• Home
  • »
  • News
  • »
  • entertainment
  • »
  • Jothe Jotheyali: ಆರ್ಯವರ್ಧನ್ ರೀತಿ ಕೆಲಸ ಮಾಡ್ತಿರೋ ಸಂಜು, ಅನುಗೆ ಹೆಚ್ಚಾದ ಅನುಮಾನ!

Jothe Jotheyali: ಆರ್ಯವರ್ಧನ್ ರೀತಿ ಕೆಲಸ ಮಾಡ್ತಿರೋ ಸಂಜು, ಅನುಗೆ ಹೆಚ್ಚಾದ ಅನುಮಾನ!

ಅನುಗೆ ಹೆಚ್ಚಾದ ಅನುಮಾನ

ಅನುಗೆ ಹೆಚ್ಚಾದ ಅನುಮಾನ

ಸಂಜು ಕಂಪನಿ ಎಲ್ಲಾ ಕೆಲಸಗಳನ್ನು ಬೇಗ ಬೇಗ ಮಾಡಿ ಮುಗಿಸುತ್ತಾರೆ. ಇದನ್ನು ನೋಡಿ ಹರ್ಷ, ಮಾನ್ಸಿ, ಮೀರಾ, ಶಾರದಾ ದೇವಿ, ಅನು ಎಲ್ಲರೂ ಆಶ್ಚರ್ಯಗೊಂಡಿದ್ದಾರೆ.  

  • News18 Kannada
  • Last Updated :
  • Karnataka, India
  • Share this:

    ಜೊತೆ ಜೊತೆಯಲಿ (Jothe Jotheyali) ಸೀರಿಯಲ್, ಜೀ ಕನ್ನಡದ (Zee Kannada) ಜನಪ್ರಿಯ ಧಾರಾವಾಹಿಗಳಲ್ಲಿ (Serials) ಒಂದು. ಪ್ರೀತಿ ವಯಸ್ಸಿನ ಅಂತರ ಇಲ್ಲ ಎಂದು ತೋರಿಸಿಕೊಟ್ಟ ಸೀರಿಯಲ್. ಸೋಮವಾರದಿಂದ ಶುಕ್ರವಾರದವರೆಗೆ ರಾತ್ರಿ 8.30ಕ್ಕೆ ಜನ ಟಿವಿ ಮುಂದೆ ಕೂರುವಂತೆ ಮೋಡಿ ಮಾಡಿರುವ ಈ ಸೀರಿಯಲ್‍ಗೆ ಸಾವಿರಾರು ಅಭಿಮಾನಿಗಳು ಇದ್ದಾರೆ. ಆದ್ರೆ ಸೀರಿಯಲ್ ಸೆಟ್ ನಲ್ಲಿ ಆದ ಗಲಾಟೆಯಿಂದ ಅನಿರುದ್ಧ್ (Anirudh) ಔಟ್ ಆದ ಮೇಲೆ ಸ್ವಲ್ಪ ಅಭಿಮಾನಿಗಳು ಕಡಿಮೆ ಆಗಿದ್ದಾರೆ ಎಂದು ಹೇಳಲಾಗ್ತಿದೆ. ಆರ್ಯನ ಪಾತ್ರಕ್ಕೆ ನಟ ಹರೀಶ್ ರಾಜ್ (Harish Raj) ಬಂದಿದ್ದಾರೆ. ನಿಧನವಾಗಿ ಆರ್ಯನ ಸ್ಥಾನವನ್ನು ಆವರಿಸಿಕೊಳ್ತಿದ್ದಾರೆ. ಸದ್ಯ ಧಾರಾವಾಹಿಯಲ್ಲಿ ಮುಖ ಸಂಜುದು, ಮನಸ್ಸು ಆರ್ಯವರ್ಧನ್. ಅಪಘಾತದ ಟ್ವಿಸ್ಟ್ ನಲ್ಲಿ ಆರ್ಯ ಸಂಜು ಆಗಿ ಪಾತ್ರ ಮಾಡಿದ್ದಾರೆ.


    22 ವರ್ಷದ ಅಕೌಂಟ್ ಚೆಕ್ ಒಂದೇ ದಿನದಲ್ಲಿ
    ಸಂಜು ಆಗಿ ಬಂದಿರುವ ಆರ್ಯವರ್ಧನ್‍ಗೆ ಮನೆಯಲ್ಲಿ ಇರೋಕೆ ಬೇಸರ ಎಂದು, ಶಾರದಾ ದೇವಿ ಅವರು ಆಫೀಸ್ ಗೆ ಕಳಿಸಿದ್ದಾರೆ. ಮೀರಾ, ಮಾನ್ಸಿ, ಹರ್ಷ, ಅನು ಎಲ್ಲರೂ ಸಂದರ್ಶನ ಮಾಡಿ ಸಂಜುನನ್ನು ಕೆಲಸಕ್ಕೆ ಸೇರಿಸಿಕೊಂಡಿದ್ದಾರೆ. ಮೀರಾ ಸಂಜುಗೆ 3 ವರ್ಷದ ಅಕೌಂಟ್ಸ್ ಚೆಕ್ ಮಾಡಲು ಹೇಳಿರ್ತಾಳೆ.


    ಆದ್ರೆ ಸಂಜು 22 ವರ್ಷದ ಅಕೌಂಟ್ ಚೆಕ್ ಮಾಡಿ. ತುಂಬಾ ತಪ್ಪಾಗಿದೆ. ಯಾರೂ ನಿಮ್ಮ ಕಂಪನಿಯಿಂದು ದುಡ್ಡು ಹೊಡೆದಿದ್ದಾರೆ. ಲೆಕ್ಕ ಸಿಗುತ್ತಿಲ್ಲ ಎಂದು ಹೇಳಿದ್ದಾನೆ. ಅದನ್ನು ನೋಡಿ ಮೀರಾ ಶಾಕ್ ಆಗಿದ್ದಾಳೆ.


    ಇದನ್ನೂ ಓದಿ: Ramachari: ಮಗಳಿಗಾಗಿ ಜೋರು ಮಳೆಯಲ್ಲೇ ಸಹಾಯ ಬೇಡಿ ನಿಂತ ಮಾನ್ಯತಾ! ರಾಮಾಚಾರಿ ಮನಸು ಕರಗುತ್ತಾ?


    ಸಂಜುಗೆ ಕೆಲವೊಂದು ನೆನಪು 
    ಆರ್ಯನಿಗೆ ಎಲ್ಲಾ ಮರೆತು ಸಂಜು ಆಗಿ ಬಂದಿದ್ದಾರೆ. ಆದ್ರೆ ಕಂಪನಿಗೆ ಕೆಲಸಕ್ಕೆ ಬಂದಾಗ. ಇಲ್ಲಿ ಮೊದಲೇ ಕೆಲಸ ಮಾಡಿದಂತೆ ಅನ್ನಿಸುತ್ತಿದೆ. ಎಲ್ಲರೂ ಪರಿಚಯ ಅನ್ನೋ ರೀತಿ ಅನ್ನಿಸುತ್ತಿದೆಯಂತೆ. ಎಲ್ಲಾ ಕೆಲಸಗಳನ್ನು ಬೇಗ ಬೇಗ ಮಾಡಿ ಮುಗಿಸುತ್ತಾರೆ. ಇದನ್ನು ನೋಡಿ ಹರ್ಷ, ಮಾನ್ಸಿ, ಮೀರಾ, ಶಾರದಾ ದೇವಿ, ಅನು ಎಲ್ಲರೂ ಆಶ್ಚರ್ಯಗೊಂಡಿದ್ದಾರೆ.


    Zee Kannada serial, Kannada serial, Jothe Jotheyali Kannada serial, Sanju Behavior like Arya Vardhan, ಜೊತೆ ಜೊತೆಯಲಿ ಧಾರಾವಾಹಿ, ಆರ್ಯವರ್ಧನ್ ರೀತಿ ಕೆಲಸ ಮಾಡ್ತಿರೋ ಸಂಜು, ಜೀ ಕನ್ನಡದಲ್ಲಿ ಪ್ರಸಾರವಾಗುವ ಧಾರಾವಾಹಿಗಳು, Kannada news, Karnataka news,
    ಹರ್ಷ


    ಸಿಬ್ಬಂದಿ ಮನವೊಲಿಸಿದ ಸಂಜು
    ಕಾಫಿ ಕೊಡಲು ಬಂದ ಹುಡುಗನಿಗೆ ಮಾನ್ಸಿ ಕಪಾಳಕ್ಕೆ ಹೊಡೆದಿರುತ್ತಾಳೆ. ಅದಕ್ಕೆ ಕಂಪನಿ ಸಿಬ್ಬಂದಿ ಪ್ರತಿಭಟನೆ ಮಾಡ್ತಾ ಇರ್ತಾರೆ. ಮಾನ್ಸಿ ಅವರು ಕ್ಷಮೆ ಕೇಳಲೇ ಬೇಕು ಎಂದು ಒತ್ತಾಯ ಮಾಡ್ತಾ ಇರ್ತಾರೆ ಆದ್ರೆ ಮಾನ್ಸಿ ಕ್ಷಮೆ ಕೇಳದೇ ಒಳಗೆ ಹೋಗ್ತಾಳೆ. ಆಗ ಸಂಜು ಕಾಫಿ ಹಿಡಿದು ಬರುತ್ತಾನೆ.


    ಇದನ್ನೂ ಓದಿ: Bhagya Lakshmi: ಗಂಡ ಶ್ರೀರಾಮ ಎಂದುಕೊಂಡ ಭಾಗ್ಯನಿಗೆ ಶಾಕ್, ಬೇರೆ ಹುಡುಗಿಯೊಂದಿಗೆ ತಾಂಡವ್ ಸಂಬಂಧ! 


    ಆಫೀಸ್ ಬಾಯ್​ಗೆ ಕೊಟ್ಟು. ಕುಡಿ ಇದು ಮಾನ್ಸಿ ಮೇಡಂ ಮಾಡಿಕೊಟ್ಟ ಕಾಫಿ ಎಂದು ಹೇಳ್ತಾರೆ. ಸುಮ್ಮನೇ ಕ್ಷಮೆ ಕೇಳೋದು ಬೇಡ ಎಂದು ಕಾಫಿ ಮಾಡಿ ಕೊಟ್ಟು ಕ್ಷಮೆ ಕೇಳ್ತಾ ಇದ್ದಾರೆ ಎಂದು ಅವರ ಮನವೊಲಿಸಿ. ಎಲ್ಲರು ಕೆಲಸಕ್ಕೆ ಮತ್ತೆ ಹಾಜರಾಗುವಂತೆ ಮಾಡ್ತಾನೆ.


    ಅನುಗೂ-ನನಗೂ ಏನಾದ್ರೂ ಸಂಬಂಧ ಇದ್ಯಾ?
    ಅನು ನೋಡಿದ್ರೆ ಸಂಜುಗೆ ಖುಷಿ ಆಗುತ್ತಂತೆ. ಅವರಿಗೂ, ನನಗೂ ಏನಾದ್ರೂ ಸಂಬಂಧ ಇತ್ತ ಎಂದು ಸಂಜು ಗೊಂದಲದಲ್ಲಿ ಇದ್ದಾನೆ. ಅದನ್ನು ಅವನು ನೇರವಾಗಿ ಅನು ಬಳಿಯೇ ಕೇಳಿದ್ದಾನೆ. ತಪ್ಪು ತಿಳಿ ಬೇಡಿ ಮೇಡಂ, ನನಗೂ, ನಿಮಗೂ ಏನಾದ್ರೂ ಸಂಬಂಧ ಇತ್ತಾ   ಎಂದು ಕೇಳ್ತಾನೆ. ಅಲ್ಲದೇ ನಿಮ್ಮನ್ನು ನೋಡಿದ್ರೆ, ನನಗೆ ಏನೋ ಭಾವನೆ ಬರುತ್ತವೆ ಅದಕ್ಕೆ ಕೇಳಿದೆ ಎನ್ನುತ್ತಾನೆ. ಅನು ಏನೂ ಮಾತನಾಡದೇ ಸುಮ್ಮನೇ ಇರುತ್ತಾಳೆ. ಸಂಜುಗೆ ಮತ್ತೆ ಗೊಂದಲ ಆಗುತ್ತೆ.


    Zee Kannada serial, Kannada serial, Jothe Jotheyali Kannada serial, Sanju Behavior like Arya Vardhan, ಜೊತೆ ಜೊತೆಯಲಿ ಧಾರಾವಾಹಿ, ಆರ್ಯವರ್ಧನ್ ರೀತಿ ಕೆಲಸ ಮಾಡ್ತಿರೋ ಸಂಜು, ಜೀ ಕನ್ನಡದಲ್ಲಿ ಪ್ರಸಾರವಾಗುವ ಧಾರಾವಾಹಿಗಳು, Kannada news, Karnataka news,
    ಅನು


    ಸಂಜುಗೆ ನೆನಪು ಬರೋದು ಯಾವಾಗ? ತಾನೇ ಆರ್ಯ ಅಂದ್ರೆ ಅನು ನಂಬ್ತಾಳಾ? ಮುಂದೇನಾಗುತ್ತೆ ಅಂತ ನೋಡೋಕೆ ಜೊತೆ ಜೊತೆಯಲಿ ಸೀರಿಯಲ್ ನೋಡಬೇಕು.

    Published by:Savitha Savitha
    First published: