ಜೀ ಕನ್ನಡದಲ್ಲಿ (Zee Kannada) ಪ್ರಸಾರವಾಗುವ ಜನಪ್ರಿಯ ಧಾರಾವಾಹಿಗಳಲ್ಲಿ (Serials) ಜೊತೆ ಜೊತೆಯಲಿ (Jothe Jotheyali) ಸೀರಿಯಲ್ ಕೂಡ ಒಂದು. ಪ್ರೀತಿಗೆ ವಯಸ್ಸಿನ ಅಂತರ ಇಲ್ಲ ಎಂದು ತೋರಿಸಿಕೊಟ್ಟ ಸೀರಿಯಲ್. ಸೋಮವಾರದಿಂದ ಶುಕ್ರವಾರದವರೆಗೆ ರಾತ್ರಿ 9.30ಕ್ಕೆ ಪ್ರಸಾರವಾಗುತ್ತಿದೆ. ಈ ಸೀರಿಯಲ್ಗೆ ಅಸಂಖ್ಯಾತ ಅಭಿಮಾನಿಗಳು ಇದ್ದಾರೆ. ಆದ್ರೆ ಸೀರಿಯಲ್ ಸೆಟ್ ನಲ್ಲಿ ಆದ ಗಲಾಟೆಯಿಂದ ಅನಿರುದ್ಧ್ (Anirudh) ಔಟ್ ಆದ ಮೇಲೆ ಸ್ವಲ್ಪ ಅಭಿಮಾನಿಗಳು ಕಡಿಮೆ ಆಗಿದ್ದಾರೆ ಎಂದು ಹೇಳಲಾಗ್ತಿದೆ. ಆರ್ಯನ ಪಾತ್ರಕ್ಕೆ ನಟ ಹರೀಶ್ ರಾಜ್ (Harish Raj) ಬಂದಿದ್ದಾರೆ. ನಿಧಾನವಾಗಿ ಆರ್ಯನ ಸ್ಥಾನವನ್ನು ಆವರಿಸಿಕೊಳ್ತಿದ್ದಾರೆ. ಸದ್ಯ ಧಾರಾವಾಹಿಯಲ್ಲಿ ಮುಖ ಸಂಜುದು, ಮನಸ್ಸು ಆರ್ಯವರ್ಧನ್. ಮೀರಾ ರಾಜೀನಾಮೆ ಹಿಂದೆ ಝೇಂಡೆ ಕೈವಾಡ ಇದೆ ಎನ್ನುವ ಸತ್ಯ ಅನುಗೆ ಗೊತ್ತಾಗುತ್ತಾ ನೋಡಬೇಕು.
ಬದುಕಿರುವವನು ಆರ್ಯ, ಆದ್ರೆ ಮುಖ ವಿಶ್ವಾಸ್
ಧಾರಾವಾಹಿಯಲ್ಲಿ ಕೆಲ ದಿನಗಳ ಹಿಂದೆ ಅಪಘಾತವಾಗುತ್ತೆ. ಅಪಘಾತದಲ್ಲಿ ಆರ್ಯನೇ ಸತ್ತು ಹೋಗಿದ್ದಾನೆ ಎಂದು ತಿಳಿದುಕೊಂಡಿದ್ದಾರೆ. ಈಗಲೂ ಪ್ರಿಯದರ್ಶಿನಿ ಮತ್ತು ಪೆÇಲೀಸ್ ಗೆ ಬಿಟ್ರೆ ಬೇರೆ ಯಾರಿಗೂ ವಿಚಾರ ಗೊತ್ತಿಲ್ಲ. ಆದ್ರೂ ಪ್ರಿಯದರ್ಶಿನಿ ಅವನನ್ನು ಅವರ ಮನೆಗೆ ಕರೆದುಕೊಂಡು ಬಂದು, ಸಂಜು ಸ್ವಲ್ಪ ದಿನ ಇಲ್ಲೇ ಇರ್ತಾನೆ ಎಂದು ಹೇಳಿ ಬಿಟ್ಟು ಹೋಗಿದ್ದಾಳೆ. ಏನೂ ನೆನಪಿಲ್ಲದೇ, ಆರ್ಯ, ಸಂಜು ಹೆಸರಿನಲ್ಲಿ ಬದುಕುತ್ತಿದ್ದಾನೆ.
ಝೇಂಡೆಗೆ ಗೊತ್ತಾದ ಆರ್ಯ ಬದುಕಿರುವ ಸತ್ಯ!
ಇಷ್ಟು ದಿನ ಝೇಂಡೆ ಸಹ ಆರ್ಯ ಸತ್ತಿದ್ದಾನೆ ಎಂದುಕೊಂಡಿದ್ದ. ಈಗ ಸತ್ಯ ಗೊತ್ತಾಗಿದೆ. ಪ್ರಿಯದರ್ಶಿನಿ ಆರ್ಯ ಬದುಕಿರುವ ಸತ್ಯ ಹೇಳಿದ್ದಾಳೆ. ತನ್ನ ಗೆಳೆಯ ಬದುಕಿದ್ದಾನೆ ಎಂದು ಖುಷಿಯಾಗಿ ಇದ್ದಾನೆ. ಅಲ್ಲದೇ ಈ ವಿಷ್ಯವನ್ನು ಯಾರಿಗೂ ಹೇಳಬೇಡಿ ಎಂದು ಪ್ರಿಯದರ್ಶಿನ ಅವರ ಬಳಿ ಹೇಳಿದ್ದಾನೆ.
ಮತ್ತೆ ಕಂಪನಿ ಸೇರಲು ಝೇಂಡೆ ಸಾಹಸ
ಇಲ್ಲಿರುವ ಸಂಜುನೇ ಆರ್ಯ ಎಂದು ಝೇಂಡೆಗೆ ಗೊತ್ತಾಗಿದೆ. ಅದಕ್ಕೆ ಹೇಗಾದ್ರೂ ಮಾಡಿ ಮತ್ತೆ ಆರ್ಯವರ್ಧನ್ ಕಂಪನಿ ಸೇರಬೇಕು ಎಂದುಕೊಂಡಿದ್ದಾನೆ. ಅದಕ್ಕೆ ಮೀರಾಳ ಸಹಾಯ ಕೇಳಿದ್ದಾನೆ. ಮೀರಾ ಆಗಲ್ಲ, ಹರ್ಷ, ಶಾರದಾ ಮ್ಯಾಮ್ ಒಪ್ಪಲ್ಲ ಎನ್ನುತ್ತಾಳೆ. ನೀನು ಮನಸ್ಸು ಮಾಡಿದ್ರೆ ಆಗುತ್ತೆ, ಸಹಾಯ ಮಾಡು ಎಂದು ಝೇಂಡೆ ಕೇಳಿದ್ದಾನೆ.
ಇದನ್ನೂ ಓದಿ: Ramachari: ಮಾನ್ಯತಾಳನ್ನು ಆಟವಾಡಿಸುತ್ತಿರೋ ರಾಮಾಚಾರಿ, ಮರೆಯಲ್ಲಿ ನಿಂತು ಜೀವನ ಪಾಠ!
ಮೀರಾ ರಾಜೀನಾಮೆ
ಆರ್ಯವರ್ಧನ್ ಕಂಪನಿ ಬೆಳೆಯಲು ಮೀರಾ ಪಾತ್ರ ದೊಡ್ಡದು. ಆಕೆ ಕಂಪನಿ ಶುರುವಾದಾಗಿನಿಂದ ಇದ್ದಾಳೆ. ಆರ್ಯವರ್ಧನ್ ಇಲ್ಲ ಎಂದು ಕಂಪನಿಗೆ ರಾಜೀನಾಮೆ ನೀಡಲು ಮುಂದಾಗಿದ್ದಾಳೆ. ಅನು ಆಕೆಯನ್ನು ಕೂರಿಸಿಕೊಂಡು ಯಾಕೆ ರಾಜೀನಾಮೆ ಕೊಡ್ತಾ ಇದ್ದೀರಿ. ನೀವು ಆರ್ಯ ಸರ್ಗೆ ಮಾತು ಕೊಟ್ಟಿದ್ದೀರಿ ಬಿಟ್ಟು ಹೋಗಲ್ಲ ಎಂದು. ಯಾಕ್ ಹೋಗ್ತಾ ಇದ್ದೀರಿ ಎಂದು ಕೇಳಿದ್ದಾಳೆ.
ಝೇಂಡೆ ಕಾರಣ ಎಂದ ಮೀರಾ
ಅನು ಪ್ರಶ್ನೆಗೆ ಉತ್ತರಿಸಿದ ಮೀರಾ, ನನ್ನ ರಾಜೀನಾಮೆಗೆ ಕಾರಣ ಝೇಂಡೆ. ಝೇಂಡೆ ಇದ್ದಾಗ ಎಲ್ಲಾ ಕೆಲಸಗಳು ಸರಾಗವಾಗಿ ನಡೆಯುತ್ತಿದ್ದವು. ಆದ್ರೆ ಈಗ ಇಲ್ಲ. ನನ್ನವರು ಯಾರು ಇಲ್ಲ ಈ ಕಂಪನಿಯಲ್ಲಿ ಅನ್ನಿಸುತ್ತಿದೆ. ಅದಕ್ಕೆ ರಾಜೀನಾಮೆ ಕೊಡುವುದಾಗಿ ಹೇಳಿದ್ದಾಳೆ. ಅದಕ್ಕೆ ಅನು, ನಿಮಗೆ ಕಷ್ಟ ಅನ್ನಿಸಬಾರದು ಆ ರೀತಿ ನೋಡಿಕೊಳ್ತೇನೆ. ಆರಾಮಾಗಿ ಕೆಲಸ ಮಾಡಿ ಎಂದು ಹೇಳಿದ್ದಾರೆ.
ಇದನ್ನೂ ಓದಿ: Kannadathi: ವಿಲ್ ಓದಿದ ಭುವಿ, ಸತ್ಯ ಗೊತ್ತಾಗಿ ಸುದರ್ಶನ್-ಸಾನಿಯಾ ಕೆಂಡಾಮಂಡಲ!
ಝೇಂಡೆ ಮಾತು ಕೇಳಿ ಮೀರಾ ರಾಜೀನಾಮೆ ಕೊಡ್ತಿದ್ದಾಳೆ ಎಂದು ಅನುಗೆ ಗೊತ್ತಾಗುತ್ತಾ? ಅಥವಾ ಮತ್ತೆ ಅನು ಮೋಸ ಹೋಗ್ತಾಳಾ? ಝೇಂಡೆ ಪ್ಲ್ಯಾನ್ ಸಕ್ಸಸ್ ಆಗುತ್ತಾ? ಮುಂದೇನಾಗುತ್ತೆ ಅಂತ ನೋಡೋಕೆ ಜೊತೆ ಜೊತೆಯಲಿ ಸೀರಿಯಲ್ ನೋಡಬೇಕು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ