್ತಾದಾಗ ಅನು ಮಾತು ತಪ್ಪಿದಂತೆ ಆಗುತ್ತೆ.


  ಇದನ್ನೂ ಓದಿ: Kannadathi: ಪತ್ರ ಬರೆದ ಹರ್ಷ, ಅಮ್ಮಮ್ಮ ಇಲ್ಲ ಅಂದ್ರೂ ಕಾಡುವ ನೆನಪು ಸಾವಿರ 


  ಗರ್ಭಿಣಿಯರಿಗೆ ಹೆಚ್ಚು ಆದ್ಯತೆ
  ಅನು ಗರ್ಭಿಣಿ ಆಗಿದ್ದಾಳೆ. ಆಕೆಗೆ ಕಾಲು ನೋವು ಎಂದು ಶಾರದಮ್ಮ, ಮನೆ ಕೆಲಸದಾಕೆಗೆ ಹೇಳಿ ಕಾಲಿಗೆ ಎಣ್ಣೆ ಹಚ್ಚಿಸುತ್ತಿದ್ದಾಳೆ. ಅದನ್ನು ನೋಡಿದ ಆರಾಧನ, ನೀವೇ ಅದೃಷ್ಟವಂತರು. ನಿಮ್ಮನ್ನು ನಿಮ್ಮ ಅತ್ತೆ ಎಷ್ಟು ಚೆನ್ನಾಗಿ ನೋಡಿಕೊಳ್ತಾರೆ. ನನಗೆ ಆ ಭಾಗ್ಯ ಇಲ್ಲ ಎಂದು ಬೇಸರ ಮಾಡಿಕೊಳ್ಳುತ್ತಾಳೆ. ಕಂಪನಿ ನಡೆಸೋ ಹೆಣ್ಣು ಮಕ್ಕಳಿಗಿಂತ ಗರ್ಭಿಣಿ ಮಹಿಳೆಯತರಿಗೆ ಹೆಚ್ಚು ಆದ್ಯತೆ ಎಂದು ಹೇಳ್ತಾಳೆ.


  zee kannada serial, kannada serial, sanju care about anu, jothe jotheyali kannada serial, jothe jotheyali serial timing change, ಜೊತೆ ಜೊತೆಯಲಿ ಧಾರಾವಾಹಿ, ಜೊತೆ ಜೊತೆಯಲಿ ಸೀರಿಯಲ್ ಟೈಮ್ ಚೇಂಜ್, ಆರಾಧನಾಗಿಂತ ಅನು ಮೇಲೆ ಹೆಚ್ಚು ಸಂಜುಗೆ ಕಾಳಜಿ, ಜೀ ಕನ್ನಡದಲ್ಲಿ ಪ್ರಸಾರವಾಗುವ ಧಾರಾವಾಹಿಗಳು, kannada news, karnataka news,
  ಗರ್ಭಿಣಿ ಮಹಿಳೆಯರಿಗೆ ಹೆಚ್ಚು ಆದ್ಯತೆ


  ಅನು ಮೇಲೆ ಸಂಜುಗೆ ಕಾಳಜಿ
  ಅನು ಬಗ್ಗೆ ಮಾತನಾಡುತ್ತಿರುವಾಗಲೇ ಸಂಜು ಬರುತ್ತಾನೆ. ಆಗ ಆರಾಧನ ಖುಷಿಯಿಂದ ನಿನಗೆ ಕಾಯುತ್ತಿದ್ದೆ. ನೀನು ಇಲ್ಲದೇ ಒಬ್ಬಂಟಿ ಎನ್ನಿಸುತ್ತೆ ಎಂದು ಹೇಳುತ್ತಿದ್ಲು, ಆರಾಧನಾ ಮಾತನ್ನು ಕೇಳದೇ, ಅನು ಬಳಿ ಸಂಜು ಹೋಗುತ್ತಾನೆ. ಏನ್ ಆಯ್ತು ಅನು? ಅನುಗೆ ಹುಷಾರಿಲ್ವಾ? ಅವಳ ಕಾಲಿಗೆ ಏನ್ ಆಯ್ತು ಎಂದು ಕೇಳುತ್ತಾನೆ. ಅದನ್ನು ನೋಡಿ ಆರಾಧನ ಬೇಸರ ಮಾಡಿಕೊಂಡಿದ್ದಾಳೆ.


  ಇದನ್ನೂ ಓದಿ: Meghana Raj: ಥೈಲ್ಯಾಂಡ್​ನಲ್ಲಿ ನಟಿ ಮೇಘನಾ ರಾಜ್! ಆಪ್ತರೊಂದಿಗೆ ವಿದೇಶಿ ಪ್ರವಾಸ 


  ಆರಾಧನಾ ಆಗಿ ಬಂದಿರುವ ಚೈತ್ರಾ ರಾವ್
  ವಿಶ್ವಾಸ್ ನ ಪತ್ನಿ ಪಾತ್ರಕ್ಕೆ ಅಂದ್ರೆ ಆರಾಧನಾ ಪಾತ್ರಕ್ಕೆ, ಟಾಮ್ ಅಂಡ್ ಜೆರ್ರಿಯ ನಟಿ ಮತ್ತು ಜೋಡಿ ಹಕ್ಕಿ ಖ್ಯಾತಿಯ ಚೈತ್ರಾ ರಾವ್ ಎಂಟ್ರಿ ಬಂದಿದ್ದಾರೆ. ತನ್ನ ಗಂಡ ತನಗಿಂತ ಹೆಚ್ಚು ಅನುಳಿಗೆ ಕೇರ್ ಮಾಡ್ತಾನೆ ಎಂದು ಕೋಪಗೊಂಡಿದ್ದಾಳೆ. ಅದನ್ನು ಮನೆಯವರು ಸಹ ಶಾಕ್ ಆಗಿದ್ದಾರೆ.


  zee kannada serial, kannada serial, sanju care about anu, jothe jotheyali kannada serial, jothe jotheyali serial timing change, ಜೊತೆ ಜೊತೆಯಲಿ ಧಾರಾವಾಹಿ, ಜೊತೆ ಜೊತೆಯಲಿ ಸೀರಿಯಲ್ ಟೈಮ್ ಚೇಂಜ್, ಆರಾಧನಾಗಿಂತ ಅನು ಮೇಲೆ ಹೆಚ್ಚು ಸಂಜುಗೆ ಕಾಳಜಿ, ಜೀ ಕನ್ನಡದಲ್ಲಿ ಪ್ರಸಾರವಾಗುವ ಧಾರಾವಾಹಿಗಳು, kannada news, karnataka news,
  ಆರಾಧನಾ


  ಅನು ಮೇಲೆ ಆರಾಧನ ತಪ್ಪು ತಿಳಿದುಕೊಳ್ತಾಳಾ? ಅನು ಇದನ್ನೆಲ್ಲಾ ಸರಿ ಮಾಡ್ತಾಳಾ? ಮುಂದೇನಾಗುತ್ತೆ ಅಂತ ನೋಡೋಕೆ ಜೊತೆ ಜೊತೆಯಲ್ಲಿ ಸೀರಿಯಲ್ ನೋಡಬೇಕು.

  Published by:Savitha Savitha
  First published: